Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಪುರುಷರ ಅನೈತಿಕ ಸಂಬಂಧಕ್ಕೆ ಟಾಪ್ 8 ಕಾರಣಗಳು
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು,ವಿವಾಹ ವಿಚ್ಛೇದನಗಳು ಇವುಗಳೆಲ್ಲ ಹೆಚ್ಚುತ್ತಿವೆ.ಹಾಗೆಯೇ ಸಂಬಂಧದಲ್ಲಿ ಬಿರುಕುಗಳು ಕಾಣುತ್ತಿವೆ.ಪುರುಷರು ತಮ್ಮ ಹೆಂಡತಿಯನ್ನು ಯಾವಾಗಲು ಏನಾದರು ಒಂದು ಕಾರಣ ಹುಡುಕಿ ಹೀಗಳೆಯುತ್ತಿರುತ್ತಾರೆ.ಅಥವಾ ಪತ್ನಿಯ ಮೇಲೆ ಕೆಂಗಣ್ಣು ಬಿಡುತ್ತಿರುತ್ತಾರೆ.ಹೆಚ್ಚಿನ ಸಮಯದಲ್ಲಿ ಇದೊಂದು ನಿರ್ಲಕ್ಷ ಎನಿಸಿದರೂ ಕೂಡ ಹೆಚ್ಚಿನ ಸಮಯದಲ್ಲಿ ಅವರು ಸಿಕ್ಕಿ ಬೀಳದಿರುವುದು ಒಂದು ಕಾರಣ ಎನ್ನಬಹುದು.
ಕೆಲವು ಪುರುಷರು ಮದುವೆಯ ನಂತರ ಬೇರೆ ಸಂಬಂಧಗಳನ್ನು ಇಟ್ಟುಕೊಂಡು ಹೆಂಡತಿಗೆ ಮೋಸ ಮಾಡುತ್ತಾರೆ.ಇದರಿಂದ ಸಂಬಂಧಗಳಲ್ಲಿ ಬಿರುಕು ಬಿಡುತ್ತದೆ.ವಿಚ್ಛೇದನ ಕೂಡ ಆಗಬಹುದು ಇದು ಇಡೀ ಕುಟುಂಬ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಅವರು ಈ ರೀತಿ ಮಾಡಲು ಕಾರಣವೇನು?ಪುರುಷರು ಮಹಿಳೆಯರನ್ನು ಏಕೆ ಮೋಸಗೊಳಿಸುತ್ತಾರೆ ಎಂಬುದಕ್ಕೆ ಸಂಬಂಧ ಸಲಹೆಗಾರ ಡಾಕ್ಟರ್ ಕಮಲ್ ಕೌರಾನಾ ಮಾಡಿದ 'ಪುರುಷರು ಮಾಡುವ ದ್ರೋಹಕ್ಕೆ ಕಾರಣ' ಅನ್ನುವ ಸಂಶೋಧನೆಯಲ್ಲಿ ದಂಪತಿಗಳನ್ನು ಒಟ್ಟಿಗೆ ಕೂರಿಸಿ ಕೇಳಿದ ಪ್ರಶ್ನೆಗಳಿಗೆ ಹೆಚ್ಚಿನ ಉತ್ತರಗಳನ್ನು ವೀಕ್ಷಿಸಿ ಅದಕ್ಕೆ ಕಾರಣವನ್ನು ನೀಡಿದ್ದಾರೆ ಅದರ ಬಗ್ಗೆ ಮುಂದೆ ಓದಿ.

