ಪ್ರಣಯಮಯವಾಗಿರಲಿ ಶಯನಗೃಹ

By ಲೇಖಕ

ದಣಿದು ಬರುವ ಪತಿ, ದಿನವಿಡಿ ಮನೆಯವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುವ ಪತ್ನಿ ಹೊರಗೆ ಎಷ್ಟಿದ್ದರೂ ಒಂದು ಹಂತದ ವರೆಗೆ ತಮ್ಮ ಭಾನವೆಗಳನ್ನು ಹಂಚಿಕೊಳ್ಳಬಹುದು ಆದರೆ ತಮ್ಮ ಮನಸ್ಸಿನ ಆಳದ ಭಾವನೆಗಳು, ಸಂಗಾತಿಯೊಂದಿಗೆ ಮಾತ್ರ ಹಂಚಿಕೊಳ್ಳುವ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲು ಮಲಗುವ ಕೋಣೆಯೇ ಸರಿಯಾದ ಸ್ಥಳ.

ಇದು ಬರಿಯ ಮಲಗುವ ಕೋಣೆಯಲ್ಲ. ಇದು ಜೋಡಿಗಳ ನಡುವಿನ ಮಾತುಗಳಿಗೆ, ಮಧುರ ಭಾವಗಳಿಗೆ ಅವಕಾಶ ನೀಡುವ ಮನೆಯ ಒಂದು ಕೋಣೆ. ಇಂತಹ ಕೋಣೆಯೊಳಗೆ ಬರುತ್ತಿದ್ದ ಹಾಗೆ ಎಲ್ಲವೂ ಗೊಂದಲಮಯವಾಗಿರಬಾರದು ಒಳಗೆ ಹೋದಂತೆ ಹೊರಗಿನ ಎಲ್ಲಾ ಚಿಂತೆಗಳನ್ನು ಬದಿಗೊತ್ತಿ ನಿಮ್ಮ ತೀರಾ ಖಾಸಗಿ ಜೀವನವನ್ನು ಅನುಭವಿಸುವಂತಿರಬೇಕು.

ಇದು ಎಲ್ಲಾ ಮನೆಗಳ ಅತ್ಯಂತ ಹೆಚ್ಚು ಪ್ರಣಯಪೂರ್ವಕ ಕೋಣೆಯೂ ಹೌದು. ಇಲ್ಲಿ ನೀವು ರಾತ್ರಿಯ ಅತ್ಯಂತ ಹೆಚ್ಚಿನ ವೇಳೆಯನ್ನು ಕಳೆಯುತ್ತೀರಿ ಹಾಗೂ ದಿನವಿಡಿ ಕಾಯುವ ಕೋಣೆಯಂತಿರುತ್ತದೆ. ಇಲ್ಲಿ ಸ್ವಲ್ಪ ಚತುರತೆ ಮತ್ತು ಸ್ವಲ್ಪ ಆಧುನಿಕತೆ ಇದ್ದರೆ ಸಾಮಾನ್ಯ ಕೋಣೆಯನ್ನೂ ಅತ್ಯಂತ ಆಕರ್ಷಕ ಕೋಣೆಯನ್ನಾಗಿ ಮಾಡಬಹುದು.

1.ಖಾಸಗಿ ಸ್ಥಳ

1.ಖಾಸಗಿ ಸ್ಥಳ

ಮಲಗುವ ಕೋಣೆಯನ್ನು ಗುಹೆಯಂತೆ ಬಹಳ ಏಕಾಂತ ಇರುವ ಹಾಗೆ ನೊಡಿಕೊಂಡರೆ ದಣಿವೆಲ್ಲಾ ಮಾಯವಾಗುತ್ತದೆ. ಇಲ್ಲಿಗೆ ಬರುತ್ತಿದ್ದ ಹಾಗೆ ಪ್ರಣಯದ, ಆರಾಮದಾಯಕ, ಪ್ರೀತಿಯ ಭಾವನೆ ಬರುವಂತಹ ಆವರಣ ಇದ್ದರೆ ಉತ್ತಮ.

2.ದಪ್ಪನೆಯ ದೊಡ್ಡ ಚಾದರಗಳು ಇರಲಿ

2.ದಪ್ಪನೆಯ ದೊಡ್ಡ ಚಾದರಗಳು ಇರಲಿ

ಮಲಗುವ ಕೋಣೆಯ ಅತ್ಯಂತ ಪ್ರಮುಖ ಅವಶ್ಯಕತೆ ದೊಡ್ಡದಾದ ಬೆಡ್ ಮತ್ತು ಅದಕ್ಕೆ ತಕ್ಕುದಾದ ಹೊದಿಕೆಗಳು. ಹೊದಿಕೆಗಳು ಮತ್ತು ಬೆಡ್ ನಯವಾಗಿ ಮೃದುವಾಗಿದ್ದು ಸಾಕಷ್ಟು ದೊಡ್ಡದಾಗಿರಲಿ ನೀವು ಅದರೊಳಗೆ ಪೂರ್ಣವಾಗಿ ಒಳಗೆ ಸೇರಿ ದಿನದ ಆಯಾಸವನ್ನೆಲ್ಲಾ ಮರೆಯುವಂತಿರಲಿ. ಇಂತಹ ಹೊದಿಕೆಗಳು ಇದ್ದರೆ ಪ್ರಣಯ ಖಂಡಿತ.

