Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಂಸಾರದಲ್ಲಿ ವೈಬ್ರೆಷನ್ ಮಾಡುವ ಮೊಬೈಲ್!

ಅಯ್ಯೋ! ಹಾಲು-ಜೇನಿನ ರೀತಿ ಇದ್ದ ಇವರಿಗೆ ಏನಾಯಿತಪ್ಪಾಎಂದು ಯೋಚಿಸಿ ಕಾರಣವೇನೆಂದು ತಿಳಿಯಬಹುದಾ ಎಂದು ಕೇಳಿದ್ದಕ್ಕೆ "ಏನಿಲ್ಲಾ ಕಣೇ, ಅವರು ಆಫೀಸ್ ನಿಂದ ಬಂದಿದ್ದರು ಅಷ್ಟೇ, ಅವರಿಗೆ ಟೀ ಕೊಡುವ ಅನ್ನುವಷ್ಟರಲ್ಲಿ ವಿಜಿ ಫೋನ್ ಮಾಡಿದ್ದಳು. ಅವಳ ಜೊತೆ ಸ್ವಲ್ಪ ಹೊತ್ತು ಮಾತನಾಡಿದೆ. ಅಷ್ಟಕ್ಕೆ ಇವರಿಗೆ ಕೋಪ ಬಂದಿದೆ, ಇವರು ಕೂಡ ಮನೆಗೆ ಬಂದರೂ ಫೋನ್ ನಲ್ಲಿ ಇರುವುದಿಲ್ಲಲ್ವಾ? ನಾನು ಫೋನ್ ನಲ್ಲಿ ಮಾತನಾಡಿದ್ದು ತಪ್ಪಾ?"ಎಂದು ಕೇಳಿದಳು.
ಅದಕ್ಕೆ ನಾನು ನೀನು ಪೋನ್ ನಲ್ಲಿ ಮಾತನಾಡಿದ್ದು ತಪ್ಪಲ್ಲ, ಆದರೆ ಅವರು ಆಫೀಸ್ ನಿಂದ ಬಂದ ಹೊತ್ತಿನಲ್ಲಿ ಮಾತನಾಡಿಕೊಂಡು ಕೂತಿದ್ದು ತಪ್ಪು ಎಂದೆ. ಮೊಬೈಲ್ ಬಿಟ್ಟು ಇರುವುದು ಕಷ್ಟ, ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ಗೊತ್ತಿರಬೇಕು, ಇಲ್ಲದಿದ್ದರೆ ಇಬ್ಬರ ನಡುವೆ ಕಲಹ ಬರಬಹುದು. ಅದರಲ್ಲೂ ಈ ಕೆಳಗಿನ ಸಂದರ್ಭದಲ್ಲಿ ಮೊಬೈಲ್ ಬಳಸಿದರೆ ಸುಮ್ಮನೆ ಜಗಳಕ್ಕೆ ಕಾರಣವಾಗುತ್ತದೆ.
ಮುಖ್ಯವಾದ ವಿಷಯದ ಬಗ್ಗೆ ಮಾತನಾಡುತ್ತಿರುವಾಗ: ಗಂಡ-ಹೆಂಡತಿ ಇಬ್ಬರು ಕುಳಿತು ಯಾವುದೋ ಮುಖ್ಯವಾದ ವಿಷಯದ ಕುರಿತು ಮಾತನಾಡುತ್ತೀರ. ಅಷ್ಟೊತ್ತಿಗೆ ಯಾರಾದರೊಬ್ಬರ ಮೊಬೈಲ್ ಗುಣಗಲಾರಂಭಿಸುತ್ತದೆ. ಅಷ್ಟೊತ್ತಿಗೆ ನಿಮ್ಮ ಗಮನ ಅದರತ್ತ ಸರಿದು ಮಾತನಾಡುತ್ತಿರುವ ವಿಷಯ ಮರೆತು ಹೋಗುತ್ತದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ ಅಷ್ಟು ಅವಶ್ಯಕತೆ ಇರುವ ಕರೆ ಮಾತ್ರ ಸ್ವೀಕರಿಸಬೇಕು.
