Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೋಸ ಮಾಡುವ ಸಂಗಾತಿ ಜೊತೆ ವ್ಯವಹರಿಸುವುದು ಹೇಗೆ?

ಹಂತಗಳು:
1. ಸಾಧ್ಯತೆಗಳನ್ನು ಸ್ವೀಕರಿಸಿ. ನಿಮ್ಮ ಸಂಗಾತಿ ನಿಜವಾಗಿಯೂ ಮೋಸ ಮಾಡುತ್ತಿದ್ದಾರಾ ಅಥವಾ ಇದು ಕೇವಲ ನಿಮ್ಮ ಭ್ರಮೆಯಾ ಎಂಬುದನ್ನು ಖಾತರಿಪಡಿಸಿಕೊಳ್ಳಿ. ನಿಮಗೆ ನೀವು ಮೋಸ ಹೋಗುತ್ತಿದ್ದೀರಿ ಎಂಬುದು ತಡವಾಗಿ ಅರಿವಿಗೆ ಬಂದರೆ ಮುಂದೇನು ಮಾಡಬೇಕೆಂದು ತಾಳ್ಮೆಯಿಂದ ಯೋಚಿಸಿ(ದುಡುಕಿ ಪ್ರಯೋಜನವಿಲ್ಲ).
2. ಅನುಮಾನಾಸ್ಪದ ನಡವಳಿಕೆಗಳನ್ನು ಗಮನಿಸಿ. ತಮ್ಮ ಫೋನ್ ಅನ್ನು ನಿಮ್ಮಿಂದ ಮುಚ್ಚಿಡುವ ಪ್ರಯತ್ನ ಮಾಡಬಹುದು ಅಥವಾ ನೀವು ಖಾಸಗಿ ಪ್ರಶ್ನೆ ಕೇಳದಂತೆ ಮುನ್ನೆಚ್ಚರಿಕೆ ವಹಿಸಿ - ಮುಖ್ಯವಾದದ್ದು ಏನೂ ಇಲ್ಲ ಅನ್ನುವ ರೀತಿಯಲ್ಲಿ ಮಾತನಾಡುವುದನ್ನು ನೀವು ಗಮನಿಸಬಹುದು.
3. ನಿಮ್ಮ ಸಂಗಾತಿ ಅತಿಯಾದ ಚಿಂತೆಯಿಂದ ಬಳಲುತ್ತ ಹಲುಬುತ್ತಿದ್ದರೆ ಎಚ್ಚರಿಕೆ ತೆಗೆದುಕೊಳ್ಳಿ. ಅದರಲ್ಲೂ ಮುಖ್ಯವಾಗಿ ಮುಂಚಿನಂತೆ ನಿಮ್ಮ ಕಾಳಜಿ ವಹಿಸುತ್ತಿಲ್ಲವೆಂದರೆ ಹೆಚ್ಚು ಜಾಗ್ರತರಾಗಿ. ನಿಮ್ಮ ಬಳಿಯಲ್ಲಿ ಅತಿ ಹೆಚ್ಚೆಚ್ಚು ಸಲಿಗೆಯಿರುವಂತೆ ಪ್ರಯತ್ನಿಸಿದರೆ ಅಥವಾ ನಿಮ್ಮ ಪಾಲಿಗೆ ಕೇವಲ ಒಳ್ಳೆಯವರಂತೆ ನಡೆದುಕೊಂಡರೆ ಎಚ್ಚರವಿರಲಿ. ಇದು ಅವರ ಅಪರಾಧಿ ಪ್ರಜ್ನೆಯ ಪರಿಣಾಮವಾಗಿರುತ್ತದೆ. ಒಪ್ಪಿತವಲ್ಲದ ನಡವಳಿಕೆಯನ್ನು ಸರಿಮಾಡಿಕೊಳ್ಳಲು ಅವರ ಈ ರೀತಿ ವರ್ತಿಸುತ್ತಾರೆ. ಅವರ ಬದುಕಿನ ಬಗ್ಗೆ ಪ್ರಶ್ನೆ ಕೇಳುವುದು ಅವರಿಗೂ ಇಷ್ಟವಿರುವುದಿಲ್ಲ. ತಮ್ಮ ಬದುಕಿನ ಬಗ್ಗೆ ರಹಸ್ಯ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಮ್ಮೊಂದಿಗೆ ಒಳ್ಳೆಯವರಾಗಿದ್ದಷ್ಟು ನಿಮ್ಮ ಮನಸ್ಸನ್ನು ಸೈಂತಸಿ, ಅವರ ಅಕ್ರಮ ಭಾವನೆಗಳನ್ನು ನೀವು ಗಮನಿಸುವುದಿಲ್ಲ ಎಂದು ಭಾವಿಸುತ್ತಾರೆ.
