Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆಮೇಲೆ ಹೇಳಿದ ಮಾತು
ದಿನಾ ಬೆಳಗ್ಗೆ ಎದ್ದರೆ ಆತ್ಮಹತ್ಯೆ, ಕೊಲೆ, ದರೋಡೆ ಈ ರೀತಿಯ ಸುದ್ದಿಗಳೇ ನ್ಯೂಸ್ ವಾಹಿನಿಗಳಲ್ಲಿ ಅಪ್ಪಳಿಸುತ್ತಿರುತ್ತವೆ. ಕೊಲೆ, ದರೋಡೆ ಇವುಗಳನ್ನು ಬಿಗಿ ಭದ್ರತೆ, ಶಿಕ್ಷೆಯಿಂದ ಕಮ್ಮಿ ಮಾಡಬಹುದು. ಆದರೆ ವ್ಯಕ್ತಿ ತನ್ನನ್ನು ತಾನೇ ಕೊಂದುಕೊಳ್ಳುವ ಆತ್ಮಹತ್ಯೆ ಪ್ರವೃತ್ತಿ ಇದೆಯೆಲ್ಲಾ ಇದಕ್ಕೆ ಕಡಿವಾಣ ಹಾಕುವುದಾದರೂ ಹೇಗೆ? ಅನ್ನುವುದು ಮನ ಶಾಸ್ತ್ರಜ್ಞರಿಗೂ ಕೂಡ ಸವಾಲಿನ ವಿಷಯವಾಗಿದೆ.
ಕೆಲವರ ಮನಸ್ಥಿತಿಯೇ ಆಗಿರುತ್ತದೆ, ಚಿಕ್ಕ-ಪುಟ್ಟ ವಿಷಯಕ್ಕೆ ಸಾವು ಒಂದೇ ಪರಿಹಾರ ಎಂದು ಭಾವಿಸುತ್ತಾರೆ. ಅಂಥವರಲ್ಲಿ ಹೆಚ್ಚಿನವರು ತಮ್ಮ ಜೀವನಕ್ಕೆ ಅಷ್ಟೇ ಕ್ರೂರವಾಗಿ ಮುಕ್ತಾಯ ಹಾಡುತ್ತಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಕೆಲವರು ತುಂಬಾ ಬುದ್ಧಿವಂತರಾಗಿರುತ್ತಾರೆ, ಮತ್ತೊಬ್ಬರಿಗೆ ಸಲಹೆ ಕೊಡುತ್ತಾರೆ, ಧೈರ್ಯ ತುಂಬುತ್ತಾರೆ. ಅಷ್ಟೊಂದು ಧೈರ್ಯಶಾಲಿಯಾದ ವ್ಯಕ್ತಿ ತನ್ನ ಜೀವನದಲ್ಲಿ ನಡೆದ ಯಾವುದೋ ಕಹಿ ಘಟನೆಯನ್ನು ಎದುರಿಸಲಾರದೆ ಆತ್ಮಹತ್ಯೆಗೆ ಮೊರೆ ಹೋಗುತ್ತಾನೆ.

ಆತ್ಮಹತ್ಯೆ ಮಾಡಿಕೊಂಡ ಕೇಸ್ ಗಳ ಸರಾಸರಿ ನೋಡಿದರೆ ಪ್ರೀತಿ-ಪ್ರೇಮದ ವಿಷಯದಲ್ಲಿ ಆತ್ಮಹತ್ಯೆ ಮಾಡಿಕೊಂಡವರೇ ಅಧಿಕ. ಹದಿಹರೆಯದ ಪ್ರಾಯದಲ್ಲಿ ಮೂಡುವ ಪ್ರೀತಿಯೇ ಅವರಿಗೆ ಮುಖ್ಯವಾಗಿರುತ್ತದೆ. ಪ್ರೀತಿಯಿಂದ ಸಾಕಿ, ಸಲುಹಿದ ಮನೆಯವರು ಕೂಡ ಆ ಕ್ಷಣ ಅವರ ನೆನಪಿಗೆ ಬರುವುದಿಲ್ಲ. ಪ್ರೀತಿ ಸೋತು ಹೋಯಿತೆಂದು ಸಾಯುವವರು ಮೂರ್ಖರು. ನಿಮ್ಮಂತಹ ವ್ಯಕ್ತಿಯ ಜೊತೆ ಬಾಳಲು ನಿಮ್ಮನ್ನು ತಿರಸ್ಕರಿಸಿದವರಿಗೆ ಅರ್ಹತೆ ಮತ್ತು ಯೋಗವಿಲ್ಲ ಎಂದು ಭಾವಿಸಿ, ಉತ್ತಮವಾಗಿ ಬಾಳಿ ಬದುಕುವುದೇ ನಿಮ್ಮನ್ನು ತಿರಸ್ಕರಿಸಿದವರಿಗೆ ನೀವು ನೀಡುವ ಶಿಕ್ಷೆ ಅನ್ನುವುದನ್ನು ಮರೆಯದಿರಿ.