1.ಪ್ರಾಥಮಿಕ ಕಾರಣ ಮದುವೆಯಲ್ಲಿ ಅಡಚಣೆ
ಮನೆಯಲ್ಲಿ ಪ್ರತಿ ದಿನ ಜಗಳಗಳಾಗುತ್ತಿದ್ದು ಅದು ಪರಿಹಾರಗೊಳ್ಳದೆ ಹಾಗೆ ಮುಂದುವರೆದರೆ ಪತಿ ಗೊಂದಲಕ್ಕೆ ಒಳಗಾಗುತ್ತಾನೆ.ಹೀಗೆ ಆತ ಅಸಂತೋಷಗೊಂಡಾಗ ಹೆಚ್ಚು ಜಗಳವಾಡಬಹುದು ಅಥವಾ ಪಲಾಯನ ಮಾಡಬಹುದು.ಇದರಿಂದ ತಪ್ಪಿಸಿಕೊಳ್ಳಲು ಆತ ಮದುವೆಯಿಂದ ಪಲಾಯನಗೊಂಡು ಬೇರೊಬ್ಬರೆಡೆಗೆ ಆಕರ್ಷಿತ ಆಗುತ್ತಾನೆ.ಒಂದು ರೀತಿಯಲ್ಲಿ ಇದು ಸಮಸ್ಯೆಗಳು ಯಾರಿಗೂ ತೊಂದರೆ ಮಾಡುವುದಿಲ್ಲ ಮತ್ತು ಜೀವನದ ಒಂದು ಸಮಾನಾಂತರ ಬೆಂಬಲದೊಂದಿಗೆ ಉತ್ತಮ ರೀತಿಯಲ್ಲಿ ಮುಂದುವರಿಸಬಹುದು ಎಂದು ತಿಳಿದು ಮುಂದುವರೆಯುತ್ತಾರೆ.

2.ಪುರುಷರು ವಂಚನೆ ಮಾಡುವುದಕ್ಕೆ ಬೇಸರ/ನೀರಸವಾದ ಜೀವನ ಕಾರಣ
ಕೆಲವು ಗಂಡಸರು ಮದುವೆಯ ನಂತರದ ಜೀವನ ನೀರಸವಾಗಿದೆ ಎಂದು ಬೇಸರ ಪಟ್ಟುಕೊಳ್ಳುತ್ತಾರೆ.ಇಂತವರು ತಮ್ಮ ಹೆಂಡತಿಯೊಡನೆ ಜೀವನವನ್ನು ಆನಂದಿಸುವ ಬದಲು ಹೊರಗಿನ ಪ್ರಪಂಚದಲ್ಲಿ ಬೇರೊಬ್ಬರನ್ನು ಕಂಡುಕೊಂಡು ಅವರೊಡನೆ ಆಕರ್ಷಣೆ ಬೆಳೆಸಿ ಜೀವನ ಸುಂದರವಾಗಿದೆ ಎಂದು ಭಾವಿಸುತ್ತಾರೆ.ವಿವಾಹೇತರ ಸಂಬಂಧ ಅವರಿಗೆ ಒಂದು ರೀತಿಯಲ್ಲಿ ಸಂತೋಷ ಮತ್ತು ನೆಮ್ಮದಿ ನೀಡಿ ತಾಜಾ ಅನುಭವ ನೀಡಲು ಪ್ರಾರಂಭಿಸುತ್ತದೆ.

3.ವಂಚನೆ ಮಾಡುವ ಪುರುಷನಿಗೆ ಲೈಂಗಿಕ ಆಸಕ್ತಿ ಹೆಚ್ಚಿರುತ್ತದೆ
ಮದುವೆಯ ನಂತರ ಕೆಲವು ಗಂಡಸರು ಹೆಂಡತಿಗೆ ಮೊರೆಹೋದರೆ ಇನ್ನು ಕೆಲವು ಗಂಡಸರು ವಿವಾಹೇತರ ಸಂಬಂಧ ಇಷ್ಟಪಡುತ್ತಾರೆ.ಅವರು ಬೇರೆಬೇರೆ ಹೆಂಗಸರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುತ್ತಾರೆ.ಬಹುಶಃ ಇದರಿಂದ ಅವರು ತಾವು ಹೆಚ್ಚು ಲೈಂಗಿಕ ಸಾಮರ್ಥ್ಯ ಹೊಂದಿದ್ದೇವೆ ಎಂದು ತಿಳಿಯುತ್ತಾರೆ.

