Latest Updates
-
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ!
ಪುರುಷರ, ಪಾಪ ಪ್ರಜ್ಞೆಯಿಲ್ಲದ 10 ಕ್ರೂರ ನಡುವಳಿಕೆಗಳು
ಅವನೇ ಅವಳ ಜೀವ, ಜೀವನ, ಜಗತ್ತು. ಅವಳು ಅವನನ್ನು ಹುಚ್ಚಿಥರ ಪ್ರೀತಿಸುತ್ತಾಳೆ. ಹುಚ್ಚಿಥರ ದ್ವೇಷಿಸಲೂಬಹುದು. ಆದರೆ ನಿರ್ಲಕ್ಷಿಸಲಾಗುವುದಿಲ್ಲ. ಹೌದು, ಅವನೇ ಅವಳ ಜೀವದ ಗೆಳೆಯ. ಬಹುಶಃ ಅವನಷ್ಟು ಪ್ರೀತಿಪಾತ್ರರು ನಿಮ್ಮ ಜೀವನದಲ್ಲಿ ಇನ್ನೊಬ್ಬರಿಲ್ಲ. ಆದರೆ? ಅಂತಹ ನಲ್ಮೆಯ ನಲ್ಲನಿಂದಲೇ ಅವಳು ಹಲವಾರು ಬಾರಿ ಚಿತ್ರ ಹಿಂಸೆ ಅನುಭವಿಸುತ್ತಾಳೆ!. ಹಿಂಸೆಯ ನೋವು ಒಂದು ಕಡೆಯಾದರೆ ನಾನು ಇಂತವನನ್ನು ಪ್ರೀತಿಸುತ್ತಿರುವೆನಲ್ಲಾ ಎಂಬ ನೋವು ಇನ್ನೊಂದೆಡೆ.
ಸಾಮಾನ್ಯವಾಗಿ ಮಹಿಳೆ ತನಗೇನಾದರೂ ತೊಂದರೆ ಅಥವಾ ನೋವುಂಟಾದರೆ ತನ್ನ ಪ್ರೀತಿಪಾತ್ರರೊಂದಿಗೆ (ಬಹುಪಾಲು ತನ್ನ ನಲ್ಲನೊಂದಿಗೆ) ಅದನ್ನು ಹಂಚಿಕೊಳ್ಳ ಬಯಸುತ್ತಾಳೆ. ಅವರಿಂದ ಕೆಲವಾದರೂ ಸಾಂತ್ವನದ ಮಾತುಗಳನ್ನು ಎದುರು ನೋಡುತ್ತಾಳೆ. ಆದರೆ ಸಂತೈಸಬೇಕಾದ ಗೆಳೆಯನೇ ಹಿಂಸಿಸಿದರೆ? ಆ ಮಹಿಳೆಯ ಬದುಕಿಗೇ ಬೆಂಕಿ ಬಿದ್ದಂತಾಗುತ್ತದೆ.
ಯಾವುದೇ ಪಾಪಪ್ರಜ್ಞೆ ಇಲ್ಲದೆ ಪುರುಷ ತನ್ನ ಮಹಿಳೆಗೆ ನೀಡುವ 10 ಕ್ರೌರ್ಯಗಳ ಪಟ್ಟಿ ಇಲ್ಲಿದೆ.

1. ಹೆಚ್ಚು ಅಹಂ ಹೊಂದಿರುವುದು
ಪುರುಷರು ಹೆಚ್ಚು ಅಹಂ ಹೊಂದಿರುವುದರ ಕಾರಣ ಯಾರಿಗೂ ತಿಳಿದಿಲ್ಲ. ಆದರೆ ಅವರ ಅಹಂನ ಕಾರಣದಿಂದಾಗಿ ಅವರು ಯಾರೊಂದಿಗೂ ಬೆರೆಯದೇ, ತಮ್ಮ ಕಠೋರ ನಡವಳಿಕೆಯಿಂದ ಬೇರೆಯವರ ಮನಃ ನೋಯಿಸುತ್ತಾರೆ.