ಯೌವನದಲ್ಲಿ ಸಾಕಷ್ಟು ರಂಗು-ರಂಗಿನ ಕನಸ್ಸು ಕಾಣುತ್ತೇವೆ, ಅವುಗಳು ಸಿಗದಿದ್ದಾಗ ನಿರಾಸೆಯಾಗುವುದು, ಆದರೆ ನಿರಾಸೆಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಗಂಡ ಬೈದ, ಸಂಸಾರ ಸರಿಯಿಲ್ಲ, ಪ್ರೀತಿಸಿದವನು/ಳು ಕೈ ಕೊಟ್ಟ, ವ್ಯಾಪಾರದಲ್ಲಿ ನಷ್ಟ ಹೀಗೆ ಸಾಯಲು ನೂರೆಂಟು ಕಾರಣಗಳಿದ್ದರೆ, ಬದುಕಬೇಕು ಅನ್ನುವುದಕ್ಕೆ ಸಾವಿರಾರು ಕಾರಣಗಳಿರುತ್ತವೆ.
ಆತ್ಮಹತ್ಯೆ ಮಾಡಬೇಕೆಂದು ದುಡುಕಿ ನಿರ್ಧಾರ ಕೈಗೊಳ್ಳುತ್ತಾರೆ, ಆ ಸಮಯದಲ್ಲಿ ಅವರನ್ನು ಯಾರಾದರೂ ನೋಡಿದರೆ, ರಕ್ಷಿಸಲು ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಆತ್ಮಹತ್ಯೆಗೆ ಶ್ರಮಿಸಿದವರಲ್ಲಿ ಬಹುಪಾಲು ಜನರು ಹೇಳುವುದು ಇದನ್ನೇ "ದುಡುಕಿ ಬಿಟ್ಟೆ, ಹೇಗಾದರೂ ಮಾಡಿ ನನ್ನ ಬದುಕಿಸಿ" ಕೆಲವೇ ಕೆಲವರಷ್ಟೇ "ನನ್ನ ಸಾಯಲು ಬಿಡಿ"ಅಂತಾರೆ. ಅದೃಷ್ಟದಿಂದ ಅವರು ಬದುಕಿಳಿದರೆ ನಂತರ ಅವರನ್ನು ಭೇಟಿ ಮಾಡಿದಾಗ 'ದುಡುಕಿ ಬಿಟ್ಟೆ' ಅನ್ನುವ ಮಾತನ್ನು ಅವರು ಹೇಳೇ ಹೇಳುತ್ತಾರೆ.
ನನಗೆ ಗೊತ್ತಿರುವವರೊಬ್ಬರು ಹೀಗೆ ಒಮ್ಮೆ ಕೆಟ್ಟ ಗಳಿಗೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಸ್ವಲ್ಪ ದಿನಗಳ ಬಳಿಕ ಅವರನ್ನು "ಏಕೆ ಹಾಗೆ ಮಾಡಿದೆ?" ಎಂದು ಕೇಳಿದಾಗ " ಆ ಕ್ಷಣ ದುಡುಕಿಬಿಟ್ಟೆ, ನಾನು ಬದುಕಿ ಅರ್ಥವಿಲ್ಲ ಅಂದುಕೊಂಡಿದ್ದೆ, ವಾಸ್ತವೆಂದರೆ ಆ ರೀತಿ ಅನಿಸಿದಾಗ ಅದರ ಬಗ್ಗೆ ಯೋಚಿಸದೆ ನನ್ನ ಮನಸ್ಸನ್ನು ಸ್ವಲ್ಪ ಬೇರೆ ಕಡೆಗೆ ಹರಿಸಿದ್ದರೆ ಬಹುಶಃ ಆ ತಪ್ಪು ಮಾಡುತ್ತಿರಲಿಲ್ಲ. ಈಗ ಅನಿಸುತ್ತಿದೆ, ದುಡುಕಿನಿಂದ ನನ್ನ ಸುಂದರವಾದ ಈ ಜೀವನವನ್ನು ಕಳೆದುಕೊಳ್ಳುತ್ತಿದ್ದೆ, God Is Great" ಎಂದು ಹೂನಗೆ ಬೀರಿದರು.



Click it and Unblock the Notifications











