Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹುಡುಗ-ಹುಡುಗಿ ಪ್ರಾಣ ಮಿತ್ರರಾಗಿ ಇರಬಹುದೇ?
ಒಂದು ಹುಡುಗಿ ಒಬ್ಬ ಹುಡುಗನನ್ನು ತೋರಿಸಿ 'ಇವನು ನನ್ನ ಬೆಸ್ಟ್ ಫ್ರೆಂಡ್' ಅಂದರೆ ಸಮಾಜ ಅದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಿಲ್ಲ. ಅವರಿಬ್ಬರು 'ನಮ್ಮಿಬ್ಬರ ಮಧ್ಯೆ ಫ್ರೆಂಡ್ ಶಿಪ್ ಬಿಟ್ಟರೆ ಬೇರೇನು ಇಲ್ಲ' ಎಂದು ಹೇಳಿದರೂ ಅದನ್ನು ಒಪ್ಪಿಕೊಳ್ಳಲು ಸಮಾಜ ಹಿಂದೆ-ಮುಂದೆ ನೋಡುತ್ತದೆ. ಅವರಿಬ್ಬರ ಬಗ್ಗೆ ಅನೇಕ ಕಟ್ಟು ಕತೆಗಳು ಕೇಳಲಾರಂಭಿಸುತ್ತವೆ. ಹಾಗಾದರೆ ಒಂದು ಹೆಣ್ಣು ಮತ್ತು ಗಂಡು ಬರೀ ಫ್ರೆಂಡ್ಸ್ ಆಗಿ ಇರಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ ಇದೆ, ಆದರೆ ಸಮಾಜದ ಸಂಶಯ ದೃಷ್ಟಿ ಅವರ ಮೇಲೆ ಬೀಳದೆ ಬದುಕಲು ಮಾತ್ರ ಖಂಡಿತ ಸಾಧ್ಯವಿಲ್ಲ!

ಹೆಚ್ಚಿನ ಹೆಣ್ಣು ಮಕ್ಕಳು ಹುಡುಗನನ್ನು ತಮ್ಮ ಬೆಸ್ಟ್ ಫ್ರೆಂಡ್ ಆಗಿ ಮಾಡಿಕೊಳ್ಳುತ್ತಾರೆ. ಈ ರೀತಿಯ ಗೆಳೆತನಕ್ಕೆ ವಿರುದ್ಧ ಲಿಂಗದ ಆಕರ್ಷಕಣೆ ಅನ್ನುವ ಬದಲು ಸಮಾನ ಲಿಂಗದ ಕಡೆಗೆ ಇರುವ ಅಪನಂಬಿಕೆ ಎಂದು ಹೇಳಬಹುದು. ಹುಡುಗನನ್ನು ಬೆಸ್ಟ್ ಫ್ರೆಂಡ್ ಎಂದು ಹೇಳುವ ಪ್ರತಿಯೊಂದು ಹೆಣ್ಣಿಗೂ ತನ್ನ ಜೀವದ ಗೆಳತಿಯಿಂದ ಯಾವುದೋ ಒಂದು ಕಹಿ ಅನುಭವಾಗಿರುತ್ತದೆ.
ಫ್ರೆಂಡ್ ಎಂದು ಅಂದುಕೊಂಡವಳು ಯಾವುದೋ ಕಾರಣಕ್ಕೆ ಮೋಸ ಮಾಡಿದರೆ ಅಥವಾ ನಮ್ಮ ಬಗ್ಗೆ ಹೊಟ್ಟೆ ಕಿಚ್ಚು ಪಡುವುದು ಮಾಡಿದರೆ ಇನ್ನು ಮುಂದೆ ಈ ರೀತಿಯ ಸ್ನೇಹಿತೆ ನನಗೆ ಬೇಡ ಎಂದು ಅನಿಸಿ ಬಿಡುತ್ತದೆ. ಈ ರೀತಿ ಅನಿಸಿದರೆ ಮುಂದೆ ಎಲ್ಲಾ ಹುಡುಗಿಯರು ಇದೇ ರೀತಿ ಇರುತ್ತಾರೆ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಅದೇ ಹುಡುಗನ ಜೊತೆ ಸ್ನೇಹ ಬೆಳೆಸಿದರೆ ಅವನಲ್ಲಿ ಗೆಳೆತನಕ್ಕಾಗಿ ಏನು ಬೇಕಾದರೂ ತ್ಯಾಗ ಮಾಡುವ ಗುಣ ಅವನ್ನಲ್ಲಿರುತ್ತದೆ. ಈ ಗುಣದಿಂದಾಗಿ ಹುಡುಗಿಗೆ ಹುಡುಗನ ಗೆಳೆತನ ತುಂಬಾ ಇಷ್ಟವಾಗುತ್ತದೆ.
ಆದರೆ ಅವರಿಬ್ಬರ ಗೆಳೆತನ ಹುಡುಗಿಗೆ ಬೇರೆ ಹುಡುಗನೊಂದಿಗೆ ಮದುವೆಯಾದ ನಂತರ ಕೂಡ ಅದೇ ರೀತಿ ಉಳಿದುಕೊಳ್ಳುವುದು ಕಡಿಮೆ. ಏಕೆಂದರೆ ಇವರಿಬ್ಬರ ಗೆಳೆತನ ಅವಳ ಗಂಡನಿಗೆ ಇಷ್ಟವಾಗದೇ ಇರಬಹುದು, ಇವರು ತುಂಬಾ ಆತ್ಮೀಯ ಸ್ನೇಹಿತರು ಅಂತ ಅವಳ ಗಂಡನಿಗೆ ಸಹಿಸಿಕೊಳ್ಳದೇ ಹೋಗಬಹುದು. ಈ ರೀತಿಯಾದರೆ ಅನಿವಾರ್ಯವಾಗಿ ಗೆಳೆಯನಿಂದ ದೂರವಾಗಬೇಕಾಗುತ್ತದೆ.
ಮತ್ತೆ ಕೆಲವರಿಗೆ 'ನನ್ನನ್ನು ಇಷ್ಟೆಲ್ಲಾ ಅರ್ಥ ಮಾಡಿಕೊಡಿರುವ ಈ ಫ್ರೆಂಡೇ ನನ್ನ ಬಾಳಸಂಗಾತಿಯಾದರೆ ಚೆನ್ನಾಗಿರುತ್ತದೆ' ಎಂಬ ಭಾವನೆ ಬಂದು ಮದುವೆಯಾಗಿ ಬಿಡುತ್ತಾರೆ.
ಆದ್ದರಿಂದಲೇ ಏನೋ ಹೆಣ್ಣು-ಗಂಡು ಬೆಸ್ಟ್ ಫ್ರೆಂಡ್ ಕೊನೆಯವರೆಗೆ ಇರಲು ಸಾಧ್ಯವಿಲ್ಲ ಅನ್ನುವುದು, ಅಂದ್ಹಾಗೆ ಗಂಡು-ಹೆಣ್ಣಿನ ನಡುವಿನ ಸ್ನೇಹದ ಬಗ್ಗೆ ನಿಮ್ಮ ಅಭಿಪ್ರಾಯವೇನು?



Click it and Unblock the Notifications
