Latest Updates
-
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಸಂಗಾತಿ ನಡುವೆ ಸ್ವಾತಂತ್ರ್ಯ ಸಿಗುವುದೇ?
ನಮ್ಮಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ನಾವು ಬೆಲೆ ಕೊಡುವುದು ಸಂಬಂಧಗಳಿಗೆ. ತಂದೆ - ತಾಯಿ, ಗಂಡ - ಹೆಂಡತಿ, ಸಖ - ಸಖಿ ಹೀಗೆ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡರೆ ಮಾತ್ರ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಾಧ್ಯ.ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಅದರಲ್ಲೂ ಗಂಡ- ಹೆಂಡತಿ ಅಥವಾ ಪ್ರೀತಿಸುತ್ತಿರುವ ಹುಡುಗ ಹುಡುಗಿಯರ ನಡುವೆ ಸಾಕಷ್ಟು ಬಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತಿವೆ. ನಾನು ಉತ್ತರ ಆದ್ರೆ ನೀನು ದಕ್ಷಿಣ ಎಂಬಂತೆ ಬದುಕುತ್ತಿದ್ದಾರೆ.
ಆದರೆ ಇಂತಹ ಮನಸ್ತಾಪಗಳು ಏಕೆ ನಮ್ಮ ನಡುವೆ ಹುಟ್ಟಿಕೊಳ್ಳುತ್ತಿವೆ ಎಂಬುದರ ಬಗ್ಗೆ ಅರೆಗಳಿಗೆ ಯೋಚಿಸಿದರೆ ಕಾರಣಗಳು ಸಿಲ್ಲಿ (ಸಾಮಾನ್ಯ) ಎನಿಸಿಬಿಡುತ್ತವೆ. ಹಾಗಾದರೆ ಅಂತಹ ಕಾರಣಗಳು ಏನಿರಬಹುದು? ನಿಜವಾಗಿ ಸಾಧಾರಣ ಎನ್ನಿಸುವ ಕಾರಣಗಳೇ ಆಗಿದ್ದರೆ ಸಂಬಂಧಗಳ ನಡುವೆ ಬಿರುಕನ್ನೇಕೆ ಮೂಡಿಸುತ್ತವೆ? ಉತ್ತರ ಸ್ವಾತಂತ್ರ್ಯದ ಕೊರತೆ !

ಸತೀಶ್ ಮತ್ತು ನಿಶಾ ಗಂಡ ಹೆಂಡತಿಯ ಪಟ್ಟವನ್ನೇರಿ ೨೫ ವರ್ಷಗಳೇ ಕಳೆದಿವೆ. ಹಾಗಾದರೆ ಅವರ ನಡುವೆ ಅದೆಷ್ಟು ಬಾರಿ ಜಗಳ, ಮಾನಸ್ತಾಪಗಳು ಬಂದಿರಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದು ಅಕ್ಷರಶಃ ಸುಳ್ಳು. ಕುಳಿತು ಲೆಕ್ಕಹಾಕಿದರು ಬೆರಳೆಣಿಕೆಯಷ್ಟು ಬಾರಿ ಅಷ್ಟೇನು ದೊಡ್ಡ ವಿಷಯವಲ್ಲವೆಂಬಂತೆ ಬಂದು ಹೋದ ಮಾತುಗಳಷ್ಟೆ! ಇದು ಅಸಾಧ್ಯ ಎನ್ನುವುದಾದರೆ ಅವರ ಯಶಸ್ವಿ ಜೀವನದ ಕಥೆಯನ್ನು ನಿಮ್ಮಮುಂದಿಡುತ್ತೇನೆ.
