Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನಿಯನನ್ನು ಸಂತಸದಿಂದಿಡಲು 7 ಸೂತ್ರಗಳು
ನಿಮ್ಮ ಹುಡುಗನ ಮನವೊಲಿಸಲು ಯುವತಿಯರೇ ಇದು ಸಕಾಲ! ಆದರೆ, ವ್ಯಾಲಂಟೈನ್ಸ್ ಡೇ ಬರಲು ತಡವಿದೆ! ಇನ್ನು ನನ್ನ ಹುಡುಗನ ಬರ್ತಡೆ ಕೂಡ ಅಲ್ಲ ಅಂದುಕೊಳ್ಳುತ್ತೇನೆ. ಹಾಗಾದ್ರೆ ಅಂತ ದೊಡ್ಡ ದಿನ ಇನ್ಯಾವುದು ಬಂದಿದೆ ಅಂದುಕೊಂಡಿರಾ? ಅಲ್ಲ, ನಿಮ್ಮ ಇನಿಯನ ಮನವೊಲಿಸಲು ಇಂಥದೇ ದಿನವೊಂದು ಬೇಕು ಅಂತಾದರೂ ಯಾಕೆ ಅಂದುಕೊಳ್ಳುತ್ತೀರಿ?
ಪುರುಷರು ಸಂತಸಗೊಳ್ಳಲಿ ಅಂತ ನಾವು ಬಹುತೇಕ ಸಂದರ್ಭದಲ್ಲಿ ಆಶಿಸುತ್ತೇವೆ. ಆದರೆ ನಾವು ಅಂದುಕೊಂಡಂತೆ, ಮಾಡಿಕೊಂಡ ಪ್ಲಾನ್‌ನಂತೆ ಎಲ್ಲವೂ ಆಗುವುದಿಲ್ಲ. ಕೊನೆಗೆ ಎಲ್ಲ ತಿರುವು ಮುರುವಾಗಿ ಗಂಡಸೇ ಹೆಂಡತಿಯನ್ನು ರಮಿಸುವ ಹಂತಕ್ಕೆ ಬಂದು ತಲುಪಿರುತ್ತದೆ. ಆದರೆ, ಹೀಗಾಗಲು ಬಿಡಬೇಡಿ. ನಿಮ್ಮ ಸಂಗಾತಿಗಾಗಿ ಒಂದು ದಿನವನ್ನು ಮೀಸಲಿಡಿ.
ಪುರುಷರನ್ನು ಇಷ್ಟಪಡುವಂತೆ ಮಾಡುವ ವಿಧಾನವನ್ನು ಒಮ್ಮೆ ಹೆಣ್ಣು ದೃಷ್ಟಿಕೋನ ಬಿಟ್ಟು ಯೋಚಿಸಿ. ನಿಮ್ಮವರನ್ನು ಒಲಿಸಿಕೊಳ್ಳಲು ಇಲ್ಲಿದೆ ಸಪ್ತಸೂತ್ರ, ಪ್ರಯತ್ನಿಸಿ. ಇಲ್ಲಿರುವ ಕೆಲ ಸಲಹೆಗಳು ನಿಮ್ಮವರ ಮನದಣಿಸಲು ಸಹಕಾರಿಯಾದೀತು. ಅವರೊಂದಿಗೆ ಕೂಡಿ ಕಳೆಯಲು ಸಹಕಾರಿಯಾದೀತು.
ಇದರಿಂದ ಅನುಕೂಲಗಳೂ ಅನೇಕವಿವೆ. ಗಂಡು ಹೆಣ್ಣಿನ ನಡುವಿನ ಸಂಬಂಧ ಗಟ್ಟಿಯಾಗುತ್ತ ಸಾಗುತ್ತದೆ. ಇಬ್ಬರ ನಡುವೆ ಅಪಾರ್ಥಗಳಾಗುವುದು ಕಡಿಮೆಯಾಗುತ್ತದೆ. ಒಲವು ಗರಿಗೆದರುತ್ತದೆ, ಮನಸ್ತಾಪಗಳು ಕಡಿಮೆಯಾಗುತ್ತವೆ. ಸೋ, ವಾರದ ಒಂದು ದಿನ ಅವರಿಗಾಗಿಯೇ ಮೀಸಲಿಡಿ. ನಂತರ ನಿಮ್ಮ ಜೀವನದಲ್ಲಿ ಹೇಗೆ ಬದಲಾವಣೆಗಳಾಗುತ್ತವೆ ಎಂಬುದನ್ನು ನೋಡಿರಿ.