4.ವಂಚನೆ ಮಾಡುವ ಗಂಡಸು ಭಾವನಾತ್ಮಕವಾಗಿ ಅಸಂತೃಪ್ತನಾಗಿರುತ್ತಾನೆ
ಪತ್ನಿಯರು ತಮ್ಮ ಕೆಲಸ,ಮನೆ,ಮಕ್ಕಳು,ಪೋಷಕರು ಹೀಗೆ ಎಲ್ಲರ ಬಗ್ಗೆ ಕಾಳಜಿ ತೆಗೆದುಕೊಂಡು ಜೀವನದಲ್ಲಿ ಬ್ಯುಸಿ ಆಗಿದ್ದಾಗ ಗಂಡಸು ಇದಾವುದರ ಬಗ್ಗೆ ಗಮನ ನೀಡುವುದಿಲ್ಲ.ಆದರೆ ಕೆಲವೊಮ್ಮೆ ಗಂಡಸರು ಕೂಡ ಭಾವನಾತ್ಮಕವಾಗಿ ಅಸಂತೃಪ್ತನಾಗುತ್ತಾನೆ.ಪುರುಷರು ಭಾವನಾತ್ಮಕ ಕೂಡ ಹೌದು ಅವರು ಮಾಡುವ ಕೆಲಸದ ಬಗ್ಗೆ ಮತ್ತು ಅವರು ಸರಿಯಾಗಿ ಇರುವುದರ ಬಗ್ಗೆ ಪತ್ನಿ ಹೊಗಳಲಿ ಎಂದು ಬಯಸುತ್ತಾರೆ.ಗಂಡಸರು ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಹೇಳಿದರೆ ಸಹಿಸಲಾರರು.ಕೆಲವೊಮ್ಮೆ ಹೆಂಡತಿ ಹೆಚ್ಚು ಕೆಲಸ ಮಾಡಿದಾಗ ಗಂಡಸು ಏನಾದರೊಂದು ದೂರು ಹುಡುಕುತ್ತಾನೆ.
ಕೆಲವೊಮ್ಮೆ ಗಂಡಸು ಆಫೀಸಿನ ಜೊತೆ ಕೆಲಸಗಾರ್ತಿ ಅಥವಾ ಬಾಸ್ ಮಹಿಳೆಯಾಗಿದ್ದಲ್ಲಿ ಅವರು ಇವನ ಕೆಲಸವನ್ನು ಹೊಗಳಿದಾಗ ಅವರಿಗೆ ಮರುಳಾಗಬಹುದು,ಅವರು ಇವನ ಪ್ರಯತ್ನವನ್ನು ಹೊಗಳಿದಾಗ ಅಥವಾ ಬೆಂಬಲಿಸಿದಾಗ ಅವರೆಡೆಗೆ ಆಕರ್ಷಿತನಾಗಬಹುದು.

5.ವಂಚನೆ ಮಾಡುವ ಗಂಡಸರು ಅವರ ಹಿಂದಿನವರನ್ನು ನೋಡಿ ಕಲಿತಿರಬಹುದು
ಕೆಲವು ಗಂಡಸರು ತಮ್ಮ ಬಾಲ್ಯದಲ್ಲಿ ಹಿರಿಯರು ತಮ್ಮ ವೈವಾಹಿಕ ಸಂಬಂಧದಲ್ಲಿ ಮೋಸ ಮಾಡಿರುವುದನ್ನು ಕಣ್ಣಾರೆ ನೋಡಿರುತ್ತಾರೆ ಮತ್ತು ಅದು ತಪ್ಪು ಎಂದು ಒಳ ಮನಸ್ಸು ಹೇಳಿದರೂ ಕೆಲವೊಮ್ಮೆ ಅವರ ಭಾವನೆಯಲ್ಲಿ ಇದು ದೊಡ್ಡ ತಪ್ಪಲ್ಲ ಎಂಬುದು ಬೇರು ಬಿಟ್ಟಿರಬಹುದು.ಎಲ್ಲರೂ ತಮ್ಮ ತಂದೆ ತಾಯಿಯಿಂದ ಕೆಲವೊಂದನ್ನು ನೋಡಿ ಕಲಿಯುತ್ತಾರೆ ಹಾಗೆ ಇದನ್ನು ಕೂಡ ನೋಡಿ ಕಲಿತುಬಿಡಬಹುದು.ಇದು ಕೇವಲ ತಂದೆ ತಾಯಿಯಿಂದ ಮಾತ್ರವಲ್ಲ ಒಡಹುಟ್ಟಿದವರು,ಪಕ್ಕದ ಮನೆಯವರು ಅಥವಾ ಇತರರನ್ನು ನೋಡಿ ಇದೇನು ಅಷ್ಟು ದೊಡ್ಡ ತಪ್ಪಲ್ಲ ಎಂಬ ಭಾವನೆ ಬಂದು ಬಿಡಬಹುದು.ಅನೇಕ ಸಂಬಂಧಗಳನ್ನು ಇಟ್ಟುಕೊಳ್ಳಬಹುದು.ಮನಸ್ಸು ಏನನ್ನು ಯೋಚಿಸುತ್ತದೆಯೋ ಅದನ್ನೇ ಸಾಧಿಸುತ್ತದೆ ಆದ್ದರಿಂದ ಕೆಲವು ಹೆಂಗಸರೂ ಕೂಡ ಬೇರೆ ಪುರುಷರಿಗೆ ಮೊರೆ ಹೋಗುವುದುಂಟು.

