Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಯಾವ ಪುರುಷನೂ ಇಷ್ಟಪಡದ ಹೊಗಳಿಕೆಗಳಿವು!
ಪುರುಷರು ಹೊಗಳಿಕೆಯನ್ನು ಇಷ್ಟ ಪಡುತ್ತಾರೆ, ಆದರೆ ಎಲ್ಲಾ ರೀತಿಯ ಹೊಗಳಿಕೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅವರನ್ನು ಹೊಗಳುವಾಗ ಹುಷಾರ್ ಆಗಿರಿ. ಅವರ ಮೇಲ್ ಈಗೋ (ಅದನ್ನು ಸ್ವಾಭಿಮಾನ ಎನ್ನಲು ಸಾಧ್ಯವಿಲ್ಲ)ಕ್ಕೆ ಪೆಟ್ಟು ಬೀಳುವಂತಿದ್ದರೆ ಹೊಗಳಿದರೆ ಮುಗಿಯಿತು ಅವರು ಖುಷಿ ಪಡುವ ಬದಲು ಮುನಿದುಕೊಂಡು ಬಿಡುತ್ತಾರೆ.
ಅದರಲ್ಲೂ ಈ ಕೆಳಗಿನ ವಿಷಯದಲ್ಲಿ ಅವರನ್ನು ಇಷ್ಟವಾದರೂ ಅವರನ್ನು ಹೊಗಳಬೇಡಿ:

ನೀನು ತುಂಬಾ ಮೃದು ಸ್ವಭಾವದವ
ತುಂಬಾ ಮೃದು ಸ್ವಭಾವದ ಹುಡುಗರು ಇಷ್ಟವಾಗುತ್ತಾರೆ. ಚಿಕ್ಕ ವಿಷಯಕ್ಕೆ ಸೆನ್ಸಿಟಿವ್ ಆದರೆ ಹೆಣ್ಣಿಗೆ ಅವನನ್ನು ತುಂಬಾ ಇಷ್ಟವಾಗುತ್ತದೆ. ಹಾಗಂತ ಅವರ ಹತ್ತಿರ ಹೇಳಬೇಡಿ. ಏಕೆಂದರೆ ಅವರ ಈಗೋಕ್ಕೆ ಪಟ್ಟಾಗುತ್ತದೆ. ತಮ್ಮ ಆ ಸ್ವಭಾವನ್ನು ಬದಲಾಯಿಸಿಕೊಳ್ಳುವತ್ತ ಪ್ರಯತ್ನಿಸುವರು. ಈ ವಿಷಯದಲ್ಲಿ ಇಷ್ಟವಾದರೆ ನಿಮ್ಮ ಮನಸ್ಸಿನಲ್ಲಿಯೇ ಇಡಿ, ಪುರುಷರಿಗೆ ಹೇಳಬೇಡಿ.
ತುಂಬಾ ಭಾವನಾಜೀವಿ
ಎಲ್ಲಾ ಪುರುಷರು ಚಿಕ್ಕ-ಪುಟ್ಟ ವಿಷಯಕ್ಕೆ ಅಳುವುದಿಲ್ಲ. ಇನ್ನು ಕೆಲವರು ತುಂಬಾ ಭಾವನಾ ಜೀವಿಗಳಾಗಿರುತ್ತಾರೆ. ಅಂತಹವರ ಹತ್ತಿರ ನೀವು ತುಂಬಾ ಮೃದು, ಭಾವನಾಜೀವಿ ಅಂತ ಹೇಳಬೇಡಿ.
ನಿನ್ನಿಂದ ಈ ಕೆಲಸ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ
ಉದಾಹರಣೆಗೆ ಮನೆಯಲ್ಲಿ ಕರಂಟ್ ಕಲೆಕ್ಷನ್ ನಲ್ಲಿ ಏನೋ ತೊಂದರೆ ಉಂಟಾಗಿರುತ್ತದೆ. ಆಗ ನಿಮ್ಮ ಗಂಡ ಬಂದು ಅದನ್ನು ಸರಿ ಮಾಡುತ್ತಾನೆ. ಅವರು ಸರಿಮಾಡಿಕೊಟ್ಟದ್ದು ನಿಮಗೆ ಖುಷಿಯಾಗುತ್ತದೆ. ಹಾಗಂತ ಹೇಳಬೇಡಿ. ಯಾವುದೇ ಕೆಲಸವಿರಲಿ, ಆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಪುರುಷನ ಈಗೋ ಒಪ್ಪುವುದಿಲ್ಲ.
ನಿನ್ನ ಹೊಟ್ಟೆ ಇಷ್ಟ
ಎಲ್ಲರಿಗೂ ಸಿಕ್ಸ್ ಪ್ಯಾಕ್ ಇರಲ್ಲ. ವ್ಯಾಯಾಮ ಮಾಡದೆ ಸ್ವಲ್ಪ ಹೊಟ್ಟೆ ಬಂದಿರುತ್ತದೆ. ನಿಮಗೆ ಆ ಹೊಟ್ಟೆ ಇಷ್ಟವಿರಬಹುದು, ಆದರೆ ಹೇಳಲು ಮಾತ್ರ ಹೋಗಬೇಡಿ.
ಮನೆಯ ಕೆಲಸ ಚೆನ್ನಾಗಿ ಮಾಡುತ್ತೀಯ
ಕೆಲ ಪುರುಷರು ಮನೆ ಕೆಲಸವನ್ನು ಸ್ತ್ರೀಯರು ನಾಚುವಷ್ಟು ಚೆನ್ನಾಗಿ ಮಾಡುತ್ತಾರೆ. ಆದರೆ ಮನೆ ಕೆಲಸ ಸ್ತ್ರೀಯರ ಕೆಲಸ ಮಾತ್ರ ಎಂಬ ಭಾವನೆ ಪುರುಷ ಪ್ರಧಾನ ಸಮಾಜದಲ್ಲಿದೆ. ಅದಕ್ಕಾಗಿ ನೀವು ಹೊಗಳಿದರೆ ಅವರಿಗೆ ಅವಮಾನವಾಗುತ್ತದೆ. ಆದ್ದರಿಂದ ಅವರನ್ನು ಹೊಗಳಬೇಡಿ.



Click it and Unblock the Notifications
