Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೆಣ್ಣೇ ನಿನ್ನ ಮನಸ್ಸು ನಾನು ಬಲ್ಲೇ ಎಂದು ಮುಠ್ಠಾಳರಾಗದಿರಿ!

ಹೌದು, 25-30 ವರ್ಷ ಜೊತೆಯಲ್ಲಿಯೇ ಸಂಸಾರ ಮಾಡಿದರೂ ಗಂಡನಿಗೆ ತನ್ನ ಹೆಂಡತಿಯ ಬಗ್ಗೆ ಧೈರ್ಯವಾಗಿ ಅವಳನ್ನು ಸಂಪೂರ್ಣ ಅರ್ಥ ಮಾಡಿಕೊಂಡಿದ್ದೇನೆ ಎಂದು ಸಂಪೂರ್ಣವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಯಾವ ಸಂದರ್ಭದಲ್ಲಿ ಅವಳು ಏನು ಯೋಚಿಸುತ್ತಿದ್ದಾಳೆ ಎಂದು ಊಹಿಸುವುದು ಕಷ್ಟದ ವಿಷಯವೇ.
ಅದರಲ್ಲೂ ಹೆಣ್ಣು ಮಕ್ಕಳು ಈ ಕೆಳಗಿನ ಮಾತುಗಳನ್ನು ಹೇಳಿದರಂತೂ ಅದರ ಹಿಂದೆ ಬೇರೆಯದೇ ಅರ್ಥ ಇರುತ್ತದೆ. ಆದ್ದರಿಂದ ಆ ಮಾತುಗಳನ್ನು ನಿಜವೆಂದು ನಂಬಿ ಬಿಟ್ಟಿರಾ ಜೋಕೆ!
ಏನಾಯಿತು ಎಂದು ಕೇಳಿದಾಗ ಏನಿಲ್ಲ ಎಂಬ ಉತ್ತರ: ಮನೆಯಲ್ಲಿ ಅಮ್ಮ , ಸಹೋದರಿ ಅಥವಾ ಬಳಸಂಗಾತಿ ಅಥವಾ ನಿಮ್ಮ ಸ್ನೇಹಿತೆ ಹೀಗೆ ಯಾರೇ ಆಗಿರಲಿ ಅವರು ಏನೋ ಯೋಚಿಸುತ್ತಿರುವಾಗ ಅಥವಾ ಬೇಜಾರಿನಲ್ಲಿದ್ದಾಗ "ಏನಾಯಿತು?" ಎಂದು ಕೇಳಿದರೆ ತಕ್ಷಣ ಬರುವ ಎತ್ತರ "ಏನಿಲ್ಲ". ಆದರೆ ಅವರು ಹಾಗೇ ಹೇಳಿದರೆ ಖಂಡಿತ ಅದರ ಹಿಂದೆ ಏನೋ ಇರುತ್ತದೆ. ಆಗ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಿ ಕೇಳಿದರೆ ಹೇಳುತ್ತಾರೆ, ಕೆಲವರಿಗೆ ಆ ಸಮಯದಲ್ಲಿ ನಿಮ್ಮ ಹತ್ತಿರ ಹೇಳಬೇಕೆಂದು ಅನಿಸದಿದ್ದರೆ ಹೇಳಲ್ಲ.
ನನಗೆ ನಿನ್ನ ಕುಟುಂಬದವರನ್ನು ಕಂಡರೆ ತುಂಬಾ ಇಷ್ಟ: ಮದುವೆಯಾಗಿ ಬರುವಾಗ ಗಂಡನನ್ನು ಇಂಪ್ರೆಸ್ ಮಾಡಲು ಹೆಣ್ಣು ಮಕ್ಕಳು ಈ ಮಾತನ್ನು ಹೇಳುವುದು ಸಾಮಾನ್ಯ. ನಿಜವಾಗಲೂ ನಿಮ್ಮ ಕುಟುಂಬದವರು ಅವಳಿಗೆ ಇಷ್ಟವಾಗಿದೆಯೇ ಎಂದು ತಿಳಿಯುವುದು ಸಂದರ್ಭ ಬಂದಾಗ ಮಾತ್ರ.
