Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ದಾಂಪತ್ಯದಲ್ಲಿ ಲೈಂಗಿಕತೆ, ಹಣ, ಸಂವಹನದ ಪಾತ್ರ
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಮ್ಮೆಯಾದರು ಈ ಮೂರು ಸಮಸ್ಯೆಗಳು ತಲೆದೋರಿರುತ್ತವೆ. ಮುಖ್ಯವಾಗಿ ಈ ಸಮಸ್ಯೆಗಳು ಸಂಬಂಧಗಳ ಸುತ್ತ ಹುಟ್ಟಿಕೊಳ್ಳುತ್ತವೆ. ಇವುಗಳನ್ನು ನಿಭಾಯಿಸುವುದು ಹೇಗೆಂದು ನಾವು ಇಲ್ಲಿ ತಿಳಿಸಿದ್ದೇವೆ ಓದಿ.
ಸಂಬಂಧದಲ್ಲಿ ಪ್ರತಿದಿನವು ಯಾವುದಾದರು ಒಂದಲ್ಲ ಒಂದು ಸಮಸ್ಯೆಯು ಕಾಡುತ್ತಲೆ ಇರುತ್ತದೆ. ಕೆಲವರು ಇದನ್ನು ಪರಿಹರಿಸುವ ಗೊಡವೆ ನಮಗೇಕೆ ಎಂದು ಉದಾಸೀನ ಮಾಡಿ, ಸಂಬಂಧಕ್ಕೆ ಅಂಟಿಕೊಳ್ಳುತ್ತಾರೆ. ಇನ್ನೂ ಕೆಲವರು ಸಮಸ್ಯೆ ಬಗೆಹರಿಸುವ ಯಾವುದೇ ಪ್ರಯತ್ನ ಮಾಡದೆ ಹಾಗೆಯೇ ಬಿಟ್ಟು ಬಿಡುತ್ತಾರೆ. ಹಾಗೆಂದು ಸಮಸ್ಯೆಗೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಯಬೇಡಿ.
ಕೆಲವು ಸಮಸ್ಯೆಗೆ ನೀವೇ ಸಂಪೂರ್ಣ ಹೊಣೆಗಾರರಾಗಿರಬಹುದು. ಅಥವಾ ನಿಮ್ಮ ಸಂಗಾತಿಯ ಅಥವಾ ಮನೆಯವರ್ ದೃಷ್ಟಿಯಲ್ಲಿ ನಿಮ್ಮ ನಡವಳಿಕೆಯಲ್ಲಿ ವ್ಯತ್ಯಾಸಗಳಿರಬಹುದು, ಇಲ್ಲವೇ ನಿಮ್ಮ ಮೇಲೆ ಯಾವುದಾದರು ಗುರುತರ ಆರೋಪಗಳಿರಬಹುದು. ಏನೇ ಆದರು ಸಮಸ್ಯೆ ಉದ್ಭವಿಸಿದೆ ಎಂದಾದಲ್ಲಿ, ಪಲಾಯನವಾದ ತರವಲ್ಲ. ದಾಸರು ಹೇಳಿದಂತೆ " ಈಸಬೇಕು, ಇದ್ದು ಜಯಿಸಬೇಕು" ಎಂಬುದು ನಮ್ಮ ಮಂತ್ರವಾಗಬೇಕು. ಇಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ಕೆಲವೊಂದು ಸಲಹೆಗಳ ಪಟ್ಟಿಯನ್ನು ನೀಡಿದ್ದೇವೆ, ಅಗತ್ಯವಾದಲ್ಲಿ ಬಳಸಿ ನೋಡಿ.

ಲೈಂಗಿಕ ತೃಪ್ತಿ
ದಾಂಪತ್ಯದಲ್ಲಿ ಎದುರಾಗುವ ಲೈಂಗಿಕ ಸಮಸ್ಯೆಗಳು ಕೇವಲ ಪುರುಷರನ್ನು ಮಾತ್ರ ಕಾಡುತ್ತದೆ ಎಂದು ಭಾವಿಸಬೇಡಿ. ಇತ್ತೀಚೆಗೆ ನಡೆದ ಒಂದು ಅಧ್ಯಯನದ ಪ್ರಕಾರ ಶೇ. 64 ಕ್ಕಿಂತ ಅಧಿಕ ಪಟ್ಟು ಹೆಂಗಸರು ಹಾಸಿಗೆಯಲ್ಲಿ ತಮ್ಮ ಸಂಗಾತಿಯ ಸಾಮರ್ಥ್ಯದ ಕುರಿತು ಅಸಮಾಧಾನವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ನಿಮ್ಮ ಸಂಬಂಧವನ್ನು ಸುಮಧುರಗೊಳಿಸಿಕೊಳ್ಳಲು ಕೊರಗುವುದನ್ನು ನಿಲ್ಲಿಸಿ. ಮೊದಲು ಈ ಸಮಸ್ಯೆಯ ಬಗ್ಗೆ ಆಪ್ತ ಮಾತುಕತೆಯಾಡಿ.

