Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಮುನಿಸಿಕೊಂಡ ಹೆಂಡತಿ ಬಳಿ ನಿಮ್ಮ ಲಾಜಿಕ್ ನಡೆಯಲ್ಲ!
ತುಂಬಾ ಅನ್ಯೋನ್ಯ ದಂಪತಿಗಳೆಂದು ಗುರುತಿಸಿಕೊಂಡವರ ನಡುವೆ ಕೂಡ ಸಣ್ಣ ಪುಟ್ಟ ಜಗಳ, ವಾದ ನಡೆಯುವುದು ಸಹಜ. ಪ್ರೀತಿ ಇದ್ದಲ್ಲಿ ಮುನಿಸು ಇದ್ದೇ ಇರುತ್ತದೆ. ನೀವು ನಿಮ್ಮ ಹೆಂಡತಿ ಜೊತೆ ಕೋಪ ಮಾಡಿಕೊಂಡು, ಆ ವಿಷಯ ದೊಡ್ಡದಾಗಿ ವಾದಕ್ಕೆ ನಿಂತಾಗ ನಿಮಗನಿಸಬಹುದು. ನೀವು ಹೇಳುವುದರಲ್ಲಿ ಲಾಜಿಕ್ ಇದೆ, ಅವಳು ಸುಮ್ಮನೆ ವಾದ ಮಾಡುತ್ತಾಳೆ, ನನ್ನ ಲಾಜಿಕ್ ಅವಳಿಗೆ ಅರ್ಥ ಆಗುತ್ತಿಲ್ಲ ಇಲ್ಲ ಎಂದು ಅವಳ ಮೇಲಿನ ಕೋಪ ಮತ್ತಷ್ಟು ಹೆಚ್ಚಾಗುವುದು.
ಆದರೆ ಅದೇ ಕಣ್ರೀ ಹೆಂಗಸರ ಬುದ್ಧಿ. ನೀವು ಹೇಳುವುದರಲ್ಲಿ ಲಾಜಿಕ್ ಇದೆ ಅಂತ ಅವರಿಗೂ ಗೊತ್ತಿರುತ್ತದೆ, ಆದರೆ ಅದನ್ನವರು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಅವರನ್ನು ಪ್ರೀತಿಯಿಂದ ಸಮಧಾನ ಪಡಿಸಬೇಕೆ ಹೊರತು ನಿಮ್ಮ ಬುದ್ಧಿವಂತಿಕೆಯಿಂದಲ್ಲ.

ಎಷ್ಟೋ ಸಲ ಗಮನಿಸಿ, ಸಣ್ಣ ಪುಟ್ಟ ತರ್ಕ ಬಂದರೆ ಸ್ವಲ್ಪ ಹೊತ್ತಿಗೆ ನೀವು ಅದನ್ನು ಮರೆತು ಬಿಡುತ್ತೀರಿ. ಆದರೆ ಅವಳು ಸುಲಭದಲ್ಲಿ ಆ ವಿಷಯವನ್ನು ಬಿಡಲು ಸಿದ್ಧವಿರುವುದಿಲ್ಲ, ಅವಳಿಗೆ ತಿಳಿಯಬೇಕಾದದು ಸಂಪೂರ್ಣ ತಿಳಿಯುವವರೆಗೆ ಅವಳು ಅದರ ಬಗ್ಗೆ ಕೇಳುತ್ತಲೇ ಇರುತ್ತದೆ.
ಹೆಂಡತಿ ಕೋಪಗೊಂಡಾಗ ಅದಕ್ಕೆ ಲಾಜಿಕ್ ಬಳಸಿ ಉತ್ತರ ಹೇಳ ಬಯಸಿದಿರುವನೇ ನಿಜವಾದ ಬುದ್ಧಿವಂತ! ಕೋಪಗೊಂಡ ಹೆಂಡತಿಯನ್ನು ಸಮಧಾನ ಮಾಡಲು ಲಾಜಿಕ್ ಬದಲು ಈ ಟ್ರಿಕ್ಸ್ ಬಳಸಿ, ಕ್ಷಣಾರ್ಧದಲ್ಲಿ ಅವಳ ಕೋಪ ಮಾಯವಾಗದಿದ್ದರೆ ಮತ್ತೆ ಕೇಳಿ?
