Latest Updates
-
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್
ಅವಳು ಹೇಳ ಬಯಸಿದನ್ನು ಹೇಳಲು ಬಿಡಿ!
When you love a woman and tell her that she's really wanted
When you love a woman then tell her that she's the one
Because she needs somebody, to tell her that it's gonna last forever
So tell me have you ever really, really ever loved a woman- Bryan Adams
ಖ್ಯಾತ ಕವಿ ಬ್ರಿಯಾನ್ ಆಡಮ್ಸ್ ನ ಈ ಸಾಲುಗಳು ಹೆಣ್ಣಿನ ಬಗ್ಗೆ ಎಷ್ಟೊಂದು ಸೂಕ್ಷ್ಮವಾಗಿ ಹೇಳುತ್ತಿದೆ. ನೀವು ಯಾವಾಗ ಒಂದು ಹೆಣ್ಣನ್ನು ಪ್ರೀತಿಸುತ್ತೀರೋ , ಅವಳ ಹತ್ತಿರ ನಿಮ್ಮ ಪ್ರೀತಿಯನ್ನು ಹೇಳಿ, ನೀವು ಯಾವಾಗ ಒಂದು ಹೆಣ್ಣನ್ನು ಪ್ರೀತಿಸುತ್ತೀರೋ ಅವಳಿಗಾಗಿ ನಿಮ್ಮ ಹೃದಯ ಮಿಡಿಯುತ್ತದೆ ಎಂದು ಹೇಳಿ. ಏಕೆಂದರೆ ಅವಳಿಗೆ ಅದು ನಿಜವಾಗಲೂ ಅವಶ್ಯಕ. ಕೊನೆಗೊಳ್ಳದ ಪ್ರೀತಿಗಾಗಿ ಸದಾ ಹಂಬಿಲಿಸುತ್ತಾಳೆ ಅವಳು. ಈಗ ಹೇಳಿ ನಿಜವಾಗಲೂ ಅವಳನ್ನು ನೀವು ಪ್ರಿತಿಸುತ್ತಿದ್ದೀರಾ? ಈ ರೀತಿ ಹೆಣ್ಣಿನ ಮನಸ್ಸನ್ನು ಕವಿ ಎಷ್ಟೊಂದು ಸುಂದರವಾಗಿ ವರ್ಣಿಸಿದ್ದಾರೆ.

ಪ್ರೀತಿ ಅನ್ನುವ ವಿಷಯದಲ್ಲಿ ಹೆಣ್ಣು-ಗಂಡಿನ ಭಾವನೆಗಳು ಭಿನ್ನವಾಗಿರುತ್ತದೆ. ಪುರುಷನಿಗೆ ತನ್ನ ಪ್ರೀತಿಯನ್ನು ಇನ್ನೊಬ್ಬರಿಗೆ ತೋರ್ಪಡಿಸುವುದು ಇಷ್ಟವಿರುವುದಿಲ್ಲ. ಅವರು ಪ್ರೀತಿ, ಭಾವನೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತ ಪಡಿಸಲು ಇಷ್ಟ ಪಡುವುದಿಲ್ಲ. ಆದರೆ ಹೆಣ್ಣು ಆ ರೀತಿಯಲ್ಲ, ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಬೇಕು ಅಷ್ಟೇ, ಪ್ರೀತಿಯನ್ನು ವ್ಯಕ್ತ ಪಡಿಸಲು ನಿರ್ಬಂಧನೆ ಬಯಸುವುದಿಲ್ಲ. ಅವನೂ ನನ್ನ ಹತ್ತಿರ ಪ್ರೀತಿಯ ಮಾತುಗಳನ್ನಾಡಬೇಕು, ನನ್ನನ್ನು ಹೊಗಳಬೇಕು, ಮುದ್ದಾಡಬೇಕು, ಸದಾ ನಾವು ರೊಮ್ಯಾಂಟಿಕ್ ಜೋಡಿಗಳಂತೆ ಇರಬೇಕೆಂದು ಪ್ರತಿಯೊಂದು ಹೆಣ್ಣು ಬಯಸುತ್ತಾಳೆ.
