Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೌಸ್ ವೈಫ್ ಆಗಿರುವುದು ಎಷ್ಟು ಕಷ್ಟದ ಕೆಲಸ ಗೊತ್ತಾ?

ಮನೆಯಲ್ಲಿಯೇ ಇರುವ ಹೆಣ್ಣು ಮಗಳು ಬೆಳಗಿನಿಂದ ಸಾಯಂಕಾಲದವರೆಗೆ ಕತ್ತೆ ದುಡಿದಂತೆ ದುಡಿದರೂ ಕೂಡ ಮನೆಯವರಿಗೆ ಅದು ಲೆಕ್ಕಕ್ಕೆವಿರುವುದಿಲ್ಲ. ಕೆಲವೊಮ್ಮೆ ಯಾವುದೋ ವಿಷಯಕ್ಕೆ ಗಂಡ-ಹೆಂಡತಿಯ ನಡುವೆ ಮಾತು ಬೆಳೆದಾಗ "ನಿನಗೇನು ಗೊತ್ತು ಮನೆಯಲ್ಲಿಯೇ ಆರಾಮವಾಗಿರುತ್ತೀಯ, ಆದರೆ ಹೊರಗಡೆ ಹೋಗಿ ದುಡಿದು ಬಂದು ನಿಮ್ಮೆನ್ನೆಲ್ಲಾ ಸಾಕುತ್ತೇನೆ, ನನಗೇ ಗೊತ್ತು ನಾನು ಎಷ್ಟು ಕಷ್ಟ ಪಡುತ್ತಿದ್ದೇನೆ' ಎಂದು ಹೇಳುವ ಅಭ್ಯಾಸ ಹೆಚ್ಚಿನ ಗಂಡಂದಿರಲ್ಲಿ ಇರುತ್ತದೆ. ಅವರ ಪ್ರಕಾರ ಹೆಂಡತಿ ಮನೆಯಲ್ಲಿರುವುದರಿಂದ ಆರಾಮವಾಗಿರುತ್ತಾಳೆ ಅನ್ನುವುದಾಗಿರುತ್ತದೆ.
ಆದರೆ ಹೌಸ್ ವೈಫ್ ಆಗಿರುವುದು ಎಷ್ಟು ಕಷ್ಟದ ಕೆಲಸ ಗೊತ್ತಾ? ಮನೆಯಲ್ಲಿ ಎಷ್ಟೇ ದುಡಿದರೂ, ಎಷ್ಟೇ ರುಚಿಕರವಾದ ಅಡುಗೆ ಮಾಡಿ ಹಾಕಿದರೂ ಅದರ ಬಗ್ಗೆ ಹೊಗಳಿಕೆಯ ಮಾತು ಕೂಡ ಹೆಚ್ಚಿನ ಗಂಡಂದಿರು ಹೇಳುವುದಿಲ್ಲ. ಇನ್ನು ಹಣಕಾಸಿನ ವಿಷಯದಲ್ಲ ಗಂಡನ ಹತ್ತಿರ ಎಷ್ಟೇ ದುಡ್ಡಿದ್ದರೂ ಒಂದು ರುಪಾಯಿಗೂ ಗಂಡನ ಬಳಿ ಕೇಳ ಬೇಕಾಗುತ್ತದೆ. ಒಮದು ವೇಳೆ ಅವನು ಕೊಡದಿದ್ದರೆ ಅವಿಗೆ ಅವಮಾನವಾಗುತ್ತದೆ. ಇನ್ನು ಅತ್ತೆ, ನಾದಿನಿ ಜೊತೆಗಿದ್ದು ಅವರು ಅವಳ ಜೊತೆ ಅವರ ಸಂಬಂಧ ಸರಿಯಿಲ್ಲ ಅಂದರೆ ಅವಳಿಗೆ ಮನೆಯಲ್ಲಿರುವುದು ಕಷ್ಟವಾಗ ತೊಡುಗುತ್ತದೆ.
ಹೌಸ್ ವೈಫ್ ಗೆ ಸೋಷಿಯಲ್ ನೆಟ್ ವರ್ಕ್ ಕಡಿಮೆ ಇರುತ್ತದೆ. ನಿಮ್ಮ ಜೊತೆ ಸಮಯ ಕಳೆಯಬೇಕೆಂದು ಬಯಸುತ್ತಾಳೆ. ಆದರೆ ಗಂಡ ತನ್ನ ಕೆಲಸದಲ್ಲಿ ಬ್ಯೂಸಿಯಾದರೆ ಅವಳಿಗೆ ನಿರಾಸೆಯಾಗುತ್ತದೆ. ಇವೆಲ್ಲಾ ಕಾರಣಗಳೀಂದ ಕೊನೆಗೆ ಸಣ್ಣ ಪುಟ್ಟ ವಿಷಯಕ್ಕೂ ಕೋಪ ಮಾಡಿಕೊಳ್ಳುವುದು, ಜೀವನದ ಬಗ್ಗೆ ಜಿಗುಪ್ಸೆಯ ಮಾತುಗಳನ್ನು ಆಡುವುದು ಮಾಡುತ್ತಾಳೆ. ಅವಳ ನಡುವಳಿಕೆಯಿಂದ ನೀವು ಕೋಪಗೊಳ್ಳುವುದು, ಇದರಿಂದ ಮನೆಯ ನೆಮ್ಮದಿ ಹಾಳಾಗುವುದು ಈ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.
ಮನೆ ಯಜಮಾನಿ ನೆಮ್ಮದಿಯಾಗಿದ್ದರೆ ಮಾತ್ರ ಮನೆಯಲ್ಲಿ ನೆಮ್ಮದಿ ಕಾಣಲು ಸಾಧ್ಯ. ಆದ್ದರಿಂದ ನಿಮ್ಮ ಹೆಂಡತಿ ಹೌಸ್ ವೈಫ್ ಆಗಿದ್ದರೆ ಆರಾಮವಾಗಿ ಇದ್ದಾಳೆ ಎಂದು ಭಾವಿಸಬೇಡಿ. ಅವಳ ಕೆಲಸವನ್ನು ಹೊಗಳಿ ಆಗ ಅವಳಿಗೆ ಸಂತೋಷ ಉಂಟಾಗುತ್ತದೆ.



Click it and Unblock the Notifications