2. "ಆಯ್ದ ವಸ್ತು ಅಥವಾ ವ್ಯಕ್ತಿಗಳುಳ್ಳ ನೆನಪಿನಂಗಳದಲ್ಲಿ ಅವರು ಜೀವಿಸುತ್ತಾರೆ"
ಅವರು ತಮ್ಮ ಮೆಚ್ಚಿನ ಕ್ರಿಕೆಟಿಗ ಅಥವಾ ಫುಟ್ಬಾಲ್ ಆಟಗಾರನ ಹೆಸರನ್ನು ಮಾತ್ರವಲ್ಲದೇ ಅವರು ಆಡಿದ ಪಂದ್ಯಾವಳಿಗಳು, ಗಳಿಸಿದ ಅಂಕಗಳನ್ನು ಕೂಡ ನೆನಪಿನಲ್ಲಿಟ್ಟಿರುತ್ತಾರೆ. ಆದರೆ ತಮ್ಮ ಜೀವನಕ್ಕೆ ಹತ್ತಿರವಾದವರ ಜನ್ಮದಿನಗಳು ಅಥವಾ ಮದುವೆ ವಾರ್ಷಿಕೋತ್ಸವಗಳ ವಿಚಾರ ಬಂದಾಗ ಮಾತ್ರ ಅವರ ಮಿದುಳು 'ಆಯ್ದ ಮೆಮೋರಿ ಸಿಂಡ್ರೋಮ್' ಅನ್ನು ಅನುಭವಿಸುತಾರೆ.

3.ಸ್ತನಗಳ ಮೇಲೇ ದೃಷ್ಟಿ ನೆಡುವುದು
'ಪುರುಷರು ಮಹಿಳೆಯರ ಸ್ತನಗಳ ಮೇಲೆ ದೃಷ್ಟಿನೆಡುತ್ತಾರೆಂಬುವುದು' ವಿಶ್ವ ವ್ಯಾಪಕ ಸಮೀಕ್ಷೆಯ ಮೂಲಕ ಅಧಿಕೃತವಾಗಿ ದೃಢಪಟ್ಟಿರುವ ಸತ್ಯ. ಹೌದು, ನಲ್ಲೆಯೊಂದಿಗೆ ಸುತ್ತಾಡಲು ಹೋದಾಗಲೂ ಅವರು ಈ ಚಟಬಿಡುವದಿಲ್ಲ. ಅವರ ಇಂತಹ ಅಸಭ್ಯ ನೋಟಕ್ಕೆ ಬಲಿಯಾದವರು ಮಾತ್ರವಲ್ಲದೇ ಅವರು ಪಕ್ಕದಲ್ಲಿರುವವರಿಗೂ ಇದು ಕ್ರೂರತನವೆನಿಸಿ ಅಸಹ್ಯವೆನಿಸುವುದು.

4. ಅತಿಯಾದ ಸ್ವಂತಿಕೆಯನ್ನು ತೋರ್ಪಡಿಸುವದು
ತನ್ನ ವಿವಾಹ ಪೂರ್ವ ಜೀವನದಲ್ಲಿ ಪುರುಷನು ತನ್ನ ತಾಯಿಯಿಂದ ಅಭದ್ರತೆಯನ್ನು ಅನುಭವಿಸಿದ್ದಲ್ಲಿ, ಅಂತವರು ಬೇರೆ ಮಹಿಳೆಯರನ್ನು ಅಸೂಯೆಯಿಂದ, ದ್ವೇಷದಿಂದ ಕಾಣುತ್ತಾರೆ. ಹಾಗೆಯೇ ತಮ್ಮ ಮಡದಿಯ ಮೇಲೆ ಅತಿಯಾದ ಸ್ವಾಧೀನತಾ ಭಾವವನ್ನು ತಾಳುತ್ತಾರೆ. ತಮ್ಮ ನಲ್ಲೆಯನ್ನು ಎಲ್ಲಿಯೂ ಹೋಗಲು ಅಥವಾ ಯಾರೊಂದಿಗೆ ಬೆರೆಯಲು ಬಿಡದ ಅವರು ಯಾವಾಗಲೂ ಅವಳಿಗೆ ಅಂಟಿಕೊಂಡೆ ಇರುತ್ತಾರೆ.