3.ಮೃದುವಾದ ಬೆಡ್

3.ಮೃದುವಾದ ಬೆಡ್

ಕಲಾತ್ಮಕತೆ ಇರುವ ಬೆಡ್ ಮತ್ತು ಅದರ ಮೇಲ್ಭಾಗ ನೀವು ನೋಡುತ್ತಿದ್ದಂತೆಯೇ ನಿಮ್ಮನ್ನು ಪ್ರಣಯ ಲಹರಿಗೆ ಕರೆದೊಯ್ಯುವಂತಿರಬೇಕು. ಮೃದುತ್ವ ಮತ್ತು ಬಟ್ಟೆಯ ಗುಣಮಟ್ಟ ಚೆನ್ನಾಗಿರಬೇಕು.

4.ಸ್ನೇಹಮಯ ಕೋಣೆ

4.ಸ್ನೇಹಮಯ ಕೋಣೆ

ಕೆಲವೇ ಕೆಲವು ಆಸನಗಳನ್ನು ಇಟ್ಟು ಅದನ್ನು ನಿಮ್ಮ ಎಲ್ಲಾ ಅವಶ್ಯಕತೆಗಳಿಗೆ ಬಳಸುವಂತೆ ಖಾಸಗಿ ಕೋಣೆಯಾಗಿಸಿ.

5. ಕಿಟಕಿ ಬದಿ ಆಸನ

5. ಕಿಟಕಿ ಬದಿ ಆಸನ

ಕಿಟಕಿಯ ಬದಿಯಲ್ಲಿ ಒಂದು ಸಣ್ಣದಾದರೂ ಆಸನವಿದ್ದರೆ ಅದು ಸಮಯ ಕಳೆಯಲು ಮತ್ತು ನೆನಪುಗಳನ್ನು ತಾಜಾ ಮಾಡಲು ಬಹಳ ಉತ್ತಮವಾದ ಸ್ಥಾನ. ಇಲ್ಲಿ ಕುಳಿತು ಸುಮ್ಮನೆ ಸಮಯ ಬೇಕಾದರೂ ಕಳೆಯಬಹುದು ಅಥವಾ ಏನನ್ನಾದರೂ ಓದಲೂ ಬಹುದು.

6.ಆತ್ಮೀಯ ಆಹಾರ ಸೇವನಾ ಸ್ಥಳ

6.ಆತ್ಮೀಯ ಆಹಾರ ಸೇವನಾ ಸ್ಥಳ

ಕೇವಲ ಎರಡೇ ಎರಡು ಕುರ್ಚಿಗಳುಳ್ಳ ಸಣ್ಣದಾದ ಒಂದು ಡೈನಿಂಗ್ ಸೆಟ್ ಇದ್ದರೆ ಚೆನ್ನ. ಇಲ್ಲಿ ನಿಮ್ಮದೇ ಖಾಸಗಿ ಮಾತುಕತೆಗಳಿಗೆ ಮಾತ್ರ ಅವಕಾಶವಿರಲಿ. ಇದು ಮನೆಯವರ ಜಂಜಾಟಗಳಿಂದ ಬೇರೆಯಾಗಿ ಉಪಾಹಾರ ಸೇವನೆ ಮಾಡಬೇಕು ಎಂದು ಬಯಸಿದ ದಿನ ನಿಮ್ಮ ಅಗತ್ಯಕ್ಕೆ ಅನುಕೂಲಕ್ಕೆ ಬರುತ್ತದೆ. ದಿನದ ಆರಂಭ ಈ ಎರಡು ಕುರ್ಚಿಗಳ ಮೇಲೆ ನೀವಿಬ್ಬರು ಒಬ್ಬರ ಮುಂದೆ ಒಬ್ಬರು ಚಹಾ ಹೀರುತ್ತಾ ಆರಂಭಿಸಿದರೆ ದಿನವೆಲ್ಲಾ ಚೆನ್ನಾಗಿರುತ್ತದೆ.

