Latest Updates
-
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ!
ಬೆಸ್ಟ್ ಫ್ರೆಂಡ್ ಜೊತೆ ಪ್ರೀತಿ ಮೂಡಿತೇ?
ಆ ಒಂದು ಜೀವದ ಜತೆಗೆ ನೋವು-ನಲಿವು, ಕಷ್ಟಸುಖ ಹೀಗೆ ಎಲ್ಲವನ್ನು ಹಂಚಿಕೊಳ್ಳಬೇಕೆನಿಸುತ್ತದೆ. ಆ ಜೀವ ಬೆಸ್ಟ್ ಫ್ರೆಂಡ್ ಎಂದು ಕೆಲವರು ಹೇಳುವುದಿದೆ. ಇದು ಸತ್ಯ. ಪ್ರತಿಯೊಬ್ಬರು ತನ್ನ ತೀರ ಖಾಸಗಿ ವಿಷಯ, ಕೌಟುಂಬಿಕ ವಿಷಯಗಳನ್ನು ಹಂಚಿಕೊಳ್ಳುವುದು ತನ್ನ ಬೆಸ್ಟ್ ಫ್ರೆಂಡ್ ಜತೆಗೆ ಮಾತ್ರ. ಇದು ಹುಡುಗಿ ಮತ್ತು ಹುಡುಗನ ಸ್ನೇಹವಾಗಿರಬಹುದು. ಆ ಜೀವಗಳ ನಡುವೆ ಆತ್ಮೀಯತೆ ತುಂಬಾ ಹೆಚ್ಚಿರುತ್ತದೆ. ಈ ಆತ್ಮೀಯತೆಯೇ ಮುಂದೆ ಅವರಿಬ್ಬರ ಮಧ್ಯೆ ಪ್ರೀತಿಯ ಬೀಜ ಮೊಳಕೆಯೊಡೆಯುವಂತೆ ಮಾಡುತ್ತದೆ. ಆತ ಅಥವಾ ಅವಳ ಜತೆಗೆ ಯಾವುದರ ಬಗ್ಗೆಯೂ ಮಾತನಾಡಬಹುದು, ಸಂಪೂರ್ಣವಾಗಿ ನಂಬಿಕೆಯನ್ನಿಡಬಹುದು ಮತ್ತು ಪ್ರತೀ ಕ್ಷಣವೂ ಈ ಸಂಬಂಧದ ಸವಿಯುನ್ನಬೇಕೆನಿಸುತ್ತದೆ. ಇಂತಹ ಬೆಸ್ಟ್ ಫ್ರೆಂಡ್ ಗಳು ಹಲವಾರು ಮಂದಿಯ ಜೀವನದಲ್ಲಿರುತ್ತಾರೆ. ಕೆಲವೊಮ್ಮೆ ಬೆಸ್ಟ್ ಫ್ರೆಂಡ್ ಗಳ ಮಧ್ಯೆಯೇ ಪ್ರೇಮ ಚಿಗುರುವುದಿದೆ. ಇಂತಹ ಅವಕಾಶ ಸಿಕ್ಕಿದರೆ ಅದು ಖಂಡಿತವಾಗಿಯೂ ಮೌಲ್ಯಯುತವಾಗಿರುತ್ತದೆ.
ಪ್ರೀತಿ ಮೂಡಿದ್ದರೆ ಯಾವ ಹೆಜ್ಜೆಗಳನ್ನಿಡಬೇಕು ಎಂಬುವುದರ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

1. ಸ್ನೇಹ ಕಡಿದುಹೋಗುತ್ತದೆಯೆಂದು ಭಯಪಡಬೇಡಿ. ನೀವು ಈಗಾಗಲೇ ಬೆಸ್ಟ್ ಫ್ರೆಂಡ್ ಗಳಾಗಿದ್ದೀರಿ ಮತ್ತು ನಿಮ್ಮ ಸಮಸ್ಯೆ ಹಾಗೂ ಜಗಳವನ್ನು ಹೇಗೆ ಕೊನೆಗೊಳಿಸಬೇಕೆಂದು ನಿಮಗೆ ತಿಳಿದೇ ಇರುತ್ತದೆ. ನೀವು ತುಂಬಾ ಆತ್ಮೀಯರಾಗಿದ್ದು, ಪ್ರೀತಿ ಪ್ರೇಮದ ಸಂಬಂಧ ನಡೆಯದಿದ್ದರೆ ಆಗ ಕೇವಲ ಸ್ನೇಹಿತರಾಗಿಯೇ ಉಳಿದುಕೊಳ್ಳಬಹುದು. ಹೌದು, ಇದು ಸ್ವಲ್ಪ ನೋವನ್ನುಂಟು ಮಾಡಬಹುದು ಮತ್ತು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದನ್ನು ನಿಮ್ಮ ಸ್ನೇಹದ ನಿಜವಾದ ಪರೀಕ್ಷೆಯೆಂದು ತಿಳಿದುಕೊಳ್ಳಿ.
