Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹದಿಹರೆಯದಲ್ಲಿ ಲವ್ ಮಾಡಿದರೆ ತಪ್ಪೇನು?
ಕೆಲ ಹದಿಹರೆಯದ ಮಕ್ಕಳನ್ನು ನೋಡುವಾಗ ಕೋಪದ ಜೊತೆಗೆ ಅವರ ಮುಂದಿನ ಭವಿಷ್ಯದ ಬಗ್ಗೆ ಅನುಕಂಪ ಮೂಡುತ್ತದೆ. ಅವರಿಗೂ- ನನಗೂ ಯಾವುದೇ ಪರಿಚಯವಿರುವುದಿಲ್ಲ, ರೋಡ್ ನಲ್ಲಿ ನಿಂತು ಸ್ಟೈಲಾಗಿ ಸಿಗರೇಟ್ ಸೇದುವುದು, ಹದಿಹರೆಯದ ಹುಡುಗ-ಹುಡುಗಿ ರೋಮಿಯೋ, ಜೂಲಿಯೆಟ್ ತರ ಪೋಸ್ ಕೊಡುವುದು ನೋಡಿದರೆ ಈ ಮಕ್ಕಳೇನು ಭವಿಷ್ಯವನ್ನು ತುಂಬಾ ಸಿಲ್ಲಿಯಾಗಿ ತೆಗೆದುಕೊಂಡಿದ್ದಾರೆಯೇ ಅನಿಸುತ್ತದೆ.

ಹದಿಹರೆಯದ ವಯಸ್ಸೇ ಹಾಗೇ ಲಂಗು-ಲಗಾಮು ಇಲ್ಲದ ಕುದುರೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಅರಿವಿರುವುದಿಲ್ಲ. ಹಿರಿಯರ ಮಾತುಗಳು ಹಿತ ಅನಿಸುವುದಿಲ್ಲ. ನಾವು ಮಾಡುತ್ತಿರುವುದೇ ಸರಿ ಅನ್ನುವ ಧೋರಣೆ ಆ ವಯಸ್ಸಿನಲ್ಲಿರುತ್ತದೆ.
ಆ ವಯಸ್ಸಿನ ಮಕ್ಕಳಿರುವ ಪೋಷಕರಿಗೆ ಎಲ್ಲಿ ನಮ್ಮ ಮಕ್ಕಳು ತಪ್ಪು ಹಾದಿಯನ್ನು ಹಿಡಿದು ಬಿಡುತ್ತವೆ ಎಂಬ ಭಯವಿರುತ್ತದೆ. ಸಿಗರೇಟ್, ಕುಡಿತ, ಶೋಕಿ, ಪ್ರೀತಿ-ಪ್ರೇಮ ಅಂತ ಎಲ್ಲಿ ಹಾದಿ ತಪ್ಪುತ್ತಾರೋ ಎಂಬ ಆತಂಕ ಅವರಲ್ಲಿ. ಆದರೆ ಈ ಗೊಂದಲ ಹದಿಹರೆಯದವರಿಗೆ ಅರ್ಥವಾಗುವುದಿಲ್ಲ. ತಮ್ಮದೇಯಾದ ಲೋಕದಲ್ಲಿ ಅವರಿರುತ್ತಾರೆ.
ಆ ಸಮಯದಲ್ಲಿ ವಿರುದ್ಧ ಲಿಂಗದ ಕಡೆಗೆ ಆಕರ್ಷಣೆ ಉಂಟಾಗುತ್ತದೆ.ಹುಡುಗ-ಹುಡುಗಿ ಸ್ವಲ್ಪ ಫ್ರೆಂಡ್ ಆದರೆ ಉಳಿದ ಕ್ಲಾಸ್ ಮೇಟ್ ಗಳು ಚುಡಾಯಿಸಲು ಪ್ರಾರಂಭಿಸುತ್ತಾರೆ. ಹೆಚ್ಚಿನವರಿಗೆ ಆ ರೀತಿಯ ಭಾವನೆ ಇಲ್ಲದಿದ್ದರೂ ಫ್ರೆಂಡ್ಸ್ ಚುಡಾಯಿಸುವುದರಿಂದ ಆ ರೀತಿಯ ಭಾವನೆ ಬಂದು ಬಿಡುತ್ತದೆ. ಈ ಸಮಯದಲ್ಲಿ ಎಡವಿ ಬೀಳದಂತೆ ಹುಷಾರಾಗಿ ಇರಬೇಕು. ಏಕೆಂದರೆ ಹದಿ-ಹರೆಯದಲ್ಲಿ ಶುರುವಾಗುವ ಪ್ರೀತಿ-ಪ್ರೇಮ ಕೊನೆಯವರೆಗೆ ಇರುವುದಿಲ್ಲ. ಹದಿಹರೆಯದ ಪ್ರೇಮ ಮದುವೆವರೆಗೆ ಬಂದದ್ದು ಎಲ್ಲೋ ಒಂದು-ಎರಡು ಉದಾಹರಣೆಗಳು ಇರುತ್ತವೆ ಅಷ್ಟೆ.
