Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾವೀ ಪತಿಯಲ್ಲಿ ಕೇಳಲೇಬೇಕಾದ 5 ಪ್ರಶ್ನೆಗಳು

1. ಭವಿಷ್ಯದ ಬಗ್ಗೆ ಸದ್ಯಕ್ಕೆ ನಿಮ್ಮ ಪ್ಲಾನ್ ಏನು?
ಈ ರೀತಿ ಪ್ರಶ್ನಿಸಿದಾಗ ಭವಿಷ್ಯದಲ್ಲಿ ಮುಂದೆ ಅವರು ಏನಾಗಬೇಕೆಂದು ಬಯಸುತ್ತಿದ್ದಾರೆ ಅನ್ನುವುದು ನಿಮಗೆ ಸ್ಪಷ್ಟವಾಗುತ್ತದೆ. ಆದರೆ ಈ ಪ್ರಶ್ನೆಯನ್ನು ಕೇಳುವಾಗ ಸಂದರ್ಶನದಲ್ಲಿ ಕೇಳುವ ರೀತಿ ಕೇಳದೆ ಸುಮ್ಮನೆ ಮಾತನಾಡುತ್ತಾ ಕೇಳಿ ತಿಳಿದುಕೊಳ್ಳಬೇಕು.
2. ಮುಂದೆ ಏನು ಮಾಡಬೇಕೆಂದು ಇದ್ದೀರಾ?
ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರು ದೊಡ್ಡ-ದೊಡ್ಡ ಕನಸುಗಳನ್ನು ಹೊಂದಿರುತ್ತಾರೆ. ಅದಕ್ಕಾಗಿ ಈಗ ಯೊಜನೆಗಳನ್ನು ರೂಪಿಸಿರುತ್ತಾರೆ. ಅದರ ಬಗ್ಗೆ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು. ಮುಂದೆ ಏನಾದರೂ ಆಗ ಬೇಕೆಂದು ಬಯಸುವವರು ಜೀವನದಲ್ಲಿ ನಿರ್ಧಿಷ್ಟವಾದ ಗುರಿ ಹೊದಿರುತ್ತಾರೆ. ಭವಿಷ್ಯದ ಬಗ್ಗೆ ಚಿಂತೆ ಮಾಡದವರಾದರೆ ಅಂತಹವರು ಜವಬ್ದಾರಿಯಿಂದ ನುಣುಚಿಕೊಳ್ಳುವ ಗುಣ ಹೊಂದಿರುತ್ತಾರೆ. ಆದ್ದರಿಂದ ನಿಮ್ಮ ಭವಿಷ್ಯ ಉತ್ತಮವಾಗಿರಬೇಕಾದರೆ ಜವಬ್ದಾರಿ ಇರುವ ಹುಡುಗನಾಗಿರಬೇಕು.
3. ಸಂಬಂಧದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಮದುವೆ ಮೊದಲು ಇದನ್ನು ಕೇಳಿ ಸ್ಪಷ್ಟ ಪಡಿಸಿಕೊಳ್ಳಬೇಕು. ಏಕೆಂದರೆ ಹೆಣ್ಣು ಮದುವೆಯಾದ ಮೇಲೆ ಗಂಡನ ಮನೆಯ ಏಳಿಗೆಯ ಬಗ್ಗೆ ಚಿಂತಿಸಬೇಕು ನಿಜ. ಆದರೆ ಕೆಲವೊಮ್ಮೆ ಒಬ್ಬಳೆ ಮಗಳಾಗಿದ್ದರೆ ನಿಮ್ಮ ಪೋಷಕರನ್ನು ನೀವೆ ನೋಡಿ ಕೊಳ್ಳಬೇಕಾಗುತ್ತದೆ. ಆದರೆ ಕೆಲವರು ಮದುವೆಯ ನಂತರ ಹೆಂಡತಿಯ ಪೋಷಕರನ್ನು ನೋಡಿಕೊಳ್ಳಲು ತಕರಾರು ತೆಗೆಯಬಹುದು. ಆದ್ದರಿಂದ ಇಂತಹ ವಿಷಯಗಳ ಬಗ್ಗೆ ಮದುವೆಯ ಮೊದಲೆ ಮಾತನಾಡಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು.
4. ನನ್ನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕೆಲವೊಮ್ಮೆ ಹುಡುಗರು ಬೇರೆ ಹುಡುಗಿ ಮನಸ್ಸಿನಲ್ಲಿದ್ದು ಮನೆಯವರ ಬಲವಂತಕ್ಕೆ ಮದುವೆಯಾಗ ಬಂದಿರುತ್ತಾರೆ. ಆದ್ದರಿಂದ ಹುಡುಗನಿಗೆ ನೀವು ಇಷ್ಟವಾಗಿದೆಯೆ ಎಂಬುದನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಕಷ್ಟಪಡಬೇಕಾದೀತು.
5. ನಾನು ಹೇಗಿರಬೇಕೆಂದು ನೀವು ಬಯಸುತ್ತೀರಾ?
ಈ ಪ್ರಶ್ನೆಯನ್ನು ತಪ್ಪದೆ ಕೇಳಬೇಕು. ಏಕೆಂದರೆ ಪ್ರತಿಯೊಬ್ಬ ಹುಡುಗನಿಗೆ ತನ್ನ ಹುಡುಗಿ ಹೀಗಿರಬೇಕೆಂಬ ನಿಲುವು ಇರುತ್ತದೆ. ಮದುವೆಯ ನಂತರ ಒಂದು ವೇಳೆ ಆ ನಿಲುವುಗಳು ನಿಮಗೆ ಹೊಂದಾಣಿಕೆಯಾಗದಿದ್ದರೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ತಲೆದೋರಬಹುದು.
ಉದಾಹರಣೆಗೆ: ನೀವು ಉದ್ಯೋಗ ಮಾಡಲು ಇಷ್ಟಪಡುವವರಾಗಿದ್ದು ನಿಮ್ಮ ಹುಡುಗನಿಗೆ ಕೆಲಸಕ್ಕೆ ಹೋಗಲು ಇಷ್ಟವಿಲ್ಲದಿದ್ದರೆ ಸಮಸ್ಯೆ ತಲೆದೋರುತ್ತದೆ. ಆದ್ದರಿಂದ ಮದುವೆಗೆ ಮೊದಲು ಹುಡುಗ ಮತ್ತು ಹುಡುಗಿ ತಮ್ಮ ಭವಿಷ್ಯದ ಕುರಿತು ನಿರ್ಧರಿಸುವುದು ಒಳ್ಳೆಯದು.



Click it and Unblock the Notifications
