Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪರಿಪೂರ್ಣ ಗಂಡಸರಾಗಲು ಬಯಸುತ್ತಿದ್ದೀರಾ?
ಕೆಲವರು ಹೇಳುತ್ತಿರುತ್ತಾರೆ, ಹೆಂಗಸರು ಮೆಚ್ಚುವಂತೆ ಮಾಡುವುದು ಭಾರೀ ಕಷ್ಟವೆಂದು. ಆ ನಕಾರಾತ್ಮಕ ಮಾತನ್ನು ಮರೆತುಬಿಡಿ. ಅದೇನು ಮಹಾ ಕಷ್ಟವಲ್ಲ. ಹೆಣ್ಣನ್ನು ಗೆಲ್ಲುವ ಪ್ರಯತ್ನ ಮಾಡುವುದನ್ನು ಬಿಟ್ಟು, ಹೆಣ್ಣಿನ ಹೃದಯವನ್ನು ಗೆಲ್ಲುವ ಪ್ರಯತ್ನ ಮಾಡಿ ನೋಡಿ. ಆಕೆ ಅದೇಕೆ ಒಲಿಯುವುದಿಲ್ಲವೋ ನಾವು ನೋಡುತ್ತೇವೆ.
ಒಮ್ಮೆ ಆಕೆಯ ಹೃದಯವನ್ನು ಗೆದ್ದರೆ ಸಾಕು, ಇನ್ನು ಉಳಿದಿದ್ದೆಲ್ಲವು ಅನಾಯಾಸವಾದ ಪ್ರಯಾಣ. ಬಹುತೇಕ ಗಂಡಸರು ಹೆಂಗಸರನ್ನು ಕೇವಲ ಉಡುಗೊರೆಗಳಿಂದ ಮಾತ್ರ ಒಲಿಸಿಕೊಳ್ಳಬಹುದು ಎಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಅದು ಭಾಗಶಃ ನಿಜ. ಹೆಂಗಸರಿಗೆ ಉಡುಗೊರೆಗಳೆಂದರೆ ಇಷ್ಟವೇನೋ ಹೌದು. ಆದರೆ ಅದಕ್ಕಿಂತ ಆಕೆ ಪ್ರೀತಿ ಮತ್ತು ಭಾವನಾತ್ಮಕ ನಡವಳಿಕೆಗೆ ಮನಸೋಲುತ್ತಾಳೆ. ಭಾವನೆ ಮತ್ತು ಪ್ರೀತಿಗಳ ಮುಂದೆ ಉಡುಗೊರೆ ಏನೇನು ಅಲ್ಲ. ಇಲ್ಲಿ ಉಡುಗೊರೆ ಪ್ರೀತಿಯ ನೆನಪನ್ನು ಮರುಕಳಿಸುವ ಒಂದು ಸ್ಮಾರಕವಷ್ಟೇ.

ಹೆಣ್ಣನ್ನು ಅರ್ಥ ಮಾಡಿಕೊಳ್ಳಲು ಬಯಸಲು ಮೊಟ್ಟ ಮೊದಲು ಮಾಡಬೇಕಾದ ಕೆಲಸವೇನೆಂದರೆ, ಅದು ಆಕೆ ಎಂತಹ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಬೇಕು. ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಭಾರೀ ಕಷ್ಟ ಎಂದು ಗಂಡಸರು ದೂರುತ್ತಿರುತ್ತಾರೆ. ಆದರೆ ಅದು ನಿಜವಲ್ಲ. ಆಕೆಯನ್ನು ಅರ್ಥಮಾಡಿಕೊಳ್ಳಲು ತೊಡಗುವುದರ ಜೊತೆಗೆ ಆಕೆಯೊಂದಿಗೆ ಭಾವನಾತ್ಮಕ ಒಡನಾಟ ಸಹ ಹೊಂದಬೇಕು. ಆಗಲೇ ಆಕೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಗಂಡಸರು ಯಾವಾಗಲು ತಮ್ಮ ಮೂಗಿನ ನೇರಕ್ಕೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಹೆಂಗಸರು ತಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಪರೋಕ್ಷವಾಗಿ ವ್ಯಕ್ತಪಡಿಸಲು ಹಾತೊರೆಯುತ್ತಿರುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳುವ ಕಲೆ ನಿಮಗೆ ತಿಳಿದಿರಬೇಕು ಅಷ್ಟೇ.
