Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಪುರುಷರು ಮೋಸ ಮಾಡಲು ಇವೇ ಕಾರಣಗಳಂತೆ!
ದಾಂಪತ್ಯದಲ್ಲಿ ಮುಖ್ಯವಾಗಿ ಇರಬೇಕಾದುದು ನಂಬಿಕೆ. ಆ ನಂಬಿಕೆಗೆ ಮೋಸ ಮಾಡಿದರೆ ಯಾವ ಸಂಗಾತಿಯೂ ಕ್ಷಮಿಸುವುದಿಲ್ಲ. ಪ್ರತಿಯೊಬ್ಬರು ತನ್ನ ಸಂಗಾತಿಯಿಂದ ನಿಷ್ಠೆಯನ್ನು ಬಯಸುತ್ತಾರೆ. ಆದರೆ ಕೆಲವರು ಈ ನಿಷ್ಠೆ ಅನ್ನುವುದರ ಅರ್ಥ ತಿಳಿಯದೆ ಬದುಕನ್ನು ಎಡವಟ್ಟು ಮಾಡಿಕೊಳ್ಳುತ್ತಾರೆ.
ವ್ಯಕ್ತಿ ಅನೈತಿಕ ಸಂಬಂಧದಲ್ಲಿ ಬೀಳಲು ಪರೋಕ್ಷವಾಗಿ ಬಾಳ ಸಂಗಾತಿ ಪ್ರಮುಖ ಕಾರಣ ಕರ್ತನಾಗಿರುತ್ತಾನೆ/ಳೆ! ಗಂಡ-ಹೆಂಡತಿ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ, ಲೈಂಗಿಕ ತೃಪ್ತಿ ಇಲ್ಲದಿದ್ದರೆ, ಗಂಡ-ಹೆಂಡತಿ ದೂರವಿದ್ದರೆ, ಸಂಬಂಧದಲ್ಲಿ ಭದ್ರತೆ ಇಲ್ಲದಿದ್ದರೆ ಅನೈತಿಕ ಸಂಬಂಧಗಳು ಹುಟ್ಟಿಕೊಳ್ಳುತ್ತದೆ. ಸಂಸಾರ ಬೀದಿಗೆ ಬಂದ ಮೇಲೆ ಗೋಳಾಡುವುದಕ್ಕಿಂತ ಮೊದಲೇ ಎಚ್ಚರಿಕೆವಹಿಸುವುದು ಒಳ್ಳೆಯದು.
ಕೆಲ ಪುರುಷರು ಮದುವೆಯಾಗಿ, ಮಕ್ಕಳಾದ ಮೇಲೆ ಬೇರೆ ಹೆಣ್ಣೆನ ಕಡೆಗೆ ಆಕರ್ಷಿತರಾಗುವುದನ್ನು ನೋಡುತ್ತೇವೆ. ಅಂತಹವರನ್ನು ನೋಡುವಾಗ ಚಪಲರು ಅಂತ ಅವರ ಬಗ್ಗೆ ಹೇಸಿಗೆ ಮೂಡಿದರೂ, ಸಾಕಷ್ಟು ಪುರುಷರು ಹೆಂಡತಿಗೆ ಮೋಸ ಮಾಡಲು ಅವರ ಮನೋಸ್ಥಿತಿ ಮಾತ್ರವಲ್ಲ, ಅವರ ಹೆಮಡತಿ ಕೂಡ ಪ್ರಮುಖ ಕಾರಣಕರ್ತರಾಗುತ್ತಾರೆ!
ಗಂಡ ಹೆಂಡತಿಗೆ ಮೋಸ ಮಾಡಲು ಪ್ರಮುಖ ಕಾರಣಗಳು ಇದಾಗಿವೆ:

ಪುರುಷ ಮೋಸ ಮಾಡಲು ಕಾರಣಗಳು
ಪುರುಷರು ಸಾಮಾನ್ಯವಾಗಿ ತಾವು ಬದುಕುತ್ತಿರುವ ರೀತಿಗಿಂತ ವಿಭಿನ್ನವಾದ ಜೀವನವನ್ನು ಬಯಸುತ್ತಾರೆ ಆದ್ದರಿಂದಲೇ ಹೊಸ ಸಂಬಂಧಗಳನ್ನು ಹುಡುಕಿಕೊಂಡು ಹೋಗುತ್ತಾರೆ. ದಿನದ ಬದುಕು ಬೇಸರವಾಗಿ ಈಗಿರುವ ಸಂಬಂಧವನ್ನು ತಿರಸ್ಕಾರ ಮಾಡುತ್ತಾರೆ.

ಪುರುಷ ಮೋಸ ಮಾಡಲು ಕಾರಣಗಳು
ಒತ್ತಾಯದ ಅಥವಾ ಬೋರಿಂಗ್ ಎನಿಸುವ ಪತ್ನಿ ಕೂಡ ಗಂಡಸರು ಬೇರೆ ಹೆಂಗಸಿನ ಸಹವಾಸವನ್ನು ಬಯಸಲು ಪರೋಕ್ಷವಾಗಿ ಕಾರಣಳಾಗುತ್ತಾಳೆ. ಆದ್ದರಿಂದ ತನ್ನನ್ನು ಅರ್ಥ ಮಾಡಿಕೊಳ್ಳುವ ಹಾಗೂ ತನ್ನ ಬಗ್ಗೆ ಕಾಳಜಿ ಮಾಡುವ ಇನ್ನೊಬ್ಬಳನ್ನು ಆತ ಬಯಸುತ್ತಾನೆ.

ಪುರುಷ ಮೋಸ ಮಾಡಲು ಕಾರಣಗಳು
ಹೆಂಡತಿ ತನ್ನ ಪ್ರಲೋಭನೆಗೆ ಸಿಗದೇ ಇದ್ದರೆ ಅಥವಾ ಗಂಡ-ಹೆಂಡತಿ ಅಪರೂಪಕ್ಕೆ ಭೇಟಿಯಾಗುತ್ತಿದ್ದರೆ ಪುರುಷರು ಸುಲಭವಾಗಿ ಬೇರೆ ಹೆಣ್ಣಿನ ಸಹವಾಸ ಮಾಡುತ್ತಾರೆ.

ಪುರುಷ ಮೋಸ ಮಾಡಲು ಕಾರಣಗಳು
ಸಂಚಾರಿ ಕಣ್ಣು / ಸ್ವಭಾವ - ಸಾಮಾನ್ಯವಾಗಿ ಗಂಡಸರು ಬೇರೆ ಹೆಣ್ಣನ್ನು ನೋಡುತ್ತಿರುತ್ತಾರೆ ಹಾಗೂ ಅವರಲ್ಲಿ ಹೊಸತೇನನ್ನನ್ನೋ ಬಯಸುತ್ತಾರೆ.

ಪುರುಷ ಮೋಸ ಮಾಡಲು ಕಾರಣಗಳು
ಪುರುಷ ಅಹಂ - ಸಾಕಷ್ಟು ಸಂದರ್ಭದಲ್ಲಿ ತಮ್ಮ ಅಹಂಕಾರದಿಂದಾಗಿ ತಾವು ಇನ್ನೊಂದು ಹೆಣ್ಣಿನ ಸಹವಾಸ ಮಾಡಿದ್ದನ್ನೂ ತಪ್ಪಲ್ಲ ಎಂಬಂತೆ ಸಮರ್ಥನೆ ಮಾಡಿಕೊಳ್ಳುತ್ತಾರೆ.

