Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದಂಪತಿಗಳ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?
ಮದುವೆ ಅನ್ನುವುದು ಜೀವನದಲ್ಲಿ ಮುಖ್ಯವಾದ ಘಟ್ಟ. ಸ್ವಲ್ಪ ಎಡವಿದರೂ ಜೀವನ ಸಾಗಿಸುವುದು ಕಷ್ಟ. ಅದನ್ನರಿತ ಹಿರಿಯರು ಮನೆತನ, ಜಾತಕ ಎಲ್ಲಾ ನೋಡಿ ಮದುವೆ ನೋಡಿ ಕೊಡುತ್ತಾರೆ. ಆದರೆ ಎಷ್ಟೋ ಮದುವೆಗಳಲ್ಲಿ ಹುಡುಗನ ವಯಸ್ಸನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದೇ ಇಲ್ಲ.
ಹುಡುಗ ಅನುಕೂಲಸ್ಥನಾಗಿದ್ದರೆ 18 ಹರೆಯದ ಹುಡುಗಿಯನ್ನು 30 ವರ್ಷದ ಹುಡುಗನಿಗೆ ಮದುವೆ ಮಾಡಿ ಕೊಡಲು ಹಿಂದೆ- ಮುಂದೆ ನೋಡುವುದಿಲ್ಲ, ಹುಡುಗಿಯನ್ನು ಕೊಟ್ಟು ಮದುವೆ ಮಾಡಿ ತಮ್ಮ ಜವಬ್ದಾರಿ ಕಳೆಯಿತು ಎಂದು ಹಿರಿಯರು ಯೋಚಿಸುತ್ತಾರೆ. ಹೀಗೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದರೆ ಅವರಿಬ್ಬರು ಮುಂದೆ ಪರಸ್ಪರ ಅರ್ಥ ಮಾಡಿಕಂಡು ಹೊಂದಾಣಿಕೆಯಿಂದ ಬಾಳುತ್ತಾರೆಯೇ ಎಂದು ಯಾರೂ ಯೋಚಿಸುವುದಿಲ್ಲ.

ಹೀಗೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದರೆ ಆ ದಂಪತಿಗಳ ಆಲೋಚನೆಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ, ಇದರಿಂದಾಗಿ ಒಬ್ಬರಿಗೊಬ್ಬರನ್ನು ಅರ್ಥೈಸಿಕೊಳ್ಳಲು ಕಷ್ಟವಾಗುತ್ತದೆ. ಮಿಸ್ ಅಂಡರ್ ಸ್ಟ್ಯಾಂಡಿಂಗ್ ಅಧಿಕವಾಗಿ ಅಪನಂಬಿಕೆ ಶುರುವಾಗುತ್ತದೆ, ಸಂಸಾರ ಅನ್ನುವುದು ಸಮಸ್ಯೆಗಳ ಗೂಡಾಗುತ್ತದೆ.
ಈ ರೀತಿ ಉಂಟಾಗಲು ಕಾರಣ ಇಷ್ಟೆ. ಹದಿನೆಂಟರ ಹರೆಯದ ಹೆಣ್ಣಿಗೆ ಹುಡುಗು ಬುದ್ಧಿ ಹೋಗಿರುವುದಲ್ಲ, ಆದರೆ ಹುಡುಗನಿಗೆ ಆ ವಯಸ್ಸು ಕಳೆದ ಕಾರಣ ಯಾವುದೇ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವವನು ಆಗಿರುತ್ತಾನೆ. ಉದಾಹರಣೆಗೆ ಚಿಕ್ಕ ಪ್ರಾಯದಲ್ಲಿ ಚಂದಮಾಮ ಓದಲು ಇಷ್ಟವಾಗುತ್ತಿತ್ತು, ಆದರೆ ದೊಡ್ಡವರು ಆದ ಮೇಲೆ ಅದನ್ನು ಓದಲು ಬೋರಾಗುತ್ತದೆ. ಅದೇ ರೀತಿ ಈ ದಂಪತಿಗಳಲ್ಲಿಯೂ ಆಲೋಚನೆಗಳಲ್ಲಿ ವ್ಯತ್ಯಾಸ ಉಂಟಾಗಿ ಸಮಸ್ಯೆಗಳು ಕಂಡು ಬರಬಹುದು.
ಇನ್ನು ಪ್ರೀತಿ-ಪ್ರೇಮ ಅಂತ ಹೇಳಿ 25ರ ಯುವಕ 35ರ ಆಂಟಿಯನ್ನು ಮದುವೆಯಾದರೂ ಮದುವೆಯಾದ ಸ್ವಲ್ಪ ದಿನಗಳಲ್ಲಿ ಸಮಸ್ಯೆ ಕಂಡು ಬರುತ್ತದೆ. ಅವನು ಇತರ ಹುಡುಗಿಯ ಕಡೆಗೆ ಆಕರ್ಷಿತನಾಗಬಹುದು,
ಆದ್ದರಿಂದ ಮದುವೆಯಾಗುವಾಗ ಜಾತಕದಷ್ಟೇ ಹುಡುಗ-ಹುಡುಗಿಯ ವಯಸ್ಸಿನ ಕಡೆಗೆ ಗಮನ ಕೊಡುವುದು ಒಳ್ಳೆಯದು. ಹುಡುಗ-ಹುಡುಗಿಯ ನಡುವೆ 5-7 ವರ್ಷಗಳ ಅಂತರವಿದ್ದರೆ ಮದುವೆ ಮಾಡಿ ಕೊಡಬಹುದು, ಅದಕ್ಕಿಂತ ಜಾಸ್ತಿ ಇದ್ದರೆ ಈ ಮದುವೆ ಬೇಕೆ, ಬೇಡ್ವೆ? ಎಂದು ಯೋಚಿಸಿ.



Click it and Unblock the Notifications