ರೊಮ್ಯಾನ್ಸ್ ಸಮಯದಲ್ಲಿ: ರೊಮ್ಯಾನ್ಸ್ ಮೂಡಿನಲ್ಲಿರುವಾಗ ಯಾರಾದರೊಬ್ಬರ ಮೊಬೈಲ್ ಬಡಿದುಕೊಳ್ಳಲಾರಂಭಿಸಿದರೆ. ಆಗ ಕರೆ ಸ್ವೀಕರಿಸಿದರೆ ಮತ್ತೊಬ್ಬರಿಗೆ ಕೋಪ ಬರುವುದು.
ಆಫೀಸ್ ನಿಂದ ಬಂದ ನಂತರ: ಆಫೀಸ್ ನಿಂದ ಬಂದ ನಂತರ ಸದಾ ಫೋನ್ ನಲ್ಲಿದ್ದರೆ ಜೊತೆಯಲ್ಲಿದ್ದವರಿಗೆ ಕಿರಿಕಿರಿಯಾಗುವುದು. ಈ ಅಭ್ಯಾಸ ಇದ್ದರೆ ದಾಂಪತ್ಯ ಬದುಕು ಚೆನ್ನಾಗಿರಲು ಆ ರೀತಿ ಫೋನ್ ನಲ್ಲಿರುವ ಗುಣವನ್ನು ಬಿಡುವುದು ಒಳ್ಳೆಯದು.
ರಜಾ ದಿನದಲ್ಲಿ: ವೀಕೆಂಡ್ ನಲ್ಲಿ ಒಂದು ಆರಾಮವಾಗಿ ಕಳೆಯೋಣ ಎಂದಿರುವಾ ಗಂಟೆಗಟ್ಟಲೆ ಪೋನ್ ನಲ್ಲಿದ್ದರೆ ಅಥವಾ ಆಗಾಗ ಫೋನ್ ಬರುತ್ತಿದ್ದರೆ ಈ ಕಾರಣದಿಂದ ಗಂಡ ಹೆಂಡತಿಯ ನಡುವೆ ಜಗಳ ಪ್ರಾರಂಭವಾಗುತ್ತದೆ.
ಜಗಳದ ಸಮಯದಲ್ಲಿ: ಗಂಡ-ಹೆಂಡತಿ ಅಂದ ಮೇಲೆ ಸಣ್ಣ ಪುಟ್ಟ ಜಗಳ ಬರುವುದು ಸಾಮಾನ್ಯ. ಒಬ್ಬರು ಮುನಿಸಿಕೊಂಡು ಇದ್ದಾಗ ಮತ್ತೊಬ್ಬರು ಫೋನ್ ನಲ್ಲಿ ಬ್ಯೂಸಿಯಾಗಿದ್ದರೆ ಜಗಳ ಮತ್ತಷ್ಟು ಹೆಚ್ಚಾಗುವುದು.
ಅತ್ಯಧಿಕ ಕರೆ ಬರುವುದು: ತುಂಬಾ ಕರೆಗಳು ಬರುತ್ತಿದ್ದರೆ ಬಾಳ ಸಂಗಾತಿಗೆ ನಿಮ್ಮ ಮೇಲೆ ಸಂಶಯ ಬರಲು ಕಾರಣವಾಗುತ್ತದೆ.
ಆದ್ದರಿಂದ ಈ ಮೇಲಿನ ಸಂದರ್ಭಗಳಲ್ಲಿ ಮೊಬೈಲ್ ಬಳಸದಿದ್ದರೆ ಅಥವಾ ತುಂಬಾ ಕಡಿಮೆ ಬಳಿಸಿದರೆ ಮೊಬೈಲ್ ನಿಂದ ಸಂಸಾರದಲ್ಲಿ ಬಿರುಕು ಮೂಡುವುದನ್ನು ತಡೆಯಬಹುದು.



Click it and Unblock the Notifications