2. ನಿಮ್ಮ ಬೆಸ್ಟ್ ಫ್ರೆಂಡ್ ಜತೆ ಪ್ರಸಕ್ತ ಸಂಬಂಧ ಮತ್ತು ಸಾಧ್ಯತೆಗಳ ಬಗ್ಗೆ ಮಾತನಾಡಿ. ಆಗ ನಿಮಗೆ ಪರಸ್ಪರರ ಕಡೆ ಆಕರ್ಷಿತರಾಗಿರುವುದು ತಿಳಿಯುತ್ತದೆ.
3. ನೀವು ನಿಜವಾಗಿಯೂ ಇಷ್ಟಪಡುವ ಹಾಗೂ ಗೌರವಿಸುವ ಬೆಸ್ಟ್ ಫ್ರೆಂಡ್ ಗಳ ಗುಣಗಳನ್ನು ಪಟ್ಟಿ ಮಾಡಿ. ಅದೇ ರೀತಿ ಪ್ರಣಯ ಸಂಬಂಧದಿಂದ ನೀವು ಬಯಸುವ ವಿಷಯಗಳನ್ನು ಪಟ್ಟಿಮಾಡಿ. ಅಂತಿಮವಾಗಿ ಒಂದು ವಿಷಯ ನಿಮಗೆ ತಿಳಿಯುತ್ತದೆ ಮತ್ತು ಇದೆರಡೂ ಹೊಂದಾಣಿಕೆಯಾದರೆ ಅದನ್ನು ಗುರುತಿಸಿಕೊಳ್ಳಿ. ಇದು ನಿಮಗೆ ಅಚ್ಚರಿಯನ್ನುಂಟು ಮಾಡಬಹುದು.
4. ನಿಮ್ಮ ಕಲ್ಪನೆಯನ್ನು ಬಳಸಿಕೊಳ್ಳಿ: ನಿಮ್ಮ ಬೆಸ್ಟ್ ಫ್ರೆಂಡ್ ಜತೆ ಏನು ಇಷ್ಟಪಡುತ್ತೀರಿ ಎಂದು ಭಾವಿಸಿ ಮತ್ತು ಅದನ್ನು ಹೇಗೆ ಪಡೆಯಬಹುದು ಎನ್ನುವುದರ ಬಗ್ಗೆ ನಿಮಗೆ ಸುಳಿವು ಸಿಗುತ್ತದೆ.
5. ರೋಮ್ಯಾಂಟಿಕ್ ಮೂಡ್ ನ್ನು ಇಟ್ಟುಕೊಳ್ಳಿ ಮತ್ತು ಸ್ನೇಹಿತರಂತೆ ಬೀಚ್ ಗೆ ಹೋಗುವುದು, ಜತೆಯಾಗಿ ಡಾನ್ಸ್ ಮಾಡುವುದು ಅಥವಾ ಕ್ಯಾಂಡಲ್ ಲೈಟ್ ಡಿನ್ನರ್ ಗೆ ಹೋಗಿ. ಸರಿಯಾದ ವಾತಾವರಣವಿದ್ದರೆ ಆಗ ಹೊಸ ಹೊಸ ಭಾವನೆಗಳು ಮೂಡುತ್ತದೆ.
6. ನಿಮ್ಮ ಕನಸುಗಳನ್ನು ಹಂಚಿಕೊಳ್ಳಿ.
ಭವಿಷ್ಯದ ಬಗ್ಗೆ ಮಾತನಾಡುವುದರಿಂದ ನೀವಿಬ್ಬರು ಭವಿಷ್ಯವನ್ನು ಜತೆಯಾಗಿ ಕಳೆಯಲಿದ್ದೀರಿ ಎನ್ನುವುದು ಮನವರಿಕೆಯಾಗುತ್ತದೆ.
7. ಸಮಯ ತೆಗೆದುಕೊಳ್ಳಿ
ಕ್ಷಣಮಾತ್ರದಲ್ಲಿ ಯಾರೊಂದಿಗೂ ಪ್ರೀತಿ ಮಾಡಲಾಗುವುದಿಲ್ಲ. ಪ್ರೇಮ ನಿವೇದನೆ ಮಾಡುವ ಮೊದಲು ನಿಮ್ಮೆ ಬೆಸ್ಟ್ ಫ್ರೆಂಡ್ ಜತೆಗಿನ ಸಂಬಂಧವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಂಪೂರ್ಣವಾಗಿ ತಯಾರಾಗಿರಿ. ಪ್ರೀತಿ ಮಾಡುವುದಾಗಿ ತಿಳಿಸಿ. ಗುಡ್ ಲಕ್.
