Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
ಈ ಗುಣದ ಹೆಣ್ಣು ಪುರುಷನನ್ನು ತುಂಬಾ ಆಕರ್ಷಿಸುತ್ತಾಳೆ
ತಮ್ಮ ಪುರುಷನೊಂದಿಗೆ ಒಂದು ಉತ್ತಮ ಸಂಬಂಧವನ್ನು ಇಷ್ಟ ಪಡದ ಹುಡುಗಿಯರಾಗಲೀ, ಮಹಿಳೆಯರಾಗಲೀ ಇಲ್ಲವೇ ಇಲ್ಲ ಎಂದು ಹೇಳಬಹುದು. ಎಲ್ಲ ಮಹಿಳೆಯರು ತಮ್ಮ ಪುರುಷರು ನಿರಂತರವಾಗಿ ತಮ್ಮೆಡೆಗೆ ಆಕರ್ಷಿತರಾಗಬೇಕೆಂದು ಬಯಸುತ್ತಾರೆ. ಇದು ಸಹಜವು ಕೂಡ. ನಿಮ್ಮ ಪುರುಷನು ನಿಮ್ಮ ಎಡೆಗೆ ಆಕರ್ಷಿತರಾಗುವಂತೆ ಮಾಡುವುದು ತುಂಬಾ ಸರಳ ಇದು ಕಠಿಣವಾದುದು ಅಲ್ಲ. ಇದಕ್ಕೆ ನಿಮಗೆ ಬೇಕಾಗಿರುವುದು ಸ್ವಲ್ಪ ಸಮಯ ಮತ್ತು ಸಹನೆ. ಆಗ ನೀವು ನಿಮ್ಮ ಪುರುಷರನ್ನು ಆಕರ್ಷಿಸಲು ಸಮರ್ಥರಾಗುತ್ತೀರಿ.
ನಾನು ಮೊದಲ ಬಾರಿಗೆ ನನ್ನ ಪತಿಯನ್ನು ಭೇಟಿ ಮಾಡಿದಾಗ, ಅವರನ್ನು ಆಕರ್ಷಿಸಲು ಕೆಲವು ಸುಂದರವಾದ ಪ್ರಯೋಗಗಳನ್ನು ಮಾಡಿದೆ. ಈ ಪ್ರಯೋಗಗಳು ತುಂಬಾ ಧನಾತ್ಮಕವಾದ ಫಲಿತಾಂಶವನ್ನೇ ನೀಡಿದವು. ಈ ಪ್ರಯೋಗಗಳಿಂದ ನನ್ನ ಪತಿ ನನ್ನೆಡೆಗೆ ಬಹುವಾಗಿ ಆಕರ್ಷಿತರಾದರು. ಹೀಗಾಗಿ ನಾನು ನನ್ನ ಸಹೋದರಿಗಾಗಿ ಈ ಕೆಳಗೆ ಆಕರ್ಷಣೆಯ ಗುಟ್ಟುಗಳು ಅಥವಾ ಅಂಶಗಳ ಕುರಿತು ಹೇಳುತ್ತಿದ್ದೇನೆ. ನೀವು ಇವುಗಳನ್ನು ಚಾಚು ತಪ್ಪದೇ ಪಾಲಿಸಿ. ಆಗ ನಿಮ್ಮ ಪುರುಷನು ಸದಾ ನಿಮ್ಮೆಡೆಗೆ ಆಕರ್ಷಿತರಾಗಿರುತ್ತಾನೆ, ನಿಮ್ಮ ಕುರಿತು ಕ್ರೇಜಗೆ ಒಳಗಾಗುತ್ತಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೇಕೆ ತಡ, ಮುಂದುವರಿಯಿರಿ.