ಸತೀಶ್ ಮತ್ತು ನಿಶಾ ಪ್ರೀತಿಸಿಯೇ ಮದುವೆಯಾಗಿದ್ದು. ಹಾಗೆಂದ ಮಾತ್ರಕ್ಕೆ ಮನೆಯವರಿಂದ ಧಿಕ್ಕರಿಸಪಟ್ಟವರಲ್ಲ. ಸಮಾನ ವಯಸ್ಕರು. ಸತೀಶ್ ಕೊಂಚ ಜಾಸ್ತಿಯೇ ಎನ್ನುವಂತ ವಿದ್ಯಾವಂತ, ಅದಕ್ಕೆ ತಕ್ಕಂತೆ ದುಡಿಮೆ. ನಿಶಾ ಗೃಹಿಣಿ. ಸಾಮಾನ್ಯವಾಗಿ ಎಲ್ಲ ಹೆಂಗಸರಂತೆ ಆಕೆಯೂ ಮನೆಯಲ್ಲೆ ಸಣ್ಣ ಪುಟ್ಟ ಕೈಂಕರ್ಯಗಳನ್ನು ಮಾಡಿಕೊಂಡು ಇರವವಳು. ಇವರಿಬ್ಬರ ನಡುವೆ ಸಾಮತ್ಯೆಗಳಿಗಿಂತ ವಿಭಿನ್ನತೆಗಳೇ ಹೆಚ್ಚು!
ಆದರೆ ಆಕೆಯನ್ನು ಆತ ಎಷ್ಟು ಪ್ರೀತಿಸುತ್ತಾನೆ ಎನ್ನುವುದಕ್ಕಿಂತ ಅವಳ ಭಾವನೆಗಳನ್ನು ಗೌರವಿಸುತ್ತಾನೆ. ಅವಳು ಹೇಳಿರುವ ಮಾತುಗಳನ್ನೂ ಯೋಚಿಸಿ ಸರಿ ಇದೆ ಎನಿಸಿದರೆ ಕೇಳುತ್ತಾನೆ. ಅವಳೂ ಅವನ ನಿರ್ಧಾರಗಳನ್ನು ಪ್ರಶ್ನಿಸದಿದ್ದರೂ ಅದರ ಸರಿ ತಪ್ಪುಗಳನ್ನು ಅವನಿಂದಲೇ ಯೋಚಿಸುವಂತೆ ಮಾಡುತ್ತಾಳೆ. ತನ್ನ ಸ್ವಾತಂತ್ರ್ಯಕ್ಕೆ ಯಾವುದೇ ಭಂಗಬರದ ರೀತಿಯಲ್ಲಿ ಸಂಬಂಧವನ್ನೂ ಚೆನ್ನಾಗಿ ನಿಭಾಯಿಸುತ್ತಾಳೆ. ಇದು ಸ್ವತಂತ್ರವಾಗಿ ಬದುಕಬೇಕೆನ್ನುವ ಪ್ರತಿಯೊಬ್ಬ ಮಹಿಳೆಗೂ ಸಾಧ್ಯ!
ತನ್ನ ಮಾತೆಗೆ ಬೆಲೆಕೊಡುವುದಿಲ್ಲ, ನನಗೆ ನನ್ನದೇ ಆದ ಸ್ವಾತಂತ್ರ್ಯವಿಲ್ಲ. ಮದುವೆಯಾದ ಮೇಲೆ ನಾನು ನನ್ನ ಸ್ವಂತಿಕೆಯನ್ನು ಕಳೆದುಕೊಂಡಿದ್ದೇನೆ.. ಇಂತಹ ನೂರಾರು ಸಮಸ್ಯೆಗಳು ಸ್ವಾತಂತ್ರ್ಯವನ್ನು ಬಯಸುವ ಸ್ವಾವಲಂಭನೆಯ ಜೀವನವನ್ನು ಎದುರುನೋಡುವ ಮಹಿಳೆಯರನ್ನು ಕಾಣಬಹುದು. ಇದನ್ನು ಕೇವಲ ಸಮಸ್ಯೆಯನ್ನಾಗಿ ಉಳಿಸದೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದೂ ನಮ್ಮ ಕೈಯಲ್ಲಿದೆ. ಜೀವನದಲ್ಲಿ ಜೊತೆಯಾದವನೊಂದಿಗೆ ನಮ್ಮ ಅಭಿಲಾಷೆ, ಸ್ವಆಲೋಚನೆಗಳಿಗಾಗಿ ಜಗಳಾಡುವುದಕ್ಕಿಂತ, ಎಲ್ಲವನ್ನು ಬಿಟ್ಟು ಅವರು ಹೇಳಿದಂತೆಯೇ ಬದುಕುವುದಕ್ಕಿಂತ ಅವರನ್ನು ನಮ್ಮ ಮಾತುಗಳಿಗೆ ಬೆಲೆಕೊಡುವಂತೆ ಮಾಡುವುದು ಒಳಿತು.
