Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಲೈಂಗಿಕತೆ ವೃದ್ಧಿಸುವುದು ಆರೋಗ್ಯ
ವೈವಾಹಿಕ ಜೀವನದಲ್ಲಿ ಲೈಂಗಿಕತೆ ಪ್ರಮುಖವಾದ ಅಂಶ. ಲೈಂಗಿಕ ತೃಪ್ತಿ ಇಲ್ಲದಿದ್ದಾಗ ಅನೇಕ ಸಮಸ್ಯೆಗಳು ದಂಪತಿಗಳ ನಡುವೆ ಕಂಡು ಬರುತ್ತದೆ. ಅನೈತಿಕ ಸಂಬಂಧ, ಜಗಳ ಇವೆಲ್ಲಾ ಕಂಡು ಬರುವುದು. ಗಂಡ-ಹೆಂಡತಿ ಸಂಬಂಧ ಬಲಗೊಳ್ಳಲು ಲೈಂಗಿಕ ತೃಪ್ತಿ ಅವಶ್ಯಕ.
ಅಲ್ಲದೆ ಲೈಂಗಿಕತೆ ಅನ್ನುವುದು ಕೇವಲ ಸಂಗಾತಿಗಳ ನಡುವಿನ ಆನಂದಕ್ಕಾಗಿ ಮತ್ತು ಹತ್ತಿರವಾಗಲು ಮಾತ್ರವಲ್ಲ. ಲೈಂಗಿಕ ಕ್ರಿಯೆಯಿಂದ ದೇಹದ ಅರೋಗ್ಯ ಕೂಡ ಸುಧಾರಿಸಬಹುದು. ಸೆಕ್ಸ್ ದೇಹವನ್ನು ಆರೋಗ್ಯಯುತವಾಗಿ ಇಡಲು ಸಹಕರಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ:

ಒತ್ತಡ ಕಡಿಮೆ ಮಾಡುತ್ತದೆ
ಸೆಕ್ಸ್ ಭಾವನಾತ್ಮಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇರಲು ಸಹಾಯಕ.ಇದು ಒತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಕೆಲಸ ಮಾಡುತ್ತದೆ.ಸೆಕ್ಸ್ ನ ನಂತರ ಮಿದುಳಿನಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಗಳು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ.

ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ
ಪ್ರತಿದಿನದ ಪ್ರೀತಿ ದೇಹವು ವೈರಸ್ ಜೊತೆ ಹೋರಾಟ ಮಾಡಬಹುದಾದ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ.ಇತ್ತೀಚಿನ ಸಂಶೋಧನೆ ಪ್ರಕಾರ ದಿನನಿತ್ಯದ ಸೆಕ್ಸ್ ದೇಹದಲ್ಲಿ ಸೋಂಕುಗಳ ಜೊತೆ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ಸರಿಯಾದ ನಿದ್ದೆಯನ್ನು ನೀಡುತ್ತದೆ
ನಿದ್ರಾಹೀನತೆ ಸಮಸ್ಯೆಯಿಂದ ಹೊರಬರಲು ಸೆಕ್ಸ್ ಸಹಾಯ ಮಾಡುತ್ತದೆ.

ಹೃದಯದ ಅರೋಗ್ಯ ಕಾಪಾಡುತ್ತದೆ
ಇತ್ತೀಚಿನ ಅಧ್ಯಯನದ ಪ್ರಕಾರ ವಾರದಲ್ಲಿ 2 ಭಾರೀ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರಿಗೆ ಸೆಕ್ಸ್ ನಿಂದ ದೂರ ಇರುವವರಿಗಿಂತ ಹೃದಯಾಘಾತ ಆಗುವ ಸಂಭವ ಕಡಿಮೆ ಇರುತ್ತದೆ.

ಹಾರ್ಮೋನ್ ಅನ್ನು ಸಮತೋಲಿತವಾಗಿದುತ್ತದೆ
ಋತುಚಕ್ರದಲ್ಲಿ ತೊಂದರೆ ಅನುಭವಿಸುತ್ತಿದ್ದೀರ? ನಿಮ್ಮ ಸಂಗಾತಿಯೊಂದಿಗೆ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಋತು ಚಕ್ರ ಸಮತೋಲಿತವಾಗಿ ಆಗುತ್ತದೆ.ಸ್ನಾಯು ಸೆಳೆತಗಳು ಕಡಿಮೆ ಆಗುತ್ತದೆ.

ಸ್ನಾಯುಗಳನ್ನು ಬಲಪಡಿಸುತ್ತದೆ
ಸೆಕ್ಸ್ ಸ್ನಾಯುಗಳನ್ನು ಬಲಪಡಿಸುತ್ತದೆ.ಲೈಂಗಿಕ ಚಟುವಟಿಕೆಯಿಂದ ನಿಮ್ಮ ಬೆನ್ನಿನ ಮೇಲುಭಾಗ ಇನ್ನಿತರ ಸ್ನಾಯುಗಳು ಬಲಿಷ್ಟವಾಗುತ್ತದೆ.

ಸುಂದರವಾಗಿ ಕಾಣುತ್ತೀರಿ
ಸೆಕ್ಸ್ ಮಹಿಳೆಯರಿಗೆ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.ಲೈಂಗಿಕ ಕ್ರಿಯೆಯಿಂದ ಎಸ್ಟ್ರೋಜೆನ್ ಪ್ರಮಾಣ ದುಪ್ಪಟ್ಟು ಆಗುವುದರಿಂದ ಇದು ಚರ್ಮ ಮೃದುವಾಗಲು ಸಹಕರಿಸುತ್ತದೆ ಮತ್ತು ಕೂದಲು ಹೊಳೆಯುವಂತೆ ಮಾಡುತ್ತದೆ.



Click it and Unblock the Notifications