ನಿಮ್ಮ ಅನಿಸಿಕೆ ಹೇಳಲು ಸಂಕೋಚ ಪಡಬೇಡಿ
ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಯಾವುದೇ ಸಂಕೋಚ ಪಡಬೇಡಿ. ನಿಮ್ಮ ಸಂಗಾತಿಯ ಮುಂದೆ ನಿಮ್ಮ ಅಸಂತೋಷವನ್ನು ಹೇಳಿಕೊಳ್ಳುವುದರಿಂದ ಅವರಿಗೂ ಸಹ ಪರಿಸ್ಥಿತಿಯ ಅರಿವು ಉಂಟಾಗಿ ಸಮಸ್ಯೆ ಪರಿಹಾರವಾಗಬಹುದು.

ಮಿಲನಕ್ಕೆ ನವೀನತೆಯನ್ನು ತನ್ನಿ
ನಿಮ್ಮ ಏಕಾಂತ ಕೋಣೆಯಲ್ಲಿ ನಿಮ್ಮ ಸಂಗಾತಿಯ ಜೊತೆ ನೀವು ಹೇಗೆ ನಡೆದುಕೊಳ್ಳಬೇಕು ಎಂದು ಆತನನ್ನೆ/ ಆಕೆಯನ್ನೇ ಕೇಳಿ ಹಾಗೆಯೇ ನಡೆದುಕೊಳ್ಳಿ. ಮಡಿವಂತಿಕೆ, ಸಂಕೋಚ ಮುಂತಾದವನ್ನೆಲ್ಲ ಕೋಣೆಯ ಹೊರಗೆ ಇಡಿ.

ವೈದ್ಯರನ್ನು ಕಾಣಿ, ಸಲಹೆ ಪಡೆಯಿರಿ
ಹಾಸಿಗೆಯಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಕುಂದುಂಟಾಗಿದೆ ಎಂದರೆ ಆಕಾಶ ಕಳಚಿ ತಲೆ ಮೇಲೆ ಬಿದ್ದಿತು ಎಂಬಂತಾಗಬೇಡಿ. ವೈದ್ಯರ ಬಳಿ ನಿಮ್ಮ ಸಮಸ್ಯೆಯನ್ನು ಹೇಳಿ ಚಿಕಿತ್ಸೆ ಪಡೆಯಿರಿ.

ಹಣಕಾಸಿನ ಸಮಸ್ಯೆ ಬಿಗಡಾಯಿಸಿದರೆ, ಪರಿಹಾರೋಪಾಯಗಳು
ಅದು ನಿಮ್ಮ ಹಣವೋ? ಅಥವಾ ಮನೆಯ ಹಣವೋ? ಮದುವೆಗೆ ಮೊದಲೋ ಅಥವಾ ನಂತರವೋ ಯಾವಾಗಲಾದರು ಸರಿಯೇ ಹಣಕಾಸು ಸಮಸ್ಯೆ ಸದಾ ತಲೆನೋವೇ!. ಇತ್ತೀಚೆಗೆ ನಡೆದ ಒಂದು ಅಧ್ಯಯನ ಪ್ರಕಾರ ಬಹುತೇಕ ಮಂದಿ ದಂಪತಿಗಳು ತಮ್ಮದೇ ಆದ ವೈಯುಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಲು ಬಯಸುತ್ತಾರಂತೆ. ಇದು ನಿಜಕ್ಕೂ ಆರೋಗ್ಯಕರ ಬೆಳವಣಿಗೆಯೇ? ಎಲ್ಲಿಯವರೆಗು ಮನೆ ಖರ್ಚಿಗೆಂದು ಇಬ್ಬರೂ ತಮ್ಮ ತಮ್ಮ ಪಾಲನ್ನು ಚಾಚೂತಪ್ಪದೇ ನೀಡುತ್ತಾರೆ ಅಲ್ಲಿಯವರೆಗು ಎಲ್ಲವೂ ಸರಿಯಿರುತ್ತದೆಯೆಂಬುದು ಬಹುತೇಕ ಮಂದಿ ತಙ್ಞರ ಅಭಿಪ್ರಾಯವಾಗಿದೆ. ಒಂದು ವೇಳೆ ಸಮಸ್ಯೆ ಬಿಗಡಾಯಿಸಿದರೆ, ಪರಿಹಾರೋಪಾಯಗಳು ಇಲ್ಲಿವೇ ನೋಡಿ.