ಅಲ್ಲದೆ ಈ ಸಮಯದಲ್ಲಿ ನಾವು ಪ್ರೀತಿಸುತ್ತಿರುವ ವ್ಯಕ್ತಿ ನಮಗೆ ತಕ್ಕ ವ್ಯಕ್ತಿಯೇ ಎಂದು ಚಿಂತಿಸುವ ಸಾಮರ್ಥ್ಯ ಇರುವುದಿಲ್ಲ. ವಯಸ್ಸು ಇಪ್ಪತ್ತು ದಾಟಿದವರು ಕೆಲವರು ಪ್ರೀತಿ ಮಾಡಿ ಮೋಸ ಹೋಗುತ್ತಾರೆ, ಅಂತದರಲ್ಲಿ ಹದಿಹರೆಯದ ಪ್ರಾಯದಲ್ಲಿ ಪ್ರೀತಿಸಿದರೆ ಮೋಸ ಹೋಗುವುದರಲ್ಲಿ ಏನೂ ಅಚ್ಚರಿಯಿಲ್ಲ.
ಹದಿಹರೆಯದ ಪ್ರಾಯದಲ್ಲಿ ಪ್ರೀತಿಸಿದರೂ ದೈಹಿಕ ಸಂಬಂಧ ಇಟ್ಟುಕೊಳ್ಳಬಾರದು. ಈ ವಯಸ್ಸಿನಲ್ಲಿ ಮಾಡಿದ ತಪ್ಪಿನಿಂದ ಜೀವನ ಪೂರ್ತಿ ಕೊರಗುವಂತಾಗುವುದು. ಸಿನಿಮಾ ಪ್ರೀತಿ, ನಿಜ ಜೀವನದ ಪ್ರೀತಿ ಬೇರೆ. ಪ್ರೀತಿಸುವುದು ತಪ್ಪಲ್ಲ, ಆದರೆ ಹದಿಹರೆಯದ ಪ್ರಾಯದಲ್ಲಿ ಪ್ರೀತಿ-ಪ್ರೇಮ ಅಂತ ಅಲಿಯುವುದು ತಪ್ಪು. ಓದಿ ನಮ್ಮ ಸ್ವಂತ ಕಾಲಿನಲ್ಲಿ ನಿಂತ ತಮಗೆ ಸೂಕ್ತವಾದ ವ್ಯಕ್ತಿಗಳನ್ನು ಆರಿಸಿಕೊಳ್ಳಿ, ನಿಮ್ಮ ಬದುಕು ಸುಂದರವಾಗುವುದು.
ಹಿರಿಯರೂ ಅಷ್ಟೇ ನಮ್ಮ ಮನೆಯ ಹುಡುಗ/ಹುಡುಗಿ ಪ್ರೀತಿ ಮಾಡುತ್ತಿದ್ದಾರೆ ಅಂದರೆ ಹಾರಾಡುತ್ತಾರೆ. ಈ ರೀತಿ ಮಾಡಿದರೆ ಅವರು ತಪ್ಪನ್ನು ಮತ್ತಷ್ಟು ಮಾಡುತ್ತಾ ಹೋಗುತ್ತಾರೆ. ಅದರ ಬದಲು ತಾಳ್ಮೆ ತಂದುಕೊಂಡು ವಾಸ್ತವ ಸತ್ಯಾಂಶವನ್ನು ಅವರ ಮುಂದೆ ಬಿಚ್ಚಿಡಿ, ಖಂಡಿತ ಅವರು ನಿಮ್ಮ ಮಾತಿಗೆ ಬೆಲೆ ಕೊಟ್ಟೇ ಕೊಡುತ್ತಾರೆ.



Click it and Unblock the Notifications