ಸ್ನೇಹಿತರೊಂದಿಗೆ ಹೊರ ಹೋಗಲು ಬಿಡಿ
ನಿಮ್ಮೊಂದಿಗೆ ಮನೆಯಲ್ಲಿದ್ದು ರೊಮ್ಯಾಂಟಿಕ್ ಕ್ಯಾಂಡಲ್‌ಲೈಟ್ ಡಿನ್ನರ್‌ನಲ್ಲಿ ಭಾಗವಹಿಸಿದರೆ ನಿಮ್ಮವರು ತುಂಬಾ ಖುಶಿ ಪಡುತ್ತಾರೆ ಅಂತ ಅಂದುಕೊಳ್ಳಬೇಡಿ. ಅವರನ್ನು ಸ್ನೇಹಿತರೊಂದಿಗೆ ಆಚೆ ತೆರಳಿ ಸದ್ದುಗದ್ದಲದಿಂದ ಕೂಡಿರುವ ಬಾರ್‌ನಲ್ಲಿ ಸಮಯ ಕಳೆಯಲು ಅವಕಾಶ ಮಾಡಿಕೊಡಿ.

ಅವರ ಪಾಲಕರೊಂದಿಗೆ ಊಟಮಾಡಿ
ನಿಮ್ಮವರ ಪಾಲಕರ ಜತೆ ಊಟ ಮಾಡುವ ಸಂದರ್ಭದಲ್ಲಿ ನಿಮ್ಮವರು ಜತೆಗಿರಲಿ, ಇಲ್ಲದಿರಲಿ ತಲೆಕೆಡಿಸಿಕೊಳ್ಳಬೇಡಿ. ಮುಕ್ತವಾಗಿ ಬೆರೆತು ಅವರೊಂದಿಗೆ ಊಟಮಾಡಿ. ಒಂದು ದಿನ ನಿಮ್ಮವರನ್ನು ಮನವೊಲಿಸುವುದು ಕಷ್ಟವೇನಲ್ಲ.

ಅವರ ತಾಯಿಯನ್ನು ಶಾಪಿಂಗ್‌ಗೆ ಕರೆದೊಯ್ಯಿರಿ
ಪುರುಷರು ಅವರದೇ ಆದ ಶಾಪಿಂಗ್ ವಿಷಯದಲ್ಲೂ ಜಾಣರಲ್ಲ. ಅತಿ ಬೇಗ ಬೇಸರಕ್ಕೊಳಗಾಗುತ್ತಾರೆ. ಹೀಗಾಗಿ ಈ ವಿಷೇಷ ದಿನದ ಸಂದರ್ಭದಲ್ಲಿ ನಿಮ್ಮ ಬಾಯ್‌ಫ್ರೆಂಡ್ ಅಥವಾ ಪತಿಯನ್ನು ಅವರ ಪಾಡಿಗೆ ಬಿಟ್ಟು, ಅವರ ತಾಯಿಯೊಂದಿಗೆ ಶಾಪಿಂಗ್‌ಗೆ ತೆರಳಿ. ಅದು ಅವರ ಮನಸ್ಸನ್ನು ಗೆಲ್ಲುತ್ತದೆ.

