ನಿಮ್ಮ ಪ್ರಿಯತಮ ಈ ರೀತಿಯೆಲ್ಲಾ ಖಂಡಿತ ಹೇಳಲ್ಲ

By ಪ್ರೇಯಸಿ

ಪ್ರೇಮಿಗಳು ಪರಸ್ಪರ ಯಾವುದೇ ವಿಷಯವನ್ನು ಮುಚ್ಚಿಡದೆ ಅದನ್ನು ಹೇಳಿಕೊಳ್ಳುವುದು ಅತ್ಯಂತ ಅಗತ್ಯ. ಇದರಿಂದ ಸಂಬಂಧಗಳೂ ಕೂಡ ಉತ್ತಮವಾಗಿರುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಪ್ರಾಮಾಣಿಕವಾಗಿರುವುದು ಕಷ್ಟ!

ಹಲವಾರು ಸಂದರ್ಭಗಳಲ್ಲಿ ನಿಮ್ಮ ಸಂಗಾತಿ/ಬಾಯ್ ಫ್ರೆಂಡ್, ಕಾಲಾಂತರಗಳಿಂದ ನಿಮ್ಮಿಂದ ಕೆಲವು ವಿಷಯಗಳನ್ನು ಮುಚ್ಚಿಟ್ಟಿರಬಹುದು. ನಿಮಗೆ ಬೇಜಾರಾಗುತ್ತದೆ ಅಥವಾ ನೀವು ಆ ವಿಷಯದಿಂದ ವಿಚಲಿತರಾಗುತ್ತೀರಿ ಎಂದು ಅವರು ನಿಮ್ಮಲ್ಲಿ ಹೇಳದೇ ಇರಬಹುದು. ಈ ವಿಷಯವನ್ನು ನೀವು ಒಪ್ಪುತ್ತೀರಿ ತಾನೆ? ಹಾಗಾದರೆ ಹುಡುಗರು ಹೇಳದೇ ಮುಚ್ಚಿಟ್ಟುಕೊಳ್ಳುವ ವಿಷಯಗಳಾವವು ಎಂಬುದನ್ನು ತಿಳಿಯೋಣವೇ?

Things That Your Boyfriend Won’t Tell You

1. ನೀವು ನಿಮ್ಮ ನೆಚ್ಚಿನ ಬಟ್ಟೆಯನ್ನು ಧರಿಸಿದಾಗ ಅದರಲ್ಲಿ ನೀವು ಅತ್ಯಂತ ದಪ್ಪ ಕಾಣಿಸಿದರೂ ನಿಮಗೆ ಬೇಜಾರಾಗುತ್ತದೆ ಎಂಬ ಕಾರಣಕ್ಕೆ ಅವರು ಹೇಳುವುದಿಲ್ಲ.

2. ನಿಮ್ಮ ಸಂಗಾತಿ ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತಿದ್ದರೂ ಅವರ ಪ್ರೀತಿಯನ್ನು ನಿಮ್ಮ ಪಾಲಕರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಆದ್ದರಿಂದ ಇಲ್ಲಿ ಪ್ರೀತಿಯ ಕೊರತೆ ಕಾಣಿಸಿದರೆ ಸ್ನೇಹ ಭಾವದಿಂದ ನೀವೇ ಪರಿಹರಿಸಿಕೊಳ್ಳಿ.
3. ಕೆಲವು ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ಅವರ ಉಳಿದ ಸ್ನೇಹಿತರೊಂದಿಗೆ ಸಮಯ ಕಳೆಯಲು ಇಷ್ಟವಿದ್ದರೂ ನಿಮ್ಮ ಜೊತೆಯೇ ಬರುತ್ತಾರೆ. ಅವರ ಬಯಕೆಯನ್ನು ಹೇಳದಿದ್ದರೂ ಕೆಲವೊಮ್ಮೆ ಅವರ ವರ್ತನೆಯಿಂದ ನೀವು ತಿಳಿಯಬಹುದು.

