Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ವಿಷಯಗಳನ್ನು ಯಾವತ್ತಿಗೂ ಸಹಿಸಿಕೊಳ್ಳಬೇಡಿ!
ಎಲ್ಲರ ಗುಣ ಒಂದೇ ರೀತಿ ಇರುವುದಿಲ್ಲ. ಒಡ ಹುಟ್ಟಿದವರೇ ಆದರೂ ಗುಣದಲ್ಲಿ ನಮ್ಮ ರೀತಿ ಇರುವುದಿಲ್ಲ. ಅದೇ ರೀತಿ ನಾವು ಪ್ರೀತಿಸುವ ವ್ಯಕ್ತಿ ಅಥವಾ ಬಾಳಸಂಗಾತಿ ಆಗುವವರು ನಮಗೆ ಇಷ್ಟವಾಗುವ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಕೆಲವೊಂದು ಗುಣಗಳು ನಮಗೆ ಇಷ್ಟವಾಗದೇ ಕೂಡ ಹೋಗಬಹುದು. ಸಂಬಂಧ ಜೀವಂತವಾಗಿ ಇರಲು ಹೊಂದಾಣಿಕೆ ಮಾಡಬೇಕಾಗುತ್ತದರ, ಅಲ್ಲದೆ ಹೊಂದಾಣಿಕೆಯ ಗುಣ ಅವಶ್ಯಕ ಕೂಡ.
ಇಲ್ಲಿ ನಾನು ಕೆಲವೊಂದು ಗುಣಗಳ ಬಗ್ಗೆ ಹೇಳಿದ್ದೇನೆ, ಆ ಗುಣಗಳು ಕಂಡು ಬಂದರೆ ಅವುಗಳನ್ನು ಸಹಿಸಿಕೊಳ್ಳಬೇಡಿ. ಏಕೆಂದರೆ ಅಂತಹವರಿಂದ ನೆಮ್ಮದಿ ದೊರೆಯಲು ಸಾಧ್ಯವಿಲ್ಲ. ಸಂಬಂಧದಲ್ಲಿ ಇರಕೂಡದ ಆ ಗುಣಗಳಾವುವು ಎಂದು ನೋಡೋಣ ಬನ್ನಿ:

ಕೆಳಮಟ್ಟದ ನಡುವಳಿಕೆ ಮತ್ತು ಹಿಂಸೆ ನೀಡುವ ಗುಣ: ತುಂಬಾ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವವುದು, ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುವುದು ಈ ರೀತಿ ಗುಣವಿದ್ದರೆ ಅಂತಹವರು ತುಂಬಾ ಅಪಾಯದ ವ್ಯಕ್ತಿಗಳಾಗಿರುತ್ತಾರೆ. ಅವರಿಂದ ದೂರವಾಗುವುದೇ ಒಳ್ಳೆಯದು.
ಕೆಟ್ಟದಾಗಿ ಮಾತನಾಡುವುದು: ಮಾತಿನಲ್ಲಿ ಸಂಶಯ ವ್ಯಕ್ತ ಪಡಿಸುವುದು, ಕೆಟ್ಟ ಪದಗಳಿಂದ ಬೈಯ್ಯುವುದು, ಬೇರೆಯವರ ಹತ್ತಿರ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಈ ರೀತಿಯ ಗುಣಗಳಿದ್ದರೆ ಅಂತಹವರ ಗುಣವನ್ನು ಸಹಿಸದಿರುವುದು ಒಳ್ಳೆಯದು.
ಮೋಸ ಮಾಡುವುದು: ನಂಬಿಕೆಗೆ, ಪ್ರೀತಿಗೆಗೆ ಮೋಸ ಮಾಡುವವರನ್ನು ಸಹಿಸಲು ಸಾಧ್ಯವೇ ಇಲ್ಲ. ನಿಜವಾದ ಪ್ರೇಮಿ ತಾನು ಪ್ರೀತಿಸುತ್ತಿರುವ ವ್ಯಕ್ತಿಯನ್ನು ಕನಸ್ಸಿನಲ್ಲಿಯೂ ಮೋಸ ಮಾಡಲು ಬಯಸುವುದಿಲ್ಲ.
ಎಲ್ಲಾ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವುದು: ಕೆಲವು ವರ್ಷಗಳ ಸಂಬಂಧದ ನಂತರ ಕೆಲ ಪುರುಷರು ತಾನು ಪ್ರೀತಿಸಿದ ಮಹಿಳೆಯ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಅವಳ ಭಾವನೆಗಳನ್ನು ತಿಳಿದುಕೊಳ್ಳಲು ಹೋಗುವುದೇ ಇಲ್ಲ. ಈ ರೀತಿಯ ನಡುವಳಿಕೆ ನಿಮ್ಮ ಬಾಳಸಂಗಾತಿಯಲ್ಲಿ ಕಾಣಿಸಿದರೆ ಅದರ ಬಗ್ಗೆ ಒಮ್ಮೆ ಮಾತನಾಡಿ. ಆಗಲೂ ಕೇಳದಿದ್ದರೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ನೀವೇ ತೀರ್ಮಾನಿಸಿ.
ಪೊಸೆಸಿವ್‌ನೆಸ್: ಪ್ರೀತಿ ಇರುವಲ್ಲಿ ಪೊಸೆಸಿವ್‌ನೆಸ್ ಇರುತ್ತದೆ, ಆದರೆ ಅದೇ ಮಿತಿಯಾದರೆ ಸಹಿಸಿಕೊಳ್ಳಲು ಕಷ್ಟವಾಗುತ್ತದೆ.
ಸುಳ್ಳು ಹೇಳುವುದು: ತುಂಬಾ ನಂಬಿಕೆಯಿಂದ ಅವರು ಹೇಳುವುದೆಲ್ಲಾ ನಿಜವೆಂದು ನಂಬಿ, ಒಂದು ದಿನ ಸುಳ್ಳೆಂದು ಗೊತ್ತಾದಾಗ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ.
ಮಕ್ಕಳ ವಿಷಯದಲ್ಲಿ: ಮೊದಲನೇ ಸಂಬಂಧದಿಂದ ನಿಮಗೆ ಮಕ್ಕಳಿದ್ದು ಆ ವ್ಯಕ್ತಿ ತೀರಿ ಹೋಗಿ ಅಥವಾ ಬಿಟ್ಟು ಹೋಗಿ ಒಂಟಿಯಾಗಿ ಇರುವಾಗ ನಿಮ್ಮ ಜೊತೆ ಹೊಸ ಸಂಬಂಧಕ್ಕೆ ಯಾರಾದರೂ ಸಿದ್ಧವಾದರೆ ಅವರು ನಿಮ್ಮ ಜೊತೆ ನಿಮ್ಮ ಮಗುವನ್ನು ಸ್ವೀಕರಿಸಲು ಸಿದ್ಧವಿಲ್ಲವೆಂದರೆ ಅವರ ಜೊತೆ ಬಾಳ್ವೆ ಮಾಡಲು ಮುಂದಾಗದಿರುವುದು ಒಳ್ಳೆಯದು.



Click it and Unblock the Notifications
