Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇವೆಲ್ಲಾ ಅವಳಿಗೆ ಬೇಕು, ಆದರೆ ನಿಮ್ಮನ್ನು ಕೇಳಲ್ಲ
ಹೆಣ್ಣಿನ ಮನಸ್ಸನ್ನು ಅರ್ಥೈಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮದುವೆಯಾಗಿ 25ನೇ ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ ಆ ಗಂಡನಿಗೆ ತನ್ನ ಹೆಂಡತಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಿರುವುದಿಲ್ಲ! ಹೆಣ್ಣೇ ಹಾಗೇ ಒಂಥರಾ ನಿಗೂಢ, ಆ ನಿಗೂಢತೆಯ ರಹಸ್ಯವನ್ನು ಇದುವರೆಗೆ ಯಾವ ಪುರುಷನಿಂದಲೂ ಬೇಧಿಸಲು ಸಾಧ್ಯವಾಗಲಿಲ್ಲ.
ಎಲ್ಲಾ ಸ್ತ್ರೀಯರ ಗುಣ ಒಂದೇ ರೀತಿಯಲ್ಲಿ ಇರದಿದ್ದರೂ ಕೆಲವೊಂದು ಗುಣಗಳನ್ನು ಎಲ್ಲಾ ಸ್ತ್ರೀಯರಲ್ಲೂ ಕಾಣಬಹುದು. ಅವುಗಳನ್ನು ತಿಳಿದುಕೊಂಡರೆ ಅವಳಿಗೆ ನೀವು ಮತ್ತಷ್ಟು ಹತ್ತಿರವಾಗುವಿರಿ.

ತುಂಬಾ ಹೆಂಗಸರು ತುಂಬಾ ಸಂಕೋಚ ಸ್ವಭಾದವರಾಗಿರುತ್ತಾರೆ. ತನ್ನ ಗಂಡನ ಬಳಿ ಕೂಡ ತನ್ನ ಭಾವನೆಗಳನ್ನು ಹೇಳಿಕೊಳ್ಳುವುದಿಲ್ಲ, ಅವರಲ್ಲೂ ಕೆಲವೊಂದು ಬಯಕೆಗಳಿರುತ್ತದೆ, ಆದರೆ ಹೇಳಿದರೆ ಏನು ತಿಳಿದುಕೊಳ್ಳುತ್ತಾರೋ ಎಂಬ ಹಿಂಜರಿಕೆ. ಪ್ರತೀಯೊಂದು ಹೆಣ್ಣು ತನ್ನ ಗಂಡನಿಂದ ಬಯಸುವ ಆದರೆ ಹೇಳಲು ಹಿಂಜರಿಕೆ ಪಡುವ ಕೆಲ ವಿಷಯಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:
ಫ್ರೆಂಡ್ಸ್ ಜೊತೆ ಸುತ್ತಬೇಕು
ಮದುವೆಯಾದ ಮೇಲೆ ಮೊದಲಿನಷ್ಟು ಸ್ವತಂತ್ರ ಯಾರಿಗೂ ಸಿಗುವುದಿಲ್ಲ, ಅದರಲ್ಲೂ ತಾನು ನನ್ನ ಫ್ರೆಂಡ್ಸ್ ಜೊತೆ ಸುತ್ತಿದರೆ ಗಂಡ ತಪ್ಪು ತಿಳಿಯಬಹುದೆಂಬ ಭಯ. ಈ ಭಯದಿಂದಲೇ ಸಾಕಷ್ಟು ಹೆಣ್ಣು ಮಕ್ಕಳು ಮದುವೆಯಾದ ಮೇಲೆ ಸಿಮ್ ಕಾರ್ಡ್ ಬದಲಾಯಿಸಿ, ಯಾರ ಕಾಂಟ್ಯಾಕ್ಟ್ ಗೆ ಸಿಗದೆ ಇರುವುದನ್ನು ನೀವು ಗಮನಿಸಿರಬಹುದು.