1. ಅವನಿಗೆ ನಿಮ್ಮ ಸ್ವತಂತ್ರ ಮನೋಭಾವವನ್ನು ತೋರಿಸಿ
ನಿಮ್ಮ ಹುಡುಗನಿಗೆ ನೀವು ನಿಮ್ಮ ಸ್ವತಂತ್ರ ಮನೋಭಾವವನ್ನು ತೋರಿಸುವ ಅವಶ್ಯಕತೆ ಇದೆ. ನೀವು ನಿಜವಾಗಿಯೂ ಎಷ್ಟು ಸಮರ್ಥರು , ಆತ್ಮ ವಿಶ್ವಾಸಿಗಳು ಎಂದು ತೋರಿಸಲು ಇದು ಮುಖ್ಯವಾಗಿರುತ್ತದೆ. ಪುರುಷರು ಹೆಚ್ಚಾಗಿ ಸ್ವತಂತ್ರರಾದ ಮಹಿಳೆಯರಿಗೆ ಆಕರ್ಷಿತರಾಗುತ್ತಾರೆ. ಇದು ಅವರ ಸಹಜ ಪ್ರವೃತ್ತಿ ಆಗಿದೆ. ನೀವು ಎಲ್ಲ ಕೆಲಸಗಳಲ್ಲಿಯೂ ನಿಮ್ಮ ಹುಡುಗನನ್ನು ನಂಬಿ ಅವನನ್ನು ಅವಲಂಬಿಸುತ್ತಿದ್ದರೆ, ಈಗ ಅದರ ಕುರಿತು ಪುನಃ ಯೋಚಿಸಬೇಕು.

2. ನೀವು ಪರಾವಲಂಬಿ ಜೀವಿಗಳಲ್ಲ
ನಿರಂತರವಾಗಿ ನಿಮ್ಮ ಪುರುಷನಿಗೆ ನೀವು ಅಂಟಿಕೊಂಡಿರುವುದು. ಯಾವಾಗಲೂ ಅವನ ಹಿಂದೆ ಸುತ್ತಾಡುವುದು ಈ ರೀತಿ ನೀವು ಮಾಡುವುದರಿಂದ ನಿಮ್ಮ ಹುಡುಗ ನಿಮ್ಮನ್ನು ಹೆಚ್ಚು ಬಯಸುತ್ತಾನೆ ಅಂತ ನೀವು ಅಂದುಕೊಂಡಿದ್ದರೆ ಅದು ಖಂಡಿತ ತಪ್ಪು. ಅವನ ಎದುರಿನಲ್ಲಿ ಯಾವಾಗಲೂ ಅವನಿಗೆ ಇಷ್ಟವಾಗುವ ಯಾವುದೇ ವಿಷಯಕ್ಕೆ ನಿಮ್ಮನ್ನು ನೀವು ಒಗ್ಗಿಸಿಕೊಳ್ಳುತ್ತಾ ಇರಬೇಡಿ. ಅಂದರೆ ಅವನಿಗೆ ಒಂದಿಷ್ಟು ಸ್ವತಂತ್ರವಾದ ಸಮಯ ಮತ್ತು ಸ್ಥಳ ನೀಡಿ.

3. ಅವನ ಸ್ಥಳವನ್ನು ತೆಗೆದುಕೊಳ್ಳಬೇಡಿ
ನಾವು ಯಾವಾಗಲೂ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಸಮಾನತೆಯ ಕುರಿತು ಮಾತನಾಡುತ್ತಲೇ ಇರುತ್ತೇವೆ. ಆದರೆ ಬಲವಾದ ಒಂದು ಸಂಬಂಧದಲ್ಲಿ ಪ್ರತಿಯೊಬ್ಬರಿಗೂ ಕೆಲವು ಪಾತ್ರಗಳಿವೆ. ಅಲ್ಲಿ ಸಮಾನತೆಯ ಕುರಿತು ಮಾತನಾಡಲು ಆಗುವುದಿಲ್ಲ. ನೀವು ಅವನಿಗೆ ತನ್ನ ಪುರುಷತ್ವವನ್ನು ತೋರಿಸಲು ಅವಕಾಶ ಮಾಡಿಕೊಟ್ಟಾಗ ಸಹಜವಾಗಿಯೇ ನಿಮ್ಮ ಪುರುಷನು ಪ್ರಾಮುಖ್ಯತೆಯನ್ನು ಪಡೆಯುತ್ತಾನೆ. ಅವನು ನಿಮಗೆ ಯಾವುದೇ ವಿಷಯದಲ್ಲಿ ಸಹಾಯ ಮಾಡಿದಾಗ ನೀವು ಅವನಿಗೆ ಕೃತಜ್ಞರಾಗಿರಬೇಕು.