4. ನೀವು ನಿಮ್ಮ ಹುಡುಗ ಬೇರೆ ಹುಡುಗಿಯರನ್ನು ನೋಡುತ್ತಿಲ್ಲ ಎಂದು ತಿಳಿದುಕೊಂಡಿದ್ದರೆ ಅದು ಖಂಡಿತ ತಪ್ಪು. ಅವರು ಯಾವುದೇ ಹುಡುಗಿಯನ್ನು ನೋಡಿದ್ದರೂ ಅವಳ ಬಗ್ಗೆ ನಿಮ್ಮಲ್ಲಿ ಯಾವುದೇ ವಿಚಾರವನ್ನು ಚರ್ಚೆ ಮಾಡುವುದಿಲ್ಲ.

5. ನಿಮಗಾಗಿ ಬಹಳ ಹೊತ್ತು ಕಾಯುವುದನ್ನು ಅವರು ಇಷ್ಟ ಪಡದೇ ಹೋಗಬಹುದು. ಆದರೂ ಅದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವುದಿಲ್ಲ.

6. ನಿಮ್ಮ ಸಂಗಾತಿ ಬೇರೆಯವರೊಂದಿಗೆ ಹೋಲಿಕೆ ಮಾಡುವುದನ್ನು ಎಂದಿಗೂ ಇಷ್ಟಪಡುವದಿಲ್ಲ. ಆದರೆ ಅದನ್ನು ಹೇಳಿಕೊಳ್ಳದೆ ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ.

7. ನೀವು ನಿಮ್ಮ ಮೇಲುಗೈ ಸಾಧಿಸಲು ಪ್ರಯತ್ನಿಸಿದರೆ ಅವರು ಅದನ್ನು ಇಷ್ಟಪಡದೇ ಇರಬಹುದು. ಸಂಬಂಧಗಳಲ್ಲಿ ಅವರು ದೃಢವಾಗಿರಲು ಬಯಸುತ್ತಾರೆ.

8. ನಿಮ್ಮ ಸಂಗಾತಿ ಅವರ ಉಳಿದ ಸ್ನೇಹಿತರೊಂದಿಗೆ ಇದ್ದಾಗ ನಡೆದ ಎಲ್ಲಾ ಘಟನೆಗಳನ್ನು ನಿಮಗೆ ಹೇಳಲು ಇಷ್ಟ ಪಡುವುದಿಲ್ಲ. ಹಾಗೂ ನೀವು ಆ ವಿಷಯದಲ್ಲಿ ಮಧ್ಯ ಬರುವುದು ಕೂಡ ಅವರಿಗೆ ಸರಿ ಎನಿಸುವುದಿಲ್ಲ.

9. ಅವರ ವಿಚಾರ ಹಾಗೂ ಕಲ್ಪನೆಗಳ ಬಗ್ಗೆ ಹೆಚ್ಚು ವಿವರಣೆಯನ್ನು ನೀಡಲು ಅಥವಾ ಚರ್ಚಿಸಲು ಬಯಸುವುದಿಲ್ಲ.

10. ಹುಡುಗರು ಅವರ ಸಂಪೂರ್ಣ ಸಮಯವನ್ನು ನಿಮ್ಮೊಂದಿಗೆ ಕಳೆಯುತ್ತೇನೆ ಎಂದು ಹೇಳುವುದಿಲ್ಲ. ಆದರೆ ಅವರ ನಿತ್ಯದ ಹವ್ಯಾಸದ ಸಮಯವನ್ನೂ ಕೂಡ ನಿಮಗೆ ನಿಮಗಾಗಿಯೇ ಮೀಸಲಿಡುತ್ತಾರೆ.

11. ಅವರ ಯಾವುಡೇ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದಾಗಲಿ, ವಿವರಣೆ ನೀಡುವುದಾಗಲಿ ಮಾಡುವುದಿಲ್ಲ.

ಈಗ ಹೇಳಿ ನಿಮ್ಮ ಬಾಯ್ ಫ್ರೆಂಡ್ ನ ಈ ರೀತಿಯ ವರ್ತನೆಯನ್ನು ಗಮನಿಸಿರುತ್ತೀರಿ ಅಲ್ಲವೇ? ಇಲ್ಲ ಅಂದರೆ ಅವರನ್ನು ನೀವು ಸಂಪೂರ್ಣ ಅರ್ಥೈಸಿಕೊಂಡಿಲ್ಲವೆಮದು ಅರ್ಥ.

Story first published: Friday, April 26, 2013, 16:12 [IST]
X
Desktop Bottom Promotion