Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮುತ್ತೈದೆಯರು ಮಾಡುವ ತಪ್ಪುಗಳಿವು!

ನನ್ನ ತುಂಬಾ ಜನ ಫ್ರೆಂಡ್ಸ್ ನೋಡಿದ್ದೇನೆ, ಮದುವೆಯಾದ ನಂತರ ಸಂಪೂರ್ಣ ಬದಲಾಗಿ ಬಿಟ್ಟಿದ್ದಾರೆ. ಮದುವೆಯಾದ ನಂತರ ತುಂಬಾ ಜವಬ್ದಾರಿ ಇರುತ್ತದೆ. ಹೊಸ ಬದುಕು, ಹೊಸ ಪರಿಸರ, ಹೊಸ ಬಂಧುಗಳು, ಗಂಡನ ಮನೆಯಲ್ಲಿ ಒಳ್ಳೆಯ ಹೆಸರು ಪಡೆಯಲು ಹೆಣಗಾಡಬೇಕಾಗುತ್ತದೆ. ಹಾಗಂತ ಮದುವೆಯಾಗುವವರೆಗೆ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಮನೆಯವರನ್ನು ಮರೆಯುವುದು ಸರಿಯೇ?
ಕೆಲವರಿಗೆ ಗಂಡನ ಮನೆಯವರು ಅಥವಾ ಗಂಡನಿಂದ 'ಸ್ನೇಹಿತರ ಜೊತೆ ಮಾತನಾಡಬೇಡ, ತವರು ಮನೆಗೆ ಹೋಗ ಬೇಡ' ಅಂತ ನಿರ್ಬಂಧವಿರುತ್ತದೆ. ಈ ರೀತಿ ನಿರ್ಬಂಧ ಹಾಕುವವರ ಹತ್ತಿರ "ನಾನು ನಿಮ್ಮನ್ನು ಮದುವೆಯಾದ ಕಾರಣ ಹಳೆಯ ಸ್ನೇಹಿತರನ್ನು, ನನ್ನ ಮನೆಯವರ ಜೊತೆಯ ಒಡನಾಟವನ್ನು ಬಿಡು ಎಂದು ಹೇಳುವುದಾದರೆ, ನೀವು ನನ್ನ ಮದುವೆಯಾದ ನಂತರ ನಿಮ್ಮ ಸ್ನೇಹಿತರಿಂದ ದೂರವಿದ್ದೀರಾ? ಅವರ ಜೊತೆ ಮಾತನಾಡುತ್ತಿಲ್ಲವೇ?" ಎಂದು ಸಮಧಾನವಾಗಿ ಕೇಳಿ. ಮದುವೆಯಾದ ನಂತರ ಗಂಡನ ಸ್ನೇಹಿತರು ಹೆಂಡತಿಗೆ ಸ್ನೇಹಿತರಾಗುತ್ತಾರೆ ಹೊರತು ಹೆಂಡತಿಯ ಸ್ನೇಹಿತರು ಗಂಡನಿಗೆ ಅಪರಿಚಿತರಾಗಿಯೇ ಉಳಿದು ಬಿಡುತ್ತಾರೆ.
ಇದೇನು ಇವಳು ಫೆಮಿನಿಸಂ ಮಾತನಾಡುತ್ತಿದ್ದೀಳಾ ಎಂದು ಯೋಚಿಸಬೇಡಿ. ಇದು ಫೆಮಿನಿಸಂ ಅಲ್ಲ, ಮದುವೆಯಾದ ನಂತರ ಎಷ್ಟೋ ಹೆಣ್ಣು ಮಕ್ಕಳಿಗೆ ಏಕಪ್ಪ ಮದುವೆಯಾದೆ ಎಂದು ಅನಿಸಿಬಿಡುತ್ತದೆ. ಗಂಡನ ಮನೆಯಲ್ಲಿ ತುಂಬಾ ನಿರ್ಬಂಧಗಳಿದ್ದರೆ ಮಾತ್ರ ಈ ಭಾವನೆ ಬರಲು ಸಾಧ್ಯ. ಈ ಭಾವನೆ ಬರದಿರಲು ಮದುವೆಯ ನಂತರ ಕೂಡ ನಿಮ್ಮ ಒಳ್ಳೆಯ ಸ್ನೇಹಿತರ ಸಹವಾಸ ಬಿಡಬೇಡಿ. ಅಪ್ಪ-ಅಮ್ಮ ಮತ್ತು ತವರು ಮನೆಯ ಬಂಧುಗಳ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಿ.