7.ಇನ್ನಿತರೆ ವಸ್ತುಗಳು

7.ಇನ್ನಿತರೆ ವಸ್ತುಗಳು

ಡ್ರೆಸ್ಸಿಂಗ್ ಟೇಬಲ್, ಪ್ರಣಯಕ್ಕೆ ಮುನ್ನುಡಿ ಬರೆಯುವಂತಿರುವ ಇನ್ನಿತರ ವಸ್ತುಗಳು ಇದ್ದರೆ ಮತ್ತೂ ಒಳ್ಳೆಯದು. ಕಡಿಮೆ ಬೆಳಕಿನ ದೀಪಗಳು, ಅಥವಾ ಕ್ಯಾಂಡಲ್ ಗಳು, ಅಗತ್ಯವಿರುವ ಸುಗಂಧ ದ್ರವ್ಯಗಳು ಹಾಗೂ ರೂಮ್ ಫ್ರೆಶ್ ನರ್ ಇದ್ದರೆ ವಾತಾವರಣ ಮತ್ತಷ್ಟು ರಂಗೇರುತ್ತದೆ.

8.ಚಿಯಾರೊಸ್ಕುರೋ ದೀಪಗಳು

8.ಚಿಯಾರೊಸ್ಕುರೋ ದೀಪಗಳು

ಮಂದ ಬೆಳಕಿನ ದೀಪಗಳು, ಕ್ಯಾಂಡಲ್ ಗಳು, ಬಣ್ಣ ಬಣ್ಣದ ಪರದೆಗಳು ನೀವು ಬೇಡ ಎಂದರು ಪ್ರಣಯದ ಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತವೆ. ಕೋಣೆಯನ್ನು ಕತ್ತಲು ಮಾಡಲು ಕಿಟಕಿ ಪರದೆಗಳೂ ಅಗತ್ಯ. ನಿಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ಪೂರ್ಣ ಆರಾಮ ನೀಡುವಂತಹ ನಿಮ್ಮ ಇಷ್ಟದ ವಸ್ತುಗಳೇ ಸುತ್ತಮುತ್ತಲಿರಲಿ.

9.ಆರ್ಟ್ ಗ್ಯಾಲರಿ

9.ಆರ್ಟ್ ಗ್ಯಾಲರಿ

ನಿಮ್ಮ ಸಂಗಾತಿಯೊಂದಿಗೆ ನೀವು ಕಳೆದ ಮಧುರ ನೆನೆಪುಗಳನ್ನು ಮತ್ತೊಮ್ಮೆ ನೆನಪಿಸುವಂತಹ ಚಿತ್ರಗಳು ಅಥವಾ ನಿಮಗಿಷ್ಟವಾದ ಪೈಂಟಿಂಗ್ ಗಳು ನಿಮ್ಮ ಕೋಣೆಯ ಗೋಡೆಗಳ ಮೇಲಿರಲಿ. ನಿಮಗೆ ಎಲ್ಲಾ ಸಂದರ್ಭದಲ್ಲೂ ಇಷ್ಟವಾಗುವ ಮತ್ತು ಹಳೆಯ ನೆನಪುಗಳನ್ನು ತಾಜಾ ಮಾಡುವಂತಹ ಚಿತ್ರಗಳಿಗೇ ಆದ್ಯತೆ ಕೊಡಿ.

10.ಬಣ್ಣಗಳ ಆಯ್ಕೆ ಸರಿಯಾಗಿರಲಿ

10.ಬಣ್ಣಗಳ ಆಯ್ಕೆ ಸರಿಯಾಗಿರಲಿ

ಗುಲಾಬಿ ಬಣ್ಣ, ತಿಳಿ ಹಸಿರು ಬಣ್ಣ, ಆಕಾಶ ನೀಲಿ ಬಣ್ಣ, ಇತ್ಯಾದಿ ಬಣ್ಣಗಳು ಪ್ರಣಯ ಸೂಚಕ ಬಣ್ಣಗಳಾಗಿವೆ ಇಂತಹ ಬಣ್ಣಗಳನ್ನೇ ಆಯ್ಕೆ ಮಾಡಿ. ತಿಳಿ ಬೆಳಕಿನ ದೀಪಗಳ ಆಯ್ಕೆ ಮಾಡುವಾಗಲೂ ಬಣ್ಣಗಳ ಬಗ್ಗೆ ಗಮನ ಕೊಡಿ.

11.ಅಧ್ಯಯನ

11.ಅಧ್ಯಯನ

ನಿಮ್ಮ ಮಲಗುವ ಕೋಣೆಯಲ್ಲಿ ಬರೆಯಲು ಮಾತ್ರ ಬೇಕಾದಂತಹ ಸಣ್ಣ ಮೇಜು ಮತ್ತು ಅದಕ್ಕೆ ತಕ್ಕುದಾದ ಒಂದು ಸಣ್ಣ ಕುರ್ಚಿ ಇರಲಿ. ನಿಮ್ಮ ಪ್ರೀತಿಯ ಭಾವನೆಗಳನ್ನು ಬರಹ ರೂಪದಲ್ಲಿ ವ್ಯಕ್ತಪಡಿಸಬೇಕಾದಾಗ ಇದರ ಬಳಕೆಯಾಗಲಿ.