ಆದರೆ ಪುರುಷರು ಇವರ ಭಾವನೆಗಳಿಗೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಾರೆ. ಹುಡುಗ ಒಂದು ಹುಡುಗಿಯನ್ನು ಪ್ರೀತಿಸಿದರೆ ಅವಳು ಅವನ ಪ್ರೀತಿಗೆ ಒಪ್ಪಿಗೆಯ ಮುದ್ರೆ ಒತ್ತುವವರೆಗೆ ಪ್ರೇಮ ಕವಿಯಾಗಿರುತ್ತಾನೆ, ಸಿಗಲಿಲ್ಲವೆಂದರೆ ದೇವದಾಸ ಆಗುತ್ತಾನೆ. ಆದರೆ ತಾನು ಬಯಸಿದ ಹೆಣ್ಣು ತನ್ನ ಬಾಳಾ ಸಂಗಾತಿಯಾಗಿ ಬಂದ ಮೇಲೆ ಸದಾ ಪ್ರೇಮ ಕಾವ್ಯ ಹೇಳುತ್ತಾ ಕೂರುವುದಿಲ್ಲ. ಅದು ಅವನ ತಪ್ಪಲ್ಲ ಬಿಡಿ, ಅವನಿಗೆ ಜವಬ್ದಾರಿ ಹೆಚ್ಚಾಗಿರುತ್ತದೆ, ಅದರತ್ತ ಅವನು ಗಮನ ಹರಿಸಬೇಕಾದದು ಅನಿವಾರ್ಯ ಕೂಡ.
ಇಲ್ಲಿಂದ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಇವಳಲ್ಲಿ ತಳಮಳ ಪ್ರಾರಂಭವಾಗುತ್ತದೆ. ತನ್ನ ಪುರುಷನಿಗೆ ನನ್ನ ಮೇಲಿರುವ ಪ್ರೀತಿ ಕಮ್ಮಿಯಾಗಿದೆ ಎಂಬ ಭಾವನೆ ಅವಳ ಮನಸ್ಸಿಗೆ ಬರುತ್ತದೆ. ಅಲ್ಲಿಗೆ ಅವಳ ನೆಮ್ಮದಿ ಹಾಳಾಯಿತ್ತು. ಜೀವನದಲ್ಲಿ ಜಿಗುಪ್ಸೆ, ಕೋಪ, ಮುಗಿಯದ ವಾದ, ಕೋಪಗೊಳ್ಳುವುದು ಈ ಎಲ್ಲಾ ಲಕ್ಷಣಗಳು ಕಂಡು ಬರುತ್ತದೆ. ಇವೆಲ್ಲಾ ನೋಡಿದಾಗ ನಿಮಗೆ ಅವಳ ಮನಸ್ಥಿತಿ ಅರ್ಥವಾಗುದಿಲ್ಲ, ನೀವೂ ಕೋಪಗೊಳ್ಳುತ್ತಿರಿ.
ನಿಮ್ಮ ಹುಡುಗಿಯನ್ನು ನೀವು ನಿಜವಾಗಲೂ ಪ್ರೀತಿಸುತ್ತಿದ್ದೀರ ಎಂದಾದರೆ ಅವಳ ಮನದಲ್ಲಿ ಅಭದ್ರತೆ ಮೂಡುವಂತೆ ಮಾಡದಿರಿ. ಹೆಚ್ಚಿನ ಭಾರಿ ಪುರುಷರು ಅವಳ ಭಾವನೆಗಳನ್ನು ವ್ಯಕ್ತ ಪಡಿಸಲು ಅವಕಾಶ ಕೊಡುವುದೇ ಇಲ್ಲ. ಅವಳ ಭಾವನೆಗಳಿಗೆ ಯಾವತ್ತಿಗೂ ಕಡಿವಾಣ ಹಾಕಬೇಡಿ. ಅವಳು ಹೇಳ ಬಯಸಿದನ್ನೆಲ್ಲಾ ಹೇಳಲಿ ಬಿಡಿ, ಸಾವಾಧಾನವಾಗಿ ಕೇಳಿ, ನೀವೂ ಮಾತನಾಡಿ... ಅವಳ ಮೇಲೆ ಇರುವ ಪ್ರೀತಿಯನ್ನು ಆಗಾಗ ವ್ಯಕ್ತ ಪಡಿಸಿ. ಅವಳಲ್ಲಿ ಲವಲವಿಕೆ ಮರಳಿ ಬರುವುದು, ನೀವೂ ಸಂತೊಷದಿಂದ ಇರುವಂತೆ ಆಗುವುದು.
ಅವಳನ್ನು ಹೊಗಳುವುದರಿಂದ ನಿಮ್ಮಿಬ್ಬರ ಪ್ರೀತಿ ಮತ್ತಷ್ಟು ಬಲವಾಗುವುದಾದರೆ ಅವಳನ್ನು ಹೊಗಳುವುದರಲ್ಲಿ, ಆಗಾಗ ನಿಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳುವುದರಲ್ಲಿ ತಪ್ಪೇನು?



Click it and Unblock the Notifications











