Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮ ಪ್ರೀತಿಯ ಅತ್ತೆಗೆ ವಿಶ್ ಮಾಡಿದಿರಾ?

ಅತ್ತೆ-ಸೊಸೆಯ ಬಗ್ಗೆ ಅನೇಕ ಸಿನಿಮಾಗಳು ಬಂದಿವೆ, ಮೆಗಾ ಧಾರವಾಹಿಗಳೇ ಬಂದಿವೆ ಆದರೂ ಅತ್ತೆ ಸೊಸೆಯ ಶೀತಲ ಸಮರ ಮಾತ್ರ ಕೊನೆಗೊಂಡಿಲ್ಲ. ಈ ರೀತಿಯ ಅತ್ತೆ-ಸೊಸೆಯ ಜಗಳ ಸಮಾಜದ ಎಲ್ಲಾ ವರ್ಗದವರಲ್ಲೂ ಕಂಡು ಬರುತ್ತದೆ. ಅತ್ತೆ-ಸೊಸೆಯ ವೈರಿಯ ಸಂಬಂಧ ಬೆಳೆಯಲು ಕಾರಣ ಅತ್ತೆಯ ಮಗ, ಸೊಸೆಯ ಗಂಡನಾಗಿರುವ ಆ ಬಡಪಾಯಿ ಪುರುಷನೇ ಎಂದರೆ ಸ್ವಲ್ಪ ಆಶ್ಚರ್ಯ ಅನಿಸಬಹುದಲ್ಲವೇ?
ಹೌದು ತಾಯಿಯೂ ಮಗನನ್ನು ಕಷ್ಟಪಟ್ಟು ಬೆಳೆಸಿರುತ್ತಾಳೆ. ಮಗನೂ ಪ್ರತಿಯೊಂದು ವಿಷಯಕ್ಕೂ ಅಮ್ಮನನ್ನು ಅವಲಂಬಿಸಿರುತ್ತಾನೆ. ಬೆಳೆದು ದೊಡ್ಡವನಾಗಿ ಮದುವೆಯಾದ ನಂತರ ತನ್ನ ಸುಖ-ದುಃಖಗಳನ್ನು ಹೆಂಡತಿಯ ಬಳಿ ಹಂಚಿಕೊಳ್ಳಲಾರಂಭಿಸುತ್ತಾನೆ, ಅಮ್ಮನ ಬಳಿ ಹೇಳುವುದನ್ನು ಕಡಿಮೆ ಮಾಡುತ್ತಾನೆ. ಅಲ್ಲದೆ ತಾಯಿಗೆ ವಯಸ್ಸಾಗುತ್ತಾ ಬಂದಿರುತ್ತದೆ ತಾಯಿಯ ಬದಲು ಮನೆ ನಿರ್ವಹಣೆಯನ್ನು ಸೊಸೆ ಮಾಡಲಾರಂಬಿಸುತ್ತಾಳೆ. ಆಗ ಅತ್ತೆಯಾದವಳು ಸೊಸೆ ಬಂದ ಕಾರಣ ಈ ರೀತಿಯಾಯಿತು ಎಂದು ಯೋಚಿಸಿ ಅವಳನ್ನು ದ್ವೇಷಿಸಲಾರಂಭಿಸುತ್ತಾಳೆ.
ಇನ್ನು ಸೊಸೆಯೂ ಮದುವೆಯಾಗಿ ಗಂಡನ ಮನೆಗೆ ಬಂದ ತಕ್ಷಣ ಎಲ್ಲವೂ ನಾನು ಬಯಸಿದಂತೆ ಇರಬೇಕೆಂದು ಬಯಸುತ್ತಾಳೆ. ಒಂದು ವೇಳೆ ಅತ್ತೆ ಸೊಸೆಯ ತಪ್ಪುಗಳನ್ನು ಎತ್ತಿ ತೋರಿಸಿದರೆ, ಹೀಗೆ ಮಾಡಿದ್ದು ನನ್ನ ಒಳ್ಳೆಯದಕ್ಕೆ ಎಂದು ಭಾವಿಸದೇ ಅತ್ತೆ ನನ್ನ ಮೇಲೆ ದರ್ಬಾರು ಮಾಡುತ್ತಿದ್ದಾರೆ ಎಂದು ಅಪಾರ್ಥ ಕಲ್ಪಿಸಿಕೊಳ್ಳುತ್ತಾಳೆ. ಇಲ್ಲಿಗೆ ಅತ್ತೆ-ಸೊಸೆಯ ಕತೆ ಮುಗಿಯದ ಅಧ್ಯಾಯವಾಗುತ್ತದೆ.
ಅತ್ತೆ-ಸೊಸೆ ಆತ್ಮೀಯವಾಗಿ ಇರಬೇಕೆಂದರೆ ಸೊಸೆಯನ್ನು ಮಗಳಂತೆ ಅಲ್ಲ ಮಗಳಾಗಿಯೇ ಭಾವಿಸಬೇಕು, ಸೊಸೆ ಅಷ್ಟೆ ಅತ್ತೆಯನ್ನು ಅಮ್ಮನ ತರ ಅಲ್ಲ ಅಮ್ಮನಾಗಿಯೇ ಭಾವಿಸಬೇಕು. ಈ ರೀತಿ ನಡೆದುಕೊಂಡಿದ್ದೇ ಆದರೆ ಅತ್ತೆ-ಸೊಸೆ ಶತ್ರುಗಳ ರೀತಿ ಜೀವನ ನಡೆಸಬೇಕಾದ ಅಗತ್ಯ ಕಂಡು ಬರುವುದಿಲ್ಲ. ಇದಕ್ಕಾಗಿ ಅತ್ತೆ-ಸೊಸೆ ಇಬ್ಬರೂ ಮನಸ್ಸು ಮಾಡಬೇಕು.
ಅತ್ತೆ ಸೊಸೆ ಬಗ್ಗೆ ನಿಮಗೆ ಏನು ಅನಿಸುತ್ತದೆ ಎಂದು ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications
