Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎಲ್ಲಾ ಪುರುಷರಲ್ಲಿ ಕಾಣಸಿಗದ ಗುಣಗಳಿವು!

ಅಂತಹ ಹುಡುಗರು ಸಿಗಬಹುದು, ಆದರೆ ಇವೆಲ್ಲಕ್ಕಿಂತ ಹುಡುಗರ ಕೆಲವೊಂದು ಗುಣಗಳು ಹುಡುಗಿಯರನ್ನು ತುಂಬಾ ಆಕರ್ಷಿಸುತ್ತದೆ. ಆದರೆ ಈ ಗುಣಗಳು ಎಲ್ಲಾ ಪುರುಷರಲ್ಲಿ ಕಂಡುಬರುವುದಿಲ್ಲ. ಈ ಕೆಳಗಿನ ಗುಣವಿರುವ ಹುಡುಗರು ತಮ್ಮ ಪ್ರೀತಿ ವ್ಯಕ್ತ ಪಡಿಸಿದರೆ ಹುಡುಗಿಯರು ಯಾವುದೇ ಕಾರಣಕ್ಕೂ ನಿರಾಕರಿಸುವುದಿಲ್ಲ. ಅಂತಹ ವಿಶಿಷ್ಠ ಗುಣಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
ಅಡುಗೆ ಮಾಡಲು ಗೊತ್ತಿರಬೇಕು: ಕೆಲ ಹುಡುಗರು ಅಡುಗೆ ಮನೆ ಮತ್ತು ನಮಗೆ ಸಂಬಂಧನೇ ಇಲ್ಲ ಎಂದು ಭಾವಿಸುತ್ತಾರೆ ಆದರೆ ಕೆಲ ಪುರುಷರು ಮಹಿಳೆಯರು ಮಾಡುವುದಕ್ಕಿಂತ ರುಚಿಕರವಾದ ಅಡುಗೆಯನ್ನು ತಯಾರಿಸುತ್ತಾರೆ. ಯಾವತ್ತೂ ಅವಳೇ ಅಡುಗೆ ಮಾಡಿ ಬಡಿಸುವಾಗ ಅಪರೂಪಕ್ಕೆ ನೀವು ಅಡುಗೆ ಮಾಡಿ ಬಡಿಸಿ ನೋಡಿ, ಅವಳಿಗೆ ತುಂಬಾ ಖುಷಿ ಪಡುತ್ತಾಳೆ.
ಒಂದು ದಿನ ಹುಷಾರು ತಪ್ಪಿದರೂ ಇವನು ಅಡುಗೆ ಮಾಡಿ ಹಾಕುತ್ತಾನೆ ಅನ್ನುವ ಭರವಸೆ ಅವಳಿಗೆ ಬರುತ್ತದೆ. ಒಂದು ವೇಳೆ ನಿಮ್ಮ ಹೆಂಡತಿಗೆ ಹುಷಾರು ತಪ್ಪಿದಾಗ ಹೊರಗಿನಿಂದ ಆಹಾರ ತಂದು ತಿನ್ನದೆ ನೀವೇ ಅಡುಗೆ ಮಾಡಿ, ಅವಳಿಗೆ ಕೊಡಿ. ಆಗ ಅವಳ ಮುಖದಲ್ಲಿ ಕಾಣುವ ಸಂತೋಷ ಎಷ್ಟೇ ದೊಡ್ಡ ರೆಸ್ಟೋರೆಂಟ್ ಗೆ ಕರಕ್ಕೊಂಡು ಹೋದರೂ ಕಾಣಲು ಸಾಧ್ಯವಿಲ್ಲ.
ತಾಯಿಯನ್ನು ನೋಡಿಕೊಳ್ಳುವ ಹುಡುಗ: ತಾಯಿಯ ಮಾತಿಗೆ ಗೌರವ ಕೊಡುವವನು, ತಾಯಿಯನ್ನು ಚೆನ್ನಾಗಿ ನೋಡಿ ಕೊಳ್ಳುವವನು ಹುಡುಗಿಯರಿಗೆ ತುಂಬಾ ಇಷ್ಟ. ಏಕೆಂದರೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವವನು ನನ್ನನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳಬಲ್ಲ ಎಂಬ ಭಾವನೆ ಹೆಣ್ಣು ಮಕ್ಕಳಲ್ಲಿ ಇರುತ್ತದೆ..
