ಮಿತ ಖರ್ಚಿನಲ್ಲಿ ವಂಡರ್ ಫುಲ್ ಡೇಟಿಂಗ್‌ ಹೇಗೆ?

ಡೇಟಿಂಗ್ ಈಗ ಸಾಮಾನ್ಯವಾಗಿ ಬಿಟ್ಟಿದೆ. ಡೇಟಿಂಗ್ ಮಾಡಿ ಇಬ್ಬರಿಗೆ ಪರಸ್ಪರ ಇಷ್ಟವಾದರೆ ನಂತರ ಮದುವೆಯಾಗುವ ಅನ್ನುವುದು ಈಗೀನ ಹೆಚ್ಚಿನ ಯುವ ಜನರ ಯೋಚನೆಯಾಗಿದೆ. ಡೇಟಿಂಗ್ ಅಂತ ಹೋದರೆ ಜೇಬಿಗೆ ಕತ್ತರಿ ಬೀಳುವುದು ಖಂಡಿತ. ಹಾಗಂತ ಅವಳಿಗೆ ನೀವು ಕಂಜೂಸ್ ಅಂತ ಕೂಡ ಅನಿಸಬಾರದು. ಮಿತ ದುಡ್ಡಿನಲ್ಲಿ, ವಂಡರ್ ಫುಲ್ ಆಗಿ ಡೇಟಿಂಗ್ ಮಾಡಬಹುದು.

ಅದಕ್ಕಾಗಿ ಕೆಲವೊಂದು ಸರಳ ಉಪಾಯ, ಮಾರ್ಗ ಅನುಸರಿಸಿದರೆ ನಿಮ್ಮ ಡೇಟಿಂಗ್‌ ಕೂಡ ಬಜೆಟ್‌ನಲ್ಲಿಯೇ ಮುಗಿಯಲಿದೆ. ಇದನ್ನು ಪ್ರೇಮಿಗಳೂ ಪಾಲಿಸಬಹುದು., ಿದರಿಂದ ಸುಂದರವಾದ ಕ್ಷಣಗಳು ನಿಮ್ಮದಾಗುವುದು. ಅದಕ್ಕೆ ಇಲ್ಲಿದೆ ಕೆಲ ಟಿಪ್ಸ್‌

ವಾಯು ವಿಹಾರಕ್ಕೆ ತೆರಳಿ

ವಾಯು ವಿಹಾರಕ್ಕೆ ತೆರಳಿ

ಉದ್ಯಾನ ವಿರಲಿ ಅಥವಾ ರಸ್ತೆಯಲ್ಲಿಯೇ ಸುಮ್ಮನೆ ನಿಮ್ಮ ಡೇಟ್‌ ಜತೆ ನಡೆದುಕೊಂಡು ಹೋಗಿ. ಇದು ನಿಮ್ಮ ಹಾಗೂ ನಿಮ್ಮ ಡೇಟ್‌ಗೆ ಹೆಚ್ಚು ಏಕಾಂತವನ್ನು ಒದಗಿಸುತ್ತದೆ. ಪರಸ್ಪರ ಕೈಕೈ ಹಿಡಿದು ನಡೆಯಬಹುದು, ನೀವು ಪರಸ್ಪರ ನೋಡಿಕೊಳ್ಳಬಹುದು, ನಗಬಹುದು.

ಹೈಕಿಂಗ್‌ಗೆ ತೆರಳಿ

ಹೈಕಿಂಗ್‌ಗೆ ತೆರಳಿ

ನೀವು ಹಾಗೂ ನಿಮ್ಮೊಂದಿಗೆ ಡೇಟಿಂಗ್‌ ಬಂದವರು ನಿಸರ್ಗ ಪ್ರಿಯರಾಗಿದ್ದರೆ, ಒಂದಿಷ್ಟು ಕುರುಕಲು ತಿಂಡಿ ಕೊಂಡೊಯ್ದರೆ ಅದಕ್ಕಿಂತ ಉತ್ತಮ ಸಂಗಾತಿ ಬೇರೊಂದಿಲ್ಲ. ನಿಮ್ಮ ಡೇಟ್‌ ಜತೆ ಅದನ್ನು ಅನುಭವಿಸುತ್ತಾ ತಿನ್ನಬಹುದು.

ಡೇಟ್‌ಗಾಗಿ ನೀವೇ ಆಹಾರ ಸಿದ್ಧಪಡಿಸಿ

ಡೇಟ್‌ಗಾಗಿ ನೀವೇ ಆಹಾರ ಸಿದ್ಧಪಡಿಸಿ

ಆಹಾರವನ್ನು ನೀವೇ ಸಿದ್ಧಪಡಿಸುವುದರಿಂದ ಮಿತ ಬೆಲೆಗೆ ಊಟ ಮಾಡಬಹುದು. ಹೊರಗಿನಿಂದ ತರುವ ಆಹಾರ ಆರೋಗ್ಯಕ್ಕೂ ಒಳ್ಳೆಯದಲ್ಲ, ಜತೆಗೆ ತುಂಬಾ ದುಬಾರಿ ಆಗಬಹುದು. ಮಂದ ಬೆಳಕಿನಲ್ಲಿ ನಿರ್ಮಾಣವಾದ ಆ ರೊಮ್ಯಾಂಟಿಕ್‌ ಮೂಡನ್ನು ನಿಮ್ಮ ಡೇಟ್‌ನ ಕೈ ಹಿಡಿದು ಮಧುರವಾಗಿ ಅನುಭವಿಸಬಹುದು.

