Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅವನಿಗೆ ನೀವೆಂದರೆ ಇಷ್ಟ ಅಂತ ಹೇಗೆ ಹೇಳುವಿರಿ?

ಅದನ್ನೇ ಫ್ರೆಂಡ್ಸ್ ಬಳಿ ಹೇಳಿ ಅವನು ನನ್ನನ್ನು ಏಕೆ ಹಾಗೆ ನೋಡುತ್ತಿದ್ದಾನೆ ಎಂದು ಸಿಡಿಮಿಡಿಗೊಂಡಂತೆ ನಟಿಸಿ, ನಾನು ಚೆಂದವಾಗಿರುವುದಕ್ಕೆ ಅವನು ನನ್ನನ್ನು ನೋಡುತ್ತಿದ್ದಾನೆ ಎಂದು ಮನಸ್ಸಿನಲ್ಲಿಯೇ ಖುಷಿ ಪಟ್ಟುಕೊಳ್ಳುತ್ತಾಳೆ.
ಸ್ನೇಹಿತರೇ, ಈ ರೀತಿ ಒಬ್ಬ ಹುಡುಗ ನಿಮ್ಮನ್ನು ನೋಡುತ್ತಿದ್ದರೆ , ನಿಮ್ಮ ಮೇಲೆ ಅಕ್ಕರೆ ತೋರುತ್ತಿದ್ದರೆ ಅವನಿಗೆ ನಿಮ್ಮ ಬಗ್ಗೆ ಆಕರ್ಷಣೆಯಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಕೆಳಗಿನ ಅಂಶಗಳನ್ನು ಗಮನಿಸಿ ನಂತರ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.
1. ಅವರ ನಡುವಳಿಕೆ ನೋಡಿ ಕಂಡುಹಿಡಿಯಬಹುದು. ಪರಿಣಿತರ ಪ್ರಕಾರ ಹುಡುಗಿಯರಿಗೆ ಒಂದು ಹುಡುಗ ಇಷ್ಟವಾದರೆ ಕಂಡು ಹಿಡಿಯುವುದು ಸ್ವಲ್ಪ ಕಷ್ಟ ಏಕೆಂದರೆ ಅವರು 54 ರೀತಿಯ ಬಾಡಿ ಲಾಂಗ್ವೇಜ್ ಉಪಯೋಗಿಸುತ್ತಾರೆ. ಆದರೆ ಪುರುಷರು 10 ಬಾಡಿ ಲಾಂಗ್ವೇಜ್ ಮಾತ್ರ ಉಪಯೋಗಿಸುತ್ತಾರೆ. ಇದರಿಂದ ಸುಲಭವಾಗಿ ಕಂಡು ಹಿಡಿಯಬಹುದು.
2. ನಿಮ್ಮನ್ನು ತುಂಬಾ ಸಲ ನೋಡುತ್ತಿರುತ್ತಾನೆ. ನಿಮ್ಮನ್ನು ಕಂಡ ಕ್ಷಣ ಹುಬ್ಬೇರಿಸುತ್ತಾನೆ. ಅವನು ನಿಮ್ಮನ್ನು ನೋಡಬೇಕೆಂದು ಉದ್ದೇಶಪೂರ್ವಕವಾಗಿ ನಿಮ್ಮನ್ನು ನೋಡುವುದಿಲ್ಲ. ಅವನಿಗೆ ಗೊತ್ತಿಲ್ಲದೆಯೇ ಅವನ ಕಣ್ಣುಗಳು ನಿಮ್ಮನ್ನು ಹುಡುಕುತ್ತಿರುತ್ತವೆ.
3. ನಿಮ್ಮ ಜೊತೆ ಮಾತನಾಡುವಾಗ ನಿಮ್ಮ ಸಮೀಪ ಬಂದು ಮಾತನಾಡಿಸುತ್ತಾನೆ.
4. ನಿಮ್ಮನ್ನು ನೋಡಿದಾಗೆಲ್ಲಾ ತಕ್ಷಣ ಟೈ ಮತ್ತು ಶರ್ಟ್ ಸರಿಪಡಿಸುವುದು, ತಲೆಕೂದಲಿನಲ್ಲಿ ಕೈಯಾಡಿಸುವುದು ಮಾಡುತ್ತಿದ್ದರೆ ಅವನು ನಿಮ್ಮನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂದು ಅರ್ಥ.
5. ಅವನ ಕಣ್ಣುಗಳನ್ನು ದಿಟ್ಟಿಸಿ ನೋಡಿದಾಗ ನಿಮ್ಮ ಕಣ್ಣುಗಳನ್ನು ನೋಡುತ್ತಾ ನಿಮ್ಮನ್ನು ಆಕರ್ಷಿಸಲು ಪ್ರಯತ್ನಿಸುವುದು, ಕದ್ದು ಮುಚ್ಚಿ ನಿಮ್ಮನ್ನು ನೋಡುವುದು, ನಿಮ್ಮನ್ನು ನೋಡಿದ ತಕ್ಷಣ ಕಣ್ಣುಗಳಲ್ಲಿ ಸಂತೋಷ ಕಂಡು ಬರುತ್ತದೆ, ನೀವು ಅವರ ಕಣ್ಣು ನೋಡಿದ ತಕ್ಷಣ ನಿಮ್ಮ ಕಣ್ಣುಗಳನ್ನು ನೋಡಿದರೆ ಅವರಿಗೆ ನಿಮ್ಮ ಮೇಲೆ ಇಷ್ಟವಿದೆಯೆಂದು ಅರ್ಥ. ಅದಲ್ಲದೆ ನಿಮ್ಮ ನೋಟಕ್ಕೆ ಸ್ಪಂದಿಸದೆ ಬೇರೆ ಕಡೆ ದಷ್ಟಿ ಹರಿಸಿದರೆ ಅವನಿಗೆ ನಿಮ್ಮ ಮೇಲೆ ಇಷ್ಟವಿಲ್ಲವೆಂದು ಅರ್ಥ.
