Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಧುರ ಸಂಬಂಧಕ್ಕಾಗಿ ಇಡಬೇಕಾದ ಪುಟ್ಟ ಹೆಜ್ಜೆಗಳು

ಮಧುರ ದಾಂಪತ್ಯಕ್ಕಾಗಿ ಪರಸ್ಪರ ನಂಬಿಕೆ ಬೆಳೆಯಬೇಕು, ಸಂಬಂಧಗಳು ಮತ್ತಷ್ಟು ಗಟ್ಟಿಯಾಗಬೇಕೆಂದು ನೀವು ಬಯಸುವುದಾದರೆ ಈ ಕೆಳಗಿನ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಒಳ್ಳೆಯದು.
1. ಆತ್ಮವಿಶ್ವಾಸ: ಮೊದಲು ನೀವು ನಿಮ್ಮ ಬಗ್ಗೆ ಆತ್ಮವಿಶ್ವಾಸ ಹೊಂದಿರಬೇಕು. ಒಂದು ವೇಳೆ ನಿಮಗೆ ಆತ್ಮವಿಶ್ವಾಸವಿಲ್ಲವೆಂದರೆ ಇತರರನ್ನು ನಂಬಲು ಸಾಧ್ಯವಾಗುವುದಿಲ್ಲ.
2. ಪರಸ್ಪರ ಮನಸ್ಸು ಬಿಚ್ಚಿ ಮಾತನಾಡುವುದು, ಹಿಂದಿನ ಅನುಭವ ಮತ್ತು ನೆನಪುಗಳನ್ನು ಹಂಚಿಕೊಳ್ಳುವುದು, ಮುಂದಿನ ಭವಿಷ್ಯದ ಬಗ್ಗೆ ಮಾತನಾಡಿ ನಿರ್ಧಾರಗಳನ್ನು ಕೈಗೊಳ್ಳುವುದು ಇವೆಲ್ಲಾ ಸಂಬಂಧಗಳನ್ನು ಗಟ್ಟಿಯಾಗಿಸುವುದು.
3. ಬಾಳ ಸಂಗಾತಿಯ ಮೂಡ್ ಸರಿಯಾಗಿಲ್ಲದಿದ್ದ ಸಮಯದಲ್ಲಿ ಹೋಗಿ ಏನಾದರೂ ಮಾತನಾಡಿದರೆ ಮಾತಿಗೆ ಮಾತು ಬೆಳೆದು, ಜಗಳ ಉಂಟಾಗುವುದು. ಅದರ ಬದಲು ಅವರ ಕೋಪ ತಣಿದ ಮೇಲೆ ನಿಮ್ಮ ಅಭಿಪ್ರಾಯವನ್ನು ಹೇಳುವುದು ಒಳ್ಳೆಯದು.
4. ಯಾವುದೇ ವಿಷಯವಾಗಲಿ ಬಾಳ ಸಂಗಾತಿಯ ಜೊತೆ ಮುಚ್ಚುಮರೆಯಿಲ್ಲದೆ ಸತ್ಯವನ್ನು ಹೇಳಬೇಕು. ಒಮ್ಮೆ ನೀವು ಸುಳ್ಳು ಹೇಳಿ ಸಿಕ್ಕಿ ಬಿದ್ದರೆ ಮುಂದೆ ಅವರು ಯಾವುದೇ ವಿಷಯದಲ್ಲಿ ನಿಮ್ಮನ್ನು ನಂಬಲು ತಯಾರಿರುವುದಿಲ್ಲ ಎಂಬುದು ನೆನಪಿರಲಿ!
5. ನಿಮ್ಮ ಅನಿಸಿಕೆಗಳು, ಅಭಿಪ್ರಾಯಗಳು, ಆಸೆಗಳು ಎಲ್ಲವನ್ನು ಮುಕ್ತವಾಗಿ ಬಾಳಸಂಗಾತಿ ಜೊತೆ ಹೇಳಿಕೊಳ್ಳಬೇಕು. ಹೇಳದೆ ಬಾಯಿಗೆ ಬೀಗ ಹಾಕಿಕೊಂಡರೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಯಾವುದೇ ವಿಷಯವನ್ನು ಶಾಂತವಾಗಿ ಮತ್ತು ಫ್ರೌಢತೆಯಿಂದ ವ್ಯವಹರಿಸಬೇಕು.
ಈ ರೀತಿ ಮಾಡಿದ್ದೇ ಆದರೆ ನಿಮ್ಮ ಬಾಳ ಸಂಗಾತಿ ನಿಮ್ಮ ನಂಬಿಕೆಗೆ ಅರ್ಹರಾಗಿದ್ದಾರೆಯೆ ಎಂಬ ವಿಷಯ ಮನದಟ್ಟಾಗುತ್ತದೆ.



Click it and Unblock the Notifications
