Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಹುಡುಗಿಯರ ಮನ ಗೆಲ್ಲಲು ಇರಬೇಕಾದ ಅರ್ಹತೆಗಳಿವು!
ನೀವು ಗಮನಿಸಿರಬಹುದು ಕೆಲವು ಹುಡುಗರ ಕಡೆ ಬೇಗನೆ ಆಕರ್ಷಿತರಾಗುತ್ತಾರೆ. ಹುಡುಗರ ಸೌಂದರ್ಯಕ್ಕಿಂತ, ಅವರ ಸ್ಥಾನ ಮಾನಕ್ಕೆ,ಅವರ ಗುಣಕ್ಕೆ ಹುಡುಗಿಯರು ಅವರತ್ತ ಆಸಕ್ತಿ ತಾಳುತ್ತಾರೆ. ಅದರಲ್ಲೂ ತಮಾಷೆಯ ವಿಷಯವೆಂದರೆ ಡೀಸೆಂಟ್ ಎಂಬ ಹಣೆ ಪಟ್ಟಿ ಇರುವ ಹುಡುಗನಿಗಿಂತ ರೋಡ್ ರೋಮಿಯೋ ಹುಡುಗ ಕಡೆಗೆ ಹುಡುಗಿ ಬೇಗನೆ ಆಕರ್ಷಿತನಾಗುತ್ತಾಳೆ. ಆದರೆ ಮದುವೆ ವಿಷಯಕ್ಕೆ ಬಂದಾಗ ಒಳ್ಳೆಯ ಉದ್ಯೋಗದಲ್ಲಿರುವ, ನನಗೊಂದು ಉತ್ತಮ ಜೀವನ ನೀಡುವ ಹುಡುಗನನ್ನು ಮದುವೆಯಾಗಬೇಕೆಂದು ಬಯಸುತ್ತಾರೆ.
ತನ್ನ ಹುಡುಗ ಇತರ ಹುಡುಗನಿಗಿಂತ ಭಿನ್ನವಾಗಿರಬೇಕೆಂದು ಪ್ರತಿಯೊಂದು ಹೆಣ್ಣು ಬಯಸುತ್ತಾಳೆ. ಹೇಡಿ, ಅಂಜುಬುರುಕ ಈ ರೀತಿಯ ಹುಡುಗ ಎಂದು ಗೊತ್ತಾದರೆ ಅವನು ಎಷ್ಟೇ ಸುಂದರನಾಗಿರಲಿ ಹುಡುಗಿಯರು ಅವನತ್ತ ಕಣ್ಣೆತ್ತಿ ಕೂಡ ನೋಡುವುದಿಲ್ಲ.
ಆದರೆ ಈ ಕೆಳಗಿನ ಗುಣವಿರುವ ಹುಡುಗನಿಗೆ ಗರ್ಲ್ ಫ್ರೆಂಡ್ ಸಿಗುವುದು ದೊಡ್ಡ ವಿಷಯವೇ ಅಲ್ಲ:

ಆತ್ಮವಿಶ್ವಾಸವಿರುವವನು
ತನ್ನ ನಡತೆ ಹಾಗೂ ನುಡಿಯಲ್ಲಿ ಆತ್ಮವಿಶ್ವಾಸ ಇರುವ ಹುಡುಗ ಹುಡುಗಿಗೆ ಬೇಗನೆ ಪ್ರಿಯವಾಗುತ್ತಾನೆ. ಇಂತಹ ಹುಡುಗರು ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ, ಮೋಸ ಮಾಡುವುದಿಲ್ಲ ಎಂಬ ನಂಬಿಕೆ ಅವರಲ್ಲಿರುತ್ತದೆ.
ರೊಮ್ಯಾಂಟಿಕ್ ಪರ್ಸನ್
ತನ್ನ ಹುಡುಗ ರೊಮ್ಯಾಂಟಿಕ್ ಆಗಿರಬೇಕು, ಮದುವೆಯಾಗಿ ಮಕ್ಕಳಾದರೂ ನಮ್ಮದು ರೊಮ್ಯಾಂಟಿಕ್ ಜೋಡಿ ಆಗಿರಬೇಕೆಂದು ಬಯಸುತ್ತಾರೆ. ಆದ್ದರಿಂದಲೇ ರೊಮ್ಯಾಂಟಿಕ್ ಹುಡುಗರ ಕಡೆಗೆ ಹುಡುಗಿಯರು ಬೇಗನೆ ಆಕರ್ಷಿತರಾಗುತ್ತಾರೆ.
ಕಲೆಗಾರ
ಹುಡುಗ ಪ್ರತಿಭಾವಂತ ಆಗಿರಬೇಕು ಎಂದು ಬಯಸುತ್ತಾರೆ. ತನ್ನ ಹುಡುಗನ ಪ್ರತಿಭೆಯ ಬಗ್ಗೆ ತನ್ನ ಗೆಳತಿಯರ ಮುಂದೆ ಹೇಳುವುದು ಹುಡುಗಿಯರಿಗೆ ತುಂಬಾ ಪ್ರಿಯವಾದ ಕೆಲಸವಾಗಿದೆ.
ತುಂಬಾ ನಿರ್ಬಂಧನೆಗಳನ್ನು ಹಾಕಬಾರದು
ತುಂಬಾ ನಿರ್ಬಂಧನೆ ಹಾಕುವ ಹುಡುಗ ಅವಳಿಗೆ ಇಷ್ಟವಾಗುವುದಿಲ್ಲ, ಅಂತಹವರ ಜೊತೆ ಬಾಳಲು ಬೋರ್ ಅನಿಸಿ ಬಿಡುತ್ತದೆ. ಬುದ್ಧಿವಂತ, ನಮ್ಮನ್ನು ನಗಿಸುವ, ತಾನು ನಗುವ ಹುಡುಗ ಅವಳ ಮನವನ್ನು ಬೇಗನೆ ಗೆಲ್ಲುತ್ತಾನೆ.
ಕ್ರಾಂತಿಕಾರಿ
ರಫ್ ಅಂಡ್ ಟಫ್ ಹುಡುಗನಿಗೆ ಹುಡುಗಿ ಬೇಗನೆ ಕ್ಲೀನ್ ಬೋಲ್ಡ್ ಆಗುತ್ತಾಳೆ. ಈ ರೀತಿಯ ಹುಡುಗನನ್ನು ಪ್ರೀತಿಸುವುದು ಅವಳಿಗೆ ಒಂಥರಾ ಫ್ಯಾನ್ಸಿ. ಒರಟು ಹುಡುಗನಿಗೆ ಹೂವಿನಂಥ ಮನಸ್ಸು ಕೂಡ ಇರುತ್ತದೆ. ಆ ಮನಸ್ಸನ್ನು ಅರಿಯುವ ಕುತೂಹಲ ಅವಳಲ್ಲಿರುತ್ತದೆ.



Click it and Unblock the Notifications