12.ದೀಪಾಲಂಕಾರ ಮತ್ತು ಸಣ್ಣ ಗಿಡಗಳು

12.ದೀಪಾಲಂಕಾರ ಮತ್ತು ಸಣ್ಣ ಗಿಡಗಳು

ಪುಟ್ಟ ಗಿಡಗಳ ಸಂಗ್ರಹ ಮತ್ತು ಆದರ ಸುತ್ತ ಅದಕ್ಕೆ ತಕ್ಕುದಾದ ದೀಪಗಳು ಇದ್ದರೆ ವಾತಾವರಣ ಮತ್ತಷ್ಟು ರಂಗೇರುತ್ತದೆ. ನಿಮ್ಮನ್ನು ಬೇರೆಲ್ಲೋ ಒಯ್ದ ಹಾಗೆ ಅನುಭವಕ್ಕೆ ಬರುತ್ತದೆ.

15.ಕನ್ನಡಿಗಳು

15.ಕನ್ನಡಿಗಳು

ಸಾಮಾನ್ಯ ಕಡೆಗಳಲ್ಲಿ ಇರುವ ಕನ್ನಡಿಗಳನ್ನು ಬಿಟ್ಟು ಕೆಲವು ವಿಶೇಷ ಕನ್ನಡಿಗಳನ್ನು ಬಳಸಿ. ಇದು ನಿಮ್ಮ ಕೋಣೆಯ ದೀಪಗಳನ್ನು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ. ಕ್ಯಾಂಡಲ್ ಲೈಟ್ ಇದರ ಮೇಲೆ ಬಿದ್ದರೆ ಅದು ನೀಡುವ ಅನುಭೂತಿಯೇ ಬೇರೆಯದು.

14. ಶೆಲ್ಫ್ ಗಳು

14. ಶೆಲ್ಫ್ ಗಳು

ಆಧುನಿಕ ಶೈಲಿಯ ಶೆಲ್ಫ್ ಗಳು ಮತ್ತು ಸಣ್ಣದಾದ ಚಿಕ್ಕ ಸ್ಥಳದಲ್ಲಿ ಇಡಬಹುದಾದ ಡ್ರವರ್ ಇದ್ದರೆ ಒಳ್ಳೆಯದು. ಇದು ನಿಮ್ಮ ಮೊಬೈಲ್ ಗಳು ಅವುಗಳ ಚಾರ್ಜರ್ ಗಳು ಮತ್ತಿತರ ಅಗತ್ಯ ವಸ್ತುಗಳನ್ನು ಇಡಲು ಅನುಕೂಲ.

15.ಹೆಚ್ಚು ಸ್ಥಳಾವಕಾಶ ಇರಲಿ

15.ಹೆಚ್ಚು ಸ್ಥಳಾವಕಾಶ ಇರಲಿ

ಒಂದು ಉತ್ತಮ ಮಲಗುವ ಕೋಣೆಯ ಅಗತ್ಯ ಎಲಾ ವಸ್ತುಗಳು ಕೈಗೆತಕುವ ದೂರದಲ್ಲಿರಬೇಕು. ಆದರೆ ಇದರ ಅರ್ಥ ನಿಮಗೆ ಕಾಲಿಡಲೂ ಜಾಗ ಇಲ್ಲದ ಹಾಗಾಗಬಾರದು. ವಸ್ತುಗಳನ್ನು ಅದೇ ಜಾಗದಲ್ಲಿಡುವ ಅಭ್ಯಾಸ ಮಾಡಿ.

ಟಿವಿ

ಕೆಲವರು ಬೆಡ್ ರೂಂನಲ್ಲಿ ಇದ್ದರೆ ಒಳ್ಳೆಯದು ಎಂದು ಭಾವಿಸುತ್ತಾರೆ, ಮತ್ತೆ ಕೆಲವರು ಬೆಡ್ ರೂಂನಲ್ಲಿ ಟಿವಿ ಇಡಬಾರದು ಎಂದು ಭಾವಿಸುತ್ತಾರೆ. ನಿಮಗೆ ಯಾವುದು ಸೂಕ್ತ ಅನಿಸುತ್ತದೆಯೋ ಹಾಗೇ ಮಾಡಿ.

Story first published: Friday, August 30, 2013, 17:21 [IST]
X
Desktop Bottom Promotion