ನಿಮ್ಮದೇ ತಪ್ಪ ಅಂತ ಒಪ್ಪಿಕೊಳ್ಳಿ
ಮುದ್ದಿನ ಮಡದಿಯ ಸಂತೋಷಕ್ಕೆ ಈ ರೀತಿ ಮಾಡುವುದರಲ್ಲಿ ತಪ್ಪೇನಿದೆ ಹೇಳಿ? ಅವಳ ಮಾತನ್ನು ನೀವು ಒಪ್ಪಿಕೊಂಡರೆ ಸೇಫ್ ಝೋನ್ ನಲ್ಲಿ ಇರುತ್ತೀರಿ. "ಇಲ್ಲ ನಂದೇ ಸರಿ" ವಾದಿಸಲು ಹೊರಡುತ್ತೀರಿ ಅಂದರೆ ನಿಮ್ಮಿಷ್ಟ.
ಕೋಪದಲ್ಲಿರುವ ಮಡದಿ ಹತ್ತಿರ ಲಾಜಿಕ್ ವರ್ಕ್ ಆಗಲ್ಲ
ಅವಳು ಕೋಪಗೊಂಡಾಗ ನೀವು ಲಾಜಿಕ್ ಉಪಯೋಗಿಸಿದರೆ ಸಮಸ್ಯೆ ದೊಡ್ಡದಾಗುವುದೇ ಹೊರತು ಅವಳನ್ನು ಸಮಧಾನ ಪಡಿಸಲು ಸಾಧ್ಯವಿಲ್ಲ. ಅವಳನ್ನು ಸಮಧಾನ ಪಡಿಸಲು ನೀವು ಕೋಪ ಬಂದರೂ ಪ್ರೀತಿಯಿಂದ ವರ್ತಿಸಿ, ಅವಳ ಕೋಪತಾಪ ಐಸ್ ನಂತೆ ಕರಗುವುದು.
ಸಮಧಾನವಾಗಿ ಕೇಳಿಸಿಕೊಳ್ಳಿ
ನಿಮ್ಮ ಹೆಂಡತಿ ಹಿಂದಿನ ವರ್ಷ ಅವಳ ಹುಟ್ಟು ಹಬ್ಬದ ದಿನ ನೀವು ಲೇಟ್ ಬಂದಿರುತ್ತೀರಾ? ಈ ವರ್ಷ ಅವಳ ಹುಟ್ಟು ಹಬ್ಬಕ್ಕೆ 2 ದಿನವಿರುತ್ತದೆ. ಕಳೆದ ವರ್ಷ ನೀವು ಮಾಡಿದ್ದು ನೆನೆಪಾಗಿ ನಿಮ್ಮ ಮೇಲೆ ಕೋಪಗೊಂಡು ಕುಳಿತಿರಬಹುದು. strange ಅಲ್ವಾ? ಅದಕ್ಕೆ ಅವಳ ಕೋಪಕ್ಕೆ ಕಾರಣ ತಿಳಿದು ನಂತರ ಮಾತನಾಡಿ.
ರೆಸ್ಪಾನ್ಸ್ ಮಾಡಿ
ಕೆಲವರು ಅತೀ ಬುದ್ಧಿವಂತಿಕೆಯಿಂದ ಏನೂ ಪ್ರತಿಕ್ರಿಯೆ ಮಾಡದೆ ಕೂರುತ್ತಾರೆ. ಆದರೆ ಈ ರೀತಿ ಏನೂ ಪ್ರತಿಕ್ರಿಯೆ ನೀಡದೆ ಕೂತರೆ ಅವಳ ಕೋಪ ಮತ್ತಷ್ಟು ಹೆಚ್ಚಾಗುವುದು. ಆದ್ದರಿಂದ ರೆಸ್ಪಾನ್ಸ್ ಮಾಡಿ.
ಅವಳು ಕೋಪಗೊಂಡಾಗ ನಾನು ಇಷ್ಟೆಲ್ಲಾ ಮಾಡಬೇಕು. ಆದರೆ ನಾನು ಕೋಪಗೊಂಡಾಗ ನನ್ನ ಸಮಧಾನ ಮಾಡಲು ಅವಳು ಏನೂ ಮಾಡಲ್ಲ ಎಂದು ಯೋಚಿಸುತ್ತಿದ್ದೀರಾ? ಮೊದಲು ನೀವು ಕೋಪಗೊಂಡರೂ ಅಥವಾ ಅವಳು ಕೋಪಗೊಂಡರೂ ಬಲಿಪಶು ನೀವೇ ಅನ್ನುವುದನ್ನು ಮರೆಯದಿರಿ.



Click it and Unblock the Notifications