Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಸಂಗಾತಿಗೆ ಥ್ಯಾಂಕ್ಸ್ ಹೇಳುವ ಅವಶ್ಯಕತೆ ಏಕೆ?
ಮೊನ್ನೆ ಒಂದು ಕೋಟ್ ಓದಿದೆ, Work is like a rubber ball, but relationship is like a mirror. ಹೌದಲ್ವಾ? ಸಂಬಂಧವೆಂಬ ಕನ್ನಡಿಯನ್ನು ಎಷ್ಟೊಂದು ಜೋಪಾನವಾಗಿ ನೋಡಬೇಕಲ್ಲಾ? ಒಂದು ಕಡೆ ಕೆಲಸ ಕಳೆದರೆ ಮತ್ತೆಲ್ಲೋ ಸಿಗುವುದು, ಆದರೆ ಒಮ್ಮೆ ಪ್ರೀತಿಯನ್ನು ಕಳೆದುಕೊಂಡರೆ ಆ ಪ್ರೀತಿ ಮರಳಿ ಪಡೆಯಲು ಸಾಧ್ಯವೇ? ಒಂದು ವೇಳೆ ಮರಳಿ ದೊರೆತರೂ ಒಡೆದ ಕನ್ನಡಿಯನ್ನು ಪ್ಯಾಚ್ ಅಪ್ ಮಾಡಿದಂತೇ ಇರುತ್ತದೆ, ಬರೀ ಬಿರುಕುಗಳೇ ಎದ್ದು ಕಾಣುವುದು, ಅಲ್ಲಿ ಸ್ವಚ್ಛ ಪ್ರತಿಬಿಂಬ ಕಾಣಲು ಸಾಧ್ಯವೇ?
ಕೆಲವೊಮ್ಮೆ ಅನಿಸುತ್ತೆ ಸುಂದರವಾದ ಸಂಸಾರಕ್ಕಾಗಿ ಎಷ್ಟೆಲ್ಲಾ ಟಿಪ್ಸ್ ಇವೆ, ಆದರೆ ಸಾಕಷ್ಟು ಬಾರೀ ಅವುಗಳನ್ನು ಓದಿರುತ್ತೇವೆ ವಿನಾಃ ಬದುಕಿನಲ್ಲಿ ಅಳವಡಿಸಿಕೊಳ್ಳಲು ಮರೆತಿರುತ್ತೇವೆ. ಆದ್ದರಿಂದಲೇ ego ಸಮಸ್ಯೆ ನಮ್ಮನ್ನು ಆಡಿಸುವುದು. ಸಂಬಂಧದಲ್ಲಿ ಈಗೋ ಇರಬಾರದು, ಆದರೆ ಥ್ಯಾಂಕ್ಸ್ ಹೇಳುವ ಗುಣ ಇರಬೇಕೆ? ಕೆಲವರಿಗೆ ಥ್ಯಾಂಕ್ಸ್ ಹೇಳುವುದು ಅಷ್ಟಾಗಿ ಸರಿ ಕಾಣುವುದಿಲ್ಲ , ನಮ್ಮ ವ್ಯಕ್ತಿ ನಮಗೆ ಮಾಡಿದ ಸಹಾಯಕ್ಕೆ ಥ್ಯಾಂಕ್ಸ್ ಏಕೆ? ಎನ್ನುವುದು ಅವರ ಅಭಿಪ್ರಾಯ.

ಅದೂ ಸರಿ ಅಲ್ಲವೇ? ಅವರು ನಮಗೆ ಮಾಡಿದ ಸಹಾಯಕ್ಕೆ ಥ್ಯಾಂಕ್ಸ್ ಏಕೆ ಹೇಳಬೇಕು, ಅದು ಅವರ ಕರ್ತವ್ಯ ಅಲ್ಲವೇ? ಆದರೆ ನಮ್ಮ ಥ್ಯಾಂಕ್ಸ್ ಅವರಿಗೆ ಸ್ಪೂರ್ತಿಯಾಗುವುದಾದರೆ ಥ್ಯಾಂಕ್ಸ್ ಹೇಳುವುದರಲ್ಲಿ ತಪ್ಪೇನು? ಹೌದು ಸಂಬಂಧ ಗಟ್ಟಿಯಾಗಬೇಕೆಂದರೆ ಬರೀ ಹೊಂದಾಣಿಕೆ ಗುಣ ಮಾತ್ರ ಇದ್ದರೆ ಸಾಲದು, ಸ್ಪೂರ್ತಿದಾಯಕರೂ ಆಗಿರಬೇಕು.
ಹೊಂದಾಣಿಕೆಯಲ್ಲಿ ನಮ್ಮ ಕೆಲವೊಂದು ವೈಯಕ್ತಿಕ ಆಸೆಗಳನ್ನೂ ಬಿಡಬೇಕಾಗಿ ಬರಬಹುದು, ಆದರೆ ಆದರೆ ಸ್ಪೂರ್ತಿ ತುಂಬುವ ಗುಣವಿದ್ದರೆ ನಮ್ಮ ಆಸೆಗಳಿಗೆ ಮತ್ತಷ್ಟು ಬಲ ಸಿಗುವುದು ಅಲ್ಲವೇ? ಆದರೆ ಇಲ್ಲಿಯೇ ಸಾಕಷ್ಟು ಜೋಡಿಗಳು ಎಡವುತ್ತಾರೆ. ನಾನು ಬಯಸಿದಂತೆ ನನ್ನ ಜೋಡಿ ಇರಬೇಕೆಂದು ಬಯಸುತ್ತೇವೆ ಹೊರತು, ಅವರು ಆಸೆಗೆ ಸ್ಪೂರ್ತಿಯಾಗಬೇಕೆಂದು ಬಯಸುವುದೇ ಇಲ್ಲ, ಹಾಗೇ ಬಯಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ!
ಹಾಗಂತ ಚಿಕ್ಕ ಪುಟ್ಟ ವಿಷಯಗಳಿಗೆ ಥ್ಯಾಂಕ್ಸ್ ಹೇಳುವ ಅಭ್ಯಾಸ ಕೂಡ ಬೆಳೆಸಿಕೊಳ್ಳಬೇಡಿ, ಅವರು ನಿಮಗೆ ಏನಾದರೂ ಸಹಾಯ ಮಾಡಿದರೆ ಥ್ಯಾಂಕ್ಸ್ ಅನ್ನುವ ಬದಲು ಅವರ ಸಾಧನೆ ನೋಡಿ ಅವರಿಗೆ ಥ್ಯಾಂಕ್ಸ್ ಹೇಳಿ, ಆಗ ನೋಡಿ ನಿಮ್ಮ ಸಂಗಾತಿ ನಿಮ್ಮನ್ನು ಮತ್ತಷ್ಟು ಹಚ್ಚಿಕೊಳ್ಳುತ್ತಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ನಿಮ್ಮ ಸಂಗಾತಿಯನ್ನು ಮತ್ತೊಬ್ಬರ ಜೊತೆ ಹೋಲಿಕೆ ಮಾಡಬೇಡಿ, ಹೋಲಿಕೆ ಮಾಡಿದರೆ ಥ್ಯಾಂಕ್ಸ್ ಹೇಳಬೇಕೆಂದು ಅನಿಸುವುದೇ ಇಲ್ಲ...



Click it and Unblock the Notifications