ಕೊನೆಯದಾಗಿ ಗಂಡಸರು ತಮ್ಮ "ವಿಷಯಾಸಕ್ತಿ"ಯನ್ನು ಹದ್ದು ಬಸ್ತಿನಲ್ಲಿಟ್ಟು ಕೊಳ್ಳಬೇಕು. ಹೆಣ್ಣು ಮತ್ತು ಗಂಡಿನ ನಡುವೆ ಕಾಮದ ವಿಷಯವು ಸದಾ ಎಡೆಯಾಡುವ ವಿಚಾರವಾಗಿದ್ದರು ಮತ್ತು ಕಾಮವು ಇಬ್ಬರನ್ನು ಬೆಸೆಯುವ ವಿಷಯವಾದರು ಸಹ ಸಂಬಂಧ ರೂಪುಗೊಳ್ಳಲು ಅದೇ ಪ್ರಮುಖ ಕಾರಣವಾಗಬಾರದು. ಲೈಂಗಿಕ ಆಕರ್ಷಣೆಗಿಂತ, ವ್ಯಕ್ತಿತ್ವಕ್ಕೆ ಹೆಚ್ಚಿನ ಬೆಲೆ ಕೊಡಬೇಕಾದುದು ಅತ್ಯಂತ ಮುಖ್ಯ. ದೈಹಿಕ ಆಕರ್ಷಣೆ ಮತ್ತು ಸ್ಪರ್ಷಗಳಿಂದ ಆಕೆಯನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಬದಲಿಗೆ ಹಲವಾರು ಅಂಶಗಳಿಂದ ಆಕೆಯನ್ನು ನಾವು ಗೆಲ್ಲಬಹುದು. ಹೆಣ್ಣಿನ ಮನಸ್ಸನ್ನು ಗೆಲ್ಲಲು ಹೊರಡುವವರು ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.....
1. ಹೆಣ್ಣು ತಾನು ಇಚ್ಛಿಸುವ ಗಂಡಸಿನಿಂದ ಭದ್ರತೆ ಮತ್ತು ರಕ್ಷಣೆಯ ಭಾವವನ್ನು ಕೋರುತ್ತಾಳೆ. ಅಂದರೆ ಇದರರ್ಥ ನೀವೇನು ಹೀ-ಮ್ಯಾನ್ ತರಹ ಹೊಡಿ ಬಡಿ ಎಂಬಂತಹ ವ್ಯಕ್ತಿಯಾಗಿರಬೇಕು ಎಂದಲ್ಲ. ಆಕೆಗೆ ಬೇಕಾಗಿರುವ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಸುರಕ್ಷತೆ ಹಾಗು ಭದ್ರತೆಯ ಮನೋಭಾವವನ್ನು ನೀವು ಆಕೆಯಲ್ಲಿ ಉಂಟು ಮಾಡಬೇಕು. ಈ ಗುಣ ಆಕೆಯನ್ನು ನಿಮ್ಮತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುತ್ತದೆ.
2. ನೋಡಿದರೆ ಮತ್ತೆ ನೋಡಬೇಕೆನ್ನುವ ಆಕರ್ಷಕ ರೂಪ ಅಥವಾ ನೋಡಿದ ಒಡನೆಯೆ ಎದೆ ಬಡಿತ ಹೆಚ್ಚಿಸುವ ಸುಂದರಾಂಗ, ಇಲ್ಲವೇ ಭಾರೀ ಶ್ರೀಮಂತನಾದ ಕುಳ ಇಂತಹ ವ್ಯಕ್ತಿಗಳನ್ನೆ ಹೆಣ್ಣು ಇಷ್ಟ ಪಡುತ್ತಾಳೆ ಎಂದು ಭಾವಿಸಬೇಡಿ. ಯಾರು ಆತ್ಮ ವಿಶ್ವಾಸ ಮತ್ತು ಸ್ವಾವಲಂಬಿಯಾಗಿ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾನೆ ಎಂಬ ಭಾವನೆಯನ್ನು ಮೂಡಿಸುತ್ತಾನೊ ಹೆಣ್ಣು ಆತನನ್ನೆ ಇಷ್ಟಪಡುತ್ತಾಳೆ.
3. ನಂಬಿಕೆಯೆ ಸಂಬಂಧದ ಭದ್ರ ಬುನಾದಿ. ವಿಪರ್ಯಾಸವೇನೆಂದರೆ ಇದನ್ನು ಎಲ್ಲಿಂದ ಕೊಳ್ಳಲು ಆಗುವುದಿಲ್ಲ. ಆದರೆ ಇದನ್ನು ಸಂಪಾದಿಸಬಹುದು. ಹೆಣ್ಣಿನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಒಂದು ನಂಬಿಕೆಯನ್ನು ಹುಟ್ಟು ಹಾಕಿ, ಅದು ನೆಲೆಯೂರಲು ಸ್ವಲ್ಪ ಪರಿಶ್ರಮ ಹಾಕಿ ನೋಡಿ. ಆಗ ಲೋಕ ಏನೇ ಹೇಳಲಿ ಆಕೆ ನಿಮ್ಮಾಕೆಯಾಗಿ ನಿಮ್ಮ ಬೆಂಬಲಕ್ಕೆ ನಿಂತಿರುತ್ತಾಳೆ. ನೆನಪಿಡಿ ಎಲ್ಲಿ ನಂಬಿಕೆ ಇರುತ್ತದೋ ಅಲ್ಲಿ ಅನುಮಾನವಿರುವುದಿಲ್ಲ. ಎಲ್ಲಿ ಅನುಮಾನವಿರುತ್ತದೋ ಅಲ್ಲಿ ನಂಬಿಕೆಯಿರುವುದಿಲ್ಲ. ಯಾವ ಕಾರಣಕ್ಕು ನಂಬಿಕೆಯನ್ನು ಕಳೆದುಕೊಳ್ಳಬೇಡಿ.