ನೀವು ತುಂಬಾ ಪರಫೆಕ್ಟ್: ಅವರು ಹಾಗೇ ಹೊಗಳಿದ ತಕ್ಷಣ ನಿಮ್ಮ ಬಗೆ ಹೆಮ್ಮೆ ಪಟ್ಟುಕೊಳ್ಳಬೇಡಿ. ಅವರು ಹಾಗೇ ಅಂದರೆ ನಿಮ್ಮಿಂದ ಏನೋ ಬದಲಾವಣೆ ಬಯಸುತ್ತಿದ್ದಾರೆ ಎಂದು ಅರ್ಥ.
ಐ ಹೇಟ್ ಯೂ, ನಿನ್ನ ಇಷ್ಟವಿಲ್ಲ: ನಿಮ್ಮ ಪ್ರಿಯತಮೆ ಈ ಮಾತನ್ನು ಯಾವ ಸಂದರ್ಭದಲ್ಲಿ ಹೇಳುತ್ತಾಲೆ ಅನ್ನುವುದು ಮುಖ್ಯ. ಚಿಕ್ಕ-ಪುಟ್ಟ ಜಗಳ ಬಂದಾಗ ಅವಳು ಐ ಹೇಟ್ ಯೂ ಅಂದರೆಮತ್ತಷ್ಟು ಕೋಪಗೊಳ್ಳದೆ ಸುಮ್ಮನಾಗಿ, ಏಕೆಂದರೆ ಅವಳು ಹಾಗೇ ಹೇಳಿದರೆ ನಿಮ್ಮನ್ನು ತುಂಬಾ ಇಷ್ಟಪಡುತ್ತಿದ್ದಾಳೆ ಎಂದು ಅರ್ಥ.
ಪರ್ವಾಗಿಲ್ಲ: ಜಗಳಾದಾಗ ಅಥವಾ ತಪ್ಪು ಮಾಡಿದಾಗ ನೀವು ಸಾರಿ ಕೇಳಿದರೆ ಅವಳು "ಪರ್ವಾಗಿಲ್ಲ,ಇಟ್ಸ್ ಓಕೆ" ಅಂದರೆ ಇಟ್ಸ್ ನಾಟ್ ಓಕೆ ಎಂದು ಅರ್ಥ. ಆ ಸಮಯದಲ್ಲಿ ಅವಳನ್ನು ತುಂಬಾ ಸಮಾಧಾನ ಮಾಡಿದರೆ ಮಾತ್ರ ಸಾಮಾನ್ಯ ಮನಸ್ಥಿತಿಗೆ ಬರುತ್ತಾಳೆ.
ನನನಗೆ ಬೇಡ: ಹೊರಗಡೆ ಹೋಗಿರ್ತೀರಾ? ಅವಳು ಏನಾದರು ವಸ್ತುವನ್ನು ನೋಡಿ ಚೆನ್ನಾಗಿದೆಯೆಲ್ಲಾ? ಎಂದು ಕೇಳುತ್ತಾಳೆ. "ನಿನಗೆ ಅದು ಇಷ್ಟವಾಯಿತಾ?" ಎಂದು ಕೇಳಿದರೆ "ನನಗೆ ಅದು ಬೇಡ ಬಿಡು" ಎಂದು ಹೇಳುತ್ತಾಳೆ. ಅವಳು ಹಾಗೇ ಹೇಳಿದಳು ಅಂತ ನೀವು ಸುಮ್ಮನೆ ಬಂದು ಬಿಟ್ಟರೆ ತುಂಬಾ ಬೇಜಾರು ಪಟ್ಟುಕೊಳ್ಳುತ್ತಾಳೆ.
ಹೆಣ್ಣನ್ನು ಅರ್ಥೈಸಿಕೊಳ್ಳುವುದು ಕಷ್ಟ, ಅವಳಿಲ್ಲದೆ ಬಾಳುವುದು ಕಷ್ಟ ಓ...ದೇವರೆ ನಮಗ್ಯಾಕೆ ಈ ಕಷ್ಟ ಎಂದು ಎಷ್ಟೋ ಬಾರಿ ಅಂದುಕೊಂಡಿರುತ್ತೀರಿ ಅಲ್ಲವೇ?



Click it and Unblock the Notifications