ಗಂಡನ ಮನೆಯವರ ಜೊತೆ ಕೂಡ ಪ್ರೀತಿಯಿಂದ ಬಾಳಬೇಕು, ಸಣ್ಣಪುಟ್ಟ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು, ಗಂಡನ ಮನೆಯವರು ಸ್ವಲ್ಪ ಏನಾದರೂ ಅಂದರೆ ತುಂಬಾ ಕೋಪ ಬಂದು ಬಿಡುತ್ತದೆ, ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನಡೆಯುವ ಅಭ್ಯಾಸ ಹೆಚ್ಚಿನ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತದೆ, ಅಂತಹವರು ಒಂದು ಕ್ಷಣ ಯೋಚಿಸಿ, ನೀವು ತವರು ಮನೆಯಲ್ಲಿ ಇದ್ದಾಗ ಅಮ್ಮ,-ಅಪ್ಪ ಅಥವಾ ಒಡಹುಟ್ಟಿದವರು ಬೈಯ್ದಾಗ ಆ ಕ್ಷಣ ಬೇಜಾರು ಪಟ್ಟು ನಂತರ ನಗುನಗುತ್ತಾ ಇರುವುದಿಲ್ಲವೇ, ಅದೇ ರೀತಿ ಇಲ್ಲಿ ಇರಲು ಪ್ರಯತ್ನಿಸಿ, ಆಗ ನಿಮ್ಮ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ.
ಮದುವೆಯಾದ ನಂತರ ಮುಕ್ಕಾಲು ಭಾಗದಷ್ಟು ಹೆಣ್ಣು ಮಕ್ಕಳು ಹಳೆಯ ಸ್ನೇಹಿತರು ಮತ್ತು ಮನೆಯವರಿಂದ ದೂರವಾದರೆ, ಮತ್ತೆ ಕೆಲವು ಹೆಣ್ಣು ಮಕ್ಕಳು ಮಾಡುವ ತಪ್ಪೆಂದರೆ ಗಂಡನ ಮನೆಯವರಿಗಿಂತ ತನ್ನ ಮನೆಯವರಿಗೇ ಪ್ರಾಮುಖ್ಯತೆ ಕೊಡುವುದು. ಗಂಡನ ಮನೆಯವರನ್ನು ನಿರ್ಲಕ್ಷ್ಯ ಮಾಡುವುದು, ತಾನು, ತನ್ನ ಮನೆಯವರು ಮತ್ತು ತನ್ನ ಸ್ನೇಹಿತರು ಅಂತ ಇದ್ದು ಬಿಡುವುದು . ಈ ರೀತಿಯ ಗುಣವಿದ್ದರೆ ಅಂತಹ ಹೆಣ್ಣಿಗೆ ಗಂಡನ ಮನೆಯವರ ಮೆಚ್ಚುಗೆ ಪಡೆಯುವುದಿರಲಿ, ಸುಂದರ ದಾಂಪತ್ಯ ನಡೆಸಲು ಸಾಧ್ಯವಾಗುವುದೇ ಇಲ್ಲ!
ಆದ್ದರಿಂದ ಮದುವೆಯ ನಂತರ ಈ ಮೇಲಿನ ಎರಡೂ ತಪ್ಪುಗಳನ್ನೂ ಮಾಡಬಾರದು, ಹಳೆಯ ಬಾಂಧವ್ಯದ ಕೊಂಡಿ ಕಳಚದೆ ಹೊಸ ಬಾಂಧವ್ಯವನ್ನು ಆ ಕೊಂಡಿಗೆ ಜೋಡಿಸಿ ಆಗ ನಿಮಗೆ ಯಾರನ್ನೂ ಕಳೆದುಕೊಳ್ಳಬೇಕಾದ ಸಂದರ್ಭ ಬರುವುದಿಲ್ಲ.



Click it and Unblock the Notifications
