Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವೈವಾಹಿಕ ಜೀವನವನ್ನು ಪ್ರಲೋಭನೆಗಳಿಂದ ರಕ್ಷಿಸಿಕೊಳ್ಳಿ
ಪ್ರಲೋಭನೆಗಳನ್ನು ಸರಿಯಾದ ಸಮಯದಲ್ಲಿ ಹತ್ತಿಕ್ಕದಿದ್ದರೆ ಇವು ಅನೈತಿಕ ಸಂಬಂಧಕ್ಕೆ ಎಡೆಮಾಡಿಕೊಡುತ್ತವೆ. ನೀವು, ಹೀಗೆಲ್ಲ ಏನೂ ಆಗುವುದಿಲ್ಲ ಎಂದು ಇದನ್ನು ಕಡೆಗಣಿಸಬಹುದು ಆದರೆ ಎಲ್ಲಾ ಅನೈತಿಕ ಸಂಬಂಧಗಳ ಆರಂಭ ಹೀಗೆಯೇ ಆಗಿರುತ್ತದೆ. ಸಣ್ಣ ಪುಟ್ಟ ಚೆಲ್ಲಾಟ ಸರಸಗಳು ಮುಂದೆ ದಾರಿ ತಪ್ಪಿಸುತ್ತವೆ.
ನಿಮ್ಮ ಮದುವೆ ಆದ ನಂತರ ನೀವು ನಿಮ್ಮ ಸುತ್ತ ಗೋಡೆಗಳನ್ನು ಕಟ್ಟಿಕೊಳ್ಳಬೇಕು. ನಿಮ್ಮ ಮದುವೆಯ ಸಂಬಂಧ ಸುಭದ್ರವಾದ ಕೋಟೆಯ ಒಳಗೆ ಇರಬೇಕು, ನಿಮ್ಮ ಸಂಸಾರಕ್ಕೆ ಬೇಕಾಗುವ ನಿಯಮಗಳ ನಡುವೆ ನೀವಿರಬೇಕು. ಅದರ ಒಳಗೆ ನೀವು, ನಿಮ್ಮ ಸಂಗಾತಿ ಮಕ್ಕಳು ಮತ್ತು ದೇವರಿಗಷ್ಟೇ ಅನುಮತಿ ಇರಬೇಕು. ಇಂತಹ ಗೋಡೆಗಳು ನಿಮ್ಮನ್ನು ನಿಮ್ಮ ಸಂಸಾರ ಹಾಳು ಮಾಡಬೇಕೆನ್ನುವ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತವೆ.
ನೀವು ನಿಮ್ಮ ಮದುವೆಯ ನಂತರ ಪಾಲಿಸಬೇಕಾದ ಅಥವಾ ಪಾಲಿಸಬಹುದಾದ ಕೆಲವು ನಿಯಮಗಳು ಇಲ್ಲಿವೆ. ನೀವು ನಿಮ್ಮ ಹೆಂಡತಿ ಸೇರಿಕೊಂಡೇ ಇಬ್ಬರಿಗೂ ಬೇಕಾದಂತಹ ನಿಯಮಗಳನ್ನು ರಚಿಸಿಕೊಳ್ಳಿ.

ಹಂತಗಳು:
1. ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ. ನೀವು ನಿಮ್ಮ ಸಂಸಾರದಲ್ಲಿ ಸುಖವಾಗಿದ್ದರೂ ಸಂಸಾರದ ಹೊರಗಿನ ಮಂದಿಗೆ ನೀವು ಅಕರ್ಷಿತರಾಗುವುದು ಬಹಳ ಸಹಜ. ಆದರೆ ನೀವು ನಿಮ್ಮ ಭಾವನೆಗಳ ಪ್ರಕಾರ ನಡೆದುಕೊಳ್ಳಲು ಆರಂಭಿಸಿದರೆ ಸಮಸ್ಯೆಗಳು ಆರಂಭವಾಗುತ್ತವೆ. ಆಕರ್ಷಣೆಯಿಂದ ಅನೈತಿಕ ಸಂಬಂಧಗಳು ಆರಂಭವಾಗುತ್ತವೆ, ಇದು ಅವಕಾಶಕ್ಕಾಗಿ ನೀವು ಕಾಯುವಂತೆ ಮಾಡುತ್ತದೆ. ಹಾಗೂ ನೀವು ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದಲ್ಲಿ ಇದು ನಿಮ್ಮ ಸಂಸಾರದಲ್ಲಿ ಕಂದಕಗಳನ್ನು ಸೃಷ್ಟಿಸುತ್ತದೆ.
2. ನಿಮ್ಮನ್ನು ನೀವು ಇನ್ನೊಂದು ವ್ಯಕ್ತಿಯ ಜೊತೆಗೆ ಇರುವಂತೆ ಎಂದೂ ಕಲ್ಪಿಸಿಕೊಳ್ಳಬೇಡಿ. ಯೋಚನೆಗಳೇ ಕೃತಿಗೆ ಮೂಲಕಾರಣ ಎಂದು ನೆನಪಿಡಿ.
