Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರತೀ ಹೆಣ್ಣು ತನ್ನ ಗಂಡನಲ್ಲಿ ನಿರೀಕ್ಷಿಸುವ 5 ಗುಣಗಳು
ಎಲ್ಲಾ ಪುರುಷರು ಸಾಮಾನ್ಯವಾಗಿ "ಈ ಹೆಣ್ಣು ಜಾತಿಯನ್ನೇ ಅರ್ಥೈಸಿಕೊಳ್ಳುವುದು ಕಷ್ಟ" ಎಂಬ ಒಂದು ಡೈಲಾಗ್ ಹೇಳಿ ಬಿಡುತ್ತಾರೆ. ಹೌದು ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಅಂತ ನಾನೂ ಒಪ್ಪಿಕೊಳ್ಳುತ್ತೇನೆ. ಹಾಗಂತ ಅವಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ ಇದ್ದರೆ ಹೇಗೆ ಹೇಳಿ ಹೌದಲ್ವ?
ಹೆಣ್ಣು ಯಾವುದೇ ಹುದ್ದೆಯಲ್ಲಿರಲಿ, ತನ್ನತ್ತ ಎಷ್ಟೇ ಅಧಿಕಾರಯಿರಲಿ, ದುಡ್ಡಿರಲಿ ಆದರೆ ತನ್ನ ಬೇಕು, ಬೇಡಗಳನ್ನು ತನ್ನ ಗಂಡ ನೋಡಿಕೊಳ್ಳಬೇಕೆಂದು ಪ್ರತಿಯೊಂದು ಹೆಣ್ಣು ಬಯಸುತ್ತಾಳೆ. ಅದರಲ್ಲೂ ತನ್ನ ಗಂಡನಾಗುವವನಲ್ಲಿ ಈ ಕೆಳಗಿನ ಗುಣಗಳನ್ನು ನಿರೀಕ್ಷಿಸಿರುತ್ತಾಳೆ.

1. ಪ್ರೀತಿ, ಪ್ರೀತಿ ಮತ್ತು ಪ್ರೀತಿ
ತನ್ನ ಗಂಡ ನನ್ನನ್ನು ತುಂಬಾ ಪ್ರೀತಿಸಬೇಕೆಂದು ಬಯಸುತ್ತಾಳೆ. ಗಂಡ ನನ್ನ ಸುತ್ತಲೇ ಸುತ್ತಿರಬೇಕು, ನನ್ನ ತುಂಬಾ ಮುದ್ದು ಮಾಡಬೇಕು ಎಂದು ಬಯಸುತ್ತಾಳೆ. ಮದುವೆಗೆ ಮುಂಚೆ ಕೆಲ ಹೆಣ್ಣು ಮಕ್ಕಳು ಸಿನಿಮಾದಲ್ಲಿ ಕಂಡಂತಹ ಪ್ರೀತಿ ನನ್ನ ಬದುಕಿನಲ್ಲೂ ಇರಬೇಕೆಂದು ಬಯಸುತ್ತಾಳೆ. ಆದರೆ ಪುರುಷರು ತನ್ನ ಹೆಂಡತಿಯ ಮೇಲೆ ತುಂಬಾ ಪ್ರೀತಿ ಇದ್ದರೂ ಅದನ್ನು ಬಾಯಲ್ಲಿ ವ್ಯಕ್ತ ಪಡಿಸುವವರು ತುಂಬಾ ಕಡಿಮೆ. ನೀವು ನಿಮ್ಮ ಪ್ರೀತಿಯನ್ನು ಹೇಳಿದಾಗ ಅವಳು ಖುಷಿ ಪಡುತ್ತಾಳೆ ಎಂದಾದರೆ ಅದನ್ನು ವ್ಯಕ್ತ ಪಡಿಸುವುದು ಒಳ್ಳೆಯದಲ್ಲವೇ?
2. ರೊಮ್ಯಾನ್ಸ್
ಹೆಣ್ಣು ಈ ವಿಷಯಗಳ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಪಟ್ಟರೂ ತನ್ನ ಗಂಡ ನನ್ನ ಜೊತೆ ರೊಮ್ಯಾಂಟಿಕ್ ಆಗಿರಬೇಕೆಂದು ಬಯಸುತ್ತಾಳೆ.
3. ನಿಯತ್ತು
ಗಂಡ ನನಗೆ ಯಾವತ್ತೂ ಮೋಸ ಮಾಡಬಾರದು, ನನ್ನ ಜೊತೆ ಸುಳ್ಳು ಹೇಳಬಾರದೆಂದು ಬಯಸುತ್ತಾಳೆ.
4. ಬೇಕು, ಬೇಡಗಳನ್ನು ಪೂರೈಸಬೇಕು
ತಾನು ಗಂಡನಷ್ಟೆ ದುಡಿದರೂ ಕೂಡ ನನಗೆ ಬೇಕಾದ ವಸ್ತುಗಳನ್ನು ಗಂಡ ತಂದು ಕೊಡಬೇಕೆಂದು ಬಯಸುತ್ತಾಳೆ. ಶಾಪಿಂಗ್ ಗೆ ಅವಳ ಜೊತೆ ನೀವೂ ಹೋದರೆ ಅವಳು ತುಂಬಾ ಖುಷಿಯಾಗುತ್ತಾಳೆ.
5. ರಕ್ಷಣೆ
ಪ್ರತಿಯೊಂದು ಹೆಣ್ಣು ತ್ನಲ್ಲಿ ಎಷ್ಟೇ ಅಧಿಕಾರವಿದ್ದರೂ ಗಂಡನ ರಕ್ಷಣೆ ಬೇಕೆಂದು ಬಯಸುತ್ತಾಳೆ. ಗಂಡ ಪೊಸೆಸಿವ್ ಇದ್ದರೆ ಇಷ್ಟಪಡುತ್ತಾಳೆ. ಅದೇ ಮಿತಿ ಮೀರಿದರೆ ಅವಳಿಗೆ ಸಹಿಸಲು ಸಾಧ್ಯವಾಗುವುದಿಲ್ಲ! ಆದ್ದರಿಂದ ನಿಮ್ಮ ಪೊಸೆಸಿವ್ ನೆಸ್ ಗೆ ಒಂದು ಮಿತಿಯಿರಲಿ.



Click it and Unblock the Notifications
