Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಡೇಟಿಂಗ್ ಎಂಬ ತಮಾಷೆಯ ಸುತ್ತ
ಡೇಟಿಂಗ್ ಅನ್ನುವ ಪದ ಈಗೆಲ್ಲಾ ತುಂಬಾ ಸಾಮಾನ್ಯವಾಗಿದೆ. ಡೇಟಿಂಗ್ ಮಾಡುತ್ತಿದ್ದೇನೆ ಅನ್ನುವುದು ಸೆಲೆಬ್ರಿಟಿಗಳಿಗೆ ಅವರನ್ನು ಆದರ್ಶ ಗುರುಗಳೆಂದು ನಂಬಿರುವ ಯುವ ಜನರಿಗೆ ಹೆಮ್ಮೆಯ ಸಂಗಾತಿ. ಡೇಟಿಂಗ್ ಅಂದರೆ ಪ್ರೀತಿನಾ? ಖಂಡಿತ ಅಲ್ಲ. ಇನ್ನು ಮದುವೆಗೆ ಹುಡುಗ/ ಹುಡುಗಿ ನೋಡುವ ಶಾಸ್ತ್ರನಾ? ಇದ್ಯಾವುದು ಅಲ್ಲ. ಮತ್ತೆ ಈ ಡೇಟಿಂಗ್ ಅಂದರೆ ಏನು? ಇದು ಒಂಥರಾ ಫ್ಲರ್ಟ್.
ಮದುವೆಯ ನಂತರ ಪರಸ್ಪರ ಹೊಂದಾಣಿಕೆಯಿಂದ ಬಾಳಬಹುದೇ ಎಂದು ತಿಳಿಯಲು ಡೇಟಿಂಗ್ ಹೆಲ್ಪ್ ಮಾಡುತ್ತೆ ಎನ್ನುತ್ತಾರೆ. ಆದರೆ ಹೀಗೆ ಡೇಟಿಂಗ್ ಮಾಡುವವರ ಸಂಬಂಧ ಮದುವೆಯವರೆಗೆ ಬರುವುದೇ ತುಂಬಾ ವಿರಳ. ಈ ಡೇಟಿಂಗ್ ಸೋಗಿನಲ್ಲಿ ಹಲವು ತಮಾಷೆಯ ವಿಷಯಗಳಿರುತ್ತದೆ. ಅವುಗಳೆಂದರೆ...

ಬಯಸಿ ಬಯಸಿ ಕುರಿ ಹಳ್ಳಕ್ಕೆ ಬಿತ್ತು
ಡೇಟಿಂಗ್ ಅಂತ ಹೇಳಿ ಹುಡುಗ ಬಂದರೆ ಅವನ ಜೇಬಿಗೆ ಕತ್ತರಿ ಬೀಳುವುದು ಖಚಿತ. ಗರ್ಲ್ ಫ್ರೆಂಡ್ ನ ಖುಷಿ ಪಡಿಸಲು ಕೈಯಲ್ಲಿದ್ದ ದುಡ್ಡು ಖರ್ಚು ಮಾಡಿದ್ದೊಂದೇ ಕೊನೆಯಲ್ಲಿ ಉಳಿಯುವುದು.
ಪರ್ಫೆಕ್ಷನ್
ಡೇಟಿಂಗ್ ಮಾಡುವವರಿಗೆ ತಾವು ಪರ್ಫೆಕ್ಟ್ ಎಂದು ಸಾಬೀತು ಪಡಿಸುವ ಅಗತ್ಯವಿರುತ್ತದೆ. ಎಷ್ಟು ದಿನಾಂತ ಮುಖವಾಡ ಧರಿಸಲು ಸಾಧ್ಯ? ನಾವು ಇರುವುದಕ್ಕಿಂತ ತುಂಬಾ ಪರ್ಫೆಕ್ಟ್ ಆಗಿರಲು ಪ್ರಯತ್ನಿಸಿದರೆ ಉಸಿರು ಕಟ್ಟಿದ ಅನುಭವವಾಗಿ ಸಾಕಪ್ಪಾ ಸಾಕು ಈ ಸಂಬಂಧ ಎಂದು ಗುಡ್ ಬೈ ಹೇಳುತ್ತಾರೆ.
ಡಬಲ್ ಡೇಟಿಂಗ್
ಡೇಟಿಂಗ್ ಮಾಡುವವರು ಕೆಲವರು ಡಬಲ್ ಡೇಟಿಂಗ್ ಮಾಡುತ್ತಾರೆ. ಒಬ್ಬರು ಹೋದರೆ ಮತ್ತೊಬ್ಬರು ದೊರೆಯುತ್ತಾರೆ ಎಂಬ ನಂಬಿಕೆ. ಈ ನಂಬಿಕೆಯೇ ಕೊನೆಗೆ ಅವರಿಗೆ ಮುಳುವಾಗುವುದು.
4-5 ತಿಂಗಳಾಯಿತು, ಬೋರಾಯಿತು
ಡೇಟಿಂಗ್ ತುಂಬಾ ಕಾಲದವರಿಗೆ ಮಾಡುವವರು ತುಂಬಾ ವಿರಳ. 4-5 ತಿಂಗಳಿಗೇ ಬೋರಾಗಿ ಬಿಡುತ್ತದೆ. ಹಾಗೆ ಅನಿಸಿದ ತಕ್ಷಣ ಟಾಟಾ ಅಂತ ಹೇಳಿ, let's be friends ಎಂದು ಹೇಳಿ ಬಿಡುತ್ತಾರೆ.
ಡೇಟಿಂಗ್ ಮದುವೆವರೆಗೆ ಬಂದ ಉದಾಹರಣೆ ತುಂಬಾ ವಿರಳ
ಈ ಡೇಟಿಂಗ್ ಗೆ ಮದುವೆ ತನಕ ಬರುವ ಸಾಮರ್ಥ್ಯವಿರುವುದಿಲ್ಲ. ಡೇಟಿಂಗ್ ಮಾಡಿ ಮದುವೆಯಾಗಿ, ತುಂಬಾ ಕಾಲ ಸಂಸಾರ ಮಾಡಿದವರು ತುಂಬಾ ವಿರಳ.



Click it and Unblock the Notifications
