Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಗಂಡನನ್ನು ಇತರರೊಡನೆ ಹೋಲಿಕೆ ಮಾಡಬೇಡಿ!

ಮಾವನ ಜೊತೆ: ಹೆಣ್ಣು ಮಕ್ಕಳಿಗೆ ಗಂಡನನ್ನು ತಮ್ಮ ಅಪ್ಪನ ಜೊತೆ ಹೋಲಿಕೆ ಮಾಡುವ ಗುಣ ಅಧಿಕವಿರುತ್ತದೆ. ಆದರೆ ಗಂಡನಿಗೆ ಈ ರೀತಿ ಹೋಲಿಕೆ ಮಾಡುವುದು ಸ್ವಲ್ಪವೂ ಇಷ್ಟವಿರುವುದಿಲ್ಲ. ನನ್ನ ಅಪ್ಪ ನನಗೆ ಸ್ವಲ್ಪ ಹುಷಾರಿಲ್ಲದಿದ್ದರೆ ಸಾಕು ತುಂಬಾ ಗಾಬರಿ ಬೀಳುತ್ತಿದ್ದರು, ನನ್ನ ಅಪ್ಪ ತುಂಬಾ ಅಸ್ತಿ ಮಾಡಿದ್ದಾರೆ ಹೀಗೆ ಪ್ರತಿಯೊಂದು ವಿಷಯಕ್ಕೂ ಗಂಡನನ್ನು ಅಪ್ಪನ ಜೊತೆ ಹೋಲಿಕೆ ಮಾಡುತ್ತಾ ಹೋದರೆ ಸಂಸಾರದಲ್ಲಿ ಕಲಹ ಉಂಟಾಗುವುದು.
ಗೆಳೆಯರ ಜೊತೆ ಹೋಲಿಕೆ: ಬೆಸ್ಟ್ ಫ್ರೆಂಡ್ ಇದ್ದು ಯಾವುದಾದರೂ ಒಂದು ಕಾರಣಕ್ಕೆ ನೀವು ನಿಮ್ಮ ಗಂಡನನ್ನು ಗೆಳೆಯನ ಜೊತೆ ಹೋಲಿಕೆ ಮಾಡಿ ಹೇಳಿದರೆ ಅವರಿಗೆ ಇಷ್ಟವಾಗುವುದಿಲ್ಲ.
ಗಂಡನ ಗೆಳೆಯರ ಜೊತೆ ಹೋಲಿಕೆ ಮಾಡುವುದು: ಗಂಡನ ಗೆಳೆಯರ ಬಗ್ಗೆ ಹೇಳುತ್ತಾ ನಿಮ್ಮ ಗೆಳಯ ತುಂಬಾ ಸಂಪಾದಿಸಿದ್ದಾನೆ, ನೀವು ಏನು ಮಾಡಿದ್ದೀರಿ? ಹೀಗೆ ಅವರ ಗೆಳೆಯರ ಜೊತೆ ಹೋಲಿಕೆ ಮಾಡಿದರೆ ನೀವು ಅವರನ್ನು ಅಪಮಾನಿಸುತ್ತಿದ್ದೀರ ಎಂದು ಭಾವಿಸುತ್ತಾರೆ. ನಿಮ್ಮ ಸಂಸರದಲ್ಲಿ ಸುಮ್ಮನೆ ಕಲಹ ಬರುವುದು ಬೇಡ ಎಂದು ಬಯಸುವುದಾದರೆ ನಿಮ್ಮ ಗಂಡನನ್ನು ಇತರರೊಡನೆ ಹೋಲಿಕೆ ಮಾಡದಿರುವುದು ಒಳ್ಳೆಯದು.
ಒಬ್ಬರು ಮತ್ತೊಬ್ಬರಂತೆ ಇರುವುದಿಲ್ಲ, ಆದ್ದರಿಂದ ಒಬ್ಬರಲ್ಲಿ ಕಂಡ ಗುಣವನ್ನು ಮತ್ತೊಬ್ಬರಲ್ಲಿ ಬಯಸುವುದು ಕೂಡ ತಪ್ಪು. ಅಲ್ಲದೆ ಈ ರೀತಿ ಹೋಲಿಕೆ ಮಾಡುತ್ತಿದ್ದರೆ ಸಂಬಂಧ ಹಾಳಾಗುತ್ತದೆ, ನೋವು ಹೆಚ್ಚಾಗುತ್ತದೆ ಆದ್ದರಿಂದ ಹೋಲಿಕೆಯಿಂದ ಗುಣ ಸಿಗುವುದಾದರೆ ಮಾತ್ರ ಹೋಲಿಕೆ ಮಾಡಬೇಕು, ಇಲ್ಲದಿದ್ದರೆ ಮಾಡಲು ಹೋಗಬಾರದು.



Click it and Unblock the Notifications