ಪುರುಷ ಮೋಸ ಮಾಡಲು ಕಾರಣಗಳು
ಹೊಂದಾಣಿಕೆ ಇಲ್ಲದಿರುವಿಕೆ - ದಂಪತಿಗಳಿಬ್ಬರ ನಡುವೆ ಹೊಂದಾಣಿಕೆಗಳಿಲ್ಲದಿದ್ದರೆ ಆತ ಸಹಜವಾಗಿ ಬೇರೆಂದು ಸಂಬಂಧದಲ್ಲಿ ಸಾಂತ್ವಾನವನ್ನು ಹುಡುಕಿಕೊಂಡು ಹೊರಡುತ್ತಾನೆ.

ಪುರುಷ ಮೋಸ ಮಾಡಲು ಕಾರಣಗಳು
ಕೆಟ್ಟ ಲೈಂಗಿಕ ಜೀವನ - ಒಂದು ವೇಳೆ ದಂಪತಿಗಳಲ್ಲಿ ಲೈಂಗಿಕ ಜೀವನ ಸರಿಯಾಗಿ ಇಲ್ಲದಿದ್ದರೆ ಆತ ದೈಹಿಕ ತೃಪ್ತಿಗಾಗಿ ಬೇರೆ ಹೆಣ್ಣಿನ ಸಹವಾಸ ಮಾಡುತ್ತಾನೆ.

ಪುರುಷ ಮೋಸ ಮಾಡಲು ಕಾರಣಗಳು
ದ್ವೇಷ - ತನ್ನ ಪತ್ನಿ ಯಾವುದೇ ವಿಷಯದಲ್ಲಿ ವಿಶ್ವಾಸದ್ರೋಹ ಮಾಡಿದರೆ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಪುರುಷ ತಪ್ಪು ದಾರಿ ಹಿಡಿಯುತ್ತಾನೆ.

ಪುರುಷ ಮೋಸ ಮಾಡಲು ಕಾರಣಗಳು
ಮೋಸ - ಸಾಮಾನ್ಯವಾಗಿ ಕೆಲವು ಪುರುಷರು ತಾನು ಬೇರೆ ಹೆಂಗಸಿನೊಂದಿಗೆ ಸಂಬಂಧವಿರುವುದು ತನ್ನ ಹೆಂಡತಿ ಕಂಡುಹಿಡಿಯುವುದಿಲ್ಲ ಎಂದು ತಿಳಿದು ಇತರ ಹೆಂಗಸರ ಜೊತೆ ಸಮಯ ಕಳೆಯುತ್ತಾರೆ.

ಪುರುಷ ಮೋಸ ಮಾಡಲು ಕಾರಣಗಳು
10. ಸ್ನೇಹಿತರ ಒತ್ತಡ - ಕೆಲವು ಸ್ನೇಹಿತರು ಪುರುಷ ತನ್ನ ಹೆಂಡತಿಗೆ ಮೋಸ ಮಾಡುವಂತೆ ಪ್ರಚೋದಿಸಬಹುದು. ಆತ ಇನ್ನೊಂದು ಸಂಬಂಧವನ್ನು ಹೊಂದುವಂತೆ ಪ್ರೆರೇಪಿಸಿ 'ನಿನ್ನ ಗಂಡ ತುಂಬಾ ನಿಷ್ಠಾವಂತ' ಎಂದು ಅಪಹಾಸ್ಯ ಮಾಡಬಹುದು.
ಹೀಗೆ ತನ್ನ ಪತ್ನಿಗೆ ಹಲವಾರು ಸುಳ್ಳು ಕಾರಣಗಳನ್ನು ನೀಡಿ ಮೋಸ ಮಾಡುವ ಪುರುಷರಿದ್ದಾರೆ. ಆದರಿಂದ ನಿಮ್ಮ ಪುರುಷ ನಿಮಗೆ ಮೋಸ ಮಾಡದಂತೆ ಎಚ್ಚರವಹಿಸುವ ಜವಾಬ್ದಾರಿ ನಿಮ್ಮದು.



Click it and Unblock the Notifications