Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ನಿಮ್ಮ ವೃದ್ಧ ಪೋಷಕರ ಕಾಳಜಿ ವಹಿಸುವುದು ಹೇಗೆ?

ಈ ಎಲ್ಲ ಲಕ್ಷಣಗಳು ಅವರು ಸಹಾಯ ಬಯಸುತ್ತಿದ್ದಾರೆ ಎಂಬುದನ್ನು ತೋರಿಸುತ್ತವೆ. ವ್ರದ್ದ ಪೋಷಕರ ಕಾಳಜಿ ವಹಿಸುವುದು ಸುಲಭವಾದ ಕೆಲಸವಲ್ಲ. ಹತ್ತಾರು ಕೆಲಸಗಳನ್ನು ಏಕಕಾಲಕ್ಕೆ ನಿಭಾಯಿಸಬೇಕು ಮತ್ತು ಮನೆಗೆಲಸವನ್ನೂ ಪೂರೈಸಬೇಕು. ಆದರೆ ನಿಮ್ಮ ಕೆಲಸವನ್ನು ಸುಲಭಗೊಳಿಸಲು ಇಲ್ಲಿ ಕೆಲವೊಂದು ಸೂತ್ರಗಳಿವೆ. ಕೆಳಗೆ ನೀಡಲಾದ ಕೆಲವೊಂದು ಹಂತಗಳು ನಿಮ್ಮ ವೃದ್ದ ಪೋಷಕರನ್ನು ಕಾಳಜಿ ಮಾಡುವ ಕೆಲಸವನ್ನು ಸುಲಭಗೊಳಿಸಬಹುದು.
ಹಂತಗಳು:
1. ಪೋಷಕರೊಂದಿಗೆ ಉತ್ತಮ ಸಂವಹನ ನಡೆಸಿ. ಹಿರಿಯರು ಭಾವುಕರಾಗುವ ಕ್ಷಣಗಳ ಹೆಚ್ಚು. ಹೀಗಾಗಿ ಅವರೊಂದಿಗೆ ಮಾತನಾಡಿ ಮತ್ತು ಅವರ ಸ್ಥಿತಿಯಲ್ಲಿ ಹಿತವಾಗಿರುವಂತೆ ನೋಡಿಕೊಳ್ಳಿ. ಸ್ವಲ್ಪಮಟ್ಟಿಗೆ ಪ್ರತಿರೋಧವೆನಿಸಿದರೂ ಕೂಡ ಮಕ್ಕಳಾದವರು ತಂದೆ ತಾಯಿಯರ ಪಾತ್ರ ನಿಭಾಯಿಸಲೇಬೇಕು.
2. ವೈದ್ಯರನ್ನು ಭೇಟಿಯಾಗುವಾಗ ಜೊತೆಯಲ್ಲಿಯೇ ಇರಿ. ಇದು ಹೆತ್ತವರ ಮನಸ್ಸಿಗೆ ಒಂದಷ್ಟು ನೆಮ್ಮದಿ ನೀಡುತ್ತದೆ.ವೈದ್ಯರನ್ನು ಭೇಟಿಯಾಗುವಾಗ ಯಾರಾದರೊಬ್ಬರು ಜೊತೆಯಲ್ಲಿದ್ದರೆ ಸಹಾಯವಾಗುತ್ತದೆ. ಅವರ ಆರೋಗ್ಯ ಲಕ್ಷಣ ಮತ್ತು ಚಿಕಿತ್ಸೆಗಳ ಬಗ್ಗೆ ನಿಮಗೂ ಮಾಹಿತಿ ದೊರೆಯುತ್ತದೆ.
3. ನಿಮ್ಮ ಪೋಷಕರಿಗಾಗಿ ನಿಗದಿತ ಕಾರ್ಯಸೂಚಿಯನ್ನು ತಯಾರು ಮಾಡಿ. ಅವರ ಭೇಟಿಯ ಸಮಯಗಳನ್ನು ಪಟ್ಟಿಯೊಂದರಲ್ಲಿ ಅಥವಾ ಕ್ಯಾಲೆಂಡರ್ ನಲ್ಲಿ ಬರೆದಿಡಿ. ಸಮಯಕ್ಕೆ ಸರಿಯಾಗಿ ತಮ್ಮ ಕೆಲಸ ಪೂರೈಸಲು ಇದು ನೆರವಾಗಬಹುದು.
4. ಪೋಷಕರೊಂದಿಗೆ ಸಮಯ ಕಳೆಯಿರಿ. ನೀವು ಅದೆಷ್ಟೇ ಗಡಿಬಿಡಿಯಲ್ಲಿದ್ದರೂ ಸ್ವಲ್ಪ ಸಮಯವನ್ನು ಹೆತ್ತವರಿಗೆ ತೆಗೆದಿರಿಸಲು ಪ್ರಯತ್ನಿಸಿ. ಅವರೊಂದಿಗೆ ನೀವು ಆಡಬಹುದು ಇಲ್ಲವೇ ವಾಕಿಂಗ್ ಹೊರಡಬಹುದು.ಇದು ಸಂಬಂಧಗಳ ಬಂಧವನ್ನು ಗಟ್ಟಿಗೊಳಿಸುತ್ತದೆ.
5. ಹೆತ್ತವರಿಗೆ ಮುಕ್ತ ಅವಕಾಶ ಕಲ್ಪಿಸಿ. ಪ್ರತ್ಯೇಕ ಕೋಣೆಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸದರೆ ಪೋಷಕರ ಏಕಾಂತಕ್ಕೂ ಬೆಲೆ ನೀಡಿದಂತಾಗುತ್ತದೆ. ಅವರು ಕೇಳಿದಾಗಲಷ್ಟೇ ಒತ್ತಾಸೆಯಾಗಿ ನೆರವು ನೀಡಿ.
6. ಕಾಳಜಿ ವಹಿಸುವವರನ್ನು ನೇಮಿಸಿ. ಕಾಳಜಿ ವಹಿಸುವವರನ್ನು ನೇಮಿಸಿಕೊಂಡರೆ ನಿಮಗೂ ನಿಮ್ಮ ವ್ರದ್ದ ತಂದೆ ತಾಯಿಗಳ ಬದುಕು ಕೊಂಚ ಸಲೀಸಾಗುತ್ತದೆ. ಅಧಿಕೃತವಾಗಿ ಪರವಾನಗಿ ಪಡೆದಿರುವ ಹಲವಾರು ಹೋಮ್ ಕೇರ್ ಸರ್ವೀಸ್ ಗಳು ಲಭ್ಯವಿವೆ. 24/7 ಸೇವೆ ನೀಡುವ ಇವು ನಿಮಗೂ ನಿಮ್ಮ ವಯಸ್ಸಾದ ಹೆತ್ತವರಿಗೂ ಕಾಳಜಿಯುತ ಸೇವೆ ನೀಡುತ್ತವೆ. ಒಟ್ಟಿನಲ್ಲಿ, ಬದುಕಿನ ಮುಸ್ಸಂಜೆಯಲ್ಲಿರುವ ನಿಮ್ಮ ಹೆತ್ತವರಿಗೆ ಹಾಗೂ ಪೋಷಕರಿಗೆ ಕಾಳಜಿ ವಹಿಸಿ.



Click it and Unblock the Notifications