ಸ್ವತಂತ್ರವಾಗಿ ಬದುಕುವುದು ಹೇಗೆ ?
ನಮ್ಮ ಬಾಲ್ಯದಲ್ಲಿ ತಂದೆ ತಾಯಿಯರೊಂದಿಗೆ ಕಳೆದ ದಿನಕ್ಕಿಂತ ಸಂಗಾತಿಯ ಜೊತೆ ಕಳೆಯುತ್ತಿರುವ ದಿನಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಆದರೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವಷ್ಟನ್ನಾದರೂ ಕಲಿತಿರುತ್ತೇವೆಯಲ್ಲವೇ ?
ಆದರೆ ಮದುವೆಯಾದ ಮೇಲೆ ನಾವೇಕೆ ಅದನ್ನೆಲ್ಲಾ ಮರೆತವರಂತೆ ಇರಬೇಕು? ಇದಕ್ಕೆ ನಿಮ್ಮಲ್ಲಿಯೇ ಉತ್ತರವಿದೆ. ಸಂಗಾತಿ ನಿಮ್ಮ ಮಾತನ್ನು ಕೇಳುವುದೇ ಇಲ್ಲ ಎಂದು ಕೊರಗುವುದಕ್ಕಿಂತ ಅವರು ನಿಮ್ಮ ಅಭಿಪ್ರಾಯವನ್ನು ಕೇಳುವಂತೆ ಮಾಡಿ. ಅವರು ಹೋದ ದಾರಿಯಲ್ಲೇ ನೀವು ನಡೆದು ಅವರ ತಪ್ಪು ಅವರಿಗೆ ಅರಿವಾಗುವಂತೆ ಮಾಡಿ.
ತಾಳ್ಮೆ ನಿಮ್ಮ ಶಕ್ತಿಯಾಗಿರಲಿ :
ನಿಮ್ಮ ಮಾತು ಒಮ್ಮೆ ಕೇಳಲಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ಎಗರಾಡುವುದು, ಸಿಟ್ಟು ಮಾಡಿಕೊಳ್ಳುವುದು ಇಂತಹ ಮುಂಗೋಪಗಳನ್ನು ತೋರಿಸದೆ ನಿವೆಷ್ಟು ಸರಿ ಎನ್ನುವುದು ಅವರಿಗೆ ಮನವರಿಕೆಯಾಗುವವರೆಗೂ ತಾಳ್ಮೆ ನಿಮ್ಮಲ್ಲಿರಲಿ. ಒಮ್ಮೆ ತಪ್ಪಿಹೋದ ಅವಕಾಶ ಬೇರೆಂದು ರೀತಿಯಲ್ಲಾದರೂ ದೊರಕುತ್ತದೆ ಎಂಬ ಸೂತ್ರವನ್ನು ನಂಬಿದರೆ ನಿಮ್ಮ ನಿರೀಕ್ಷೆಗಳು ಹುಸಿಯಾಗಿವ ಸಾಧ್ಯತೆಗಳೇ ಇಲ್ಲ!