5. ತಮ್ಮ ಬೂಟಾಟಿಕೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದು
ಒಬ್ಬ ಪುರುಷ ಇದಕ್ಕಿಂತ ಕ್ರೂರವಾಗಿರಲು ಸಾಧ್ಯವೇ ಇಲ್ಲ! ಅವರು ನಗರ ಸಂಸೃತಿ ಹೊಂದಿರುವ ಮಾದಕ ತರುಣಿಯನ್ನು ಪ್ರೀತಿಸುತ್ತಾರೆ.ಅವರ ತಾಯಿಯನ್ನು ಬೇಟಿಮಾಡುವಾಗ ಮಾತ್ರ 'ಸರಳ' ಹುಡುಗಿಯಾಗಿರಬೇಕು. ಅವಳ ಸ್ವಂತಿಕೆ ನಿಮಗೆ ಇಷ್ಟ , ಅವಳ ಅಲಂಕಾರ ಶೈಲಿ ನಿಮಗೆ ಇಷ್ಟ , ಅವಳು ನಿಮ್ಮೊಂದಿಗೆ ರಾತ್ರಿ ಕಳೆಯಲು ಬಂದಾಗ ಅಥವಾ ನೀವಿಬ್ಬರೂ ಹೊರಗೆ ಹೋದಾಗ ಅವಳ ನಡವಳಿಕೆಯನ್ನೂ ನೀವು ಇಷ್ಟಪಡುತ್ತೀರಿ. ಆದ್ರೂ ಈ ಬೂಟಾಟಿಕೆ ಏಕೆ?

6. ಹೆಚ್ಚುವರಿ ರಕ್ಷಣೆಯನ್ನು ಪ್ರದರ್ಶಿಸುತ್ತಾರೆ
ನೀವು ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಿದ್ದಂತೆಯೇ ಪ್ರತಿ 15 ನಿಮಿಷಕ್ಕೊಮ್ಮೆ ಕರೆಗಳು ಬರಲಾರಂಭಿಸುತ್ತವೆ. ತಾನು ತನ್ನ ಹೆಂಡತಿಯನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತಿದ್ದೆನೆಂದು ಆ ಪುರುಷ ಅಂದುಕೊಳ್ಳುತ್ತಿರುತ್ತಾನೆ. ಆದರೆ ಈ ಅತಿಶಯವಾದ ರಕ್ಷಣೆ ತನ್ನ ಸಹನೆಯ ಎಲ್ಲೆಮೀರಿ ಕಿರಿಕಿರಿಯಾಗಿ ಪರಿಣಮಿಸಿರುತ್ತದೆ. ಇಲ್ಲಿ ಪುರುಷರು ಒಂದು ವಿಷಯವನ್ನು ಅರಿಯಬೇಕು ಅನೀವು ಅವರ ಜೀವನದಲ್ಲಿ ಬರುವುದಕ್ಕಿಂತ ಮೊದಲು ಅವರು ಈ ಜಗತ್ತಿನಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿ , ನೆಮ್ಮದಿಯಾಗಿ ವಾಸಿಸುತ್ತಿದ್ದರು ಎಂದು.

7. ಪ್ರತಿಯೊಂದರಲ್ಲೂ ಹಸ್ತಕ್ಷೇಪ ಮಾಡುವುದು
ಮನೆಯ ಯಜಮಾನನಾದರೂ ಕೆಲವೊಂದು ಸಹಾಯ ಮಾಡಿದರೆ ಒಳ್ಳೆಯದೆ. ಆದರೆ ಕೊಳಾಯಿ ರಿಪೇರಿಯಿಂದ ಹಿಡಿದು ಆರ್ಥಿಕ ಸಲಹೆಯವರೆಗೆ ಎಲ್ಲವನ್ನೂ ತಾನು ಮಾಡಬಲ್ಲೆ ಎಂದುಕೊಳ್ಳುವುದು ಹಾಗೂ ಮಾಡಲು ಯತ್ನಿಸುವುದರಿಂದ ತೊಂದರೆಗಳೇ ಹೆಚ್ಚು.