4. ನಿಮ್ಮ ಜೀವನವನ್ನು ಹೇಗೆ ಆನಂದಿಸಬೇಕು ಎಂಬುದನ್ನು ತಿಳಿಯಿರಿ
ನೀವು ನಿಮ್ಮ ಜೀವನದ ಕುರಿತು ನಿರಾಶ ಮನೋಭಾವ ಹೊಂದಿದರೆ, ಮುಂದಿನ ಜೀವನದ ಕುರಿತು ಕತ್ತಲೆಯ ನೋಟ ನಿಮ್ಮದಾಗಿದ್ದರೆ, ಯಾವಾಗಲೂ ದುಃಖ ಮತ್ತು ಖಿನ್ನತೆಯಲ್ಲಿದ್ದರೆ, ನೀವು ನಿಮ್ಮ ಪುರುಷನನ್ನು ಆಕರ್ಷಿಸಲಾರಿರಿ. ನೀವು ಈ ರೀತಿ ಇರುವಾಗ ಪುರುಷರನ್ನು ಆಕರ್ಷಿಸಬಹುದು ಎಂದು ನೀವು ನಿರೀಕ್ಷಿಸಿದ್ದರೆ ಅದು ಖಂಡಿತ ತಪ್ಪು.

5. ಸೂಕ್ತವಾದ ಸಮಯದಲ್ಲಿ ಬೆಂಬಲ ನೀಡಿ
ಯಾರೇ ಆಗಲಿ ಅವರು ಎಷ್ಟು ಪ್ರಬಲರಿದ್ದಾರೆ ಎಂಬುದು ಮುಖ್ಯವಲ್ಲ. ಪುರುಷರು ಕೂಡ. ಅವರು ಎಷ್ಟೇ ಪ್ರಬಲರಾಗಿದ್ದರೂ ಕೂಡ ಅವರ ಜೀವನದಲ್ಲಿ ಅನೇಕ ಸಮಯದಲ್ಲಿ ಅವರಿಗೆ ಬೆಂಬಲ ಮತ್ತು ಸಹಾಯದ ಅವಶ್ಯಕತೆ ಇರುತ್ತದೆ. ನಿಮ್ಮ ಪುರುಷನಿಗೆ ಬೆಂಬಲದ ಅವಶ್ಯಕತೆ ಇದೆ ಅಂತ ಅನಿಸಿದಾಗ ನೀವೆ ಮುಂದೆ ಧಾವಿಸಿ ಅವನಿಗೆ ಸಹಾಯ ಮಾಡಿ.

