Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮಾಜಿ ಪ್ರೇಮಿ ಜೊತೆ ಕಾಂಟ್ಯಾಕ್ಟ್ ಬೇಡ!
ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಪರಸ್ಪರ ಪ್ರೀತಿಸಿದ ವ್ಯಕ್ತಿಗಳು ಅನೇಕ ಕಾರಣಗಳಿಂದ ದೂರವಾಗುವುದನ್ನು ನೋಡಿದ್ದೇವೆ. ಪೊಸೆಸಿವ್ ನೆಸ್, ಸಂಶಯ, ಪರಸ್ಪರ ಹೊಂದಾಣಿಕೆಯಾಗದಿರುವುದು, ಅಥವಾ ಮನೆಯವರ ವಿಲನ್ ಎಂಟ್ರಿ ಹೀಗೆ ಒಂದೆಲ್ಲಾ ಒಂದು ಕಾರಣದಿಂದ ದೂರವಾಗಿರಬಹುದು.
ಆದರೆ ಒಮ್ಮೆ ದೂರವಾದ ಮೇಲೆ ಅವರ ಕಾಂಟ್ಯಾಕ್ಟ್ ಗೆ ಗುಡ್ ಬೈ ಹೇಳುವುದೇ ಒಳ್ಳೆಯದು.

ಹೀಗೆ ಹೇಳಿದರೆ ಕೆಲವರಿಗೆ ತುಂಬಾ ಕೋಪ ಬರುವುದೆಂದು ಗೊತ್ತು. ಪ್ರೀತಿ ಬಗ್ಗೆ ನಿನಗೇನು ಗೊತ್ತು? ಎಂದು ಕೂಡ ಹೇಳಬಹುದು. ಇನ್ನೂ ಕೆಲವರಂತೂ ಪ್ರೀತಿಸಿದ ವ್ಯಕ್ತಿಯ ನೆನಪಿನಲ್ಲಿ ಕೊನೆಯವರೆಗೂ ಕಳೆಯುತ್ತೇನೆ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ, ಈ ರೀತಿಯ ನಿರ್ಧಾರ ತಾಳಿದ್ದರೆ ಅವರ ನೆನೆಪಿನಲ್ಲಿ ಕಳೆಯಿರಿ, ಆದರೆ ಅವರ ಕಾಂಟ್ಯಾಕ್ಟ್ ನಲ್ಲಿ ಮಾತ್ರ ಇರಬೇಡಿ! ಹೌದು ಮಾಜಿಯ ಜೊತೆ ಕಾಂಟ್ಯಾಕ್ಟ್ ಇದ್ದರೆ ಹಳೆ ನೆನಪುಗಳು ಮರುಕಳುಹಿಸಿ ಮನಸ್ಸಿಗೆ ನೋವಾಗುವುದು. ಅಲ್ಲದೆ ಈ ರೀತಿಯ ಕಾಂಟ್ಯಾಕ್ಟ್ ನಿಮ್ಮ ಮುಂದಿನ ಜೀವನವನ್ನು ಬಾಧಿಸುವುದು ಕೂಡ. ಅವರ ಜೀವನವನ್ನು ಕೂಡ.
ಮುಂದೆ ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯ ಪರಿಚಯವಾದಾಗ, ನಿಮ್ಮ ಹಳೆಯ ಸಂಬಂಧದ ವ್ಯಕ್ತಿಯ ಜೊತೆ ಕಾಂಟ್ಯಾಕ್ಟ್ ನಲ್ಲಿದ್ದರೆ ಅದುವೇ ಹೊಸ ಸಂಬಂಧದಲ್ಲಿ ಹುಳಿ ಹಿಂಡುವುದು. ಸಂಶಯ, ಜಗಳ ಪ್ರಾರಂಭವಾಗಬಹುದು, ಈಗ ನಮ್ಮ ನಡುವೆ ಏನೂ ಇಲ್ಲ ಅಂದರೂ ಅದನ್ನವರು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಹಳೆ ನೆನಪುಗಳೇ ನಿಮ್ಮ ಮನಸ್ಸನ್ನು ತುಂಬಿಕೊಂಡಿದ್ದರೆ ವಾಸ್ತವ ಜೀವನವನ್ನು ಅನುಭವಿಸಲು ಮರೆತು ಬಿಡುತ್ತೀರಿ. ಮಾಜಿಯ ನೆನಪುಗಳ ಜೊತೆ ನಿಮ್ಮ ಸಂಗಾತಿಯನ್ನು ವರಿಸಿದ್ದರೆ ಅದು ನೀವು ಅವರಿಗೆ ಮಾಡುವ ಅತೀ ದೊಡ್ಡ ದ್ರೋಹ. ಹಳೆಯ ನೆನಪುಗಳಿಂದ ಈ ವ್ಯಕ್ತಿ ಜೊತೆ ಚೆನ್ನಾಗಿ ಬೆರೆಯಲು ಸಾಧ್ಯವಿಲ್ಲ, ಅವರ ಮನಸ್ಸನ್ನು ಅರಿತುಕೊಳ್ಳುವಲ್ಲಿ ಸೋತು ಹೋಗುತ್ತೀರಿ, ಇದರಿಂದಾಗಿ ಈ ಸಂಸಾರವೂ ಹಾಳಾಗುವುದು.
ಹೊಸ ಬದುಕು ನಿಮಗಾಗಿ ಅರಳುತ್ತಿರುವಾಗ ಹಳೆಯ ನೆನಪುಗಳಿಂದ ಈ ಬದುಕನ್ನು ಹೊಸಕಿ ಹಾಕಬೇಡಿ.



Click it and Unblock the Notifications
