Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಬ್ರೇಕ್ ಅಪ್ ನೋವಿವಿಂದ ಹೊರಬರುವುದು ಹೇಗೆ?
ಬ್ರೇಕ್ ಅಪ್ ಆದ ವ್ಯಕ್ತಿಗೆ ಏನೂ ಚಿಂತೆ ಮಾಡಬೇಡ ಅಂತ ಸುಲಭದಲ್ಲಿ ಸಲಹೆ ನೀಡಬಹುದು. ಆದರೆ ಆ ವ್ಯಕ್ತಿಗೆ ಆ ನೋವಿನಿಂದ ಹೊರಬರುವುದು ಸ್ವಲ್ಪ ಕಷ್ಟದ ವಿಷಯವೇ. ಇದ್ದಕ್ಕಿದ್ದಂತೆ ಆ ವ್ಯಕ್ತಿಯ ಬದುಕೇ ಸಂಪೂರ್ಣ ಬದಲಾಗುತ್ತದೆ.
ಒಬ್ಬ ವ್ಯಕ್ತಿಯನ್ನು ಇಷ್ಟ ಪಟ್ಟು ಆ ವ್ಯಕ್ತಿಯ ಜೊತೆ ಕೊನೆಯವರೆಗೆ ಜೀವನ ನಡೆಸಬೇಕೆಂದು ಬಯಸಿ. ಕೊನೆಗೆ ಇಬ್ಬರಲ್ಲಿ ಹೊಂದಾಣಿಕೆಯಾಗದೆ ಬೇರೆಯಾದರೆ ನಾನು ತಪ್ಪಾದ ವ್ಯಕ್ತಿಯನ್ನು ಪ್ರೀತಿಸಿದೆ ಎಂದು ಮನಸ್ಸಿಗೆ ಬೇಜಾರಾಗಿರುತ್ತದೆ. ಕೆಲವರಂತೂ ತುಂಬಾ ಮಾನಸಿಕ ಅಘಾತಕ್ಕೆ ಒಳಗಾಗಿರುತ್ತಾರೆ.

ನಿಮ್ಮ ಆಪ್ತರು ಈ ರೀತಿಯ ನೋವಿನಲ್ಲಿದ್ದರೆ ಆ ನೋವಿನಿಂದ ಅವರನ್ನು ಹೊರ ಬರುವಂತೆ ನೀವು ಮಾಡಬೇಕು. ಬ್ರೇಕ್ ಅಪ್ ಆದವರು ಅಷ್ಟೇ, ಹಳೆಯ ವಿಷಯಗಳನ್ನು ಮರೆತು ಭವಿಷ್ಯದ ಕುರಿತು ಯೋಚಿಸಬೇಕಾಗುತ್ತದೆ. ಆದರೆ ಹಳೆಯ ನೆನಪುಗಳು ಚಚ್ಚುತ್ತಲೇ ಇರುತ್ತವೆ. ಅದರಿಂದ ಹೊರಬರಲು ಫ್ರೆಂಡ್ಸ್ ಗೆ ಕಾಲ್ ಮಾಡಿ. ಅವರಿಗೆ ನಿಮ್ಮ ಬ್ರೇಕ್ ಅಪ್ ಬಗ್ಗೆ ಹೇಳಿ. ಅವರು ಕೊಡುವ ಸಲಹೆಗಳು ಕೂಡ ಮುರಿದು ಹೋದ ಪ್ರೀತಿಯಿಂದ ಹೊರಬರಲು ಸಹಾಯ ಮಾಡುತ್ತದೆ.
ನಿಮ್ಮ ಮಾಜಿ ಪ್ರೇಮಿ ಕೊಟ್ಟ ಯಾವ ವಸ್ತುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಡಿ. ಅವುಗಳನ್ನು ನೋಡುತ್ತಿದ್ದರೆ ಹಳೆ ನೆನಪು ಮರುಕಳಿಸುತ್ತದೆ. ಸೆಲ್ ನಲ್ಲಿ ಅವನ/ಅವಳ ನಂಬರ್ ಅನ್ನು ಡಿಲೇಟ್ ಮಾಡಿ. ನಿಮ್ಮ ಮಾಜಿ ಪ್ರೇಮಿಯ ಬಗ್ಗೆ ಯಾರಾದರೂ ಏನಾದರೂ ಹೇಳಲು ಬಂದರೆ ಅದರ ಬಗ್ಗೆ ಕೇಳಲು ಆಸಕ್ತಿ ಇಲ್ಲ ಎಂದು ನೇರವಾಗಿ ಹೇಳಿಬಿಡಿ.
ನಿಮ್ಮ ಗುರಿಯೇನು ಅದರತ್ತ ಗಮನಹರಿಸಿ. ಹುಡುಗರಿಗೆ ಒಂದು ಅಭ್ಯಾಸವಿರುತ್ತದೆ. ಬ್ರೇಕ್ ಅಪ್ ಆದರೆ ಕುಡಿತಕ್ಕೆ ಬೀಳುವುದು. ಅಂತಹವರು ಒಂದು ವಿಷಯ ನೆನೆಪಿಟ್ಟುಕೊಳ್ಳಬೇಕು. ನಿಮ್ಮನ್ನು ಬಿಟ್ಟು ಹೋದವಳು ಸುಖವಾಗಿರುತ್ತಾಳೆ. ನೀವು ಮಾತ್ರ ನಿಮ್ಮ ಜೀವನವನ್ನು ನಾಶ ಮಾಡುತ್ತಿರುತ್ತೀರಿ. ಹುಡುಗಿಯರು ಅಷ್ಟೇ ಅವನು ನನಗೆ ಮೋಸ ಮಾಡಿದ ಎಂದು ಕೊರುಗುವ ಬದಲು ನಿಮ್ಮ ಗುರಿಯತ್ತ ಗಮನ ಹರಿಸಿ. ನಿಮ್ಮ ಜೊತೆ ಬಾಳುವ ಯೋಗ್ಯತೆ ಅವನಿಗಿಲ್ಲ ಎಂದು ಭಾವಿಸಿ.
ನಿಮ್ಮನ್ನು ಬಿಟ್ಟು ಹೋದ ವ್ಯಕ್ತಿ ಚೆನ್ನಾಗಿ ಬದುಕುತ್ತಿರುವಾಗ ನಿಮಗೆ ಏಕೆ ಸಾಧ್ಯವಿಲ್ಲ? ಅವರಿಗೂ ನಿಮ್ಮ ಮೇಲೆ ನೀವು ಅವರ ಮೇಲೆ ಇಟ್ಟಷ್ಟೇ ಪ್ರೀತಿಯಿದ್ದಿದ್ದರೆ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇದ್ದಿದ್ದರೆ ನಿಮ್ಮ ಪ್ರೀತಿ ಬ್ರೇಕ್ ಅಪ್ ಆಗುತ್ತಿರಲಿಲ್ಲ ಅಲ್ಲವೇ?
ಬ್ರೇಕ್ ಅಪ್ ಆಯಿತ್ತು ಅಂತ ಚಿಂತೆ ಏಕೆ? ಕಮಾನ್ ಚಿಯರ್ ಅಪ್.



Click it and Unblock the Notifications