ಕೆಲವರು ತಮ್ಮ ಬೆಸ್ಟ್ ಫ್ರೆಂಡ್ ಗಳನ್ನು ಕೇವಲ ಫ್ರೆಂಡ್ ಗಳಾಗಿ ಕಾಣಲು ಬಯಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂತಹ ಮನಸ್ಥಿತಿಯನ್ನು ತೆಗೆದುಹಾಕಲು ಮತ್ತು ಬೆಸ್ಟ್ ಫ್ರೆಂಡ್ ಜತೆ ಪ್ರೀತಿ ಮಾಡಲು ಕೆಲವು ಸಲಹೆಗಳನ್ನು ನೀಡಲಾಗಿದೆ.
8. ಸಲಹೆಗಳು
ಸಾಮಾನ್ಯವಾಗಿ ನೀವು ಒಟ್ಟಿಗೆ ಮಾಡುತ್ತಿರುವ ವಿಷಯಗಳು ಸಿಹಿ ಅಥವಾ ರೋಮ್ಯಾಂಟಿಕ್ ಆಗಿರದಿಲ್ಲಬಹುದು(ರೋಮ್ಯಾಂಟಿಕ್ ಸಂಬಂಧದಲ್ಲಿ ಒಳಗೊಂಡಿದ್ದರೂ). ನಿಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಾಗ ಹಿಂದೆ ಮಾಡಿದಂತಹ ವಿಷಯಗಳನ್ನೇ ಹಾಗೂ ಹಿಂದೆ ಹೋಗಿರುವಂತಹ ಸ್ಥಳಗಳಿಗೆ ಹೋಗಬೇಡಿ. ನಿಮ್ಮ ಜತೆ ಬದಲಾಗಿದೆಯೆಂದು ಭಾವಿಸಿ. ವಿಭಿನ್ನ ವಿಷಯಗಳನ್ನು ಪ್ರಯತ್ನಿಸಿ, ಅದರಲ್ಲೂ ರೋಮ್ಯಾಂಟಿಕ್ ಆಗಿರುವಂತಹದ್ದನ್ನು.
9. ಎಚ್ಚರಿಕೆ
ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಪ್ರೀತಿಸದೆ ಇದ್ದರೆ, ನೀವು ಮೊದಲಿನಂತೆಯೇ ಅವರೊಂದಿಗೆ ವ್ಯವಹರಿಸಿ. ನಿಮ್ಮನ್ನು ಪ್ರೀತಿಸಬೇಕೆಂದು ಬದಲಾವಣೆ ಮಾಡಿಕೊಳ್ಳಬೇಡಿ. ಅವರು ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದರೆ ನೀವು ಮೊದಲಿನಂತೆ ಇರಿ. ಅವರು ಇದೇ ವಿಷಯಕ್ಕೆ ನಿಮ್ಮನ್ನು ಪ್ರೀತಿಸಬಹುದು. ಬದಲಾದ ವ್ಯಕ್ತಿಗಾಗಿ ಅಲ್ಲ.
10. ಇದು ನಿಜವಾಗಿಯೂ ಕೆಲಸ ಮಾಡುತ್ತದೆ. ಸ್ನೇಹಿತರ ಜತೆ ಉದ್ದೇಶಪೂರ್ವಕವಾಗಿ ಪ್ರೀತಿಗೆ ಬೀಳುವ ಮೊದಲು ಎಚ್ಚರಿಕೆಯಿಂದ ಇರಿ. ಪ್ರೀತಿ ನಿಜವಾಗಿಯೂ ಬಯಸುತ್ತಿದ್ದೀರಾ ಎಂದು ಮೊದಲು ನಿರ್ಧರಿಸಿ.
11. ನಿಮ್ಮ ಬೆಸ್ಟ್ ಫ್ರೆಂಡ್ ಜತೆ ಪ್ರೀತಿಯಲ್ಲಿ ಬಿದ್ದಿದ್ದರೆ ಮತ್ತು ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸಿದ್ದರೆ ಅವರ ಭಾವನೆಗಳಿಗೆ ಗೌರವ ಕೊಡಿ, ಒತ್ತಡ ಹಾಕಬೇಡಿ. ಇಬ್ಬರು ಜತೆಗಿದ್ದರೆ ಮಾತ್ರ ಸಂಬಂಧ ಮುಂದುವರಿಯುತ್ತದೆ.



Click it and Unblock the Notifications