ಪ್ರಾರ್ಥನೆ ಮಾಡುವವರು: ತುಂಬಾ ಭಕ್ತಿಯಿಂದ ದೇವರ ಆರಾಧನೆ ಮಾಡುವ ಪುರುಷರು ಹುಡುಗಿಯರಿಗೆ ಇಷ್ಟವಾಗುತ್ತಾರೆ. ಏಕೆಂದರೆ ಭಕ್ತಿ ಇರುವ ಮನಸ್ಸಿನಲ್ಲಿ ಕಲ್ಮಶ ಇರಲು ಸಾಧ್ಯವಿಲ್ಲ ಎಂದು ಹುಡುಗಿಯರು ಅಂತಹ ಹುಡುಗರನ್ನು ತುಂಬಾ ಇಷ್ಟಪಡುತ್ತಾರೆ
ನಮ್ಮ ಮಾತನ್ನು ಕೇಳುವವರು: ತಾವು ಮಾತನಾಡುತ್ತಿದ್ದರೆ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ತೋರಿಸುವ ಪುರುಷ ಮಹಿಳೆಯರಿಗೆ ತುಂಬಾ ಇಷ್ಟವಾಗುವುದು.
ಅಳುವ ಹುಡುಗರು: ಅಳುವುದು ಪುರುಷ ಲಕ್ಷಣವಲ್ಲ ಎಂದು ಭಾವಿಸಿ ಅನೇಕ ಪುರುಷರು ಅಳಲು ಹಿಂಜಿರಿಯುತ್ತಾರೆ. ಆದರೆ ದುಃಖ ಆದಾಗ ಅಳುವ ಹುಡುಗರನ್ನು ಮಹಿಳೆಯರು ತುಂಬಾ ಒಳ್ಳೆಯವನೆಂದು ಬೇಗನೆ ನಂಬಿ ಬಿಡುತ್ತಾರೆ.
ಪಿಂಕ್ ಬಣ್ಣದ ಬಟ್ಟೆ: ಹೆಣ್ಣು ಮಕ್ಕಳು ಪಿಕ್ ಬಣ್ಣ ತುಂಬಾ ಇಷ್ಟಪಡುತ್ತಾರೆ. ಪುರುಷರು ಪಿಂಕ್ ಬಣ್ಣದ ಶರ್ಟ್ ಧರಿಸಿದರೆ ಮಹಿಳೆಯರಿಗೆ ಇಷ್ಟವಾಗುತ್ತಾರೆ. ಪಿಂಕ್ ಬಣ್ಣ ಎಲ್ಲಾ ಪುರುಷರಿಗೆ ಚೆಂದ ಕಾಣುವುದಿಲ್ಲ. ಆದರೆ ತೆಳು ಪಿಂಕ್ ಬಣ್ಣದ ಶರ್ಟ್ ಎಣ್ಣೆಗೆಂಪು ಬಣ್ಣದ ಹುಡುಗರಿಗೆ ಆಕರ್ಷಕವಾಗಿ ಕಾಣುವುದು.
ಮಕ್ಕಳನ್ನು ಇಷ್ಟಪಡುವವರು: ಮಕ್ಕಳನ್ನು ಇಷ್ಟಪಡುವ ಮತ್ತು ಮಕ್ಕಳ ಜೊತೆ ಚೆನ್ನಾಗಿ ಬೆರೆಯುವ ಹುಡುಗರೆಂದರೆ ಹುಡುಗಿಯರಿಗೆ ತುಂಬಾ ಇಷ್ಟವಾಗುವುದು.
ಹಾಸ್ಯ ಗುಣವಿರುವವರು: ಕೆಲವರ ಜೊತೆ ಮಾತನಾಡಿದರೆ ಅವರು ಮಾಡುವ ಹಾಸ್ಯಕ್ಕೆ ನಮ್ಮಲ್ಲಿರುವ ಚಿಂತೆಗಳು ಮಾಯವಾಗುತ್ತದೆ. ಈ ರೀತಿ ಹಾಸ್ಯ ಪ್ರವೃತ್ತಿ ಇರುವ ಹುಡುಗರೆಂದರೆ ಹುಡುಗಿಯರಿಗೆ ತುಂಬಾ ಇಷ್ಟವಾಗುವುದು.
ಇದಲ್ಲದೆ ವಿಶಾಲ ಮನೋಭಾವ, ಬೇರೆಯವರ ಭಾವನೆಗಳನ್ನು ಗೌರವಿಸುವುದು, ಆಂತರಿಕ ಸೌಂದರ್ಯಕ್ಕೆ ಹೆಚ್ಚು ಬೆಲೆ ಕೊಡುವ ಹುಡುಗರು ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತಾರೆ.



Click it and Unblock the Notifications