ನಿಮ್ಮ ಹಣದ ಬಗ್ಗೆ ಮಾಹಿತಿ
ನಿಮ್ಮ ಸಂಗಾತಿಯಿಂದ ಪ್ರತಿ ತಿಂಗಳು ನೀವೆಷ್ಟು ಬಯಸುತ್ತೀರಾ ಎಂಬ ಸ್ಪಷ್ಟ ಮೊತ್ತವನ್ನು ಆಕೆಗೆ/ ಆತನಿಗೆ ನೀಡಿ.

ಉಳಿತಾಯ
ಒಬ್ಬರು ಖರ್ಚು ಮಾಡುವಲ್ಲಿ ಧಾರಾಳಿಯಾದರೆ ಮತ್ತೊಬ್ಬರು ಉಳಿತಾಯ ಮಾಡುವ ಮನೋಭಾವ ಉಳ್ಳವರಾಗಿ. ಇದು ಹಣಕಾಸು ವಿಚಾರದಲಿ ಸಮತೋಲನವನ್ನು ತಂದು ಕೊಡುತ್ತದೆ. ಇಲ್ಲವಾದಲ್ಲಿ ಇಬ್ಬರೂ ಸಮ ಪ್ರಮಾಣದಲ್ಲಿ ಉಳಿತಾಯ ಮಾಡಿ.

ಪ್ಲಾನ್
ಒಂದು ವೇಳೆ ಹಣಕಾಸಿನ ಮುಗ್ಗಟ್ಟು ಎದುರಾದರೆ ಇಬ್ಬರು ಹೊಂದಾಣಿಕೆ ಮಾಡಿಕೊಳ್ಳಿ.
- ಸಾಲ ಮಾಡಿರುವ ವಿಚಾರವನ್ನು ಇಬ್ಬರೂ ಮುಚ್ಚಿಡಲು ಹೋಗಬೇಡಿ.
- ಹಣಕಾಸಿನ ವಿಚಾರದಲ್ಲಿ ನಿಮ್ಮ ಕಿರು ಅವಧಿ ಹಾಗು ಧೀರ್ಘಾವಧಿ ಗುರಿಗಳನ್ನು ನಿರ್ಧರಿಸಿಕೊಳ್ಳಿ.

ಪ್ರೀತಿ ಮತ್ತು ಸಂವಹನದ ಕೊರತೆ
ಬಹುತೇಕ ದಂಪತಿಗಳಲ್ಲಿ ಕಾಡುವ ಸಮಸ್ಯೆ ಒಂದೇ. ಅದು ಅವರ ಸಂಗಾತಿ ಅವರ ಜೊತೆಗೆ ಪ್ರೀತಿ ಮತ್ತು ಬಾಂಧವ್ಯ ತೋರಿಸುತ್ತಿಲ್ಲ ಎಂದು. ಈ ಸಮಸ್ಯೆಯನ್ನು ತೃತೀಯ ಪಕ್ಷ ಯಾವುದು ಬಂದು ಪರಿಹರಿಸುವುದಿಲ್ಲ ಹಾಗಾಗಿ ಇದು ಹಾಗೆಯೇ ಉಳಿದು ಬಿಡುತ್ತದೆ. ಅಲ್ಲದೆ ಬಹುತೇಕ ಮಂದಿಗೆ ಸಂಬಂಧದಲ್ಲಿರುವ ಸಮಸ್ಯೆಯ ಕುರಿತು ಚರ್ಚಿಸುವುದು ಅಷ್ಟೇನು ಗಂಭೀರವಾದ ವಿಚಾರವಾಗಿರುವುದಿಲ್ಲ. ಹಾಗಾದರೆ ನಾವು ಇದನ್ನು ಹೇಗೆ ತಿಳಿಸುವುದು?

ನಿಮ್ಮ ಸಂಬಂಧದಲ್ಲಿ ನಿಮಗೆ ದೊರೆತ ಸ್ಥಾನಮಾನಕ್ಕೆ ಅಂಟಿಕೊಳ್ಳಬೇಡಿ
ಕೆಲಸಗಳನ್ನು ನಿಮ್ಮ ನಿಮ್ಮಲ್ಲಿಯೇ ಹಂಚಿಕೊಳ್ಳಿ. ನೀವಿಬ್ಬರು ಏಕಾಂತದಲ್ಲಿರುವಾಗ ಈ-ಮೇಲ್ ಚೆಕ್ ಮಾಡುವುದು ಅಥವಾ ಫೋನ್‍ನಲ್ಲಿ ಮಾತನಾಡುವ ಅಭ್ಯಾಸ ಬಿಟ್ಟುಬಿಡಿ.