ಸ್ವಾವಲಂಬಿಗಳಾಗಿ :
ನಗರ ಪ್ರದೇಶಗಳಲ್ಲಿ ಜೀವನ ನಡೆಸುತ್ತಿರುವ ದಂಪತಿಗಳಿಗೆ ಶಾಪಿಂಗ್ ಶೋಕಿ ಸಾಮಾನ್ಯ. ಅದರಲ್ಲೂ ಹೆಂಗಸರು ತಮ್ಮ ಅಮೂಲ್ಯ ಸಮಯವನ್ನು ಅದಕ್ಕಾಗಿಯೇ ಮೀಸಲಿಡುತ್ತಾರೆ ! ಬಹಳಷ್ಟು ಸಲ ನಮಗೆ ತುಂಬಾ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲಾಗದೆ ಪರಿತಪಿಸುತ್ತೇವೆ. ಇದಕ್ಕೆ ಕಾರಣ, ಗಂಡನಿಗೆ ಪುರುಸೊತ್ತಿಲ್ಲದೇ ಇರುವುದು. ನೀವು ಅವರ ಮೇಲೆ ಅವಲಂಬಿತರಾಗಿದ್ದರೆ ನಿಮಗೆ ನಿರಾಶೆಗಳೇ ಜಾಸ್ತಿ. ಅದರ ಬದಲು ನೀವೇ ವಸ್ತುಗಳನ್ನು ಖರೀದಿಸುವುದಕ್ಕೆ ಹೋಗಿ. ಅಲ್ಲಿನ ಹಣಕಾಸಿನ ವ್ಯವಹಾರಗಳು ನಿಮ್ಮನ್ನು ಇನ್ನಷ್ಟು ಗಟ್ಟಿಗರನ್ನಾಗಿ ಮಾಡುತ್ತವೆ.
ಏಕಾಂತಕ್ಕೂ ಸಮಯ ಕೊಡಿ:
ದಿನದ ಅತೀ ಹೆಚ್ಚು ಸಮಯವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯುತ್ತಿರಿ. ಆದರೂ ನಿಮಗೆ ಬೇಕಾದ ಸ್ಥಳಕ್ಕೆ ಅಥವಾ ಸಮಾರಂಭಗಳಿಗೆ ಹೋಗುವುದಕ್ಕೆ ಅವರು ಜೊತೆಗೆ ಬರದಿದ್ದರೆ ನಿಮ್ಮ ಸ್ವಂತಿಕೆಗೆ ಧಕ್ಕೆ ಉಂಟಾಗಬಹುದು. ನೀವು ಎಲ್ಲಿಗೇ ಹೋಗಬೇಕಾದರೂ ಅವರು ಜೊತೆಯಲ್ಲೇ ಬರಬೇಕು ಎಂಬ ನಿಮ್ಮ ಅತಿಯಾದ ಅವಲಂಬನೆಯೇ ನಿಮ್ಮ ಅಸಮಾಧಾನಕ್ಕೆ ಕಾರಣ. ವರ್ಷಕ್ಕೊಮ್ಮೆಯಾದರೂ ನಿಮ್ಮ ಸ್ನೇಹಿತರೊಂದಿಗೆ ಅಥವಾ ನೀವೇ ಸ್ವತಃ ಬೇರೆಲ್ಲಾದರೂ ಟ್ರಿಪ್ / ಪಿಕ್ನಿಕ್ ಹೋಗಿ ಬನ್ನಿ. ಇದರಿಂದ ನಿಮ್ಮ ಮನಸ್ಸಿನಲ್ಲಿರುವ ಖಿನ್ನತೆ ದೂರವಾಗಿ ಧೈರ್ಯವೂ ಮೂಡುತ್ತದೆ. ಅವಲಂಬನೆಯ ಭಾವನೆಗಳೂ ದೂರವಾಗಲು ಸಹಾಯವಾಗಿತ್ತದೆ.