4. ನಿಮ್ಮ ಸಂಗಾತಿಯಿಂದ ನೀವು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕುತೂಹಲಭರಿತರಾಗಿದ್ದರೆ ಅವರ ಮೊಬೈಲ್ ಫೋನ್ ಅಕೌಂಟಿನ ಆನ್ ಲೈನ್ ಈಮೇಲ್ ಪಡೆದುಕೊಂಡು ಪರಿಶೀಲಿಸಬಹುದು. ನಂತರ ಅವರಿಗೆ ಪ್ರಶ್ನಿಸಿ ಸುಳ್ಳು ಹೇಳುತ್ತಿದ್ದಾರಾ ಇಲ್ಲವಾ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಒಂದಂತೂ ಸತ್ಯ: ಯಾವುದೇ ಒಂದು ವಿಷಯದ ಬಗ್ಗೆ ಸುಳ್ಳು ಹೇಳುವವರು ಉಳಿದ ವಿಷಯಗಳಲ್ಲೂ ಸುಲಭವಾಗಿ ಸುಳ್ಳು ಹೇಳಬಲ್ಲರು.
ಸಲಹೆಗಳು:
ನಿಮ್ಮ ಸಂಗಾತಿಯ ಮೊಬೈಲ್ ಪಡೆದುಕೊಂಡು ಕೆಲವೇ ನಿಮಿಷಗಳಲ್ಲಿ ನಿಮಗೆ ಅಪರಿಚಿತವೆನಿಸುವ ಒಂದು ಅಥವಾ ಎರಡು ನಂಬರ್ ಗಳನ್ನು ತೆಗೆದುಕೊಂಡು ಬೇರೆ ಮೊಬೈಲ್ ನಂಬರಿನಿಂದ ಕಾಲ್ ಮಾಡಿ ಯಾರು ಉತ್ತರಿಸುತ್ತಾರೆ ಎಂಬುದನ್ನು ನೋಡಬಹುದು. ಅಥವಾ ಇದಕ್ಕಿಂತ ಮಿಗಿಲಾಗಿ ಯಾವ ನಂಬರ್ ಗೆ ಹೆಸರು ಸೇರಿಸಲ್ಪಟ್ಟಿಲ್ಲವೋ ಕೇವಲ ನಂಬರ್ ಮಾತ್ರ ಇದೆಯೋ ಅಂಥದ್ದನ್ನೂ ಗಮನಿಸಬಹುದು.
ಎಚ್ಚರಿಕೆಗಳು:
ಹೊಟ್ಟೆಕಿಚ್ಚಿನ ವರ್ತನೆ ತೋರಿಸಬೇಡಿ. ನೀವು ಅವರ ನಡವಳಿಕೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೀರಿ ಎಂಬುದು ಅವರ ಗಮನಕ್ಕೆ ಬರುವುದು ಬೇಡ. ಅಸಹಜ ವರ್ತನೆಗೆ ಎಡೆಮಾಡಿಕೊಡಬೇಡಿ.
ಮೊದಮೊದಲು ಉಚಿತವಾದ ನೈಜ ಪ್ರಶ್ನೆಗಳನ್ನೇ ಕೇಳಿ.
ಸಂಗಾತಿಯೊಂದಿಗೆ ಮಾತನಾಡುವಾಗ ಹೆಚ್ಚು ಕುತೂಹಲ ತೋರಿಸುವುದು ಬೇಡ. ಇದರಿಂದ ನೀವೇ ಅವರ ದಾರಿ ತಪ್ಪಿಸಿದಂತಾಗಬಹುದು.



Click it and Unblock the Notifications
