Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಪ್ರೇಮಿಗಳೇ, ಫ್ರೆಂಡ್ಸ್ ಎದುರು ಹೀಗೆ ವರ್ತಿಸದಿರಿ
ನೀವು ಗಮನಿಸಿರಬಹುದು ಪ್ರೇಮಿಗಳಿಗೆ ಸುತ್ತಲಿನ ಪ್ರಪಂಚದ ಅರಿವೇ ಇರುವುದಿಲ್ಲ, ತಮ್ಮ ಲೋಕದಲ್ಲಿ ಮಗ್ನರಾಗಿ ಬಿಡುತ್ತಾರೆ. ತಾನು, ತಾನು ಪ್ರೀತಿಸುತ್ತಿರುವ ವ್ಯಕ್ತಿ ಬಿಟ್ಟರೆ ತಮ್ಮ ಪಕ್ಕದಲ್ಲಿ ಯಾರೂ ಇಲ್ಲವೆಂಬಂತೆ ಸಾರ್ವಜನಿಕ ಸ್ಥಳಗಳಲ್ಲಿ ಮೈ ಮರೆತು ಬಿಡುತ್ತಾರೆ.
ಅಪರಿಚಿತ ವ್ಯಕ್ತಿಗಳು ನಮ್ಮ ಬಗ್ಗೆ ಏನೇ ಅಂದುಕೊಂಡರೂ ಪರ್ವಾಗಿಲ್ಲ, ಆದರೆ ಸ್ನೇಹಿತರಿಗೆ ಕಿರಿಕಿರಿಯಾಗದಂತೆ ನಡೆದುಕೊಳ್ಳುವುದು ಒಳ್ಳೆಯದು. ಅದರಲ್ಲೂ ನಿಮ್ಮ ಜೊತೆ ಇರುವ ಫ್ರೆಂಡ್ ಗೆ ಯಾವುದೇ ಲವರ್ ಇಲ್ಲದಿದ್ದರೆ ನಿಮ್ಮ ವರ್ತನೆ ಅವರಿಗೆ ಸಾಕಷ್ಟು ಕಿರಿ ಕಿರಿ ತರಬಹುದು.

ಪ್ರೇಮದ ಮಾತುಗಳು
ಪ್ರೇಮಿಗಳೆಂದ ಮೇಲೆ ಮುದ್ದಿನಿಂದ ತನ್ನ ಪ್ರೇಮಿಯನ್ನು ಕರೆಯುವುದು, ಸ್ವಲ್ಪ ಅಧಿಕವೇ ಕೇರ್ ತೆಗೆದುಕೊಳ್ಳಲು ಇರುತ್ತದೆ. ಆದರೆ ಅದಲ್ಲ ನಿಮ್ಮ ಫ್ರೆಂಡ್ಸ್ ಜೊತೆ ಇರುವಾಗ ಮಾಡದಿರುವುದು ಒಳ್ಳೆಯದು. ಫ್ರೆಂಡ್ಸ್ ಜೊತೆ ಇರುವಾಗ ನೀವೂ ಫ್ರೆಂಡ್ಸ್ ಆಗಿಯೇ ಇರಿ. ನೀವಿಬ್ಬರೂ ನಿಮ್ಮ ಲೋಕದಲ್ಲಿ ಕಳೆದುಹೋದರೆ ಫ್ರೆಂಡ್ಸ್ ತುಂಬಾ ಕಿರಿಕಿರಿಯಾಗುವುದು. ನಿಮ್ಮ ಪ್ರೇಮಮಯವಾದ ಮಾತನ್ನು ಫ್ರೆಂಡ್ಸ್ ಎದುರು ಆಡದಿರುವುದು ಒಳ್ಳೆಯದು.

ಎಲ್ಲದಕ್ಕೂ ಪ್ರೇಮಿಯ ಜಪ
ನಿಮ್ಮ ಬೆಸ್ಟ್ ಫ್ರೆಂಡ್ ಎಲ್ಲಗೋ ಹೋಗಲು ಅಥವಾ ಸಿನಿಮಾಕ್ಕೆ ಕರೆಯುವಾಗ "ನಾನು ನನ್ನ ಲವ್ ನ ಕೇಳಿ ಹೇಳುತ್ತೇನೆ" ಎಂಬ ಮಾತನ್ನು ತಪ್ಪಿಯೂ ನುಡಿಯಬೇಡಿ. ಈ ರೀತಿ ವರ್ತಿಸಿದರೆ ನಿಮ್ಮ ಫ್ರೆಂಡ್ ಗೆ ತುಂಬಾ ನೋವಾಗಬಹುದು. ಲವ್ ನಲ್ಲಿ ಇದ್ದ ಮಾತ್ರಕ್ಕೆ ಫ್ರೆಂಡ್ಸ್ ನ ಕಡೆ ಗಣಿಸುವುದು ಸರಿಯಲ್ಲ.

