Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹದಿಹರೆಯದ ತಂಗಿಗೆ 6 ಬದುಕಿನ ಪಾಠಗಳು
ಹದಿಹರೆಯದ ಪ್ರಾಯದಲ್ಲಿರುವ ಮುದ್ದಿನ ತಂಗಿ ಮನೆಯಲ್ಲಿಯಿದ್ದರೆ ಅವಳು ಕಾಲೇಜು, ಫ್ಯಾಷನ್ ಎಂದು ರಂಗುಗಂಗಿನ ಲೋಕದಲ್ಲಿರುವಾಗ ಒಂದು ಕ್ಷಣ ಕಳೆದು ಹೋದ ನಮ್ಮ ಪ್ರಾಯ ನೆನೆಪಿಗೆ ಬರುತ್ತದೆ, ಅದರ ಜೊತೆಗೆ ಆ ಪ್ರಾಯದಲ್ಲಿ ಎದುರಾಗುವ ಸವಾಲುಗಳನ್ನು ಬಗ್ಗೆ ನೆನೆಯುವಾಗ ಭಯ ಕೂಡ ಆಗುತ್ತದೆ!
ಹದಿಹರೆಯದ ಪ್ರಾಯನೇ ಹಾಗೇ ಕಣ್ಣಿಗೆ ಕಾಣುತ್ತಿರುವುದೇ ಸತ್ಯ ಎಂಬ ಭ್ರಮೆಯಲ್ಲಿ ಇರುತ್ತಾರೆ. ಈ ಸಮಯದಲ್ಲಿ ಅಪ್ಪ ಅಥವಾ ಅಮ್ಮ ಬುದ್ಧಿ ಹೇಳಲು ಹೋದರೆ 'ನೀವು ಹಳೆಕಾಲದವರು ನಿಮಗೇನು ಗೊತ್ತು?' ಎಂದು ಪೋಷಕರ ಬಾಯಿ ಮುಚ್ಚಿಸಿ ಬಿಡುತ್ತಾರೆ. ಈ ಸಮಯದಲ್ಲಿ ಅಣ್ಣ ಅಥವಾ ಅಕ್ಕ ಬುದ್ಧಿ ಹೇಳಿದರೆ ನಿಮ್ಮ ಮಾತು ಅವರು ಖಂಡಿತ ಕೇಳುತ್ತಾರೆ. ನಿಮ್ಮ ಮುದ್ದಿನ ತಂಗಿಗೆ ಈ ಕೆಳಗಿನ ಬದುಕಿನ 7 ಸೂತ್ರಗಳನ್ನು ಹೇಳಿಕೊಡಿ. ನೀವು ಹೇಳಿ ಕೊಡುವ ಈ ಪಾಠ ನಿಮ್ಮ ತಂಗಿಯ ಮುಂದಿನ ಸುಂದರ ಬದುಕಿಗೆ ಮೈಲುಗಲ್ಲಾಗುವುದು.

ಆಂತರಿಕ ಸೌಂದರ್ಯ ಗುರುತಿಸು: ಹದಿಹರೆಯದಲ್ಲಿ ಫ್ಯಾಷನೇಬಲ್ ಆಗಿ, ಬ್ಯೂಟಿಯಾಗಿ ಕಾಣಬೇಕೆಂಬ ಕ್ರೇಜ್ ಇದ್ದೇ ಇರುತ್ತದೆ. ಅವರಿಗೆ ಉತ್ತಮ ವ್ಯಕ್ತಿತ್ವಕ್ಕೆ ಮೆರುಗು ನೀಡುವಂತಹ ಉಡುಗೆ ತೊಡುಗೆಗಳನ್ನು ಧರಿಸಲು ಹೇಳಿ. ಜನರ ಹತ್ತಿರ ಬೆರೆಯುವಾಗ ಅವರ ಬಾಹ್ಯ ಸೌಂದರ್ಯ ನೋಡುವುದರ ಅವರ ಆಂತರಿಕ ಸೌಂದರ್ಯ ನೋಡಲು ಹೇಳಿ. ತುಂಬಾ ಕಟ್ಟುಪಾಡುಗಳನ್ನು ಹಾಕಬೇಡಿ, ಅವರನ್ನು ಅವರಷ್ಟಕ್ಕೆ ಬಿಡಿ. ಅವರ ಮೇಲೆ ಸಂಶಯ ಪಡಬೇಡಿ, ನಂಬಿಕೆ ಇಡಿ, ಆಗ ಅವರು ಕೆಟ್ಟ ಅಭ್ಯಾಸ ಕಲಿಯುವುದಿಲ್ಲ ಮತ್ತು ಕೆಟ್ಟವರ ಸಹವಾಸ ಮಾಡುವುದಿಲ್ಲ.
