Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೊಲ್ಲುವ ಪ್ರೀತಿಗೆ ಸಾವಿರ ದಿಕ್ಕಾರ!

ಇತ್ತೀಚಿಗೆ ನಡೆದ ಪ್ರಕರಣ ನೋಡಿ, ಕೇರಳ ಮೂಲದಿಂದ ದುಡಿಯಲು ಎಂದು ಬಂದು ಕಾಣದ ಹೆಣ್ಣಿನ ಪ್ರೇಮ ಪಾಶದಲ್ಲಿ ಸಿಕ್ಕಿ ಜೀವನವನ್ನು ಕೊನೆಗಾಣಿಸಿದ ರಾಜು (ಶ್ರೀರಾಘ್) ಬಗ್ಗೆ ಅನುಕಂಪ ಬರುವುದಕ್ಕಿಂತ ಹೆಚ್ಚಾಗಿ ಕೋಪ ಬರುತ್ತದೆ. ಅವನಿಗೆ ಸಾಯುವಾಗ ಹೆತ್ತು ಸಾಕಿದ ಅಪ್ಪ-ಅಮ್ಮನ ಪ್ರೀತಿ ನೆನಪಾಗಲಿಲ್ಲವೇ? ಇಪ್ಪತ್ತೈದು ವರ್ಷ ಸಾಕಿ ಸಲುಹಿ, ಮಗನನ್ನು ಒಬ್ಬ ಸಾಫ್ಟ್ ವೇರ್ ಮಾಡಿದ ತಂದೆ ತಾಯಿಗಳ ಪ್ರೀತಿ, ಪರಿಶ್ರಮ, ಮಗನ ಭವಿಷ್ಯದ ಬಗ್ಗೆ ಅವರಿಗಿದ್ದ ಕನಸುಗಳು ನೆನಪಾಗಲಿಲ್ಲವೇ? ಯಾರೋ ಮೋಸಗಾರ್ತಿಯ ಪ್ರೀತಿಯನ್ನು ನಂಬಿ ಮೋಸ ಹೋದ. ರಾಜುವಿನಂತೆ ಅನೇಕ ಯುವಕ, ಯುವತಿಯರು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ. ಪ್ರೀತಿ ಯಾವತ್ತಿಗೂ ತಪ್ಪಾಗಲ್ಲ, ನಾವು ಪ್ರೀತಿಸುವ ವ್ಯಕ್ತಿಗಳು ತಪ್ಪಾಗಿದ್ದರೆ ಮಾತ್ರ ಪ್ರೀತಿ ಅನ್ನುವುದು ತನ್ನ ಮೌಲ್ಯ ಕಳೆದುಕೊಳ್ಳುತ್ತದೆ.
ಹೇಳಿ ಕೇಳಿ ಇದು ಮೊಬೈಲ್, ಫೇಸ್ ಬುಕ್ ಗಳ ಕಾಲ. ಗೊತ್ತು ಪರಿಚಯವಿಲ್ಲದವರೆಲ್ಲಾ ನಮ್ಮ ಸ್ನೇಹಿತರಾಗುತ್ತಾರೆ. ಸ್ನೇಹ ಪ್ರೇಮವಾಗುತ್ತದೆ! ಜೀವನ ಒಂದು ಭಾವಿಸಿ ಕಲ್ಪನೆ ಲೋಕದಲ್ಲಿ ತೇಲುತ್ತಾರೆ. ಈ ರೀತಿ ಆದರೆ ಕ್ಲೈಮ್ಯಾಕ್ಸ್ ಮಾತ್ರ ದುರಂತವಾಗುತ್ತದೆ!
ಒಂದು ಅನಾಮಿಕ ಕರೆ ಬಂದರೆ ಸಾಕು, ಅವರ ಬಗ್ಗೆ ಹೆಚ್ಚಿನ ಕುತೂಹಲ ತಾಳುತ್ತಾರೆ. ಆ ಕಡೆಯ ವ್ಯಕ್ತಿ ನಿಮ್ಮನ್ನು ಇಷ್ಟ ಅಂತ ಹೇಳಿದರೆ ಸಾಕು ಅದನ್ನು ನಂಬಿ ಮೋಸ ಹೋಗುತ್ತಾರೆ. ಈ ರೀತಿ ಹುಡುಗರು ಮತ್ತು ಹುಡುಗಿಯರು ಇಬ್ಬರೂ ಮೋಸ ಹೋಗುತ್ತಿದ್ದಾರೆ. ಅದರಲ್ಲೂ ವಿದ್ಯಾವಂತರಾದವರೆ ಈ ಮೋಸ ಹೋಗುತ್ತಿದ್ದರೆ!