6.ಮೋಸ ಮಾಡುವ ಹೆಂಡತಿ ಇದ್ದರೆ ಗಂಡಸರೂ ಮೋಸ ಮಾಡಲು ಪ್ರಾರಂಭಿಸುತ್ತಾರೆ
ಕೆಲವೊಮ್ಮೆ ಹೆಂಡತಿ ಅನೇಕ ಸಂಬಂಧಗಳನ್ನು ಹೊಂದಿದ್ದಾಳೆ ಎಂಬ ಕಾರಣಕ್ಕಾಗಿ ದ್ವೇಷ ತೀರಿಸಿಕೊಳ್ಳಲು ಗಂಡಸರು ಮೋಸ ಮಾಡುವುದನ್ನು ಕಲಿಯುತ್ತಾರೆ.ಹೆಂಡತಿ ತನ್ನ ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಂಡರು ಗಂಡಸು ಅದನ್ನೇ ಮುಂದುವರಿಸುತ್ತಾನೆ.ಯಾವ ಗಂಡಸರು ತನ್ನ ಹೆಂಡತಿಯನ್ನು ಕ್ಷಮಿಸುವ ಗುಣವನ್ನು ಹೊಂದಿರುವುದಿಲ್ಲವೋ ಅಂತವರು ಈ ರೀತಿ ಮಾಡುತ್ತಾರೆ.

7.ಮೋಸ ಮಾಡುವ ಗಂಡಸರು ಹೆಂಡತಿಗೆ ವಿಚ್ಛೇದನ ಕೊಡಲು ಬಯಸುತ್ತಾರೆ
ಹೆಂಡತಿಯಿಂದ ವಿಚ್ಛೇದನ ಪಡೆಯಲು ಗಂಡಸರು ಅನೈತಿಕ ಸಂಬಂಧವನ್ನು ಹುಡುಕಿಕೊಳ್ಳುತ್ತಾರೆ.ಕಾನೂನು ಪ್ರಕಾರ ಗಂಡ ಅನೈತಿಕ ಸಂಬಂಧ ಹೊಂದಿದಲ್ಲಿ ಹೆಂಡತಿ ವಿಚ್ಛೇದನ ಪಡೆಯಬಹುದು.ಹೆಂಡತಿಗೆ ತಿಳಿಯುವಂತೆಯೇ ಮೋಸ ಮಾಡುವುದರಿಂದ ಪತ್ನಿ ಮಾನಸಿಕವಾಗಿ ಕುಗ್ಗುತ್ತಾಳೆ ಮತ್ತು ವಿಚ್ಛೇದನದ ಮೊರೆ ಹೋಗುತ್ತಾಳೆ.

8.ಹೆಂಡತಿ ಕಡೆಗಣಿಸಿದರೆ
ತನ್ನ ಹೆಂಡತಿಗೆ ನಾನಿನ್ನು ಬೇಕಾಗಿಲ್ಲ ಎಂದು ತಿಳಿಯುವ ಗಂಡಸರು ಮೋಸ ಮಾಡಲು ಪ್ರಾರಂಭಿಸುತ್ತಾರೆ,ಅವರನ್ನು ವಿಶೇಷವಾಗಿ ಇಷ್ಟಪಡುವ ಹೆಣ್ಣಿನಲ್ಲಿ ಆಕರ್ಷಿತರಾಗುತ್ತಾರೆ.ಬಹಳ ದಿನಗಳಿಂದ ಹೆಂಡತಿಯಿಂದ ಸಿಗದ ವಿಶೇಷ ಗಮನ ಇವರ ಮೇಲೆ ಬೇರೆ ಹೆಣ್ಣು ನೀಡಿದಾಗ ಅವರಿಗೆ ಸಂತೋಷವಾಗುತ್ತದೆ.ಆದ್ದರಿಂದ ಅವರೊಂದಿಗೆ ಸಂಬಂಧ ಬೆಳೆಸಲು ಇಷ್ಟ ಪಡುತ್ತಾರೆ.



Click it and Unblock the Notifications