6. ಯಾವಾಗಲೂ ಅಂದವಾಗಿ ಕಾಣಿಸಿಕೊಳ್ಳಿ
ಕೆಲವು ಮಹಿಳೆಯರು ತಮ್ಮ ವಿವಾಹದ ನಂತರ ಹೆಚ್ಚು ಅಂದವಾಗಿ ಕಾಣಿಸಿಕೊಳ್ಳುವುದಿಲ್ಲ. ಹೇಗಾದರೂ ನನಗೆ ಗಂಡನಿದ್ದಾನೆ. ನಮ್ಮನ್ನು ಈಗ ಯಾರು ನೋಡುತ್ತಾರೆ ಎಂದು ಭಾವಿಸಿ ತಮ್ಮನ್ನು ತಾವು ಒಪ್ಪವಾಗಿ ಸಿಂಗರಿಸಿಕೊಳ್ಳದೇ ತುಂಬಾ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಇದು ತಪ್ಪು. ನೀವು ನಿಮ್ಮ ಸ್ವಂತಿಕೆಯನ್ನು ಬಿಟ್ಟು ಕೊಡಬಾರದು. ನೀವು ವಿವಾಹವಾಗುವುದಕ್ಕಿಂತ ಮುಂಚೆ ಬ್ಯೂಟಿ ಪಾರ್ಲರ್ ಗೆ ಹೋಗಿ ನಿಮ್ಮ ಕೂದಲಿನ ಕುರಿತು ಕಾಳಜಿಯನ್ನು ತೆಗೆದುಕೊಂಡಿದ್ದರೆ, ಮದುವೆ ನಂತರವೂ ಆ ಕಾರ್ಯವನ್ನು ಮುಂದುವರಿಸಿ. ನಿಮ್ಮ ಪುರುಷನಿಗೆ ನೀವು ಮದುವೆಗೆ ಮುಂಚೆ ಸುಂದರವಾಗಿ ಕಂಡಿದ್ದರೆ, ಮದುವೆಯ ನಂತರವೂ ಸುಂದರವಾಗಿ ಕಾಣಬೇಕು.

7. ಅಸೂಯೆ
ನಾನು ಹಲವು ಹುಡುಗಿಯರನ್ನು ನೋಡಿದ್ದೇನೆ. ಅವರು ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಗೆಳೆಯ ಗೆಳತಿಯರೊಂದಿಗೆ ಕಳೆಯುತ್ತಾರೆ. ಅವರ ಉದ್ದೇಶವು ಅವರ ಹುಡುಗನನ್ನು ಅಸೂಯೆಗೆ ಒಳಪಡಿಸುವುದು ಆಗಿರುತ್ತದೆ. ಆದರೆ ಈ ಧೀರ್ಘ ಅವಧಿಯು ನಿಮ್ಮ ಪುರುಷನು ನಿಮ್ಮ ಗೆಳತಿಯರ ಕುರಿತು ಚಿಂತಿಸುವಂತೆ ಮಾಡುತ್ತದೆ. ಆದರೆ ಇದನ್ನು ನಾನು ಒಪ್ಪದಿದ್ದರೂ, ಕೆಲವು ಹುಡುಗಿಯರು ಇದನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಇದು ಕೂಡ ನೀನು ಎಂತಹವಳು? ಎಂಬುದರ ಮೇಲೆ ಅವಲಂಬನೆ ಆಗಿರುತ್ತದೆ. ಅವರು ನಿಮ್ಮ ಒಡನಾಟವನ್ನು ಹೆಚ್ಚು ಇಷ್ಟಪಟ್ಟರೆ, ಅವರು ನಿಮ್ಮ ಕುರಿತು ಕ್ರೇಜ್‍ಗೆ ಒಳಗಾಗಿದ್ದಾರೆ ಎಂದು ತೋರಿಸುತ್ತದೆ.