6. ನಿಮ್ಮ ಜೊತೆ ಮಾತನಾಡಲು ಪ್ರಯತ್ನಿಸುವುದು ಆದರೆ ಮಾತನಾಡಿಸಿದರೆ ಅವರಿಗೆ ಏನು ಮಾತನಾಡಬೇಕೆಂದು ತಿಳಿಯದೆ ಮಾತುಗಳಿಗಾಗಿ ತಡವರಿಸುವುದು ಮಾಡಿದರೆ ಅವರಿಗೆ ನಿಮ್ಮ ಜೊತೆ ಮಾತನಾಡಬೇಕು, ಆದರೆ ಹೇಗೆ ಮಾತನಾಡಿಸಬೇಕು ಎಂದು ತಿಳಿಯದೆ ಗೊಂದಲದಲ್ಲಿರುತ್ತಾರೆ ಎಂದು ಅರ್ಥ.
7. ಅವನು ನಿಮ್ಮ ಕೈಹಿಡಿದರೆ ಅಥವಾ ಅವನ ಕೈ ನೀವು ಹಿಡಿದರೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂದು ಗಮನಿಸಿ. ಅವನಿಗೆ ನಿಮ್ಮ ಮೇಲೆ ಆಕರ್ಷಣೆ ಇಲ್ಲದಿದ್ದರೆ ಸುಮ್ಮನೆ ಇರುತ್ತಾನೆ. ಒಂದು ವೇಳೆ ನಿಮ್ಮ ಮೇಲೆ ಆಕರ್ಷಣೆಯಿದ್ದರೆ ನಿಮ್ಮ ಕೈ ಸ್ಪರ್ಶ ಅವನಿಗೆ ಸಂತೋಷ ನೀಡುತ್ತದೆ. ಅದನ್ನು ಅವನ ಮುಖ ಗಮನಿಸಿದರೆ ಸಾಕು ತಿಳಿಯುತ್ತದೆ.
8. ನಿಮಗೆ ಇಷ್ಟವಿರುವ ವಿಷಯದ ಬಗ್ಗೆ ಅವನು ಕೂಡ ಆಸಕ್ತಿ ತಾಳುತ್ತಾನೆ. ಲೈಬ್ರರಿಗೇ ಹೋಗುವ ಅಭ್ಯಾಸ ಅವನಿಗಿಲ್ಲದಿದ್ದರೂ ನಿಮಗೆ ಬುಕ್ ಓದಲು ತುಂಬಾ ಆಸಕ್ತಿ ಎಂದು ತಿಳಿದರೆ ಅವನು ಬುಕ್ ಗಳನ್ನು ಓದಲು ಆಸಕ್ತಿ ತೋರಿಸುವುದು ಮಾಡುತ್ತಾನೆ.
9. ನಿಮ್ಮ ಮೇಲೆ ಸ್ವಲ್ಪ ಅಧಿಕ ಅಕ್ಕರೆ ತೋರಿಸುವುದು, ನಿಮ್ಮ ವಿಷಯಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾನೆ ಎಂದಾದರೆ ಅವನಿಗೆ ನಿಮ್ಮನ್ನು ಕಂಡರೆ ಇಷ್ಟ ಎಂದು ಅರ್ಥ.
10. ಸಾಮಾಜಿಕ ತಾಣಗಳಲ್ಲಿ, ಮೊಬೈಲ್ ನಲ್ಲಿ ನಿಮ್ಮ ಜೊತೆ ಚಾಟ್ ಮಾಡುತ್ತಿರುವುದು, ನಿಮ್ಮನ್ನು ಚಿಕ್ಕಪುಟ್ಟ ವಿಷಯಕ್ಕೂ ಹೊಗಳುವುದು ಮಾಡಿದರೆ ಅವನು ನಿಮ್ಮನ್ನು ಇಷ್ಟಪಡುತ್ತಿದ್ದಾನೆ ಎಂದು ಅರ್ಥ.
11. ನೀವು ಬರುವ ದಾರಿಯನ್ನು ಕಾಯುತ್ತ ನಿಲ್ಲುವುದು ಮಾಡಿದರೆ ಅವನು ನಿಮ್ಮನ್ನು ಇಷ್ಟಪಡುತ್ತಿದ್ದಾನೆ ಎಂದು ಅರ್ಥ.
ನಿಮ್ಮನ್ನು ಒಂದು ಹುಡುಗ ನೋಡುತ್ತಿದ್ದಾರೆ ಅವನಿಗೆ ನನ್ನ ಮೇಲೆ ಆಕರ್ಷಣೆ ಇರಬಹುದೇ ಎಂದು ಈ ಮೇಲಿನ ಲಕ್ಷಣಗಳಿಂದ ಕಂಡುಹಿಡಿಯಿರಿ.



Click it and Unblock the Notifications
