Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹುಡುಗಿ ಮೆಚ್ಚಬೇಕೆಂದರೆ ಇರಲೇಬೇಕಾದ 6 ಗುಣಗಳು

1. ವ್ಯಕ್ತಿತ್ವ: ಅಂದವಾಗಿರುವ ಪುರುಷನಿಗಿಂತ ಉತ್ತಮ ವ್ಯಕ್ತಿತ್ವ ಹೊಂದಿರುವ ಪುರುಷನನ್ನು ಬಾಳ ಸಂಗಾತಿಯಾಗಿ ಪಡೆಯಲು ಬಯಸುತ್ತಾಳೆ. ತುಂಬಾ ಆಕರ್ಷಕವಾಗಿದ್ದು ಅವನ ಬುದ್ಧಿ ಸರಿಯಿಲ್ಲ ಅಂದರೆ ಅಂತಹವನ ಜೊತೆ ಬಾಳ್ವೆ ಮಾಡಲು ಯಾವ ಹೆಣ್ಣು ಬಯಸುವುದಿಲ್ಲ.
2. ನಡವಳಿಕೆ: ತುಂಬಾ ಸಿಡುಕಿನ ಸ್ವಭಾವ ಹೊಂದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಮಾತನಾಡುವುದು, ಹಿರಿಯರಿಗೆ ಗೌರವ ಕೊಡದಿರುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದು ಈ ರೀತಿಯ ಗುಣಗಳನ್ನು ಹೊಂದಿದ್ದರೆ ಅಂತಹ ಹುಡುಗರು ಹುಡುಗಿಯರಿಗೆ ಇಷ್ಟವಾಗುವುದಿಲ್ಲ.
3. ಪ್ರೀತಿ ಮತ್ತು ಕಾಳಜಿ: ಈ ಗುಣವನ್ನು ಹೊಂದಿರುವ ಪುರುಷ ಹುಡುಗಿಯರಿಗೆ ಬೇಗನೆ ಇಷ್ಟವಾಗುತ್ತಾನೆ. ಮನೆಯವರ ಬಗ್ಗೆ ಕಾಳಜಿ ಮತ್ತು ಪ್ರೀತಿ ಹೊಂದಿದ್ದರೆ ತನ್ನನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಭರವಸೆ ಹೊಂದುತ್ತಾಳೆ.
4. ಬುದ್ಧಿವಂತಿಕೆ: ಬುದ್ಧಿವಂತ ಪುರುಷರು ಸುಲಭದಲ್ಲಿಯೆ ಹುಡುಗಿಯರ ಮನ ಗೆಲ್ಲುತ್ತಾರೆ. ಬುದ್ಧಿವಂತ ಹುಡುಗನಾಗಿದ್ದರೆ ಹುಡುಗಿಯರು ಅವನ ಅಂದದ ಬಗ್ಗೆ ಹೆಚ್ಚು ಗಮನ ಕೊಡದೆ ಅವನ ಬುದ್ಧಿವಂತಿಕೆಗೆ ಮಾನ್ಯತೆ ಕೊಡುತ್ತಾರೆ. ತುಂಬಾ ಚೆಂದ ಇದ್ದು ದಡ್ಡನಾಗಿದ್ದರೆ ಅಂತಹ ಹುಡುಗರು ಹುಡುಗಿಯರಿಗೆ ಇಷ್ಟವಾಗುವುದಿಲ್ಲ.
5. ಹಣ ಮತ್ತು ಉದ್ಯೋಗ: ಉತ್ತಮವಾದ ಉದ್ಯೋಗ, ಕೈ ತುಂಬಾ ಸಂಬಳವಿದ್ದರೆ ಹುಡುಗ ನೋಡಲು ಚೆನ್ನಾಗಿ ಇಲ್ಲದಿದ್ದರೂ ರೂಪವಂತಿಯಾದ ಹುಡುಗಿ ಅವನ ಬಾಳ ಸಂಗಾತಿಯಾಗಿ ಬರಲು ಸಿದ್ಧವಿರುತ್ತಾಳೆ. ಇಲ್ಲಿ ಹೆಣ್ಣು ಚೆಂದಕ್ಕೆ ಬದಲಾಗಿ ತನ್ನ ಸುರಕ್ಷತೆಯನ್ನು ನೋಡುತ್ತಾಳೆ.
6. ಒಡನಾಟ: ಗಂಡನಾದವನು ಉತ್ತಮವಾದ ಒಡನಾಟವನ್ನು ಹೊಂದಿರಬೇಕು. ಒಬ್ಬ ಗೆಳೆಯನಂತೆ ಆತ್ಮೀಯತೆಯಿಂದ ವರ್ತಿಸಬೇಕು ಅಂತ ಹೆಣ್ಣು ಬಯಸುತ್ತಾಳೆ. ಈ ಗುಣವಿರುವ ಪುರುಷರನ್ನು ಹೆಣ್ಣು ತುಂಬಾ ಇಷ್ಟಪಡುತ್ತಾಳೆ.



Click it and Unblock the Notifications