8. ಉತ್ತಮ ಕೇಳುಗರಾಗಿ
ನಿಮ್ಮ ಹುಡುಗನನ್ನು ಮೆಚ್ಚಿಸಲು ಅಥವಾ ಪಡೆಯಲು ಇರುವ ಮುಖ್ಯವಾದ ದಾರಿಯೆಂದರೆ ಅವನೆಡೆಗೆ ಹೆಚ್ಚು ಗಮನವನ್ನು ಹರಿಸುವುದು. ಅವನು ಮಾತನಾಡುತ್ತಿರುವಾಗ ಅದರಲ್ಲಿ ಆಸಕ್ತಿಯನ್ನು ತೋರಿಸಿ. ಆ ಮಾತಗಳನ್ನು ಗಮನವಿಟ್ಟು ಕೇಳಿ. ಅವನ ಮಾತುಗಳಲ್ಲಿ ನಿಮಗೆ ಆಸಕ್ತಿ ಇದೆ ಎಂದು ತೋರಿಸಿಕೊಳ್ಳಿ.. ನೀವು ಅವರ ಕುರಿತು ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದರೆ, ಅವರು ಸಹಜವಾಗಿಯೇ ನಿಮ್ಮ ಕುರಿತು ಕ್ರೇಜಗೆ ಒಳಗಾಗುತ್ತಾರೆ. ನಿಮ್ಮ ಎಡೆಗೆ ಆಕರ್ಷಿತರಾಗುತ್ತಾರೆ. ನೀವು ಸ್ವಕೇಂದ್ರಿತರಾಗಬೇಡಿ. ನಿಮ್ಮ ಜೀವನ ಮತ್ತು ಆಸೆಗಳ ಕುರಿತು ನಿಮ್ಮ ಹುಡುಗನೊಂದಿಗೆ ಮುಕ್ತವಾಗಿ ಮಾತನಾಡಿ. ಅವನಿಗೆ ಸ್ವಲ್ಪ ಸ್ಥಳವನ್ನು ಬಿಟ್ಟು ಕೊಡಿ ಮತ್ತು ಅವನ ಮನಸ್ಸಿನೊಂದಿಗೆ ಅವನು ಮಾತನಾಡಿಕೊಳ್ಳಲು ಅವನಿಗೆ ಸ್ವಲ್ಪ ಸಮಯ ನೀಡಿ. ನಿಮ್ಮ ಹುಡುಗನು ಯಾವುದಾದರೂ ಉತ್ತಮ ಕೆಲಸ ಮಾಡಿದಾಗ ಅದನ್ನು ಪ್ರಶಂಸಿಸಿ. ಮೆಚ್ಚುಗೆ ವ್ಯಕ್ತಪಡಿಸಿ. ಇದರಿಂದ ಅವರಿಗೆ ಸಂತೋಷವಾಗುತ್ತದೆ.

9. ವಿಶಿಷ್ಟರಾಗಿ ಕಾಣಿಸಿಕೊಳ್ಳಿ
ನಿಮ್ಮ ಸುತ್ತಮುತ್ತಲೂ ಅನೇಕ ಮಹಿಳೆಯರು ಇರುತ್ತಾರೆ. ಅವರು ಆಕರ್ಷಕವಾಗಿಯೂ ಇರುತ್ತಾರೆ. ಅದ್ದರಿಂದ ನೀವು ಅವರ ಹೊರತಾಗಿ ಹೆಚ್ಚು ಸುಂದರವಾಗಿ, ವಿಶಿಷ್ಟವಾಗಿ ಕಾಣಿಸಿಕೊಳ್ಳಬೇಕು. ನೀವು ವಿಶಿಷ್ಟವಾಗಿ ಕಾಣಿಸಿಕೊಳ್ಳಲು ಯಾವುದಾದರೂ ಒಂದು ದಾರಿಯನ್ನು ಹುಡುಕಿಕೊಂಡು ಆ ದಾರಿಯಲ್ಲಿ ಮುಂದೆ ಸಾಗಿ.

10. ಕೇವಲ ನೀವು ನೀವಾಗಿರಿ
ಈ ಕೊನೆಯ ಹಂತದಲ್ಲಿ ಕೇವಲ ನೀವು ನೀವಾಗಿರಿ. ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಿ. ಟೆಲಿವಿಜನ್ ಸಿರಿಯಲ್ ನಲ್ಲಿ ಬರುವ ಸುಂದರ ನಟಿಯನ್ನು ಅವಳಂತೆ ಆಗಲು ಅಥವಾ ವರ್ತಿಸಲು ಪ್ರಯತ್ನಿಸಬೇಡಿ. ಕೇವಲ ನೀವು ನೀವಾಗಿದ್ದು, ನಿಮ್ಮ ಪುರುಷನಿಂದ ಗೌರವ ಮತ್ತು ಪ್ರೀತಿಯನ್ನು ಪಡೆದುಕೊಳ್ಳಿ.



Click it and Unblock the Notifications