8. ಭಾವನೆಗಳನ್ನು ಕಡೆಗಣಿಸುವುದು
ಮಹಿಳೆಯರು ಹೆಚ್ಚು ಭಾವನಾ ಜೀವಿಗಳಾಗಿರುತ್ತರೆ ನಿಜ. ಆದರೆ ಅವರ ಭಾವನೆಗಳಲ್ಲಿ ಪ್ರಾಯೋಗಿಕ ಸ್ಥಿರತೆಯೂ ಇರುತ್ತದೆ. ಆದರೆ ಪುರುಷರು ಭಾವನೆಗಳನ್ನು ಮೋಜು ಎಂತಲೋ, ನಿರುಪಯುಕ್ತವೆಂತಲೋ ಪರಿಗಣಿಸುವುದರಿಂದ ಜೀವನದ ನಿಜವಾದ ಸವಿಯನ್ನು ಕಳೆದುಕೊಳ್ಳುತ್ತಾರೆ.

9. ಸ್ನೇಹಿತ ಆರಾಧಕರು
ಮದುವೆಯ ನಂತರದ ತಮ್ಮ ಜೀವನದಲ್ಲಿನ ಆದ್ಯತೆಗಳನ್ನು ಅರಿಯದ ಪುರುಷರೊಂದಿಗೆ ಮಹಿಳೆಯರು ಚಿತ್ರಹಿಂಸೆಗೊಳಗಾಗುವರು. ತನ್ನ ಪತಿಯೊಂದಿಗೆ ಸಮಯ ಕಳೆಯಲು ಬಯಸಿದರೆ ಅವರು ಬೈಯ್ಯುತ್ತರೆ. ಎಂದಾದರೊಮ್ಮೆ ಲಾಂಗ್-ಡ್ರೈವ್ ಹೋದಾಗ ಹಿಂದಿನ ಆಸನದಲ್ಲಿ ಪತಿಯ ಗೆಳೆಯರ ಗುಂಪಿದ್ದರೆಆ ಪ್ರಣಯ ಪ್ರಯಾಣ ಒಂದು ಹೊರೆಯಾಗದೇ ಇರದು.

10. ಅತಿಯಾದ ಲೈಂಗಿಕ ತೃಷೆ
ನಿಸ್ಸಂದೇಹವಾಗಿ, ಮಹಿಳೆಯರು ಪತಿಯೊಂದಿಗೆ ಶಯನೇಶು ವೇಶ್ಯಾ ರೀತಿಯಲ್ಲಿರುತ್ತಾರೆ. ಆದರೆ ಕಳೆದ ರಾತ್ರಿ ತಾನು ನೋಡಿದ ಚಿತ್ರದ ಪೋರ್ನ್ ತಾರೆಯಂತೆ ಆಡಲು ಅವರು ಸಂಗಾತಿಯನ್ನು ಒತ್ತಾಯಿಸುತ್ತಾರೆ. ಅದು ಸಾಧ್ಯವಾಗದಿದ್ದಾಗ ನಿರಾಸೆಗೊಳಗಾಗುತ್ತಾರೆ. ಸಹಕರಿಸುವದಿಲ್ಲವೆಂದು ಬೈಯ್ಯುತ್ತಾರೆ. ಇದು ಹಾಸಿಗೆಯಲ್ಲಿ ಪುರುಷರು ತೋರುವ ಅತ್ಯಂತ ಹೇಯ ನಡವಳಿಕೆ. ಹೀಗೆಲ್ಲ ಮಾಡುವ ಬದಲಿಗೆ ಅವಳು ಅವಳಾಗಿರಲು ಅವಕಾಶ ಮಾಡಿಕೊಡುವ ಮೂಲಕ ನೀವೂ ಸಂತಸ ಪಡಬಹುದು.



Click it and Unblock the Notifications