ಟಿವಿ ರಿಮೋಟ್‌ನ್ನು ಅವರ ಕೈಗಿಡಿ
ಬಹುತೇಕ ಕುಟುಂಬಗಳಲ್ಲಿ ಟಿವಿ ರಿಮೋರ್ಟ್ ತಮಗೆ ಬೇಕೆಂಬ ವಿಷಯದಲ್ಲಿ ದಂಪತಿಗಳಲ್ಲಿ ಕಲಹ ನಡೆಯುತ್ತಿರುತ್ತದೆ. ಇದೊಂದು ದಿನಕ್ಕಾದರೂ ನಿಮ್ಮವರು ಇಷ್ಟದ ಜಾಗತಿಕ ಕ್ರಿಕೆಟ್ ಹಾಗೂ ಸುದ್ದಿ ವಾಹಿನಿ ನೋಡಲು ಅವಕಾಶ ಮಾಡಿಕೊಡಿ.

ಕಿರುಚಾಟ ರಹಿತ ದಿನವಾಗಿಸಿ
ಪುರುಷರು ಸದಾ ತಮ್ಮ ಗರ್ಲ್‌ಫ್ರೆಂಡ್ ಅಥವಾ ಪತ್ನಿಯರ ಬಗ್ಗೆ ದೂರುತ್ತಲೇ ಇರುತ್ತಾರೆ. ಏನಾದರೂ ಇರಲಿ, ಇಲ್ಲದಿರಲಿ ತಮ್ಮ ಮೇಲೆ ಕಿರುಚಾಡುತ್ತಿರುತ್ತಾರೆ ಎನ್ನುವುದು. ಅವರು ಸಿಗರೇಟು ಸೇದುವುದಿರಲಿ, ಪ್ಲೇಟನ್ನು ತೊಳೆಯದೇ ಹಾಗೇ ಬಿಟ್ಟಿರಲಿ. ಅದನ್ನು ಪುರುಷರ ದಿನವಾಗಿ ಬಿಟ್ಟುಬಿಡಿ, ಕಿರುಚಾಟದ ದಿನವಾಗಿಸಬೇಡಿ.

ಅವರ ಇಷ್ಟದ ಚಿತ್ರಕ್ಕೆ ಹೋಗಿಬನ್ನಿ
ನೀವು ಸದಾ ನಿಮಗಿಷ್ಟವಾಗುವ ಸಿಲ್ಲಿ ನಾಟಕದ ಮಾದರಿಯ ಚಿತ್ರಗಳಿಗೇ ಅವರನ್ನು ಎಳೆದೊಯ್ಯುತ್ತೀರಿ. ಇದು ನಿಮಗೆ ನಂತರ ತಲೆ ನೋವು ಉಂಟುಮಾಡಿದರೂ ಸರಿ, ಒಮ್ಮೆಯಾದರೂ ಅವರಿಗಿಷ್ಟವಾಗುವ ಆಕ್ಷನ್ ಚಿತ್ರಗಳಿಗೆ ತೆರಳಿ.

ಅವರ ವಸ್ತ್ರಗಳನ್ನು ನೀವೇ ಸ್ವಚ್ಛಗೊಳಿಸಿ
ಪುರುಷರ ವಾಸನೆಯುಕ್ತ ಸಾಕ್ಸ್, ಒಳುಡುಪು ಹಾಗೂ ಕಲೆಯಾದ ಬಟ್ಟೆಯನ್ನು ಅವರು ತೊಳೆದು ಹಾಕಿದ ನಂತರ ಮತ್ತೊಮ್ಮೆ ಒಗೆಯುತ್ತಾರೆ. ಇದನ್ನು ಪುರುಷರು ನಂತರ ಒಗೆದರಾಯಿತು ಅಂತ ಬಿಟ್ಟು ಹೋಗಿರುತ್ತಾರೆ. ಈ ರೀತಿ ಬಟ್ಟೆಯನ್ನು ಯಾವುದೇ ಹೇಸಿಗೆ ಇಲ್ಲದೆ, ದೂರದೇ ನೀವೇ ಸ್ವಚ್ಛಗೊಳಿಸಿ. ಅದು ನಿಮಗೆ ಕಿರಿಕಿರಿ ಆದರೂ ಸರಿ.



Click it and Unblock the Notifications