Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ರೀತಿಯ ಪ್ರೇಮಿಯಲ್ಲಿ ನೆಮ್ಮದಿ ಕಾಣುವಿರಾ?

ಅದರಲ್ಲೂ ಈ ಕೆಳಗಿನ ಲಕ್ಷಣಗಳು ನಿಮ್ಮ ಸಂಬಂಧದಲ್ಲಿ ಕಂಡು ಬಂದರೆ ಅಂತಹ ಸಂಬಂಧದಲ್ಲಿ ನೆಮ್ಮದಿಯೆಂಬುದು ಎಂಬುದು ಸಿಗುವುದಿಲ್ಲ. ನೀವು ಪ್ರೀತಿಸುತ್ತಿರುವ ವ್ಯಕ್ತಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ ಅವರ ಜೊತೆ ಸಂಬಂಧವನ್ನು ಮುಂದುವರೆಸಬೇಕೆ? ಬೇಡ್ವೆ? ಎಂದು ಯೋಚಿಸುವುದು ಒಳ್ಳೆಯದು.
ಸ್ವಾರ್ಥ: ನೀವು ಪ್ರೀತಿಸುತ್ತಿರುವ ವ್ಯಕ್ತಿ ತುಂಬಾ ಸ್ವಾರ್ಥ ಸ್ವಭಾವದವರೆಂದು ಗೊತ್ತಾದರೆ ಒಂದೋ ಆ ಸ್ವಭಾವನ್ನು ತಿದ್ದಿಕೊಳ್ಳಲು ಹೇಳಿ. ಇಲ್ಲದಿದ್ದರೆ ನಿಮಗೆ ನೆಮ್ಮದಿಯ ಜೀವನ ಅವರಿಂದ ಸಿಗಲು ಸಾಧ್ಯವೇ ಎಂದು ಯೋಚಿಸಿ.
ದಬ್ಬಾಳಿಕೆ: ಪ್ರತಿಯೊಂದು ವಿಷಯದಲ್ಲಿ ಅವರು ಹೇಳಿದಂತೆ ನಡೆದುಖೊಳ್ಳಬೇಕು. ಅವರ ಮಾತೇ ಕೊನೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಬಾರದು ಈ ರೀತಿ ಇದ್ದರೆ ಅಂತಹವರ ಹತ್ತಿರ ನಿಮ್ಮ ಭಾವನೆಗಳಿಗೂ ಬೆಲೆ ಇರುವುದಿಲ್ಲ, ಸ್ವತಂತ್ರ ಎಂಬುವುದು ಇಲ್ಲದಾಗುತ್ತದೆ.
ನಿಮಗೆ ಬೆಲೆ ಕೊಡದಿರುವುದು: ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು, ಅವರು ಮೇಲು, ನೀವು ಕೀಳು ನಿಮಗೆ ಏನೂ ಗೊತ್ತಿಲ್ಲ ಎಂಬಂತೆ ವರ್ತಿಸುವುದು ಈ ರೀತಿಯ ಗುಣ ಇರುವವರ ಜೊತೆ ಬಾಳುವುದು ಕಷ್ಟ.
ಹಿಂಸೆ ಕೊಡುವುದು: ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುವ ಬುದ್ಧಿ ಇದ್ದರೆ ಅವರ ಜೊತೆ ಬಾಳುವುದು ತುಂಬಾ ಕಷ್ಟ. ಸಂಶಯ, ನಿಮಗೆ ತುಂಬಾ ನಿರ್ಬಂಧನೆಗಳು ಈ ರೀತಿ ಇದ್ದರೆ ಜೀವನ ನರಕವಾಗಿ ಬಿಡುತ್ತದೆ.
ಹಳೆಯ ಸಂಬಂಧದಲ್ಲಿ ಬ್ರೇಕ್ ಅಪ್: ನೀವು ಪ್ರೀರಿಸುತ್ತಿರುವವರು ಈ ಹಿಂದೆಯೇ 2-3 ಜನರನ್ನು ಪ್ರೀತಿಸಿ, ಬ್ರೇಕ್ ಅಪ್ ಆಗಿದ್ದರೆ ಅಂತಹವರನ್ನು ಪ್ರೀತಿಸುವ ಮೊದಲು ತುಂಬಾ ಯೋಚನೆ ಮಾಡಿ. ಏಕೆಂದರೆ ಈ ಹಿಂದೆ ಉಳಿದವರನ್ನು ಬಿಟ್ಟಂತೆ ನಿಮ್ಮನ್ನೂ ಬಿಡಬಹುದು.



Click it and Unblock the Notifications
