Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನಿಮ್ಮ ಜೋಡಿ ಜೊತೆ ಪಾರ್ಟಿಗೆ ಹೋಗುವುದಾದರೆ ಹುಷಾರ್!
ಲವರ್ ಜೊತೆ ಅಥವಾ ಸಂಗಾತಿ ಜೊತೆ ಪಾರ್ಟಿಗೆ ಹೋಗುವುದಾದರೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು. ನೀವು ನಿಮ್ಮ ಸಂಗಾತಿಯನ್ನು ಪಾರ್ಟಿಗೆ ಕರೆದುಕೊಂಡು ಹೋಗಿ ನೀವು ನಿಮ್ಮದೇ ಲೋಕದಲ್ಲಿ ಇದ್ದರೆ, ಇದರಿಂದಾಗಿ ನಿಮ್ಮ ಸಂಗಾತಿಗೆ ಬೇಜಾರಾಗಬಹುದು. ಹಾಗಂತ ಅವರಿಗೆ ಸ್ವಲ್ಪವೂ ಸ್ವತಂತ್ರ ನೀಡದೆ ಅವರ ಹಿಂದೆ ತಿರುಗುತ್ತಿದ್ದರೆ ಕೂಡ ಅವರಿಗೆ ಕಿರಿಕಿರಿ ಉಂಟಾಗುವುದು.
ಅಲ್ಲದೆ ಪಾರ್ಟಿಯಲ್ಲಿ ಅವರ ಸ್ನೇಹಿತರ ಜೊತೆ ಮಾತನಾಡುವಾಗ ಕೂಡ ಎಚ್ಚರಿಕೆವಹಿಸಿಬೇಕು. ಏಕೆಂದರೆ ಪಾರ್ಟಿ ಮುಗಿಸಿ ಮನೆಗೆ ಬಂದ ಮೇಲೆ ನೀನು ಅಲ್ಲಿ ಹಾಗೆ ಮಾಡಿದೆ, ಹೀಗೆ ಮಾಡಿದೆ ಅಂತ ಹೇಳ ಬಾರದಲ್ಲವೇ
ಜೋಡಿಗಳು ಪಾರ್ಟಿಗೆ ಹೋಗುವುದಾದರೆ ಈ ಕೆಳಗಿನ ರೂಲ್ಸ್ ಗಳನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಪಾರ್ಟಿಯಲ್ಲಿನ ನಿಮ್ಮ ವರ್ತನೆ ನಿಮ್ಮಿಬ್ಬರ ನಡುವೆ ಜಗಳ ತರಬಹುದು.

ಅವರ ಮುಂದೆ ಅವರ ಫ್ರೆಂಡ್ಸ್ ಅನ್ನು ಹೊಗಳಬೇಡಿ
ನಿಮ್ಮ ಲವರ್ ಅಥವಾ ಸಂಗಾತಿಯ ಸ್ನೇಹಿತರನ್ನು ಅವರ ಮುಂದೆ ಹೊಗಳಬೇಡಿ. ನಿನ್ನ ಫ್ರೆಂಡ್ ಚೆನ್ನಾಗಿದ್ದಾಳೆ ಅಂತ ಹೇಳಲು ಹೋಗಬೇಡಿ. ಒಂದು ವೇಳೆ ನೀವು ತಮಾಷೆಗೆ ಹೇಳಿದರು ನಿಮ್ಮ ಗರ್ಲ್ ಫ್ರೆಂಡ್ ಅದರ ಬಗ್ಗೆ ಸೀರಿಯಸ್ ಆಗಿ ತೆಗೆದುಕೊಂಡು ಜಗಳ ತೆಗೆಯಬಹುದು.
ಅವರ ಸ್ನೇಹಿತರನ್ನು ಹುರಿ ದುಂಬಿಸಬೇಡಿ
ಪಾರ್ಟಿಯಲ್ಲಿ ಏನಾದರೂ ಗೇಮ್ ಇದ್ದರೆ ನಿಮ್ಮ ಸಂಗಾತಿಯ ಸ್ನೇಹಿತರನ್ನು ಹುರಿದುಂಬಿಸಬೇಡಿ. ನೀವು ಏನಿದ್ದರೂ ನಿಮ್ಮವರ ಕಡೆಯೇ ನಿಲ್ಲಿ. ಇಲ್ಲದಿದ್ದರೆ ಅದೇ ಕಾರಣಕ್ಕೆ ದೊಡ್ಡ ರಂಪಾಟ ಆಬಹುದು. ಅವರು ಏನಾದರು ಚರ್ಚೆ ನಡೆಸುತ್ತಿದ್ದರೆ ಅವರ ಸ್ನೇಹಿತರು ಸರಿ ಅಂತ ನಿಮಗೆ ಅನಿಸಿದರೂ ಆಗ ಅಲ್ಲಿ ಹೇಳಬೇಡಿ. ಸುಮ್ಮೆನಿದ್ದು ಬಿಡಿ.
ಅತೀ ಕ್ಲೋಸ್ ವರ್ತನೆ ಬೇಡ
ನಿಮ್ಮ ಗರ್ಲ್ ಫ್ರೆಂಡ್ ನ ಸ್ನೇಹಿತೆಯರ ಜೊತೆ ಅಥವಾ ನಿಮ್ಮ ಬಾಯ್ ಫ್ರೆಂಡ್ ನ ಗೆಳೆಯರ ಜೊತೆ ತುಂಬಾ ಕ್ಲೋಸ್ ಆಗಿ ವರ್ತಿಸಬೇಡಿ. ಈ ರೀತಿ ವರ್ತಿಸವುದರಿಂದ ನಿಮ್ಮವರಿಗೆ ನಿಮ್ಮ ಮೇಲೆ ಸಂಶಯ ಬರಬಹುದು. ಪುರುಷರು ಇತರ ಹುಡುಗಿಯರನ್ನು ಸುಮ್ ಸುಮ್ಮನೆ ನೋಡುವುದು, ನಗಾಡುವುದು ಮಾಡಬಾರದು.
ಜಗಳ ಆಡಬೇಡಿ
ನಿಮ್ಮ ಫ್ರೆಂಡ್ಸ್ ಎದುರು ಜಗಳ ಆಡಬೇಡಿ. ನಿಮ್ಮ ಕಾರಣದಿಂದ ಅವರ ಗೆಳೆತನಕ್ಕೆ ಯಾವುದೇ ಬಿರುಕು ಬರದಂತೆ ನೋಡಿಕೊಳ್ಳಬೇಕು.
ನಿಮ್ಮ ವೈಯಕ್ತಿಕ ಜೀವನದಿಂದ ಉದಾಹರಣೆ ನೀಡಬೇಡಿ
ನಿಮ್ಮಿಬ್ಬರ ನಡುವೆ ಇರಬೇಕಾದ ವಿಷಯವನ್ನು ಫ್ರೆಂಡ್ಸ್ ಜೊತೆ ಹೇಳುವುದು ಮಾಡಿದರೆ ನಿಮ್ಮ ಸಂಬಂಧ ದುರ್ಬಲವಾಗಲು ನೀವೇ ಕಾರಣವಾಗುವಿರಿ. ನಿಮ್ಮ ಸಂಗಾತಿಯ ವೀಕ್ ನೆಸ್ ನಿಮ್ಮ ಫ್ರೆಂಡ್ಸ್ ಗೆ ಹೇಳಬೇಡಿ. ಅವರನ್ನು ನಿಮ್ಮ ಸ್ನೇಹಿತರ ಎದುರು ಗೇಲಿ ಮಾಡಬೇಡಿ.



Click it and Unblock the Notifications