ಫ್ರೆಂಡ್ ಗೆ ಜೋಡಿ ಹುಡುಕುವುದು
ಈ ಕೆಲಸವನ್ನು ತುಂಬಾ ಪ್ರೇಮಿಗಳು ಮಾಡುತ್ತಾರೆ. ತಾನು ಪ್ರೇಮದಲ್ಲಿದ್ದೇನೆ, ನನ್ನ ಫ್ರೆಂಡ್ ಒಂಟಿಯಾಗಿ ಇದ್ದಾಳೆ/ನೆ ಎಂದು ಎಂದು ಅವರಿಗೂ ಜೋಡಿ ಹುಡುಕಲಾರಂಭಿಸುತ್ತಾರೆ ಅಥವಾ ಯಾರಾನ್ನಾದರೂ ಪ್ರೀತಿಸಲು ಟಿಪ್ಸ್ ನೀಡುತ್ತಾರೆ. ಆ ಕೆಲಸ ಯಾವತ್ತಿಗೂ ಮಾಡಲು ಹೀಗಬೇಡಿ. ಅವರ ಜೀವನಕ್ಕೆ ಬೇಕಾದ ವ್ಯಕ್ತಿಯನ್ನು ಆರಿಸಲು ಅವರಿಗೆ ಗೊತ್ತು , ಅವರಿಗೆ ನಿಮ್ಮ ಸಹಾಯ ಬೇಕೆನಿಸಿದರೆ ಅವರೇ ಕೇಳುತ್ತಾರೆ.

ಎಲ್ಲದಕ್ಕೂ ನಾವು
ನಾವು ಅನ್ನುವ ಪದ ಇಬ್ಬರ ನಡುವಿನ ಅನುಬಂಧವನ್ನು ತೋರಿಸುತ್ತೆ, ಆದರೂ ನಾವು ಎನ್ನುವ ಪದವನ್ನು ಎಲ್ಲಾ ಕಡೆ ಬಳಸುವುದು ಅಷ್ಟು ಸರಿಕಾಣುವುದಿಲ್ಲ. ಕೆಲವೊಮ್ಮೆ ನಾನು, ಅವನು/ಳು ಈ ರೀತಿಯ ಪದಗಳ ಬಳಕೆ ನಾವು ಅನ್ನುವುದಕ್ಕಿಂತ ಮುಖ್ಯವಾಗಿರುತ್ತದೆ.

ಪ್ರೇಮಿಗಳೆಂದು ತೋರಿಸಿಕೊಳ್ಳಲು ಒಬ್ಬರನ್ನೊಬ್ಬರು ಅಂಟಿಕೊಂಡೇ ಇರುವುದು
ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಅನೇಕ ಜೋಡಿಗಳನ್ನು ಕಾಣಬಹುದು. ಪ್ರೇಮಿಗಳಿಗೆ ಕೈ ಕೈ ಹಿಡಿಕೊಂಡು ನಡೆಯಬೇಕು, ಒಬ್ಬರೊನ್ನೊಬ್ಬರು ಅಪ್ಪಿಕೊಂಡು ಕೂರಬೇಕು ಎಂದೆಲ್ಲಾ ಅನಿಸುವುದು ಸಹಜ. ಆದರೆ ಸ್ನೇಹಿತರ ಮುಂದೆ, ಸಾರ್ಜನಿಕ ಸ್ಥಳಗಳಲ್ಲಿ ಹಾಗೇ ವರ್ತಿಸಿದರೆ ನಮ್ಮಿಂದ ಇತರರು ಮುಜುಗರಕ್ಕೆ ಒಳಗಾಗುತ್ತಾರೆ. ಎಲ್ಲದಕ್ಕೂ ಒಂದು ಕಾಲ, ಸಮಯ ಅಂತ ಇರುತ್ತದೆ.

ನಿಮ್ಮ ಅನಿಸಿಕೆ
ನಾನು ಹೇಳಿದ ಮಾತನ್ನು ನೀವೂ ಒಪ್ಪುತ್ತೀರಿ ತಾನೆ?



Click it and Unblock the Notifications