ಅವಳ ಸೌಂದರ್ಯದ ಬಗ್ಗೆ ಹೊಗಳಿಕೆ
ತನ್ನ ಗಂಡ ನನ್ನ ಸೌಂದರ್ಯದ ಬಗ್ಗೆ ಹೊಗಳಬೇಕೆಂದು ಬಯಸುತ್ತಾಳೆ. ಅದರಲ್ಲೂ ಹೊಸ ಉಡುಪು ಹಾಕಿದಾಗ ಅವನು ಗಮನಿಸಿ, ನನ್ನ ಹೊಗಳಬೇಕೆಂದು ಬಯಸುತ್ತಾಳೆ, ಆದರೆ ಇದನ್ನು ಬಾಯಿಬಿಟ್ಟು ಹೇಳುವುದಿಲ್ಲ. ನೀವು ಹೊಗಳಿದರೆ ಅವಳು ಖುಷಿಯಾಗಿರುತ್ತಾಳೆ, ನೀವು ಏನೂ ಹೇಳದಿದ್ದರೆ ಆ ದಿನ ನಿಮ್ಮ ಮೇಲೆ ಸಿಡುಕುತ್ತನೇ ಇರುತ್ತಾಳೆ.
ರೊಮ್ಯಾನ್ಸ್
ಮದುವೆಯಾಗಿ ವರ್ಷಗಳು ಕಳೆದರೂ ಮದುವೆಯಾದ ಶುರುವಿನಲ್ಲಿ ಇದ್ದಂತೆಯೇ ರೊಮ್ಯಾನ್ಸ್ ಇರಬೇಕೆಂದು ಬಯಸುತ್ತಾಳೆ. ಆದರೆ ಈ ಬಗ್ಗೆ ಗಂಡನಲ್ಲಿ ಹೇಳುವುದಿಲ್ಲ.
ಬೇರೆಯವರ ಮುಂದೆ ನನ್ನ ಜೊತೆ ತುಂಬಾ ಚೆನ್ನಾಗಿರಬೇಕು
ನನ್ನ ಗಂಡ ಬೇರೆಯವರ ಮುಂದೆ ನನ್ನನ್ನು ತುಂಬಾ ಕೇರ್ ತೆಗೆದುಕೊಳ್ಳುವಂತೆ ವರ್ತಿಸಬೇಕೆಂದು ಬಯಸುತ್ತಾಳೆ. ಹಾಗಂತ ಅದನ್ನು ಅವಳು ಬಾಯಿ ಬಿಟ್ಟು ಕೇಳುವುದಿಲ್ಲ.
ಅವಳಿಗಾಗಿ ಏನು ಮಾಡಲು ಸಿದ್ಧ
ಮದುವೆಗೆ ಮೊದಲು ಹುಡುಗರು ತಾನು ಪ್ರೀತಿಸಿದ ಹುಡುಗಿಯ ಹತ್ತಿರ "ನಿನಗಾಗಿ ನಾನು ಏನು ಬೇಕಾದರು ಮಾಡಲು ಸಿದ್ಧ" ಎಂದು ಹೇಳುತ್ತಾರೆ. ಆದರೆ ಮದುವೆಯ ನಂತರ ಹೆಚ್ಚಿನ ಗಂಡಂದಿರು ತನ್ನ ಹೆಂಡತಿ ಆಸೆ, ಭಾವನೆಗಳನ್ನು ಗಮನಿಸುವುದೇ ಇಲ್ಲ. ಕೆಲಸ, ಜವಬ್ದಾರಿ ಎಂದು ತಮ್ಮ ಪಾಡಿಗೆ ತಾವಿರುತ್ತಾರೆ, ಆದರೆ ಹೆಂಡತಿಗೆ ತನ್ನ ಗಂಡ ನನ್ನ ಭಾವನೆಗಳನ್ನು ನಾನು ಹೇಳದೆಯೇ ಅರ್ಥೈಸಿಕೊಳ್ಳಬೇಕೆಂದು ಬಯಸುತ್ತಾಳೆ, ಆದರೆ ನೀವು ರೆಡಿನಾ?



Click it and Unblock the Notifications