3. ಇತರರ ಜೊತೆ ಚೆಲ್ಲಾಟ ಆಡಬೇಡಿ ಇದು ನಿಮ್ಮಲ್ಲೂ ಆಸಕ್ತಿ ಇದೆ ಎಂದು ತೋರಿಸಿ ಕೊಡುತ್ತದೆ.
4. ಅಪಾಯಕಾರಿ ಸನ್ನಿವೇಶಗಳಿಂದ ದೂರವಿರಿ. ಇದರಿಂದಾಗಿ ಆಕರ್ಷಣೆ ಸಹಜ.
5. ಎಂದಿಗೂ ನಿಮ್ಮ ವಿರುದ್ಧ ಲಿಂಗದ ವ್ಯಕ್ತಿಯ ಜೊತೆಗೆ ಏಕಾಂತದಲ್ಲಿ ಭೋಜನ ಮಾಡಬೇಡಿ ಅಥವಾ ಬೇರೆ ಯಾವುದೇ ಸನ್ನಿವೇಶದಲ್ಲಿ ಏಕಾಂತರಾಗಿರದ ಹಾಗೆ ಎಚ್ಚರಿಕೆ ವಹಿಸಿ. ಉದಾಹರಣೆಗೆ: ನಿಮ್ಮ ಸಂಗಾತಿ ಮನೆಯಲ್ಲಿಲ್ಲದಾಗ ಯಾವುದೇ ವಿರುದ್ಧ ಲಿಂಗದ ವ್ಯಕ್ತಿಗಳನ್ನು ಮನೆಗೆ ಕರೆಯಬೇಡಿ.
6. ವಿರುದ್ಧ ಲಿಂಗದ ವ್ಯಕ್ತಿಗಳ ಜೊತೆಗೆ ಯಾವುದೇ ಅನ್ಯೋನ್ಯ ವಿಷಯಗಳನ್ನು ಚರ್ಚಿಸದಿರಿ. ಉದಾಹರಣೆಗೆ ನೀವು ನಿಮ್ಮ ಸಂಗಾತಿಯ ಜೊತೆಗಿನ ದೈಹಿಕ ಸಂಬಂಧದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಇದನ್ನು ಹೊರಗಿನವರೊಂದಿಗೆ ಎಂದೂ ಮಾತನಾಡಬೇಡಿ.
7. ಸಾಮಾನ್ಯ ಗೆಳೆಯರನ್ನು ಹೊಂದಿ: ಉದಾಹರಣೆಗೆ ಗಂಡನ ಒಬ್ಬ ಗೆಳತಿ ಹೆಂಡತಿಗೆ ಇಷ್ಟವಿಲ್ಲದಿದ್ದಾಗ ಅವಳು ನನ್ನ ಗೆಳತಿ ಎಂದು ಅನ್ಯೋನ್ಯ ಸಂಬಂಧ ಹೊಂದಬೇಡಿ. ನಿಮ್ಮ ವೈವಾಹಿಕ ಸಂಬಂಧ ಗೆಳೆತನಕ್ಕಿಂತ ಬಹಳ ಮುಖ್ಯ.
8. ನಿಮ್ಮ ಗೆಳೆತನದ ಬಗ್ಗೆ ನಿಮ್ಮ ಸಂಗಾತಿಯ ಬಳಿ ಮುಕ್ತ ಭಾವದಿಂದ ಚರ್ಚಿಸಿ. ಮುಕ್ತವಾಗಿ ನಿಮ್ಮ ಸಂಗಾತಿಯ ಜೊತೆಗೆ ಮಾತನಾಡುವುದು ಸಂಬಂಧ ಬಹಳ ಕಾಲದವರೆಗೆ ಗಟ್ಟಿಯಾಗಿರಲು ಸಹಕಾರಿ.
9. ನಿಮ್ಮ ಗೆಳೆಯರು ಮತ್ತು ಸಂಬಂಧಿಕರಿಂದ ನಿಮ್ಮ ಸಂಬಂಧ ಗಟ್ಟಿಯಾಗಿರಲು ಬೇಕಾದ ಸಹಾಯವನ್ನು ಪಡೆಯಿರಿ. ವಿವಾಹಿತ ಗೆಳೆಯರನ್ನು ಹೊಂದುವುದು ಪ್ರಲೋಭನೆಗಳಿಂದ ಹೊರಗಿರಲು ಬಹಳ ಸಹಕಾರಿ. ಆಗ ನೀವು ಅವರೆಡೆಗೆ ಆಕರ್ಷಿತರಾಗುವ ಸಾಧ್ಯತೆಗಳು ಕಡಿಮೆ. ವೈವಾಹಿಕ ಜೀವನದ ಮೇಲೆ ಪ್ರಭಾವಿಸದ ಆದರೆ ನಿಮ್ಮ ಸಂಬಂಧ ಗಟ್ಟಿಯಾಗಿರಲು ನೆರವಾಗುವ ಗೆಳೆತನ ಬಹಳ ಅಗತ್ಯ.



Click it and Unblock the Notifications
