Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹುಡುಗರನ್ನು ಆಕರ್ಷಿಸುವುದು ಹೆಣ್ಣಿನ ಅಂದ ಮಾತ್ರವೇ?
ಸಾಮಾನ್ಯವಾಗಿ ಹೆಚ್ಚಿನ ಹುಡುಗಿಯರಿಗೆ ಒಂದು ಭಾವನೆ ಇರುತ್ತದೆ. ತುಂಬಾ ಮೇಕಪ್ ಮಾಡಿದರೆ ನನ್ನ ಅಂದ ಚೆಂದವನ್ನು ಹುಡುಗರು ಹೊಗಳುತ್ತಾರೆ, ನಾನು ತುಂಬಾ ಆಕಷರ್ಷಕವಾಗಿ ಕಾಣುತ್ತೇನೆ ಎಂದು. ಆದರೆ ಹಿತಮಿತವಾದ ಮೇಕಪ್ ಮಾಡಿದರೆ ಹೆಣ್ಣಿನ ಸೌಂದರ್ಯ ಹೆಚ್ಚುತ್ತದೆ ಅನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಓವರ್ ಮೇಕಪ್ ಮಾಡಿದರೆ ಮಾತ್ರ ಹುಡುಗರು ಅಂತಹ ಹುಡುಗಿಯರಿಗೆ 'ಮೇಕಪ್ ರಾಣಿ' ಅಂತ ಪಟ್ಟ ಕಟ್ಟಿ ಅವಳ ಹಿಂದಿನಿಂದ ಅವಳ ಮೇಕಪ್ ಬಗ್ಗೆ ಹೇಳಿಕೊಂಡು ನಗಾಡುವುದನ್ನು ನಾನೂ ಗಮನಿಸಿದ್ದೇನೆ.
ಹುಡುಗರು ತನ್ನ ಹುಡುಗಿ ಅಂದವಾಗಿ ಇರಬೇಕೆಂದು ಅಂದುಕೊಳ್ಳುವುದು ಸಹಜ. ಆದರೆ ನಿಜವಾಗಿಯೂ ಹುಡುಗರನ್ನು ಆಕರ್ಷಿಸುವುದು ಅವಳ ಅಂದವೇ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಅವಳ ಅಂದಕ್ಕಿಂತ ಅವಳಲ್ಲಿರುವ ಗುಣ ಅವನನ್ನು ಆಕರ್ಷಿಸುವುದು. ಅಂದ ಅನ್ನುವುದು ಮೊದಲ ನೋಟಕ್ಕೆ ಆಕರ್ಷಿಸುತ್ತದೆ, ಒಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುತ್ತಾ ಹೋದ ಹಾಗೆ ಅಂದಕ್ಕಿಂತ ಅವರ ಗುಣಕ್ಕೆ ನಾವು ಹೆಚ್ಚಿನ ಮಹತ್ವ ಕೊಡುತ್ತೇವೆ ಅಲ್ವಾ?
ಅದರಲ್ಲೂ ಹುಡುಗಿಯ ಅಂದಕ್ಕಿಂತ, ಮೇಕಪ್ ಗಿಂತ ಅವಳಲ್ಲಿರುವ ಈ ಕೆಳಗಿನ ಗುಣಗಳು ಹುಡುಗರನ್ನು ಆಕರ್ಷಿಸುವುದು:

ನಗು
ಹೆಣ್ಣಿನ ಸುಂದರವಾದ ನಗುವಿಗೆ ಪ್ರತಿಯೊಬ್ಬ ಗಂಡು ಮನ ಸೋಲುತ್ತಾನೆ. ಆದರೆ ಆ ನಗು ನೈಜ ನಗುವಾಗಿರಬೇಕು, ಕೃತಕ ನಗುವಿನ ವೇಷ ತುಂಬಾ ಕಾಲ ನಡೆಯಲ್ಲ ನೆನಪಿರಲಿ.
ವಿಶಾಲ ಮನೋಭಾವ
ಸಂಶಯ ಮನೋಪ್ರವೃತ್ತಿ, ಚಿಕ್ಕ ಬುದ್ಧಿಯ ಹೆಣ್ಣನ್ನು ಗಂಡು ಯಾವತ್ತೂ ಬಯಸುವುದಿಲ್ಲ. ಯಾವುದೇ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುವ ಹೆಣ್ಣಿನ ಕಡೆಗೆ ಗಂಡು ಮೆಚ್ಚುಗೆಯಿಂದ ನೋಡುತ್ತಾನೆ.
ಆತ್ಮವಿಶ್ವಾಸ
ಆತ್ಮವಿಶ್ವಾಸ ಇರುವ ಹೆಣ್ಣು ಬೇಗನೆ ಆಕರ್ಷಿತಳಾಗುತ್ತಾಳೆ. ಆದರೆ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಇದರ ಕೊರತೆ ಕಂಡು ಬರುತ್ತದೆ. ಅದಕ್ಕೆ ಅವರು ಬೆಳೆದು ಬಂದ ಪರಿಸರ ಕೂಡ ಒಂದು ಕಾರಣವಾಗಿರುತ್ತದೆ. ಹೆಣ್ಣು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು, ಆತ್ಮ ವಿಶ್ವಾಸ ಇಲ್ಲದ ಹೆಣ್ಣಿಗೆ ಜೀವನ ತುಂಬಾ ಕಷ್ಟವಾಗಬಹುದು.
ಪಾಸಿಟಿವ್ attitude
ಯಾವುದೇ ವಿಷಯವನ್ನು ಪಾಸಿಟಿವ್ ಆಗಿ ತಿಳಿದುಕೊಳ್ಳುವ ಹುಡುಗಿಯರಿಗೆ ಹುಡುಗರು ಕ್ಲೀನ್ ಬೋಲ್ಡ್ ಆಗುತ್ತಾರೆ.
ಹಾಸ್ಯ ಪ್ರವೃತ್ತಿ
ಅಳು ಮುಂಜಿಗಿಂತ ಹಾಸ್ಯ ಪ್ರವೃತ್ತಿಯ ಹುಡುಗಿಯರನ್ನು ಕಂಡರೆ ಹುಡುಗರಿಗೆ ಇಷ್ಟ.
ಭಿನ್ನ ವ್ಯಕ್ತಿತ್ವ
ನಾವು ಹುಡುಗರಿಗೆ ಇಷ್ಟವಾಗಲು ಹೀಗೇ ಇರಬೇಕೆಂದು ನಿಮ್ಮಲ್ಲಿ ತಪ್ಪು ಕಲ್ಪನೆ ಬೆಳೆಸಿಕೊಳ್ಳಬೇಡಿ, ನಿಮ್ಮಲ್ಲಿರುವ ಕೆಲ ಭಿನ್ನ ವ್ಯಕ್ತಿತ್ವ ಕೂಡ ಹುಡುಗರನ್ನು ನಿಮ್ಮತ್ತ ಆಕರ್ಷಿಸುತ್ತದೆ. ಆದ್ದರಿಂದ ನೀವು ನೀವಾಗಿಯೇ ಇರಿ, ಕೃತಕ ಮುಸುಕು ಬೇಕಾಗಿಲ್ಲ.



Click it and Unblock the Notifications