ಕೆಲವೊಂದು ನಿಯಮಗಳನ್ನು ಜಾರಿಗೆ ತಂದುಕೊಳ್ಳಿ
ಕೋಪಾವೇಶಗಳಿಂದಾಗಿ ನೀವಾಗಲಿ ಅಥವಾ ನಿಮ್ಮ ಸಂಗಾತಿಯಾಗಲಿ ಸಮಸ್ಯೆಯನ್ನು ಚರ್ಚಿಸಲು ಅಸಾಧ್ಯವಾದರೆ, ಅದನ್ನು ಚರ್ಚಿಸಲು ಬೇರೆ ಉಪಾಯಗಳನ್ನು ಹುಡುಕಿಕೊಳ್ಳಿ. ಸುಮ್ಮನೆ ಒಬ್ಬರು ಮತ್ತೊಬ್ಬರ ಮೇಲೆ ಕಿರಿಚಾಡಲು ಹೋಗಬೇಡಿ. ಪತ್ರ ಬರೆಯುವುದೋ, ಎಸ್,ಎಂ,ಎಸ್ ಕಳುಹಿಸುವುದೋ ಇತ್ಯಾದಿಗಳ ಮೂಲಕ ನಿಮ್ಮ ನಿಲುವನ್ನು ವ್ಯಕ್ತಪಡಿಸಿ. ಜೊತೆಗೆ ನಿಮ್ಮಿಬ್ಬರಲ್ಲಿ ಯಾರಿಗೇ ಆಗಲಿ ನೋವುಂಟು ಮಾಡುವ ಶಬ್ದಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಿ.

ಮಾತನಾಡುವಾಗ ನಿಗಾ ಇರಲಿ
ಮಾತು ಮನೆ ಕೆಡಿಸಿತು ಎನ್ನುತ್ತಾರೆ. ಹಾಗಾಗಿ ಮಾತನಾಡುವಾಗ ನಿಗಾ ಇರಲಿ. ನಿಮ್ಮ ಸಂಗಾತಿ ಮಾತನಾಡುವಾಗ ಕಣ್ಣು ಪಕ್ಕಕ್ಕೆ ತಿರುಗಿಸುವುದು ಅಥವಾ ಮುಖ ತೋರಿಸದೇ ಅತ್ತ ಹೋಗುವುದು ಮಾಡಬೇಡಿ. ಸಮಸ್ಯೆ ಬಂದರೆ ನಿಮ್ಮ ದೇಹ ಭಾಷೆಯಲ್ಲು ಸಹ ಅದನ್ನು ಪರಿಹರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿ.

ಸಮಸ್ಯೆಗಳನ್ನು ಉದಾಸೀನ ಮಾಡಬೇಡಿ
ಸಮಸ್ಯೆಗಳು ಸಂಬಂಧದ ಬೇಡಿಕೆಗಳ ಪಟ್ಟಿಯಾಗಿರುತ್ತದೆ. ಆತ/ ಆಕೆ ನಿಮ್ಮಿಂದ ಏನು ಬೇಡುತ್ತಿದ್ದರೆ ಎಂಬುದೆ ಒಮ್ಮೊಮ್ಮೆ ಸಮಸ್ಯೆಯ ರೂಪ ತಾಳುತ್ತದೆ. ಸುಖಾ ಸುಮ್ಮನೆ ಇಲ್ಲದ ವಿಚಾರಗಳನ್ನೆಲ್ಲ ಹೊರತೆಗೆದು ಜಗಳ ತೆಗೆಯಬೇಡಿ. ನಿಮ್ಮ ಆಧ್ಯತೆಯೇನಿದೆಯೋ ಅದರ ಬಗ್ಗೆ ಮಾತ್ರ ಮಾತನಾಡಿ.

ಯಾರೂ ಗೆಲ್ಲಲು ಮತ್ತು ಸೋಲಲು ಸಾಧ್ಯವಿಲ್ಲ
ಒಂದು ವಿಚಾರ ತಿಳಿಯಿರಿ. ದಾಂಪತ್ಯದಲ್ಲಿ ಯಾರು ಗೆಲ್ಲಲು ಆಗುವುದಿಲ್ಲ ಮತ್ತು ಸೋಲಲು ಆಗುವುದಿಲ್ಲ.



Click it and Unblock the Notifications











