Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮುದ್ದಿನ ಪತ್ನಿಯಾಗಲು ಇರಲೇಬೇಕಾದ ಗುಣಗಳಿವು

ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಬರುವಾಗ ನೂರಾರು ಕನಸುಗಳ ಜೊತೆ ಬರುತ್ತಾಳೆ, ಅದೇ ರೀತಿ ಗಂಡನಾದವನು ತನ್ನ ಹೆಂಡತಿ ಬಗ್ಗೆ ಸಾಕಷ್ಟು ಕನಸ್ಸು ಕಂಡಿರುತ್ತಾನೆ. ಅದರಲ್ಲೂ ಗಂಡಸಿಗೆ ತನ್ನ ಹೆಂಡತಿಯಾದವಳ ಹತ್ತಿರ ಈ ಕೆಳಗಿನ ಗುಣಗಳಿದ್ದರೆ ಅವಳು ಅವನ ಮುದ್ದಿನ ಮಡದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
1. ಆತ್ಮವಿಶ್ವಾಸವಿರಬೇಕು: ಆತ್ಮವಿಶ್ವಾಸ ಹೊಂದಿರುವ ಮಡದಿಯೆಂದರೆ ಗಂಡಸರಿಗೆ ಇಷ್ಟವಾಗುತ್ತದೆ. ಸ್ವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರಬೇಕು. ಎಲ್ಲದಕ್ಕೂ ಗಂಡನನ್ನೆ ಅವಲಂಭಿಸಿದರೆ ಅವನಿಗೆ ಜವಾಬ್ದಾರಿ ಹೆಚ್ಚಾಗುವುದು, ಅವನ ಆತ್ಮವಿಶ್ವಾಸ ಕೂಡ ಕುಂದುವುದು.
2. ಒಳ್ಳೆಯ ಸಲಹೆ: ಹೆಂಡತಿ ಕೊಡುವ ಮಾರ್ಗದರ್ಶನಗಳು ಒಳ್ಳೆಯದಾಗಿದ್ದರೆ ಗಂಡನಿಗೆ ಇಷ್ಟವಾಗುತ್ತದೆ. ಗಂಡನಿಗೆ ಸಲಹೆಗಳನ್ನು ಕೊಡುವಾಗ ವಿವೇಚನೆಯನ್ನು ಉಪಯೋಗಿಸಬೇಕು. ಇಲ್ಲದಿದ್ದರೆ ನೀವು ಕೊಡುವ ಸಲಹೆಗಳೇ ಅವರಿಗೆ ಕಿರಿಕಿರಿ ತರಬಹುದು.
3. ದಾಂಪತ್ಯ ಸುಖ: ಪ್ರತಿಯೊಬ್ಬ ಗಂಡಸು ಹೆಂಡತಿಯಾದವಳು ತನ್ನ ದೈಹಿಕ ಆಸೆಗಳನ್ನು ಪೂರೈಸುವಂತಳಾಗಿರಬೇಕು ಎಂದು ಬಯಸುತ್ತಾನೆ. ದೈಹಿಕ ತೃಪ್ತಿ, ಪ್ರೀತಿ ತನ್ನ ಹೆಂಡತಿಯಿಂದ ದೊರಕಿದರೆ ಅವನು ಇತರ ಹೆಂಗಸಿನ ಕಡೆ ಆಸಕ್ತಿ ಬೆಳೆಸುವುದಿಲ್ಲ.
4. ಪ್ರೀತಿ: ಹೆಂಡತಿ ತನ್ನನ್ನು ತುಂಬಾ ಪ್ರೀತಿಸಬೇಕು. ತನ್ನ ಸುಖದಲ್ಲಿ ಮಾತ್ರವಲ್ಲ, ಕಷ್ಟದಲ್ಲೂ ಜೊತೆಯಲ್ಲಿದ್ದು ಅವನಿಗೆ ಬೆಂಬಲವನ್ನು ನೀಡಬೇಕೆಂದು ಬಯಸುತ್ತಾನೆ. ಮಕ್ಕಳಾದ ಮೇಲೆ ಮಕ್ಕಳನ್ನು ನೋಡಿಕೊಳ್ಳುವ ಬ್ಯೂಸಿಯಲ್ಲಿ ಗಂಡನ ಆರೈಕೆ ಮರೆಯಬಾರದು. ಗಂಡ ತನ್ನ ಹೆಂಡತಿ ತನ್ನನ್ನು ಮುದ್ದು ಮಾಡಬೇಕು, ಮಗುವಿನಂತೆಯೆ ನನ್ನನ್ನು ನೋಡಿಕೊಳ್ಳಬೇಕೆಂದು ಬಯಸುತ್ತಾನೆ.
5. ಗೆಳಯ: ಗಂಡನನ್ನು ಉತ್ತಮ ಗೆಳಯನಂತೆ ಕಾಣಬೇಕು. ಅವನತ್ತ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಎಲ್ಲಾ ವಿಷಯಗಳನ್ನು ಮುಚ್ಚು ಮರೆಯಿಲ್ಲದೆ ಪರಸ್ಪರ ಹಂಚಿಕೊಳ್ಳಬೇಕು.
ಈ ಇಷ್ಟು ಗುಣಗಳು ಹೆಣ್ಣಿನಲ್ಲಿದ್ದರೆ ಎಂತಹ ಸ್ವಭಾವದ ಗಂಡನನ್ನು ಬೇಕಾದರೂ ಸರಿ ದಾರಿಗೆ ತಂದು, ಸಾಮರಸ್ಯದ ಸಂಸಾರ ನಡೆಸಬಹುದು.



Click it and Unblock the Notifications