ಪಿಕ್‌ನಿಕ್‌ಗೆ ಕರೆದೊಯ್ಯಿರಿ

ಪಿಕ್‌ನಿಕ್‌ಗೆ ಕರೆದೊಯ್ಯಿರಿ

ಪ್ರತಿಯೊಬ್ಬರೂ ಒಂದೊಂದು ಭಿನ್ನ ಮನೋಭಾವ, ನಡವಳಿಕೆ ಹೊಂದಿರುತ್ತಾರೆ. ತಮಗಿಷ್ಟವಾದ ಆಹಾರವನ್ನು ಬಯಸುತ್ತಾರೆ. ಅಂತವರಿಗೆ ಒಂದು ಅಚ್ಚರಿ ನೀಡಿ. ಚಾಕೊಲೇಟ್‌ ಕೇಕ್‌ ಅಷ್ಟೊಂದು ದುಬಾರಿ ತಿಂಡಿಯಲ್ಲ. ಎಲ್ಲೆಡೆ ಸಿಗುತ್ತದೆ ಕೂಡ. ನಿಮ್ಮವರನ್ನು ಪಿಕ್‌ನಿಕ್‌ಗೆ ಕರೆದೊಯ್ದು ಅಲ್ಲಿ ಈ ಚಾಕೊಲೇಟ್‌ ಕೇಕ್‌ ತಿನ್ನಿಸಿ.

 ಸೇತುವೆ ಅಥವಾ ಕಡಲ ತೀರಕ್ಕೆ ಕರೆದೊಯ್ಯಿರಿ

ಸೇತುವೆ ಅಥವಾ ಕಡಲ ತೀರಕ್ಕೆ ಕರೆದೊಯ್ಯಿರಿ

ಮನೆಗೆ ಸಮೀಪದಲ್ಲಿರುವ ಕಡಲ ತೀರಕ್ಕೂ ತೆರಳಬಹುದು. ಕಡಿಮೆ ಬೆಲೆಯ ಪ್ರವೇಶ ಶುಲ್ಕ ಇರುವುದನ್ನು ಆಯ್ಕೆ ಮಾಡಿಕೊಳ್ಳಿ. ಕಾಟೆಜ್‌, ರೂಮ್‌ ಇತ್ಯಾದಿ ಪಡೆಯದೇ ಆರಾಮವಾಗಿ ಕಡಲ ನೀರದ ಸಮೀಪ ಕುಳಿತು ಅಲೆಗಳನ್ನು ವೀಕ್ಷಿಸಿ. ಮನೆಯಿಂದಲೇ ಸ್ವಲ್ಪ ತಿಂಡಿ, ಅಹಾರ ಒಯ್ದಿದ್ದರೆ ಉತ್ತಮ.

ನಿಮ್ಮ ಸ್ವಂತ ಫಾರಂಗೆ ಕರೆದೊಯ್ಯಿರಿ

ನಿಮ್ಮ ಸ್ವಂತ ಫಾರಂಗೆ ಕರೆದೊಯ್ಯಿರಿ

: ಹಣ್ಣುಗಳು ಬೆಳೆವ ಪ್ರದೇಶ ಅಥವಾ ಹಾಲು ಹಾಗೂ ಹಸುಗಳನ್ನು ಸಾಕಿದ ತಾಣ ಇರಬಹುದು. ಈ ರೀತಿ ವಿಶಿಷ್ಟ ಸ್ಥಳಕ್ಕೆ ತೆರಳಿ. ತಾಜಾ ಉತ್ಪನ್ನವನ್ನು ಸವಿಯುವ ಅವಕಾಶ ಒದಗಿ ಬರುತ್ತದೆ.

ಜಿಮ್‌ಗೆ ಬನ್ನಿ

ಜಿಮ್‌ಗೆ ಬನ್ನಿ

ಕೆಲ ಜಿಮ್‌ಗಳು ತಾವು ಹೊಂದಿದ ಸೌಲಭ್ಯ ತೋರಿಸಲು ಉಚಿತ ದಿನದ ಪಾಸು ನೀಡುತ್ತವೆ. ಯೋಗ ಅಥವಾ ಎರೋಬಿಕ್ಸ್‌ ಉಪಯೋಗ ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಈ ಕಲಿಕೆಯನ್ನು ನೀವು ಒಟ್ಟಾಗಿಯೇ ಇದ್ದು ಪಡೆಯಬಹುದು. ಒಂದು ತಾಜಾತನವನ್ನು ಅನುಭವಿಸಲು ಅವಕಾಶ ಆಗುತ್ತದೆ.

ಪುಸ್ತಕ ಓದಿಗೆ ಸಮಯಕೊಡಿ

ಪುಸ್ತಕ ಓದಿಗೆ ಸಮಯಕೊಡಿ

ಸ್ಥಳೀಯ ಲೈಬ್ರರಿ ಅಥವಾ ಪುಸ್ತಕ ಮಳಿಗೆಗೆ ತೆರಳಿ ಕೆಲ ಕಾಲ ಸಮಯ ವಿನಿಯೋಗ ಮಾಡಿ. ನಿಮಗೆ ಇಷ್ಟವಾದ ಪುಸ್ತಕ ಕೊಂಡುಕೊಳ್ಳಿ. ಅಥವಾ ಮ್ಯೂಸಿಕ್‌ ಮಳಿಗೆಗೆ ತೆರಳಿ.

X
Desktop Bottom Promotion