ನೀವು ನೀವಾಗಿ ಇರಿ: ಈ ಮಾತನ್ನು ಅವರಿಗೆ ಮನವರಿಕೆ ಮಾಡಬೇಕು. ಹೆಚ್ಚಿನ ಹದಿಹರೆಯವರು ಹಾಳಾಗುವುದು ಇತರರ ಜೀವನ ಶೈಲಿ ಅನುಕರಣೆ ಮಾಡಲು ಹೋಗಿ. ಅವರ ಹತ್ತಿರ ನೀವು ನೀವಾಗಿ ಇರಿ, ನಿಮಗೆ ಸರಿ ಅನಿಸಿದ್ದನ್ನು ಮಾಡಿ, ಕೆಟ್ಟದು ಬೇಗ ಆಕರ್ಷಿಸುತ್ತದೆ, ಒಳ್ಳೆಯದು ಅಷ್ಟು ಬೇಗ ರುಚಿಸುವುದಿಲ್ಲ, ಎಂದು ಅವರಿಗೆ ತಿಳಿ ಹೇಳಿ.
ಹಣ ಉಳಿತಾಯ: ಅಮ್ಮ- ಅಪ್ಪ ಕೊಟ್ಟ ಪಾಕೆಟ್ ಮನಿ ಖರ್ಚು ಮಾಡದೆ ಉಳಿತಾಯ ಮಾಡಲಿಕ್ಕೆ ಹೇಳಿ. ಮಿತಿ ಮೀರಿ ಅನಾವಶ್ಯಕವಾಗಿ ಖರ್ಚು ಮಾಡಬೇಡ ಅಂತ ಹೇಳಿ. ಉಳಿತಾಯ ಮಾಡಲು ಕಲಿತರೆ ಮುಂದೆ ಜೀವನವನ್ನು ಚೆನ್ನಾಗಿ ನಿಭಾಯಿಸುತ್ತಾರೆ.
ಕೆಟ್ಟ ಹುಡುಗರ ಸಹವಾಸ: ಹದಿಹರೆಯದಲ್ಲಿ ಪ್ರೀತಿ ಪ್ರೇಮದ ಸೆಳೆತ ಜಾಸ್ತಿ ಇರುತ್ತದೆ. ಕಲಿಯದೆ ರೋಡ್ ರೋಮಿಯೋ ರೀತಿ ಸುತ್ತುವ ಹುಡುಗರು ಹುಡುಗಿಯರಿಗೆ ತುಂಬಾ ಇಷ್ಟವಾಗುವುದು. ಪ್ರೀತಿ ಪ್ರೇಮಕ್ಕೆ ಇನ್ನೂ ಸಮಯವಿದೆ, ಚೆನ್ನಾಗಿ ಓದಿ ನಿನ್ನ ಗುರಿ ಮುಟ್ಟು ಅಂತ ಹೇಳಿ. ಒಂದು ವೇಳೆ ನಿಮ್ಮ ತಂಗಿಗೆ ಯಾವುದಾದರು ಹುಡುಗನ ಜೊತೆ ಸ್ನೇಹವಿದೆ ಎಂದು ಗೊತ್ತಾದರೆ ಕಿರಚಾಡಬೇಡಿ ಅಥವಾ ಬೈಯ್ಯಬೇಡಿ, ಆವಳಿಗೆ ತಿಳಿ ಹೇಳಿ , ಅವಳನ್ನು ತುಂಬಾ ಪ್ರೀತಿಸಿ ಆಗ ಅವಳು ನಿಮ್ಮ ಮಾತನ್ನು ಕೇಳುವಳು.
ಒಳ್ಳೆಯ ಗುಣವಿರುವ ಗೆಳತಿಯರ ಸಹವಾಸ: ನಿಮ್ಮ ತಂಗಿಗೆ ಒಳ್ಳೆಯ ಗುಣವಿರುವ ಹುಡಗಿಯರ ಜೊತೆ ಸಹವಾಸ ಮಾಡಲು ಹೇಳಿ, ಅವಳ ಸ್ನೇಹಿತರ ಪರಿಚಯ ನಿಮಗಿರಲಿ. ಅವಳ ದೇಹದ ರಕ್ಷಣೆ ಬಗ್ಗೆ ಗಮನ ನೀಡಲು ಹೇಳಿ. ಎಲ್ಲಿಗೆ ಹೋಗುವುದಾದರೂ ತಿಳಿಸಲು ಹೇಳಿ, ಅವಳಿಗೆ ಸ್ವಾತಂತ್ರ್ಯ ನೀಡಿ. ಅವಳಲ್ಲಿ ಆತ್ಮವಿಶ್ವಾಸ ಬೆಳೆಸಿ, ವಾಸ್ತವದಲ್ಲಿ ಬದುಕುವ ಪಾಠವನ್ನು ಕಲಿಸಿ. ಈ ರೀತಿ ಬೆಳೆಸಿದರೆ ನಿಮ್ಮ ಮುದ್ದಿನ ತಂಗಿಗೆ ಸಮರ್ಥವಾಗಿ ಸಮಾಜವನ್ನು ಎದುರಿಸುವ ಶಕ್ತಿ ಬರುತ್ತದೆ.



Click it and Unblock the Notifications