ಫ್ಲರ್ಟ್ ಅನ್ನುವುದು ಸಾಮಾನ್ಯವಾಗಿದೆ. ಅದೊಂದು ಟ್ರೆಂಡ್ ಆಗುತ್ತಿದೆ. ಕೆಲ ಫ್ಲರ್ಟ್ ಹುಡುಗಿಯರು 3-4 ಬಾಯ್ ಫ್ರೆಂಡ್ಸ್ ಮತ್ತು ಫ್ಲರ್ಟ್ ಹುಡುಗರು 3-4 ಗರ್ಲ್ ಫ್ರಂಡ್ ಇಟ್ಟು ಆರಾಮವಾಗಿರುವುದನ್ನು ಕಾಣಬಹುದು. ಇದು ನಮಗೆ ಟೈಮ್ ಪಾಸ್ ಅಂತ ಭಾವಿಸುತ್ತಾರೆ. ಆದರೆ ಈ ರೀತಿ ಫ್ಲರ್ಟ್ ಮಾಡುವವರಿಗೆ ಇದೇ ರೀತಿ ಫ್ಲರ್ಟ್ ಮಾಡುವವರೇ ಸಿಕ್ಕಿದರೇ ಸರಿ! ಇಲ್ಲದಿದ್ದರೆ ಇವರು ಮಾಡುವುದು ಫ್ಲರ್ಟ್ ಎಂದು ತಿಳಿಯದೇ ಮೋಸ ಹೋಗಿ, ಕೊನೆಗೆ ತಮ್ಮ ಜೀವನವನ್ನೇ ಕೊನೆಗಾಣಿಸುವ ಅವಿವೇಕದ ನಿರ್ಧಾರಕ್ಕೆ ಬಂದು ಬಿಡುತ್ತಾರೆ.
ಇಲ್ಲಿ ಫ್ಲರ್ಟ್ ಮಾಡುವವರಿಗಿಂತ ಮೋಸ ಹೋಗುವವರ ಬಗ್ಗೆ ಬೇಸರ, ಕೋಪ ಬರುತ್ತದೆ. ಪ್ರೀತಿ ಎಂಬ ವಿಷಯ ಬಂದಾಗ ಹೆಣ್ಣಾಗಲಿ, ಗಂಡಾಗಲಿ ದುಡುಕಬಾರದು. ಅವನಲ್ಲಿರುವ ಹಣ, ಕಾರು ಹಾಗೆಯೇ ಪುರುಷರು ಹೆಣ್ಣು ಮಕ್ಕಳ ರೂಪ ವೈಯ್ಯಾರ ಮಾತ್ರ ನೋಡಿದರೆ ಮೋಸವಾಗುವುದರಲ್ಲಿ ಆಶ್ಚರ್ಯವಿಲ್ಲ. ಪ್ರೀತಿಸುವಾಗ ಪ್ರೀತಿಸುವ ವ್ಯಕ್ತಿಯ ಗುಣದ ಬಗ್ಗೆ ತಿಳಿಯಿರಿ. ಅವರ ಹಿನ್ನಲೆ, ಮನೆಯವರ ಕುರಿತು ತಿಳಿದುಕೊಳ್ಳಿ. ಕೇವಲ ಪ್ರೀತಿ, ಪ್ರೇಮ ಮಾತ್ರ ಜೀವನವಲ್ಲ, ಜೀವನದಲ್ಲಿ ಸಾಧಿಸಬೇಕಾದದು ಸಾಕಷ್ಟು ಇದೆ. ಈ ಪ್ರೀತಿ ಅನ್ನುವುದು ಜೀವನದ ಒಂದು ಭಾಗವಷ್ಟೆ. ಮೋಸ ಹೋಗುವವರು ಇರುವಷ್ಟು ಕಾಲ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮೋಸ ಹೋಗದಂತೆ ಎಚ್ಚರಿಕೆಯಿಂದ ಮುನ್ನೆಡೆದರೆ ಪ್ರೀತಿ ಮಧುರವಾಗುವುದು!



Click it and Unblock the Notifications