ಸದಾ ಹೊಸತನ್ನು ಮೈಗೂಡಿಸಿಕೊಳ್ಳಿ:
ಕಲಿಕೆಗೆ ಕೊನೆಯೆಂಬುದಿಲ್ಲ. ನಿಮ್ಮ ಸಂಗಾತಿಗಿಂತ ಕಡಿಮೆ ಕಲಿತವರಾಗಿದ್ದರೆ ನೀವು ಅವರನ್ನು ಹೆಚ್ಚು ಅವಲಂಬಿಸಿರುವ ಸಾಧ್ಯತೆಗಳಿವೆ. ಮಾಧ್ಯಮಗಳಿಂದ ಅಥವಾ ಬೇರೆಯಾವುದೇ ಮೂಲಗಳಿಂದ ಹೊಸವಿಷಯಗಳ ಬಗ್ಗೆ ತಿಳಿದುಕೊಳ್ಳಿ. ನಿಮ್ಮದೇ ಆದ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಇದರೆ ಬಗ್ಗೆ ನಿಮ್ಮ ಸಂಗಾತಿ ಪ್ರಶ್ನಿಸಿದರೂ ನೀವು ಸರಿ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಸಾಮರ್ಥ್ಯ ಬೆಳೆಸಿಕೊಳ್ಳಿ.
ನಿಮ್ಮ ಮಕ್ಕಳ ಕಲಿಕೆಗೆ ಸಹಾಯಮಾಡಿ:
ಹಿಂದಿನ ಶಾಲೆ ಕಾಲೇಜುಗಳ ಕಲಿಕೆಗಳಿಗೂ ಇಂದಿನ ಕಲಿಕೆಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಸಾಕಷ್ಟು ಹಣದ ಅಗತ್ಯವಿದೆ. ಈ ಹಣವನ್ನು ಭರಿಸುವವರು ನಿಮ್ಮ ಯಜಮಾನರೇ ಆಗಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಣವೊಂದರಿಂದಲೇ ಮಕ್ಕಳ ಕಲಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಮಾಡಿಕೊಡುವ ಊಟ ಉಪಚಾರಗಳನ್ನು ಹೊರತುಪಡಿಸಿ, ಅವರು ಹೊರಗಿನ ಪ್ರಪಂಚದಲ್ಲಿ ಹೇಗಿರಬೇಕು ಎಂಬುದನ್ನು ಅವರಿಗೆ ತಿಳಿಸಿಕೊಡಿ. ಇದರಿಂದಾಗಿ ನಿಮ್ಮಲ್ಲಿ ಇನ್ನಷ್ಟು ಆತ್ನವಿಶ್ವಾಸ ಮೂಡುತ್ತದೆ. ಮಕ್ಕಳೊಂದಿಗೆ ಆಗಾಗ ಅವರ ಶಾಲೆಗಳಿಗೆ ಭೇಟಿ ನೀಡಿ ನಿಮ್ಮ ಇರುವಿಕೆಯನ್ನು ತೋರಿಸಿ.
"ನಿಮ್ಮ ರೆಕ್ಕೆಯನ್ನು ಬಿಚ್ಚಿ ಹಾರುವವರೆಗೂ ನಿಮ್ಮ ಹಾರುವ ಸಾಮರ್ಥ್ಯ ಎಷ್ಟೆಂದು ಗೊತ್ತಾಗುವುದಿಲ್ಲ" ಎಂಬ ಮಾತಿನಂತೆ ಯಾವುದೇ ಬಿನ್ನಾಭಿಪ್ರಾಯಗಳಿಲ್ಲದೇ ನಿಮ್ಮ ಸ್ವಂತಿಕೆಯನ್ನೂ ಉಳಿಸಿಕೊಂಡು ಸಂಬಂಧಗಳಲ್ಲಿ ಸ್ವಚ್ಛಂಧತೆಯನ್ನು ಉಳಿಸಿಕೊಳ್ಳುವುದು ಗೃಹಿಣಿಯಾದ ನಿಮ್ಮಕೈಯಲ್ಲಿಯೇ ಇದೆ!



Click it and Unblock the Notifications











