Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಂಡ ಹೆಂಡತಿಯಲ್ಲಿ ಗೌರವಿಸುವ ಗುಣಗಳು
ಒಬ್ಬ ವ್ಯಕ್ತಿಗೆ ಸಿಗುವ ಗೌರವ ಅವನ/ಅವಳ ನಡುವಳಿಕೆಗಳ ಮೇಲೆ ಅವಲಂಭಿತವಾಗಿರುತ್ತದೆ. ಸಂಸಾರದಲ್ಲಿ ಅಷ್ಟೆ ಪರಸ್ಪರ ನಂಬಿಕೆ, ಪ್ರೀತಿ ಹಾಗೂ ಗೌರವ ಇರಬೇಕು. ಪುರುಷರಿ ಗೆ ಗೌರವ ಸಿಗಬೇಕೆಂದರೆ ದುಡಿಯುವವನಾಗಿರಬೇಕು, ತನ್ನ ಸಂಸಾರದ ಬಗ್ಗೆ ಪ್ರೀತಿ ಇರಬೇಕು ಹಾಗೂ ಸಂಸಾರವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುವವನು ಆಗಿರಬೇಕು. ಮಹಿಳೆಯರಿಗೆ ಗೌರವ ಸಿಗಬೇಕೆಂದರೆ ಕೆಲವೊಂದು ಗುಣಗಳಿರಬೇಕು. ಪುರುಷನು ತುಂಬಾ ಇಷ್ಟಪಡುವ ಹಾಗೂ ಗೌರವಿಸುವ ಆ ಗುಣಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

1. ಡ್ರೆಸ್ಸಿಂಗ್ ಬಗ್ಗೆ ಗಮನವಿರಲಿ: ತುಂಬಾ ಬಿಗಿಯಾದ ಬಟ್ಟೆ, ತುಂಬಾ ಗಿಡ್ಡ ಬಟ್ಟೆಗಳನ್ನು ಹೆಂಡತಿ ಧರಿಸಿದರೆ ಗಂಡನಿಗೆ ಇಷ್ಟವಾಗುವುದಿಲ್ಲ. ಅವಳ ಡ್ರೆಸ್ಸಿಂಗ್ ಇತರರು ಅವಳನ್ನು ನೋಡಿ ಗೌರವ ಕೊಡುವಂತೆ ಇರಬೇಕು. ಆದಷ್ಟು ಡೀಸೆಂಟ್ ಡ್ರೆಸ್ ಹಾಕುವ ಹುಡುಗಿಯರು ಪುರುಷರಿಗೆ ಇಷ್ಟವಾಗುತ್ತಾರೆ. ಮೈ ತೋರಿಸಿ ಬಟ್ಟೆ ಹಾಕಿದರೆ ಅವರ ಬಗ್ಗೆ ಪುರುಷರು ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ. ನನ್ನ ಹೆಂಡತಿಯ ಬಗ್ಗೆ ಇತರರು ಹಾಗೆ ಮಾತನಾಡಬಾರದು ಎಂಬ ಆಸೆ ಪ್ರತಿಯೊಬ್ಬ ಗಂಡಸಿಗೂ ಇರುತ್ತದೆ.
2. ಸಿಲ್ಲಿ ರೀತಿ ವರ್ತಿಸಬಾರದು: ಮಾತನಾಡುತ್ತಿರುವಾಗ ಅವರ ಮೈ ಮೇಲೆ ಬಿದ್ದು ಮಾತನಾಡಿಸುವುದು, ಮನೆಯವರ ಎದುರಿಗೆ ಗಂಡನ ಜೊತೆ ಸಿಲ್ಲಿ ರೀತಿಯಲ್ಲಿ ವರ್ತಿಸುವುದು ಮಾಡಿದರೆ ಗಂಡನಿಗೆ ಇಷ್ಟವಾಗುವುದಿಲ್ಲ, ಅಲ್ಲದೆ ಹೆಂಡತಿ ಮೇಲೆ ಗೌರವ ಕೂಡ ಇಲ್ಲದಾಗುತ್ತದೆ.
3. ಮನೆಯವರ ಗೌರವ: ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅಲ್ಲಿಯವರಿಗೆ ಪ್ರೀತಿ ಪಾತ್ರಳಾಗುವಂತೆ ನಡೆದುಕೊಂಡರೆ ಗಂಡನು ತನ್ನ ಹೆಂಡತಿಯನ್ನು ತುಂಬಾ ಗೌರವಿಸುತ್ತಾನೆ.
4.ಕಂಡೀಷನ್ ಗಳನ್ನು ಹಾಕಬಾರದು: ಪ್ರತಿಯೊಂದು ವಿಷಯಕ್ಕೂ ಕಂಡೀಷನ್ ಹಾಕುವ ಗುಣ ಪುರುಷರಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ಮಿತಿಮೀರಿ ಕಂಡೀಷನ್ ಹಾಕಬಾರದು.
5. ಬೇಕು ಬೇಡವನ್ನು ಪೂರೈಸಬೇಕು: ಹೆಂಡತಿಯಾದವಳು ಗಂಡನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಮನೆಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಬುದ್ಧಿವಂತೆ ಆಗಿರಬೇಕು, ಅವನ ಕಷ್ಟಕ್ಕೆ ನೆರವಾಗಬೇಕು. ಅಂತಹ ಹೆಣ್ಣನ್ನು ಗಂಡನು ತುಂಬಾ ಗೌರವಿಸುತ್ತಾನೆ.



Click it and Unblock the Notifications