4. ಆಕೆಯನ್ನು ಗೌರವಿಸಿ ಮತ್ತು ಆಕೆಗೆ ಆದರವನ್ನು ನೀಡಿ. ಪ್ರತಿ ಹೆಂಗಸು ತನ್ನನ್ನು ಗೌರವಿಸುವ ಗಂಡಸಿನ ಜೊತೆಗೆ ಇರಲು ಸದಾ ಬಯಸುತ್ತಾಳೆ. ಆಕೆಯ ರುಚಿ, ಅಭಿರುಚಿ ಮತ್ತು ಅಭಿಪ್ರಾಯಗಳಿಗೆ ಬೆಲೆಕೊಡಿ, ಮತ್ತು ಅವುಗಳನ್ನು ಗೌರವಿಸಿ. ಇದನ್ನು ಆಕೆ ಬಯಸುತ್ತಾಳೆ ಮತ್ತು ಆನಂದಿಸುತ್ತಾಳೆ. ಹಳೆಯ ಕಾಲದ ರೀತಿ- ನೀತಿಗಳಂತೆ ಹೆಣ್ಣಿನ ಸ್ವಾತಂತ್ರ್ಯವನ್ನು ಅಥವಾ ಆಕೆಯ ಅಭಿಪ್ರಾಯಗಳಿಗೆ ಬೆಲೆ ಕೊಡದಿರುವುದನ್ನು ಆಕೆ ಸಹಿಸುವುದಿಲ್ಲ.
5. ಬದಲಾವಣೆಯು ಜೀವನದ ಬದಲಾವಣೆಗೊಳ್ಳದ ಆಕರ್ಷಣೆ. ಅದರಲ್ಲಿಯೂ ಸಂಬಂಧದ ವಿಚಾರದಲ್ಲಿ ಇದು ನಿಜಕ್ಕೂ ಅನ್ವಯವಾಗುವ ನಿಯಮ. ನೀವು ಇದುವರೆಗು ಬಳಸಿದ ಮತ್ತು ಪರೀಕ್ಷಿಸಿದ ವಿಧಾನಗಳನ್ನು ಮರೆತುಬಿಡಿ. ಸುಮ್ಮನೆ ಮಾಡಿದ್ದನ್ನೆ ಮಾಡುವ ಬದಲು ಆಕೆಗೆ ಇಷ್ಟವಾಗುವಂತೆ ಏನಾದರು ಒಂದು ಹೊಸತನ್ನು ಕೊಡಿ. ಅದು ಹಾಸಿಗೆಯಲ್ಲಿ ಹಾಗಿರಬಹುದು ಅಥವಾ ಅಡುಗೆ ಮನೆಯಲ್ಲಿ ಆಕೆಯೊಂದಿಗೆ ಇದ್ದಕಿದ್ದಂತೆ ಸಹಾಯ ಮಾಡುವುದಾಗಿರಬಹುದು ಅಥವಾ ಮನೆಕೆಲಸದಲ್ಲಿ ಆಕೆಗೆ ನೆರವಾಗುವುದಾಗಿರಬಹುದು. ಇದು ಯಾವುದು ಆಗದಿದ್ದರೆ ಒಂದು ಸಂಜೆ ಆಕೆಗಾಗಿ ವಿಶೇಷವಾದ ಉಡುಗೊರೆ ನೀಡಿ ಅಥವಾ ಹೊರಗೆ ಕರೆದೊಯ್ಯಿರಿ.
6. ಭಾವನೆಗಳನ್ನು ವ್ಯಕ್ತಪಡಿಸುವುದು ಕೇವಲ ಹೆಂಗಸರ ವಿಷಯವಲ್ಲ. ಗಂಡಸರು ಸಹ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬೇಕು ಮತ್ತು ಸ್ವಲ್ಪ ಮಾತನಾಡಬೇಕು. ಆಕೆಯೇ ಬಂದು ನಿಮ್ಮನ್ನು ಕೇಳುವ ಮೊದಲು ಒಮ್ಮೆ ಆಕೆ ತೊಟ್ಟ ಹೊಸ ಬಟ್ಟೆ ಹೇಗೆ ಒಪ್ಪುತ್ತದೆಂದು ತಿಳಿಸಿ. ಇಲ್ಲವೇ ಆಕೆಯ ಹೊಸ ಕೇಶ ವಿನ್ಯಾಸವು ಹೇಗೆ ನಿಮ್ಮ ಎದೆ ಬಡಿತವನ್ನು ಹೆಚ್ಚಿಸಿತ್ತಿದೆಯೆಂದು ಹೇಳಿ ನೋಡಿ, ಆಗ ಆಕೆಯ ಕುಡಿನೋಟವೇ ಹೇಳುತ್ತದೆ ಆಕೆ ಅದನ್ನು ನಿಮ್ಮಿಂದ ಬಯಸುತ್ತಿದ್ದಳು ಎಂದು.



Click it and Unblock the Notifications











